Wednesday, January 3, 2024

CASTING FOR LEG - SHOBHA

 Wednesday, January 3, 2024



ಇವತ್ತು ನನ್ನ ಎಡಗಾಲಿಗೆ ಹಾಕಿದ್ದ ಕಾಸ್ಟ್ ತೆಗೆದರು. ಅದನ್ನು ಹಾಕಿ ಇವತ್ತಿಗೆ ಮೂವತ್ತನೇ ದಿವಸ. ಕಾಸ್ಟ್ ಹಾಕಿದಾಗಿನಿಂದ ನಾನು ಡಾಕ್ಟರ್ ಕೊಟ್ಟ ಗಡುವಿನ ಒಂದು ತಿಂಗಳು  ಮುಗಿದು ಅದನ್ನು ತೆಗೆಯುವ ದಿನಕ್ಕೇ ಕಾಯುತ್ತಿದ್ದೆ. ಅಂತೂ ಇವತ್ತು ಆ ಸುದಿನ ಬಂದಿತು. ದೇಹವನ್ನು ಆವರಿಸಿದ ( ಬರೀ ಕಾಲನ್ನು ಆವರಿಸಿದ್ದರೂ) ಯಾವುದೋ ಪರ ವಸ್ತುವಿನಿಂದ ವಿಮುಕ್ತಿ ಪಡೆದ ಅನುಭವ!
ಕಳೆದ ಎರಡು ವರ್ಷಗಳಲ್ಲಿ ನಾಲ್ಕನೇ ಸಲ ನಾನು ಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತಿರುವುದು(ಪೆಟ್ಟು ಆಗುತ್ತಿರುವುದು ಅಂತಲೂ ಅನ್ನಬಹುದೇನೋ!) ಕಳೆದ ವರ್ಷದ ಮೇ ತಿಂಗಳ ಕೊನೆಯಲ್ಲಿ ಬಲಗಾಲ ಮಂಡಿ ಡ್ಯಾಮೇಜ್ ಆಗಿತ್ತು. ಅದು ಸರಿಯಾಗುತ್ತಿದ್ದಂತೆಯೇ ಆಗಸ್ಟ್ ತಿಂಗಳ ಕೊನೆಯಲ್ಲಿ ಬಲಗಾಲ ಪಾದದ ಸಮಸ್ಯೆಯಾಯಿತು. ತದನಂತರದಲ್ಲಿ ಈ ವರ್ಷದ ಮೇ ತಿಂಗಳ ಮಧ್ಯಭಾಗದಲ್ಲಿ ಎಡ ಮಂಡಿ ಡ್ಯಾಮೇಜ್ ಆಯಿತು. ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಎಡ ಪಾದ ಫ್ರ್ಯಾಕ್ಚರ್ ಆಯಿತು. ಪ್ರತಿ ಬಾರಿ ಕಾಲ ಸಮಸ್ಯೆಯಾದಾಗ ಸುಮಾರು ನಲವತ್ತು ದಿವಸಗಳ ಕಾಲ ಗೃಹಬಂಧನ ಹಾಗೂ ನಂತರದಲ್ಲಿ ಸರಿಯಾಗಿ ನಡೆಯುವ ಪ್ರಯತ್ನದ ಪರದಾಟ! ಹಿಂದಿನ ಮೂರು ಬಾರಿ ಬರೀ ಬೆಡ್ ರೆಸ್ಟ್ ಮಾಡಿ, ಕ್ರೇಪ್ ಬ್ಯಾಂಡೇಜ್ ಸುತ್ತಿ ರಿಪೇರಿ ಮಾಡಿಕೊಂಡದ್ದಾಯಿತು. ಆದರೆ ಈ ಬಾರಿ ಎಡಪಾದಕ್ಕೆ ಕಾಸ್ಟಿಂಗ್ ಹಾಕುವ ಅನಿವಾರ್ಯತೆ ಒದಗಿ ಬಂದಿತು.
ಅದೃಷ್ಟವಶಾತ್ ನನ್ನ ಕಾಲಿಗೆ ರೆಗ್ಯುಲರ್ ಆದ POP ಹಾಕಿದ್ದಲ್ಲ. ಏನೋ ಸಿಂಥೆಟಿಕ್ ವಸ್ತುವಿನ ಕಾಸ್ಟಿಂಗ್ ಹಾಕಿದ್ದರು. ಅದು ಭಾರವಾಗಿರದ ಕಾರಣ ಅದನ್ನು ಇಟ್ಟುಕೊಂಡು ಚಲಿಸುವುದು ಅಸಹನೀಯವಾಗಿರಲಿಲ್ಲ. ಆ ಕಾಲಿಗೊಂದು ಬೂಟು ಕೂಡಾ ಕೊಟ್ಟಿದ್ದರು. ಆ ಬೂಟು ಹಾಕದಿದ್ದರೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆ ಕಾಸ್ಟ್ ಕಲ್ಲಿನಂತೆ ಗಟ್ಟಿ ಇತ್ತು. ಅದು ಹಗುರವಿದ್ದರೂ ಕೂಡಾ ಕಲ್ಲಿನಂತೆ ಇದ್ದ ಕಾರಣ ಅದನ್ನು ಮೂವ್ ಮಾಡುವಾಗ, ಅದರ ಮೇಲೆ ಇನ್ನೊಂದು ಕಾಲಿಡುವಾಗ ಆ ಭಾಗ ನನ್ನದಲ್ಲ ಅಂತ ಅನಿಸುತ್ತಿತ್ತು.  ಪುಣ್ಯವಶಾತ್ ಅದರೊಳಗಿದ್ದ ನನ್ನ ಕಾಲಿನ ಭಾಗಕ್ಕೆ ತುರಿಕೆ ಬರುತ್ತಿರಲಿಲ್ಲ. ಗಾಳಿಯಾಡಲು ಒಳ್ಳೆಯ ಅವಕಾಶವಿದ್ದ ಕಾರಣ ತುರಿಕೆಯ ಕಾಟವಿಲ್ಲದೆ ಆರಾಮವಾಗಿತ್ತು. ಆ ಕಾಸ್ಟ್ ಗೆ ನೀರು ತಾಗಿಸುವ ಹಾಗಿರದಿದ್ದ ಕಾರಣ ಕಾಲಿಗೆ ಗಪ್ಪೆಂದು ಕೂರುತ್ತಿದ್ದ ರಬ್ಬರ್ ಮುಚ್ಚಳದ ತರವಿದ್ದ ಕೆಳಗೆ ದಪ್ಪನೆಯ ಪ್ಲಾಸ್ಟಿಕ್ ಇದ್ದ ಬ್ಯಾಗಿನ ತರಹದ ಒಂದು ಸಾಧನದೊಳಗೆ ನನ್ನ ಕಾಲನ್ನು ಇರಿಸಿ ಸ್ನಾನ ಮಾಡುತ್ತಿದ್ದೆ.  ಹೀಗಾಗಿ ಸ್ನಾನ ಮಾಡುವುದು ಅಂತಹ ರಗಳೆ ಎಂದೆನಿಸಲಿಲ್ಲ.
ಇವತ್ತು ಪುಟ್ಟ ಚಕ್ರದಂತಹ ಗರಗಸದಂತಹ ಸಾಧನದಿಂದ ಅವರದನ್ನು ಗರ್ರನೆ ಕತ್ತರಿಸುವಾಗ ನೋವಾಗದಿದ್ದರೂ ಅವರ ಕೈ ತಪ್ಪಿ ಅದು ಬೇರೆಡೆ ಚಲಿಸಿ ನನ್ನ ಕಾಲಿಗೆ ಗಾಯವಾದರೆ ಎಂಬೆಲ್ಲಾ ಯೋಚನೆಗಳಿಂದ ನಾನು ಹೆದರಿದ್ದಂತೂ ನಿಜ! ಹಾಗೇನೂ ಆಗದೆ ಅದನ್ನು ಕತ್ತರಿಸಿದ ಮೇಲೆ ಬಹಳ ಶಕ್ತಿ ಪ್ರಯೋಗದಿಂದ ಆ ಕಾಸ್ಟ್ ಅನ್ನು ಓಪನ್ ಮಾಡಿ ನನ್ನ ಪಾದವನ್ನು ಯಾವುದೂ ತೊಂದರೆ ಇಲ್ಲದೆ ಹೊರತೆಗೆದದ್ದಾಯಿತು. ಆ ಕಾಸ್ಟ್ ನಿಂದ ನನಗೆ ಪ್ರಯೋಜನವಾಗಿದೆ. ಆದರೂ ಅದು ನನಗೆ ಕಟ್ಟಿ ಹಾಕಿದ ಅನುಭವ ಕೊಟ್ಟ ಕಾರಣ ಅದನ್ನು ತೆಗೆಸಿದ ಮೇಲೆ ಇಂದು ಬಂಧಮುಕ್ತಳಾದ ಭಾವ ನನ್ನೊಳಗೆ ಹುಟ್ಟಿದೆ! I feel

Posted 4/1/2024

No comments:

Post a Comment