Tuesday, July 7, 2026

ಕರ್ನಾಟಕ ಕಲಾ ಸಂಘ - ಗ್ರಂಥಾಲಯ :

 ಶನಿವಾರ, ಜುಲೈ 4, 2026 

ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು. 




ಆರ್. ಟಿ.ನಗರದಲ್ಲಿ ಸಾಹಿತ್ಯ,ಸಂಗೀತ, ಕಲೆ,ನಾಟಕ,ಯಕ್ಷಗಾನಗಳ ಅಭಿಮಾನಿಗಳು ಇದ್ದು ಅವರ ನಿರೀಕ್ಷೆಗೆ ತಕ್ಕಷ್ಟು ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ವಿಷಯದ ಬಗ್ಗೆ ಯೋಚಿಸಿ ಒಂದು ಸಂಘವನ್ನು ರಚಿಸಿ ಕಲಾಭಿಮಾನಿಗಳ ಮನ ಸಂತೋಷಪಡಿಸಲು ಹಿರಿಯರು, ಸಾಹಿತ್ಯ ಪ್ರಿಯರು ಆದ  ಶ್ರೀ ಚಂದ್ರ ಶೇಖರ ಚಡಗರವರು ಉದ್ದೇಶಿಸಿದ್ದು, ಈ ಬಗ್ಗೆ ಕೆಲವರ ಜೊತೆಯಲ್ಲಿ ಈಗಾಗಲೇ ಈ ವಿಷಯವನ್ನು  ಪ್ರಸ್ತಾಪಿಸಿರುತ್ತಾರೆ.


ಶ್ರೀ ಪಾ ಚಂದ್ರಶೇಖರ ಚಡಗ ಮತ್ತು ವೀರಶೇಖರ ಸ್ವಾಮಿಯವರು ಆಯೋಜಿಸಿರುವ ಕಾರ್ಯಕ್ರಮ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಗೀತ, ನೃತ್ಯ, ಡಾ. ನಾ ಸೋಮೇಶ್ವರ ಅವರಿಂದ " ಯೋಗ ಮತ್ತು ಆರೋಗ್ಯದ " ಬಗ್ಗೆ ಉಪನ್ಯಾಸ. 




ಡಾ ನಾ ಸೋಮೇಶ್ವರ ಅವರ "ಯೋಗ ಮತ್ತು ಆರೋಗ್ಯ" ಉಪನ್ಯಾಸ ಬಹಳ ಅರ್ಥಪೂರ್ಣವಾಗಿಯೂ , ಉಪಯುಕ್ತವಾಗಿಯೂ ಇತ್ತು. 


 ಮನರಂಜನೆಗೆ ಸುಂದರವಾದ ನೃತ್ಯ ಕಾರ್ಯಕ್ರಮವೂ ಆಯೋಜಿಸಲಾಗಿತ್ತು. 



ಆರ್. ಟಿ ನಗರದ "ನಗೆ ಕೂಟ" ದ  ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ಮೆರುಗನ್ನು ತಂದಿತ್ತು. 
ಮಧ್ಯಾಹ್ನದ ನಂತರ ವೈ. ವಿ. ಗುಂಡೂ ರಾವ್ ಮತ್ತು ನರಸಿಂಹ ಮೂರ್ತಿ ಅವರಿಂದ ಹಾಸ್ಯ ಭಾಷಣಗಳು ಎಲ್ಲರನ್ನೂ ಮನರಂಜಿಸಿದವು.  

ಎಮ್. ಎಸ್. ನರಸಿಂಹ ಮೂರ್ತಿ 


ವೈ. ವಿ. ಗುಂಡೂ ರಾವ್ 


ವೀರಶೇಖರ ಸ್ವಾಮಿ ಹಾಗೂ ಚಡಗರಿಗೆ  ಅಭಿನಂದನೆಗಳು. 


Posted  8/7/2026 














     

No comments:

Post a Comment