Sunday, March 5, 2023

ಟಿಪ್ಪು ನಿಜ ಕನಸುಗಳು - ಕನ್ನಡ ನಾಟಕ

 ಶನಿವಾರ, ಮಾರ್ಚ್ 4, 2023 

ರವೀಂದ್ರ ಕಲಾಕ್ಷೇತ್ರ,  ಬೆಂಗಳೂರು.

ಟಿಪ್ಪು ನಿಜ ಕನಸುಗಳು 

ಅದೊಂದು ಅದ್ಭುತವಾದ ಮೂರುವರೆ ಗಂಟೆಗಳ ಕಾಲದ ಕನ್ನಡ ಐತಿಹಾಸಿಕ ನಾಟಕ.

ಕ್ರೂರಿ, ಮತಾಂಧ, ಟಿಪ್ಪು ಸುಲ್ತಾನನ ಕಾಲದ ಜನರ ಹಿಂಸೆ, ದಬ್ಬಾಳಿಕೆ ಯಾ ಅನಾವರಣ.



ಅದ್ಭುತವಾದ ನಟನೆ, ದೃಶ್ಯ ಸಂಯೋಜನೆ, ರಂಗ ನೇಪಥ್ಯ, ಬೆಳಕು, ಶಬ್ದ, ಉಡುಪು, ವಿನ್ಯಾಸ, ರಂಗಸಂಗೀತ... ವಾಹ್ವ್ ನಿಜಕ್ಕೂ ಅಪರೂಪಕ್ಕೊಮ್ಮೆ ಅತ್ಯುತ್ತಮವಾದ್ದೊಂದು ರಂಗಪ್ರಯೋಗ ನೋಡಿದೆ. ಆ ನಟರೋ ಸಂಪೂರ್ಣ ಭಾವಪರವಶವಾದವರಂತೆ ಅಭಿನಯಿಸಿದ್ದಾರೆ. ಅದೆಷ್ಟು ಅಸ್ಕಲಿತವಾಗಿ ಸಂಭಾಷಿಸುತ್ತ ಅಭಿನಯಿಸುತ್ತಿದ್ದರೆಂದರೆ ಯಾವುದೇ ಪರಾಕರ್ಷಣೆಗೆ ಒಳಗಾಗದೆ ನಾವೂ ಅದರ ಭಾಗವಾದ ಹೋಗಿದ್ದು ಸುಳ್ಳಲ್ಲ.


ಕಲೆ ಹಾಗೂ ಸತ್ಯದ ನೆಲೆಯನ್ನು ಅತ್ಯುತ್ತಮವಾಗಿ ಯೋಜಿಸಿಕೊಂಡಿದ್ದಾರೆ. ಇವರು ತಮ್ಮ ವಿಷಯ ಪ್ರಸ್ತುತಿಗೆ ನಾಟಕವನ್ನು ಅಂದರೆ ಕಲೆಯನ್ನು ಒಣಗಿಸಿರುತ್ತಾರೆಂದುಕೊಂಡಿದ್ದ ನನ್ನ ಪೂರ್ವಗ್ರಹ ಕಳೆದು ಹೋಯಿತು. ಈ ಹಿಂದೆ ನೋಡುತ್ತಿದ್ದ ಸಿದ್ಧಾಂತ ಪ್ರಸ್ತುತಿಯ ನಾಟಕಗಳ ಪ್ರಭಾವದಿಂದ ನನಗೆ ಹಾಗನ್ನಿಸಿದ್ದಿರಬಹುದು. ಈಗದು ಕಳೆಯಿತು. ನಾಟಕ ಇನ್ನೂ ಹೆಚ್ಚಿನ ಪ್ರದರ್ಶನ ಕಾಣಲಿ. ಕಲೆ ಪೋಷಿತವಾಗಲಿ, ಸತ್ಯ ಅನಾವರಣವಾಗಲಿ. ಒಟ್ಟಿನಲಿ ಸಿದ್ಧಾಂತಭೇದಗಳೂ ನಮ್ಮ ಕಲೆಯನ್ನು ಬೆಳಗಿಸಬಲ್ಲವೆಂಬುದಕ್ಕೆ 'ಟಿಪ್ಪು ನಿಜಕನಸುಗಳು' ನಾಟಕ ಒಂದೊಳ್ಳೆ ಉದಾಹರಣೆ.


ಒಂದೇ ಒಂದು ವಿಪರ್ಯಾಸವೇನೆಂದರೆ ನಮ್ಮೀ ಪುರುಷ ಪ್ರಧಾನ ವ್ಯವಸ್ಥೆಯ ಅಹಮಿಕೆ ಮಹಿಳೆಗೆ ದನಿಯಾಗದೆ ಕೇವಲ ಕತ್ತಿಯ ಮೊನೆಯಲ್ಲಿ, ಮತದ ಅಫೀಮಿನಲ್ಲಿ ಮುನ್ನುಗ್ಗುತ್ತಿರುವುದು!


18 ನೆ ಶತಮಾನದ ಕೊನೆಯಲ್ಲಿ ದಿಲ್ಲಿಯಲ್ಲಿ ಮೊಘಲರು ಭಾರವನ್ನು ಅಳುತಿದ್ದ ಕಾಲ, ದಕ್ಷಿಣದಲ್ಲಿ   ಹೈದರ್ ಅಲಿಯ ,ಮಗ ಟಿಪ್ಪು ಸುಲ್ತಾನ, ಮಹಾತ್ವಾಕಾಂಕ್ಷಿ, ಕ್ರೂರಿ, ಮತಾಂಧ. ಇಡೀ ಭಾರತ ದೇಶವನ್ನು, ಹಿಂದುಸ್ತಾನವನ್ನು ಇಸ್ಲಾಮೀ ಕರಣ ವನ್ನಾಗಿ ಮಾಡುವ ಬಹು ದೊಡ್ಡ ಕನಸು.


ವಿಪರ್ಯಾಸ ವೆಂದರೆ ಇತಿಹಾಸವನ್ನು ತಿರುಚಿ, ಆಗ ನಡೆದ ಘಟನೆಗಳನ್ನು ಸರಕಾರಕ್ಕೆ ದ್ವನಿಯಾಗುವಂತೆ ಬರೆದಿರುವುದು ಸನಾತನ ಧರ್ಮದ ದುರಂತ.


ನಾಟಕದಲ್ಲಿ ಅತ್ಯಂತ ಸುಂದರವಾಗಿ ಪ್ರಸ್ತುತ ಪಡಿಸಿದ ಕಲಾವಿದರುಗಳು ಅತ್ಯಂತ ಪ್ರಶಂಸನಾರ್ಹರು.
ಹಲವಾರು ಸನ್ನಿವೇಶಗಳು - ಕೊಡಗಿನ ಪ್ರಮುಖರನ್ನು ಹಿಂಸಿಸಿ ಮೋಸದಿಂದ ಸಾಯಿಸುವ ದ್ರಶ್ಯ, ಮೇಲು ಕೋಟೆಯ ಬ್ರಾಹ್ಮಣರನ್ನು ದೀಪಾವಳಿಯ ನರಕ ಚತುರ್ದಶಿಯಂದು ಕೊಂದು ಮರಕ್ಕೆ ನೇತು ಹಾಕಿರುವ ದ್ರಶ್ಯ,  ನಂತರ, ಬ್ರಾಹ್ಮಣನೊಬ್ಬ ಅತ್ಯಂತ ದುಖಿತನಾಗಿ ಟಿಪ್ಪು ಸುಲ್ತಾನ ನಿಗೆ ಶಾಪ ಹಾಕುವ ದ್ರಶ್ಯ ಅತ್ಯಂತ ಮನ ಕರುಗುವಂತಿತ್ತು.

ತುಂಬಿದ ಸಭಾಂಗಣದಲ್ಲಿ, ಎಲ್ಲರೂ ಏಕಾಗ್ರತೆಯಿಂದ ವೀಕ್ಷಿಸಿರುವುದು, ಹತ್ತು ನಿಮಿಷಗಳ ವಿರಾಮದ ನಂತರ ವಾಪಸ್ಸು ಬಂದಿರುವುದು ನಾಟಕದ ಸ್ಹೇಷ್ಟತೆಯನ್ನು ತೋರಿಸುತ್ತದೆ.
ಅದ್ಯಂಡ ಸಿ. ಕಾರ್ಯಪ್ಪ 


ನಾಟಕದ ರಚನೆ, ನಿರ್ದೇಶನವನ್ನು ಮಾಡಿದ ಅದ್ಯಂದ ಸಿ. ಕಾರ್ಯಪ್ಪ ಅವರಿಗೆ ತುಂಬು ಹ್ರದಯದ ಅಭಿನಂದನೆಗಳು.


ರಾಜ್ಯಾದಂತ 50 ನೇ ಪ್ರದರ್ಶನವನ್ನು ಪ್ರಸ್ತುತ ಪಡಿಸಿದ ಮೈಸೂರಿನ ರಂಗಾಯಣ ತಂಡದವರಿಗೆ ಹಾರ್ದಿಕ ಶುಭಾಶಯಗಳು. 

ಬರೆದಿರುವುದು 5/3/2023 


No comments:

Post a Comment