ಭಾನುವಾರ, ಜುಲೈ 19, 2026
ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ - ಹುಣಸೂರು.
ನಾವು ಶನಿವಾರ ಸಂಜೆ ಹುಣಸೂರಿನಲ್ಲಿ ಮಡದಿ ನಳಿನಿಯ ಸಹೋದರ ಸತೀಶ್ ರಾವ್ ಅವರ ಮನೆಯಲ್ಲಿ ಇದ್ದು ಮಾರನೇ ದಿನ ಬೆಳಿಗ್ಗೆ ಸ್ನಾನ ಫಲಾಹಾರವನ್ನು ಮುಗಿಸಿ ಹತ್ತಿರದ ಗ್ರಾಮ ದೇವತೆ ಶ್ರೀ ಮುತ್ತು ಮಾರಿಯಮ್ಮನ ಸನ್ನಿಧಾನಕ್ಕೆ ಬಂದೆವು.
ಕಿರಿದಾದ ರಸ್ತೆ ಯಿಂದ ತೆರಳಬೇಕಾದ ಜಾಗ, ಸುಂದರವಾದ ವಾತಾವರಣ, ಶುಚಿಯಾಗಿ ಇರುವ ಪ್ರಾಂಗಣ ಹಾಗೂ ದೇವತೆ, ಮನಸ್ಸಿಗೆ ಆಹ್ಲಾದಕರ ದೇವಸ್ಥಾನ.
ಸುತ್ತಲಿನ ಜಾಗ ಕಿರಿದಾಗಿದ್ದರೂ ಹಲವಾರು ದೇವ ದೇವತೆಯರ ವಿಗ್ರಹಗಳು, ಭಕ್ತರನ್ನು ಮುದ ಗೊಳಿಸುವ ಪ್ರಾಂಗಣ, ನಾವೂ ಸ್ವಲ್ಪ ಹೊತ್ತು ವಿರಮಿಸಿ, ಧ್ಯಾನಸ್ತರಾಗಿ ದೇವಿಯ ದರ್ಶನ, ಮಂಗಳಾರತಿ ವೀಕ್ಷಿಸಿ ಅಲ್ಲಿಂದ ನಿರ್ಗಮಿಸಿದೆವು.
ದೇವಾಲಯದ ವತಿಯಿಂದ ಪ್ರತಿ ವರ್ಷ ಅದ್ಧೂರಿಯಾಗಿ ಕರಗ ಮಹೋತ್ಸವ ಮತ್ತು ಜಾತ್ರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ೫೦ನೇ ವರ್ಷದ ಕರಗ ಮಹೋತ್ಸವಗಳನ್ನು ಕಂಡಿದ್ದು, ಭಕ್ತರು ಅತ್ಯಂತ ಭಕ್ತಿಯಿಂದ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.
Posted 21/7/2026








No comments:
Post a Comment