ಭಾನುವಾರ, 21 ಜನವರಿ 2024
ಬಿರ್ಥಿಮನೆ, ಭುವನೆಶ್ವರಿನಗರ, ಬೆಂಗಳೂರು.
ಶ್ರೀರಾಮನ ಮಂತ್ರಾಕ್ಷತೆ
ರಾಷ್ಟೀಯ ಸ್ವಯಂ ಸೇವೆಯ ಕಾರ್ಯಕರ್ತರಿಂದ ಇಂದು ಅಯೋಧ್ಯಾ ಶ್ರೀರಾಮನ ಪವಿತ್ರ ಮಂತ್ರ ಅಕ್ಷತೆಯನ್ನು ಪಡೆದು ಧನ್ಯರಾದೆವು.
ಆತ್ಮೀಯ ಹಿಂದೂ ಬಾಂಧವರೇ...
ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಜನವರಿ ಒಂದನೇ ತಾರೀಕಿನ ನಂತರ ಪ್ರತೀ ಮನೆ ಮನೆಗೆ ತಲುಪಿಸಲಾಗುತ್ತದೆ.
ಪವಿತ್ರ ಮಂತ್ರಾಕ್ಷತೆಯನ್ನು ತಪ್ಪದೇ ಪ್ರತೀ ಮನೆ ಮನೆಗೆ ಬಿಡದೆ ವಿತರಿಸಲು ವಾರ್ಡು ಸಮಿತಿ ಸದಸ್ಯರ , ಕಾರ್ಯಕರ್ತರ ಹಾಗೂ ರಾಮಭಕ್ತರ ಒಂದು ಸಮಿತಿಯನ್ನು ರಚಿಸಲಾಗುವುದು.
ಈ ಸಮಿತಿಯ ಸದಸ್ಯರುಗಳು ಪ್ರತೀ ಮನೆ ಮನೆಗೆ ಹೋಗುವಾಗ ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ನಿಯಮಗಳು ಈ ರೀತಿಯಾಗಿ ಇದೆ..
-ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಸದಸ್ಯರುಗಳು ಕಡ್ಡಾಯವಾಗಿ ಸಾಂಪ್ರದಾಯಕ ಉಡುಪಿನಲ್ಲಿ ಇರಬೇಕಾಗುತ್ತದೆ.
- ಮಹಿಳೆಯರು ಸೀರೆ.
- ಗಂಡಸರು ಬಿಳಿ ಪಂಚೆ ಮತ್ತು ಶರ್ಟು.
- ಅಕ್ಷತೆಯ ಕಳಶವನ್ನು ಹಿಡಿದುಕೊಳ್ಳುವವರು ಕಾಲಿಗೆ ಚಪ್ಪಲಿ ಹಾಕುವಂತಿಲ್ಲ ಹಾಗೂ ಮೂರು ದಿನ ಮುಂಚಿತವಾಗಿ ಮಾಂಸಹಾರ ತ್ಯಜಿಸಿರಬೇಕು.
- ಪ್ರತೀ ಮನೆಗೆ ಹೋಗುವಾಗ ಕನಿಷ್ಠ 4 ರಿಂದ 5 ಸದಸ್ಯರು ಇರಬೇಕು .
- ಮನೆಯ ಹೊರಗಡೆ ನಿಂತು ಅಕ್ಷತೆಯನ್ನು ನೀಡುವಂತಿಲ್ಲ. ಮನೆಯ ಒಳಗಡೆ ಹೋಗಿ ಮನೆಯ ಸದಸ್ಯರೊಂದಿಗೆ ರಾಮ ಮಂದಿರದ ಸಂಪೂರ್ಣ ವಿಷಯವನ್ನು ತಿಳಿಸಿ ಅಕ್ಷತೆಯನ್ನು ನೀಡಬೇಕು.
- ತಾ 7/01/2024 ರಂದು ದೇಶಾದ್ಯಂತ ಮಹಾ ಸಂಪರ್ಕ ಅಭಿಯಾನ ನಡೆಸಲಾಗುತ್ತದೆ . ಅಂದು ಗರಿಷ್ಠ ನೂರು ಜನರನ್ನು ಸೇರಿಸಿ ಅಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ನೀಡಬೇಕು.
ಭಾಗವಹಿಸುವ ಎಲ್ಲಾ ರಾಮಭಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ಇರಬೇಕು.
- ಒಟ್ಟಾರೆಯಾಗಿ ಊರಿನ ಯಾವೊಬ್ಬ ಹಿಂದೂವಿನ ಮನೆಯನ್ನು ಬಿಡದಂತೆ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ನೀಡುವಂತೆ ನೋಡಿಕೊಳ್ಳಬೇಕು.
ಮಂತ್ರಾಕ್ಷತೆಯನ್ನು ಪಡೆದುಕೊಂಡ ಮನೆಯವರು ಪಾಲಿಸಬೇಕಾದ ನಿಯಮಗಳು..
💥 ಒಂದು ಹೊಸ ಬಟ್ಟೆಯನ್ನು ಹರಿವಾಣಕ್ಕೆ ಹಾಕಿ ಅದರಲ್ಲಿ ಮಂತ್ರಾಕ್ಷತೆಯನ್ನು ಸ್ವೀಕರಿಸಬೇಕು.
💥 ಮಂತ್ರಾಕ್ಷತೆಯನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಕೋಣೆಯಲ್ಲಿ ಇಡಬೇಕು.
💥 ಮನೆಯ ಎಲ್ಲಾ ಸದಸ್ಯರು ಶುಚಿಯಾಗಿರಬೇಕು , ಎಲ್ಲರೂ ಶುಚೀರ್ಭೂತರಾದ ಮೇಲೆ ಮನೆಯ ಯಜಮಾನ ಅಥವಾ ಯಜಮಾನ್ತಿ ಯಾರಾದರೂ ಹಿರಿಯರು ಮನೆಯ ಪ್ರತೀ ಸದಸ್ಯರ ತಲೆಗೆ ಎರಡೆರಡು ಮಂತ್ರಾಕ್ಷತೆಯನ್ನು ಹಾಕಿ ಆಶೀರ್ವಾದಿಸಬೇಕು.
💥 ಉಳಿದ ಮಂತ್ರಾಕ್ಷತೆಯನ್ನು ಬಟ್ಟೆಯಲ್ಲಿ ಕಟ್ಟಿ ದೇವರ ಕೋಣೆಯಲ್ಲಿ ಇಡಬೇಕು.
💥 ತಾ. 22/01/2024 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಾದ್ಯವಾದರೆ ಎಲ್ಲರೂ ಒಂದೇ ಕಡೆಯಲ್ಲಿ ಕುಳಿತು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ವೀಕ್ಷಿಸುವುದು.
💥 ಪ್ರತಿಷ್ಠಾಪನೆಯ ದಿನದಂದು , ಯಾವುದಾದರೊಂದು ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಮಾಡಬೇಕು.
💥ಪ್ರತಿಷ್ಠಾಪನೆಯ ದಿನ ಸಂಜೆ ಪ್ರತೀ ಹಿಂದೂಗಳ ಮನೆಯಲ್ಲಿ ಕನಿಷ್ಠ 5 ಅಥವಾ ಗರಿಷ್ಠ ಸಾದ್ಯವಾದಷ್ಟು ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಬೇಕು.
💥 ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರತಿಷ್ಠಾಪನೆ ನಡೆಯುವ ದಿನ , ಪ್ರತೀ ಹಿಂದೂಗಳ ಮನೆಯಲ್ಲಿ ಕಡ್ಡಾಯವಾಗಿ ಮಾಂಸಹಾರ ತ್ಯಜಿಸಬೇಕು.
💥 ದೇವರ ಕೋಣೆಯಲ್ಲಿ ಉಳಿದಿರುವ ಮಂತ್ರಾಕ್ಷತೆಯಿಂದ ರಾತ್ರಿ ಪಾಯಸ ತಯಾರಿಸಿ , ಅದನ್ನು ಮನೆಯವರೆಲ್ಲರೂ ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು..
💥ನಿಮ್ಮ ಮನೆಗೆ ಶ್ರೀ ರಾಮದೇವರ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆಯನ್ನು ಹೊತ್ತು ತರುವ ರಾಮಭಕ್ತರುನ್ನು ಪ್ರತೀ ಮನೆಯವರು ಗೌರವಿಸಬೇಕು.
ಈ ರೀತಿಯಾಗಿ ನಿಯಮಾವಳಿಗಳನ್ನು ಪಾಲಿಸಿಕೊಂಡು ಪ್ರತೀಯೊಬ್ಬ ಹಿಂದೂವು ಕೂಡ ಒಂದಾಗಿ , ಒಗ್ಗಟ್ಟಾಗಿ ಇರಬೇಕೆಂದು ವಿನಂತಿ
ಧನ್ಯವಾದಗಳು..
ಯಕ್ಷಗಾನದಲ್ಲಿ ಶ್ರೀರಾಮನ, ರಾಮಮಂದಿರದ ಬಗ್ಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿದ ಕಲಾವಿದರಿಗೆ ಅಭಿನಂದನೆಗಳು.
ಜೈ ಶ್ರೀರಾಮ್
ಇಂದು ಪ್ರಧಾನಿ ನರೇಂದ್ರ ಮೋದಿ ಯವರಿಂದ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಸ್ತಾಪನೆ ನಡೆಯುವುದು.
ಒಂದು ವಾರದಿಂದ ಎಲ್ಲಾ ಟಿ.ವಿ. ವಾಹಿನಿಯಿಂದ ಅಯೋಧ್ಯೆಯ ಸಂಭ್ರಮಾಚರಣೆ, ರಾಮೋತ್ಸವ....
ಬರೆದಿರುವುದು 22/1/2024
No comments:
Post a Comment