ಭಾನುವಾರ, 28 ಜನವರಿ 2024
ವಿನಾಯಕ ದೇವಸ್ಥಾನ ಸಭಾಂಗಣ, ಅರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯ 31 ನೇ ವಾರ್ಷಿಕೋತ್ಸವವು ವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಉಪನ್ಯಾಸಗಳು ಮತ್ತು ನೃತ್ಯ ರೂಪಕ ಗಳೊಂದಿಗೆ ಸಂಪನ್ನ ಗೊಂಡಿತು.
ವೇದಿಕೆಯ ಸಂಸ್ಥಾಪಕ ಶ್ರೀ ಪಾ. ಚಂದ್ರಶೇಕರ ಚಡಗ ರಿಂದ ಪ್ರಾಸ್ತಾವಿಕ ನುಡಿಯೊಂದಿಗೆ ಪ್ರಾರಂಭವಾಯಿತು.
ಶ್ರೀಯುತ ರವೀಂದ್ರ ಭಟ್ ಹಾಗೂ ಶ್ರೀಮತಿ ಎಲ್.ಜಿ. ಮೀರಾ ಅವರು ಅತಿಥಿಗಳಾಗಿ ಆಗಮಿಸಿದ್ದರು.
ಇವರು ಗಳು ಶಿವರಾಮ ಕಾರಂತರ ಜೀವನ, ಸಾಧನೆ, ಕನ್ನಡ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯ ಅಧ್ಯಕ್ಷೆ ಡಾ ದೀಪಾ ಫಡ್ಕೆ ಯವರು ಅಧ್ಯಕ್ಷತೆ ವಹಿಸಿ "ಕಡಲು ತೀರದ ಭಾರ್ಗವ" ಶಿವರಾಮ ಕಾರಂತ ಇವರ ಎಲ್ಲಾ ಕ್ಷೇತ್ರ ಗಳಲ್ಲಿ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿ, ಅವರೇ ಒಂದು ಕಡಲು ಎಂದು ಬಣ್ಣಿಸಿದರು.
ಮೈಸೂರಿನವಿದೂಷಿ ಡಾ. ಕ್ರಪಾ ಫಡ್ಕೆ ಮತ್ತು ಅವರ ತಂಡದವರಿಂದ " ಭಾವಯಾಮಿ ರಘುರಾಮಂ" ನ್ರತ್ಯ ರೂಪಕವನ್ನು ಅತ್ಯಂತ ಸುಂದರವಾಗಿ ಪ್ರದರ್ಶಿಸಿ ದರು.
ಸಭಾಂಗಣ ದಲ್ಲಿ ಕಾರಂತ ವೇದಿಕೆಯ ಅಭಿಮಾನಿಗಳೂ, ಕನ್ನಡ ಪ್ರೇಮಿಗಳೂ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಸಕ್ತರು ಹಾಜರಿದ್ದರು.
ಶ್ರೀಮತೋ ಇಂದಿರಾ ಶರಣ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಶ್ರೀಮತಿ ಛಾಯಾ ಉಪಾಧ್ಯ ಅವರಿಂದ ಧನ್ಯವಾದ ಸಮರ್ಪಣೆ ಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ಬರೆದಿರುವುದು 30/1/2024
No comments:
Post a Comment