ಭಾನುವಾರ, ಜುಲೈ 26, 2026
ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಜುಲೈ ತಿಂಗಳ ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮದಲ್ಲಿ ಡಾ ರಾಜಶೇಖರ ನಾಗುರ ಅವರು ಅತಿಥಿಗಳಾಗಿ " ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಆಧುನಿಕ ಕನ್ನಡ ಸಾಹಿತ್ಯ ಬೆಳೆದು ಬಂದ ಹಾದಿ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಹದಿನೈದು ನಿಮಿಷಗಳ ಕಾಲ ಉಪಹಾರ ಸೇವನೆ, ಮುಖ್ಯ ಅತಿಥಿಗಳ ಆಗಮನ, ಎಲ್ಲವೂ ಸಿದ್ಧವಾಯಿತು. 4.15 ಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯಿತು.
ಮೊದಲಿಗೆ ಮುಖ್ಯ ಅತಿಥಿಗಳಾದ ಡಾ.ಶ್ರೀ ರಾಜಶೇಖರ ನಾಗೂರರನ್ನು ವೇದಿಕೆಗೆ ಆಹ್ವಾನಿಸಲಾಯಿತು.ಜೊತೆಗೆ ನಮ್ಮ ಉಪಾಧ್ಯಕ್ಷರು ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಕುಮಾರಿ ಅದ್ವಿಕಾ. ಎನ್. ಕೆನ್ ಶ್ರೀ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯು ಚಂದದ "ಪಿಳ್ಳoಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ "ಎಂಬ ಪ್ರಾರ್ಥನೆಯನ್ನೂ ಮಾಡುತ್ತ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟಳು. ನಂತರ ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಗಳು ಮುಖ್ಯ ಅತಿಥಿಗಳಿಗೆ ಹಾಗೂ ಸಭೆಗೆ ಸ್ವಾಗತ ಕೋರಿದರು.
ರನ್ನ, ಪೊನ್ನ, ಪಂಪನ ಬಗೆಗೆ ಮಾತನಾಡುತ್ತಾ, ಆದಿ ಪುರಾಣ, ಶಾಂತಿ ಪುರಾಣ, ರನ್ನನ ಗಧಾಯುದ್ಧ, ಈ ಕುರಿತು ಅನೇಕ ಹೆಮ್ಮೆಯ ನುಡಿಗಳನ್ನು ಆಡಿದರು. ನವ್ಯ ಸಾಹಿತ್ಯದ ಕುರಿತು ಹೇಳುವಾಗ, ಭಕ್ತಿಪoಥ, ಸಾಮಾಜಿಕ ಚಳುವಳಿಗಾರರಾದ ಬಸವಣ್ಣನವರನ್ನು ಮೊದಲುಗೊಂಡು,ಅನೇಕ ಆಧುನಿಕ ಕವಿಗಳನ್ನು ಕೂಡ ತಮ್ಮ ಮಾತುಗಳಲ್ಲಿ ಸ್ಮರಣಿಸಿ ಕೊಂಡರು.
Posted 28/6/2026







No comments:
Post a Comment