Tuesday, October 27, 2020

ಭಗವದ್ಗೀತೆಯ ಸಾರಾಂಶ

ಭಗವದ್ ಗೀತಾ 

 ಬುಧವಾರ, 28 ಅಕ್ಟೋಬರ 2020 


ಭಗವದ್ಗೀತೆ ಓದಬೇಕು ಅಂತ ಬಹುತೇಕ ಹಿಂದೂಗಳಿಗೆ ಆಸೆ ಇರುತ್ತದೆ. ಭಗವದ್ಗೀತೆಯಲ್ಲಿ ಅಂಥದ್ದೇನಿದೆ ತಿಳ್ಕೋಬೇಕೆಂಬ ಕುತೂಹಲ. ಆದರೆ, 700 ಶ್ಲೋಕಗಳಿರುವ ಪುಸ್ತಕದ ಗಾತ್ರ ನೋಡಿ ಕೆಲವರು ಓದಲು ಹಿಂಜರಿದರೆ, ಮತ್ತೆ ಕೆಲವರು ಆ ಶ್ಲೋಕ ಗೀಕ ಎಲ್ಲ ಯಾರು ಓದ್ತಾರೆ ಅಂತ ಸುಮ್ನಾಗಿರ್ತಾರೆ. ನಿಮ್ಮಂಥವರಿಗಾಗಿಯೇ ಸರಳವಾಗಿ ಒಂದೊಂದು ಅಧ್ಯಾಯಗಳ ಸಾರವನ್ನೂ ಒಂದೆರಡು ಸಾಲಿನಲ್ಲಿ ಇಲ್ಲಿ ಕೊಡಲಾಗಿದೆ.

ಅಧ್ಯಾಯ 1:

ತಪ್ಪಾಗಿ ಯೋಚಿಸುವುದೇ ಜೀವನದ ಸಮಸ್ಯೆ

ಅರ್ಜುನನ ದುಃಖ ಇಲ್ಲಿ ಮುಖ್ಯ ವಿಷಯ. ಯುದ್ಧಕ್ಕಾಗಿ ಬಂಧುಗಳನ್ನೇ ಕೊಲ್ಲಬೇಕಾದ ದುಗುಡ ಹಾಗೂ ಖಿನ್ನತೆ. ಧರ್ಮ ಹಾಳುಗೆಡವಿದ್ದನ್ನು ನೋಡುವುದಕ್ಕಿಂತ ಅವರೆಲ್ಲ ತನ್ನ ಬಂಧುಗಳೇ. ಅವರನ್ನು ಹೇಗೆ ಕೊಲ್ಲುವುದು ಎಂದು ಅರ್ಜುನ ಯೋಚಿಸುತ್ತಿರುತ್ತಾನೆ. ಆದರೆ, ಈ ಯೋಚನೆ ತಪ್ಪು. ಧರ್ಮವು ಈ ಭವಬಂಧನಗಳಿಗಿಂತ ಹೆಚ್ಚು. ತಪ್ಪಾಗಿ ಯೋಚಿಸುವುದರಿಂದ ತಪ್ಪಾದ ತೀರ್ಪು ಹೊರಬರುತ್ತದೆ ಎಂಬುದನ್ನು ಶ್ರೀಕೃಷ್ಣ ವಿವರಿಸುತ್ತಾನೆ. ಆದರೆ, ಅರ್ಜುನನಿಗೆ ಸಮಧಾನವಾಗುವುದಿಲ್ಲ. ಆತ ಗೊಂದಲ ಹಾಗೂ ದುಃಖದಿಂದ ಕುಳಿತುಕೊಳ್ಳುತ್ತಾನೆ. 

ಅಧ್ಯಾಯ 2:

ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ

ಕೃಷ್ಣನು ಅರ್ಜುನನಿಗೆ ಅವನೆಲ್ಲ ದುಃಖದುಮ್ಮಾನ, ಸಮಸ್ಯೆಗಳಿಗೆ ಅಜ್ಞಾನವೇ ಕಾರಣ ಎಂಬುದನ್ನು ತಿಳಿಸುತ್ತಾನೆ. ಭೀಷ್ಮನಿಂದ ಹಿಡಿದು ಯಾರೊಬ್ಬರ ಆತ್ಮಗಳನ್ನೂ ನಾಶಪಡಿಸಲಾಗುವುದಿಲ್ಲ. ಹಾಗಾಗಿ ಅವರೆಲ್ಲ ಶಾಶ್ವತವಾಗಿರುತ್ತಾರೆ. ಯುದ್ಧವನ್ನು ದೂರವಿಡುವುದರಿಂದ ನಿನ್ನ ಧರ್ಮವನ್ನೇ ದೂರವಿಟ್ಟಂತಾಗುತ್ತದೆ. ಅದು ಪಾಪಕಾರ್ಯ. ಹೋರಾಡದಿದ್ದರೆ ಆತನೊಬ್ಬ ಹೇಡಿ ಎನಿಸಿಕೊಳ್ಳುತ್ತಾನೆ ಎಂದು ಎಚ್ಚರಿಸುತ್ತಾನೆ ಕೃಷ್ಣ.

ಅಧ್ಯಾಯ 3:

ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ

ಕೃಷ್ಣ ಇಲ್ಲಿ ನಿಸ್ವಾರ್ಥ ಸೇವೆಯಾದ ಕರ್ಮಯೋಗದ ಕುರಿತು ಮಾತನಾಡುತ್ತಾನೆ. ಕರ್ಮಯೋಗಿಯು ಧರ್ಮದ ಆಧ್ಯಾತ್ಮಕ್ಕೆ ಬೆಲೆ ಕೊಟ್ಟು ತನ್ನೆಲ್ಲ ಕೆಲಸಗಳನ್ನು ದೇವರಿಗೆ ಸಮರ್ಪಿಸುತ್ತಾನೆ. ಫಲಿತಾಂಶದ ಬಗ್ಗೆ ಯೋಚಿಸದೆ  ತನ್ನ ಪಾಡಿಗೆ ತಾನು ಶಾಂತಚಿತ್ತದಿಂದ ಕೆಲಸ ಮಾಡಿಕೊಂಡು ಹೋಗುತ್ತಾನೆ. ನಮ್ಮ ಆಸೆ, ಸಿಟ್ಟು, ಅತಿಯಾದ ಪ್ರೀತಿಯೇ ನಮ್ಮ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಗಳಾಗಿಸಿ ಶಾಂತಿಯನ್ನು ಕಸಿದುಕೊಳ್ಳುತ್ತದೆ ಎಂದು ತಿಳಿಸುತ್ತಾನೆ.

ಅಧ್ಯಾಯ 4:

ಧರ್ಮಸಂಸ್ಥಾಪನೆಗೆ ಭಗವಂತ ಅವತಾರ ಎತ್ತುತ್ತಾನೆ

ಧರ್ಮಕ್ಕೆ ಹಾನಿಯಾದಾಗ ಭಗವಂತನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುತ್ತಾನೆ ಎಂದು ಕೃಷ್ಣ ವಿವರಿಸುತ್ತಾನೆ. ಅಷ್ಟೇ ಅಲ್ಲ, ಭಗವಂತನ ಈ  ಜನ್ಮ ರಹಸ್ಯವನ್ನು ಅರಿತವರು ಮೋಕ್ಷ ಪ್ರದರು ಎಂದು ತಿಳಿಸುತ್ತಾನೆ.

ಅಧ್ಯಾಯ 5:

ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು

ಹೇಗೆ ಕರ್ತವ್ಯ ನಿಭಾಯಿಸುತ್ತಲೇ ಫಲದಾಸೆಯಿಲ್ಲದೆ ಸನ್ಯಾಸಿಯಂತಿರುವುದು ಎಂದು ಅರ್ಜುನ ಪ್ರಶ್ನಿಸುತ್ತಾನೆ. ಇದಕ್ಕೆ ಕೃಷ್ಣನು ನಿಜವಾದದ ಕರ್ಮಯೋಗಿಯು ಫಲಿತಾಂಶದ ಬಗ್ಗೆ ಯೋಚಿಸದೆ ಫಲವನ್ನು ದೇವರಿಗೆ ಬಿಟ್ಟು ತಾನು ಕರ್ತವ್ಯ ನಿಭಾಯಿಸುತ್ತಾನೆ. ಈ ಮನಸ್ಥಿತಿಯಿಂದಾಗಿ ಆತ ಸ್ವಯಂ ನಿಯಂತ್ರಣ ಸಾಧಿಸಿ ಅಹಂಕಾರದಿಂದ ಹೊರಬರಬಲ್ಲ ಎಂದು ಹೇಳುತ್ತಾನೆ. 

ಅಧ್ಯಾಯ 6:

ಧ್ಯಾನಸಾಧಕನಿಗೆ ಕರ್ಮ ಸಾಧನೆ ಸಾಧ್ಯ

ಧ್ಯಾನದ ಕುರಿತು ಇಲ್ಲಿ ಕೃಷ್ಣ ಹೇಳುತ್ತಾನೆ. ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ಬಿಗಿಹಿಡಿದು, ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು ಎನ್ನುತ್ತಾನೆ. 

ಅಧ್ಯಾಯ 7:

ನೀನಾರು ಎಂದು ತಿಳಿದುಕೋ. 

ಧ್ಯಾನ ಮಾಡುತ್ತಿರುವುದರಿಂದ ನಿನಗೆ ನೀನು ಯಾರೆಂಬುದು ಅರಿವಾಗಬೇಕು. ಜ್ಞಾನಿಯು ನನ್ನಲ್ಲಿ ಲೀನನಾಗುತ್ತಾನೆ ಎಂಬ ತತ್ವ ಬೋಧಿಸುತ್ತಾನೆ.

ಅಧ್ಯಾಯ 8:

ಪ್ರಯತ್ನ ಬಿಡಬೇಡ

ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರುವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡಕೂಡದು ಎಂದು ಹೇಳುತ್ತಾನೆ.

ಅಧ್ಯಾಯ 9:

ದೇವರ ಧ್ಯಾನದಿಂದ ನನ್ನ ಸೇರಬಹುದು

ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು, ಆದರೆ ನಾನು ಅವುಗಳಲ್ಲಿ ಇಲ್ಲ.ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.

ಅಧ್ಯಾಯ 10:

ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ

ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ. 

ಅಧ್ಯಾಯ 11: 

ವಿಶ್ವರೂಪ ದರ್ಶನ

ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ಯವನ್ನು ಅರಿಯದಿದ್ದುದಕ್ಕೆ ಕ್ಷಮೆ ಯಾಚಿಸುತ್ತಾನೆ. 

ಅಧ್ಯಾಯ 12: 

ವೈರಾಗ್ಯದಿಂದ ಧ್ಯಾನಿಸುವವರೇ ಯೋಗಿ

ಯಾರು ಭಗವಂತನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಳು. ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾ ಸಮಾಡಬೇಕು. ಅದು ಕಷ್ಟವಾದರೆ, ಭಗವಂತನ ಪ್ರೀತ್ಯರ್ಥವಾಗಿ ಕರ್ಮಗಳನ್ನು ಮಾಡು. ಅದೂ ಕಷ್ಟವಾದರೆ. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು ಎನ್ನುತ್ತಾನೆ.

ಅಧ್ಯಾಯ 13: 

ಮಾಯೆಯಿಂದ ಕಳಚಿಕೊಂಡು ಭಗವಂತನನ್ನು ಭಜಿಸು

ಈ ಬ್ರಹ್ಮಾಂಡವೇ ಒಂದು ಮಾಯೆ. ಇವೆಲ್ಲದರ ಸೃಷ್ಟಿಕರ್ತ ಬ್ರಹ್ಮನಾಗಿದ್ದು,ಅವನು ಪ್ರತಿಯೊಂದು ಅಣುರೇಣತೃಣಕಾಷ್ಟಗಳಲ್ಲೂ ನೆಲೆಸಿದ್ದಾನೆ. ನಿನ್ನೊಳಗೂ ಆತ ಇರುವುದನ್ನು ಅರ್ಥ ಮಾಡಿಕೊಂಡು ಮಾಯೆಯಿಂದ ಕಳಚಿಕೊಂಡು ಭಕ್ತಿಯಿಂದ ಜೀವಿಸು ಎಂದು ಕೃಷ್ಣ ವಿವರಿಸುತ್ತಾನೆ. 

ಅಧ್ಯಾಯ 14: 

ನಿನ್ನದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ

ಎಲ್ಲರಲ್ಲೂ ಮೂರು ಗುಣಗಳಿರುತ್ತವೆ. ಸಾತ್ವಿಕ ಗುಣವು ಬೆಳಕಿನ, ಸುಖದ, ವಿಚಾರದ ರೂಪ, ರಜೋಗುಣವು ಪ್ರೀತಿ, ಬಯಕೆ ಅಹಂಕಾರದ ಕ್ರಿಯಾಶೀಲ ರೂಪ, ತಮವು ಅಜ್ಞಾನ, ತಪ್ಪು ತಿಳುವಳಿಕೆ, ಆಲಸ್ಯದ ರೂಪ. ಇವುಗಳಲ್ಲಿ ಶಕ್ತವಾದ ಗುಣ ಆತ್ಮವನ್ನು ಕಟ್ಟಿಹಾಕುತ್ತದೆ. ಎಲ್ಲರಲ್ಲಿಯೂ ಇಷ್ಟೂ ಗುಣಗಳಿದ್ದರೂ ಒಂದು ಗುಣ ಮೇಲುಗೈ ಸಾಧಿಸುವುದು. ಸಾತ್ವಿಕ ಗುಣದವನು ಮೋಕ್ಷ, ರಾಜಸಿಕ ಗುಣದವನು ಪುನರ್ಜನ್ಮ ಹಾಗೂ ತಾಮಸಿಕ ಗುಣದವನು ಕೆಳಮಟ್ಟದ ಜನ್ಮವೆತ್ತುತ್ತಾನೆ ಎಂದು ಕೃಷ್ಣ ಹೇಳುತ್ತಾನೆ. 

ಅಧ್ಯಾಯ 15:

ದೈವಿಕತ್ವಕ್ಕೆ ಬೆಲೆ ಕೊಡು

ಈ ಪ್ರಾಪಂಚಿಕ ಜೀವನದಲ್ಲಿ ನಾವು ಹೇಗೆ ಸಾವು ಹಾಗೂ ಪುನರ್ಜನ್ಮಗಳ ಮಧ್ಯೆ ಸಿಲುಕಿದ್ದೇವೆ ಎಂಬುದನ್ನು ಕೃಷ್ಣ ಅರ್ಜುನನಿಗೆ ಅರ್ಥ ಮಾಡಿಸುತ್ತಾನೆ. ಆತ ಸಂಸಾರವನ್ನು ತಲೆಕೆಳಗಾದ ಅರಳಿ ಮರಕ್ಕೆ ಹೋಲಿಸಿ ಮಾತನಾಡುತ್ತಾನೆ. ಪಾಪ ಪುಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ. ಸುಖದ ಬಯಕೆಗಳೆ ಅದರ ಚಿಗುರುಗಳು. ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು. ದೈವಿಕತ್ವಕ್ಕೆ ಬೆಲೆ ಕೊಟ್ಟಾಗ ಇದು ಸಾಧ್ಯ ಎಂದು ಕೃಷ್ಣ ಮನ ಮುಟ್ಟುವಂತೆ ಹೇಳುತ್ತಾನೆ.  

ಅಧ್ಯಾಯ 16 : ಉತ್ತಮನಾಗಿರುವುದೇ ವರ

ಸಿಟ್ಟು, ಕ್ರೂರತೆ, ಅಜ್ಞಾನ, ಅಪ್ರಾಮಾಣಿಕತೆ, ಅತಿಯಾಸೆ, ಅನೈತಿಕತೆ, ಅಹಂಕಾರ ಮುಂತಾದವು ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿ ನಾಶ ಮಾಡುತ್ತವೆ. ಆದರೆ ಮಾನವೀಯತೆ, ಸತ್ಯ, ಅಹಿಂಸೆ, ತಾಳ್ಮೆ, ಇಂದ್ರಿಯಗಳ ನಿಯಂತ್ರಣ ಮುಂತಾದ ಸದ್ಗುಣಗಳು ಜ್ಞಾನಕ್ಕೆ ಕಾರಣವಾಗಿ ಸ್ವತಂತ್ರರನ್ನಾಗಿಸುತ್ತದೆ. 


ಅಧ್ಯಾಯ 17:

ಮೇರು ಸತ್ಯ

ಇಲ್ಲಿ ಕೃಷ್ಣ ಓಂ ತತ್ ಸತ್ ಮಂತ್ರದ ಮಹತ್ವ ಹೇಳುತ್ತಾನೆ. ಇದರ ಅರ್ಥ ಮೇರು ಸತ್ಯ ಎಂದು. ಓಂನಾಮದಿಂದಲೇ ಸತ್ಕಾರ್ಯ ಆರಂಭಿಸಬೇಕು. ಯಜ್ಞ, ದಾನ ಹಾಗೂ ತಪಸ್ಸು ಸತ್ಕಾರ್ಯಗಳು ಎಂದು ವಿವರಿಸುತ್ತಾನೆ.

ಅಧ್ಯಾಯ 18: ಪರಮಾತ್ಮನೊಂದಿಗೆ ಐಕ್ಯ

ಫಲದ ಬಯಕೆಯಿಂದ ಮಾಡುವ ಕರ್ಮಗಳನ್ನು ಬಿಡುವುದು ಸಂನ್ಯಾಸ, ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ ಎಂದು ಹೇಳುವ ಕೃಷ್ಣನು, ಕರ್ಮಯೋಗಿಯಾಗಿ ಬದುಕಬೇಕು. ನಿಮ್ಮ ಕೆಲಸವೇ ನಿಮ್ಮನ್ನು ಆತ್ಮದೊಂದಿಗೆ ಜೋಡಿಸುತ್ತದೆ. ಪರಮಾತ್ಮನೊಂದಿಗೆ ಐಕ್ಯವಾಗಲು ದಾರಿ ತೋರುತ್ತದೆ ಎಂದು ವಿವರಿಸುತ್ತಾನೆ.

Sunday, October 25, 2020

GENERATION GAP - BEAUTIFUL MESSAGE

 Monday, 26th October 2020

Very touched by the beautiful message, some one wrote it, with lot of meaning:


What a beautiful answer! 

Comparison between two  "Generations" ....... Everyone must read 👌👌

A youngster asked his father: "How did you people live before with-

No access to technology

No aeroplanes

No internet

No computers

No dramas

No TVs

No air cons

No cars

No mobile phones?"

His Dad replied:

"Just like how your generation lives today with -

No prayers

No compassion

No honor

No respect

No character

No shame

No modesty

No time planning

No sports 

No reading" 

"We, the people that were born between 1940-1985 are the blessed ones. Our life is a living proof:

👉 While playing and riding bicycles, we never wore helmets.

👉 After school, we played until dusk. We never watched TV.

👉 We played with real friends, not internet friends.

👉 If we ever felt thirsty, we drank tap water not bottled water.

👉 We never got ill although we used to share the same glass of juice with four friends.

👉 We never gained weight although we used to eat a lot of rice everyday.

👉 Nothing happened to our feet despite roaming bare-feet.

👉 our mother and father never used any supplements to keep us healthy. 

👉 We used to create our own toys and play with them.

👉 Our parents were not rich. They gave us love, not worldly materials.

👉 We never had cellphones, DVDs, play station, XBox, video games, personal computers, internet chat - but we had real friends.

👉 We visited our friends' homes uninvited and enjoyed food with them.

👉 unlike your world, we had relatives who lived close by so family time and ties were enjoyed together. 

👉 We may have been in black and white photos but you will find colourful memories in those photos.

👉 We are a unique and, the most understanding generation, because we are the last generation who listened to their parents. 

Also , the first who have had to listen to their children. 

and we are the ones who are still smarter and helping you now to use the technology that never existed while we were your age!!!

We are a LIMITED edition! 

So you better -

Enjoy us. 

Learn from us.

Treasure us.

Before we disappear from Earth and your lives."


GOD BLESS ALL.

SARVE JANAH SUKHINO BHAVANTU.


ಆಯುಧ ಪೂಜೆ ನವರಾತ್ರಿ 2020

 ಬಿರ್ತಿಮನೆ, ಬೆಂಗಳೂರು.

ಆದಿತ್ಯವಾರ, 25 ಅಕ್ಟೋಬರ 2020 

ಆಯುಧ ಪೂಜೆಯು ನವರಾತ್ರಿ ಹಬ್ಬದ ಒಂಬತ್ತನೇ ದಿನವಾದ ಮಹಾ ನವಮಿಯಂದು ಆಚರಿಸಲಾಗುತ್ತದೆ.



ಮನೆಯಲ್ಲಿ ಇರುವ  ಉಪಯೋಗಕ್ಕೆ ಬರುವ ಸಾಧನಗಳಿಗೆ ಪೂಜೆ ಮಾಡಿ ಕೃತಾರ್ಥರಾಗುವ ಸಂಪ್ರದಾಯ.  



ಇಲ್ಲಿ ಬಿರ್ತಿಮನೆಯಲ್ಲಿರುವ ಸಂಗೀತ ಸಾಧನಗಳು: ಹಾರ್ಮೋನಿಯಂ, ಕೊಳಲು, ತಾಳ, ಕೀಬೋರ್ಡ್, ಪಿಟೀಲು, ಗಿಟಾರ್, ಡಮರು. ಇವುಗಳನ್ನು ಜೋಡಿಸಿ, ಹೂವು, ನೈವೇದ್ಯ, ಮಂಗಳಾರತಿಯನ್ನು ಮಾಡಿದ್ದಾಯಿತು.



ಇನ್ನು ವಾಹನಗಳು. ಗರಾಜಿನಲ್ಲಿ ಇರುವ ಕಾರುಗಳು, ಮೋಟರ್ ಸೈಕಲನ್ನು ಚೆನ್ನಾಗಿ ತೊಳೆದು, ಒರಿಸಿ ಶುದ್ಧ ಮಾಡಿದ್ದಾಯಿತು. ನಂತರ ಅದಕ್ಕೆ ಪೂಜೆ, ಪುನಸ್ಕಾರ, ಹೂವು, ಅರಸಿನ ಕುಂಕುಮ ವನ್ನು ಸಮರ್ಪಿಸಿ ಆರತಿಯನ್ನು ಮಾಡಿದ್ದಾಯಿತು.


ಸನಾತನ ಸಂಪ್ರದಾಯದಂತೆ ವಾಹನಗಳ ಚಕ್ರದ ಅಡಿಯಲ್ಲಿ ನಿಂಬೆ ಹಣ್ಣನ್ನು ಇರಿಸಿ ವಾಹನವನ್ನು ಮುಂದಕ್ಕೆ ಚಲಾಯಿಸಿ ಅವಕ್ಕೆ ಅರ್ಪಿಸುವ ಸಂಪ್ರದಾಯ. ಮುಂದಿನ ದಿನಗಳಲ್ಲಿ ಅವುಗಳಿಂದ ಯಾವ ತರದ ತೊಂದರೆಗಳು ಬರದಂತೆ ಪ್ರಾರ್ಥಿಸುವುದು.


ಹೀಗೆ ಇಂದಿನ ಆಯುಧ ಪೂಜೆಯ ಕೈಂಕರ್ಯವನ್ನು ಮುಗಿಸಿ ಆತ್ಮ ಸಂತೃಪ್ತಿಯಾಯಿತು ಎನ್ನುವ ಭಾವನೆ.

ಬರೆದುರುವುದು. ಸೋಮವಾರ, 26 ಅಕ್ಟೋಬರ 2020 


Saturday, October 24, 2020

ನವರಾತ್ರಿ ಸಂಭ್ರಮ 2020

 ನವರಾತ್ರಿ ಹಬ್ಬ 

ಬಿರ್ತಿಮನೆ, ಬೆಂಗಳೂರು, ಶನಿವಾರ  24 ಅಕ್ಟೋಬರ 2020 

ಒಂಬತ್ತು ದಿನಗಳ ನವರಾತ್ರಿಯ ಹಬ್ಬವು ಹಿಂದೂಗಳ ವಿಶೇಷ ದಿನಗಳು. ದೇವಿಯ ಆರಾಧನೆ, ಪೂಜೆ, ಪುನಸ್ಕಾರ, ಉಪವಾಸ, ಊಟ, ಇತ್ಯಾದಿ ಇತ್ಯಾದಿ. 


ನವ ರಾತ್ರಿಯಲ್ಲಿ ನವ ದುರ್ಗೆಯರ ಆರಾಧನೆ ಮಾಡುವುದು ಹಿಂದೂ ಸಂಪ್ರದಾಯ. ಶಕ್ತಿ ದೇವತೆಯರ ಆರಾಧನೆ ಮಾಡುವುದರಿಂದ ದುಷ್ಟ ಶಕ್ತಿಗಳ ದಮನ ಮಾಡುವ ಸಾಮರ್ಥ್ಯವನ್ನು ತಾಯಿ ಕರುಣಿಸುತ್ತಾಳೆ ಅನ್ನೋದು ನಂಬಿಕೆ. ಅಕ್ಟೋಬರ್ 17 ಶನಿವಾರದಿಂದ ವಿಜಯ ದಶಮಿಯವರೆಗೂ ನವರಾತ್ರಿಯ ನವ ದುರ್ಗೆಯರ ಪೂಜೆ, ಪುನಸ್ಕಾರಗಳು ಆರಂಭ ಆಗಲಿವೆ.





ನವರಾತ್ರಿಯ ಮೊದಲ ದಿನ : ಶೈಲಪುತ್ರಿಯ ಆರಾಧನೆ

ನವರಾತ್ರಿಯ ಎರಡನೇ ದಿನ : ಬ್ರಹ್ಮಚಾರಿಣಿ ಆರಾಧನೆ

ನವರಾತ್ರಿಯ ಮೂರನೇ ದಿನ : ಚಂದ್ರಘಂಟಾದೇವಿ ಆರಾಧನೆ

ನವರಾತ್ರಿಯ ನಾಲ್ಕನೇ ದಿನ : ಕೂಷ್ಮಾಂಡಿನಿ ಆರಾಧನೆ

ನವರಾತ್ರಿಯ ಐದನೇ ದಿನ : ಸ್ಕಂದ ಮಾತೆ ಆರಾಧನೆ

ನವರಾತ್ರಿಯ ಆರನೇ ದಿನ : ಕಾತ್ಯಾಯಿನಿ ಆರಾಧನೆ

ನವರಾತ್ರಿಯ ಏಳನೇ ದಿನ : ದುರ್ಗಾ ಮಾತೆ ಆರಾಧನೆ

ನವರಾತ್ರಿಯ ಎಂಟನೇ ದಿನ : ಮಹಾಗೌರಿಯ ಆರಾಧನೆ

ನವರಾತ್ರಿಯ ಒಂಭತ್ತನೇ ದಿನ : ಸಿದ್ಧಿಧಾತ್ರಿ ಆರಾಧನೆ

ನವರಾತ್ರಿಯ ಹತ್ತನೇ ದಿನ ವಿಜಯ ದಶಮಿ





ಹಿಂದಿನ ವರ್ಷಗಳಲ್ಲಿ ಹಲವಾರು ಬಂಧುಗಳು, ಸ್ನೇಹಿತರು ಮಧ್ಯಾಹ್ನಕ್ಕೆ ಊಟಕ್ಕೆ ಆಗಮನ, ಊಟ, ಹರಟೆ ಇತ್ಯಾದಿ.
ಆದರೆ ಈ ಬಾರಿಯ ಸಂಭ್ರಮ ಬಹಳ ಸರಳ, ಕೊರೋನ ಮಹಾಮಾರಿ ಜನರ ಮನಸ್ತಿತಿಯನ್ನು ಬದಲಾಯಿಸಿದೆ. "ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ" ಎಂಬ ಅರೋಗ್ಯ ಮಂತ್ರದಿಂದಾಗಿ ಯಾರೂ ಯಾವ ಸಂಭ್ರಮ, ಸಮಾರಂಭಕ್ಕೆ ಹಾಜರಾಗಲು ಹಿಂಜರಿಯುತ್ತಾರೆ. 










ಬೆಂಗಳೂರು  ಬಿರ್ತಿಮನೆಯಲ್ಲಿಯ  ಸಂಭ್ರಮ ಅತ್ಯ್ಯಂತ ಸರಳ, ಶುಭ,ರಾಘು,ಲಹರಿ ಮತ್ತು ರಾಘುವಿನ ಅಪ್ಪ, ಅಮ್ಮ ಮಧ್ಯಾಹ್ನಕ್ಕೆ ಆಗಮನ, ಮನೆಯಲ್ಲಿ ನಳಿನಿ, ಕವಿತಾರಿಂದ ತಯಾರಿಸಿದ ಭರ್ಜರಿ ಊಟ, ಹರಟೆ. ಟೆರೇಸಿನ ನೂತನ ಹಂಚಿನ ಮೇಲ್ಛಾವಣಿಯಲ್ಲಿ ಸ್ವಲ್ಪ ಹೊತ್ತು ಕಳೆಯುವಿಕೆ.

ಬೆಳಿಗ್ಗೆ ಮನೆಯ ದೇವರಿಗೆ ಪೂಜೆ, ನಳಿನಿಯಿಂದ ಮಹಿಳೆಯರಿಗೆ ಅರಸಿನ ಕುಂಕುಮ, ಉಡುಗೊರೆ.

ಹೀಗೆ ಈ ವರ್ಷದ ನವರಾತ್ರಿ ಸಂಭ್ರಮ.

ಬರೆದಿರುವುದು 25/10/2020 



Friday, October 23, 2020

UAE BRAHMANA SAMAJA DURGA POOJE 2020

 Friday, 23rd October 2020

Durga Pooje at UAE Brahmana Samaja, Dubai through ZOOM

UAE Brahmana Samaja, started in 2003, began with Durga Pooja celebrating Navaratri Festival in 2004. It was well organized Pooja conducted by Brahmana Samaja and we were actively participating and taking care of all issues.

Lakmikanth Bhat was the purohith, who used to conduct the pooja.



This year 2020, all programs are organized through ZOOM platform, due COVID pandemic.




The program was simultaneously conducted at Sharjah at Laxmikanth Bhat's house and at Santoor with Raghupathi Joisa as the main priest. Rajeshwara Holla and Latha were the host for the pooja.



Sudhaker Rao Pejavar organized the program beautifully, with the help of Prakash Upadhya, Shivaram Bhat, Udaya Kumar and Sudhakar Krishnamoorthy at Dubai. 




Puttige Mutt Sri Sugunendra Tirtha Swamiji from New Jersey gave blessings and Chief priest Vidwan Yogendra Bhat explained the importance of NAVARAATRI, which is the thanks giving to the nature.


There was bhajans from various people, and a very beautiful presentation of Mahisha mardini Stotram by 9 ladies of Brahamana Samaja, prepared by Shivaram Bhat.

The program ended with Maha Mangalarathi at Sharjah and Santoor.

Thanks to all who hard for presenting an excellent program.

God Bless all,

SARVE JANAH SUKHINO BHAVANTHU.



Sunday, October 18, 2020

ಭಾನುವಾರದ ದಿನಚರಿ - 18 ಅಕ್ಟೋಬರ 2020

ಭಾನುವಾರ, 18 ಒಕ್ಟೋಬರ 2020 

ಬೇರೆ ದಿನಗಳು ಭಾನುವಾರದಂತೆ ಇದ್ದರೂ ಭಾನುವಾರ ಯಾವಾಗಲೂ ಶುದ್ಧವಾದ ರಜ ದಿನದಂತೆ. ನಮ್ಮ ದುಬೈ ವರುಷಗಳಲ್ಲಿ ಶುಕ್ರವಾರವು ವಾರದ ರಜ ದಿನವಾಗಿತ್ತು. ಹತ್ತು ವರ್ಷಗಳ ಹಿಂದೆ ಮರಳಿ ಭಾರತಕ್ಕೆ, ಬೆಂಗಳೂರಿಗೆ ಬಂದ ನಂತರ ಅದು ಭಾನುವಾರ ರಜ, ಮನಸ್ಸಿಗೂ, ದೇಹಕ್ಕೂ ಏನೋ ಒಂದು ತರದ ಆಹ್ಲಾದ.


ಕೊರೋನ ಪರ್ವದ ಹಿಂದಿನ ದಿನಗಳಲ್ಲಿ ಭಾನುವಾರವು ಇನ್ನಷ್ಟು ಚಟುವಟಿಕೆಯ ದಿನವಾಗಿತ್ತು. ನಾಟಕ, ಸಂಗೀತ, ಯಕ್ಷಗಾನ ಇತ್ಯಾದಿ ಹತ್ತು ಹಲವಾರು ಕಾರ್ಯಕ್ರಮಗಳಿಗೆ ನಮ್ಮ ಹಾಜರಿ. ಕೆಲದಿನ ಸಂಬಂದಿಕರ ಹೋಮ ಶಾಂತಿ, ನಾಮಕರಣ, ಸೀಮಂತ ಇತ್ಯಾದಿ ಕಾರ್ಯಕ್ರಮಗಳಿಗೆ ನಮ್ಮ ಹಾಜರಿ. 




ನಿನ್ನೆಯ ಭಾನುವಾರ ಎಂದಿನಂತೆ ಬೆಳಗ್ಗಿನ ಚಟುವಟಿಕೆ, ಯೋಗ, ಗಿಡಗಳಿಗೆ ನೀರು, ಬೆಳಗ್ಗಿನ ಫಲಾಹಾರ, ಸ್ನಾನ, ಪೂಜೆ ಇತ್ಯಾದಿ. ಬಟ್ಟೆ ಒಗೆಯುವ ಕಾರ್ಯಕ್ರಮವೂ ಇತ್ತು. 



ರಿಶಿಕಾಂತನ ಸ್ನೇಹಿತ, ಸಹೋದ್ಯೋಗಿ ಸುಜನ್ ನ ಚಿಕ್ಕ ಭೇಟಿ, ಮಾತುಕತೆ, ಮತ್ತೆ ಮಧ್ಯಾಹ್ನದ ಊಟ.


ಒಂದು ಗಂಟೆಯ ಕಾಲ ವಿಶ್ರಾಂತಿ, ನಿದ್ರೆ.

ಸಂಜೆ ಸೀನ, ಅಮ್ಮ, ಕವಿತಾ ರಿಶಿಕಾಂತ ನೊಡನೆ ಕಬ್ಬನ್ ಪಾರ್ಕಿಗೆ, ಅಲ್ಲಿ ಸುತ್ತಾಟ, ಅಲ್ಲಿ ಅಮ್ಮನ "ಕಥೆ ಕೇಳಿ" ಚಟುವಟಿಕೆಯ ಒಂದು ಭಾಗ. ಹಾಗೇ ವಾಪಸ್ಸು ಮನೆಗೆ.




ಡಾ.ಪಾಂಗಲ್ ವಿರಚಿತ "ಆಚಾರ್ಯ ದ್ರೋಣ" ಯಕ್ಷಗಾನ ಯು ಟ್ಯೂಬ್ ನಲ್ಲಿ ವೀಕ್ಷಣೆ. ಅದು ಹಿಂದೆ ಆದ ಕಾರ್ಯಕ್ರಮದ ಮರು ಪ್ರಸಾರ. ಸುಮಾರು ನಾಲ್ಕು ಗಂಟೆಗಳ ಕಾಲದ ಕಾರ್ಯಕ್ರಮ. ಮಹಾಭಾರತ ಕುರುಕ್ಷೇತ್ರ ಯುದ್ಧದಲ್ಲಿ ಮಹಾ ಬಲಶಾಲಿ ದ್ರೋಣನು ಹೇಗೆ ತನ್ನ ಶಿಷ್ಯರಾದ ಪಾಂಡವರಿಂದ ಸಾವನ್ನು ಅಪ್ಪುತ್ತಾನೆ ಎಂಬ ಕಥೆ.



ಮನೆಯಲ್ಲಿ ಪನೀರ್ ನ ಮೇಲೋಗರದ ಒಡನೆ ಚಪಾತಿಯ ಊಟ.

ಹೀಗೆ ಇದೊಂದು ದಿನಚರಿ.

ಬರೆದಿರುವುದು ಸೋಮವಾರ, 19/10/2020 

Saturday, October 10, 2020

ಶಿವರಾಮ ಕಾರಂತರ 119 ನೇ ಹುಟ್ಟುಹಬ್ಬದ ಆಚರಣೆ

ಶನಿವಾರ, 10 ನೇ ಅಕ್ಟೋಬರ, 2020, 4.30 ಗಂಟೆಗೆ 

ಕಡಲ ತೀರದ ಭಾರ್ಗವ , ಜ್ಞಾನ ಪೀಠ ಪ್ರಶಸ್ತಿ ವಿಜೇತ, ಕೋಟ ಡಾ ಶಿವರಾಮ ಕಾರಂತರ 119 ನೇ ಹುಟ್ಟುಹಬ್ಬವನ್ನು, ಶಿವರಾಮ ಕಾರಂತ ವೇದಿಕೆ, ಬೆಂಗಳೂರು, ಅಕ್ಟೋಬರ 10 ರಂದು ಜೂಮ್ ವರ್ಚುವಲ್ ಸಭೆಯ ಮೂಲಕ ಆಚರಿಸಿತು  

ವೇದಿಕೆಯ ಪರವಾಗಿ ಜೊತೆ ಕಾರ್ಯದರ್ಶಿ ಜಯರಾಮ ಸೋಮಯಾಜಿ ಅವರು ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದರು.


ಜನುಮ ದಿನ. ಮಕ್ಕಳ ಕಾರಂತಜ್ಜನಿಗೆ 

ಅಜ್ಜನೆಂದರೆ ಕಾರಂತಜ್ಜ, ಹುಟ್ಟಿದ್ದು ಉಡುಪಿ ಜಿಲ್ಲೆ,  ಚಂದದ ಬಾಲ್ಯ ಶಿಕ್ಷಣವೆಲ್ಲ ಸಾಲಿಗ್ರಾಮ ಕೋಟದಲ್ಲೇ.

ಯಕ್ಷಗಾನ, ಕಾದಂಬರಿಕಾರ, ಅನುವಾದಕರೂ ಹೌದು, ನಾಟಕಕಾರ, ಚಿಂತಕಕಾರ, ಇವರ ಪುಸ್ತಕ ಓದು, 

ಬಹುಮುಖ ಪ್ರತಿಭೆ ಕಾರಂತಜ್ಜ, ನಾನೂ ಕೂಡ ಬಲ್ಲೆ, ಎಷ್ಟು ಕಲಿತರೂ ಸಾಲೋದಿಲ್ಲ

ಇವರ ಕಲಿಕೆಗೆ ಇಲ್ಲ ಎಲ್ಲೆ, ನಾನೂ ತಿಳಿದ ಕಾರಂತಜ್ಜ, ಬರೆದರು ಢಂ ಢಂ ಡೋಲು

ಆಡು ಮುಟ್ಟದ ಸೊಪ್ಪಿಲ್ಲ ಎಂಬ, ಗಾದೆಯೇ ಸೂಕ್ತ ಸಾಲು..

....ಮಂಜುಳಾ ಭಾರ್ಗವಿ 


ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಾ. ಚಂದ್ರಶೇಕರ ಚಡಗ ಅವರು, ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೆ  ಸ್ವಾಗತ ಕೋರಿ, ಇಂದಿನ ಭಾಷಣಕಾರ, ವಿಮರ್ಶಕ ಶ್ರೀ. ಎಸ್.ಅರ್. ವಿಜಯಶಂಕರ್ ಅವರನ್ನು ಪರಿಚಯಿಸಿದರು.
"ಶಿವರಾಮ ಕಾರಂತರ ಚಿಂತನೆಗಳಲ್ಲಿ ಬಹುತ್ವದ ನೆಲೆ" ಎಂಬ ವಿಷಯದ ಮೇಲೆ ವಿಜಯಶಂಕರ್ ಅವರು  ಅದ್ಭುತವಾಗಿ ಮಾತನಾಡಿ, ಕಾರಂತರ ಬಹುತ್ವದ ಪರಿಕಲ್ಪನೆ ಸರ್ವಕಾಲಕ್ಕೂ ಅನ್ವಯ ಎಂಬುದನ್ನು ಬಹಳಷ್ಟು ಉದಾಹರಣೆಗಳನ್ನು ನೀಡಿ ಪ್ರಸ್ತುತ ಪಡಿಸಿದರು. 
ಶ್ರೀ. ಬಿ.ವಿ. ಕೆದಿಲಾಯ, ಚಂದ್ರಶೇಕರ ಕಾರಂತ, ವೀರಶೇಕರ ಸ್ವಾಮಿ, ಡಾ.ಸೀತಾರಾಮ್, ಇಂದಿರಾ ಶರಣ್, ಅರುಣ್ ಮೈಯ.ಸತ್ಯಭಾಮ, ಡಾ ಸುಬ್ರಮಣ್ಯ ಸ್ವಾಮಿ  ಹಾಗೂ ಸುಮಾರು 30 ಮಂದಿ ಭಾಗವಿಸಿದ್ದರು.
ಶ್ರೀಮತಿ ಇಂದಿರಾ ಶರಣ್ ವಂದನಾರ್ಪಣೆ ಮಾಡಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಭಾಗಶ ವೀಡಿಯೊ ತುಣುಕು ಕೆಳಗಿನ ಯು ಟ್ಯೂಬ್ ಲಿಂಕ್ ನಿಂದ ವೀಕ್ಸಿಶ ಬಹುದು.





ವಿಜಯ ಕರ್ನಾಟಕ 11/10/2020 



ಕಾರ್ಯಕ್ರಮವು ಸುಮಾರು ಒಂದು ಗಂಟೆಯ ಕಾಲ ನಡೆಯಿತು.
ಬರದಿರುವುದು ಸೋಮವಾರ, 12 ನೇ ಒಕ್ಟೋಬರ, 2020 




Wednesday, October 7, 2020

ಊರಿಗೆ ಪಯಣ - Trip to OORU

 2-3-4-ಅಕ್ಟೋಬರ, 2020 

ಅದೊಂದು ದಿಡೀರ್ (sudden) ನಿರ್ಧಾರ. ಊರಿಗೆ ಹೋಗುವ ಚಪಲ, ಅಸೆ. 





ಕಡಿಯಾಳಿ ದೇವಸ್ತಾನ 

ಕೊರೋನದ ಗೃಹ ಬಂಧನನಿಂದ ರೋಸಿ ಹೋದ ಮನಸ್ಸು ಒಂದು ದೂರ ಪ್ರಯಾಣ ಮಾಡಬಹುದು ಎಂಬ ಯೋಚನೆ. ಹಾಗೆಯೇ ಮಗ ರಿಶಿಯೂ ಮನಸ್ಸು ಮಾಡಿದ್ದ ರಿಂದ 2 ನೇ ತಾರೀಕು, ಗಾಂಧಿ ಜಯಂತಿಯ ಪ್ರಯುಕ್ತ ರಜೆ, ಬೆಳಿಗ್ಗೆ 7 ಗಂಟೆಗೆ ತಯಾರಾಗಿ, ಅಮ್ಮ, ನಾನು, ಬೆಲೇನೂ ಕಾರಿನಲ್ಲಿ ಹೊರಟದ್ದಾಯಿತು.





ಹಾಸನ, ಸಕಲೇಶಪುರ, ಮಂಗಳೂರು ಮಾರ್ಗವಾಗಿ ಪಯಣ. ಹಾಸನದ ವರೆಗೆ ಒಳ್ಳೆಯ ರಸ್ತೆ, ಅನುಕೂಲಕರವಾದ ವಾತಾವರಣ, ಹವೆ.ದಾರಿಯಲ್ಲಿ ಮನೆಯಲ್ಲಿ ತಯಾರಿಸಿದ ಗುಳಿಯಪ್ಪ, ಚಿಪ್ಸ್ ಇತ್ಯಾದಿಗಳನ್ನು ಮಂಚಿ ಸುತ್ತ, ರಿಶಿಕಾಂತ್ ಸೋಮಯಾಜಿಯವರ ಡ್ರೈವಿಂಗ್, ಹಾಡುಗಳನ್ನು ಕೇಳುತ್ತ ಪಯಣ.




ಹಾಸನದಿಂದ ರಸ್ತೆಯು ಹಾಳಗಿರುವುದರಿಂದ ನಮ್ಮ ಓಡುವಿಕೆ ನಿಧಾನ ಗತಿಯಲ್ಲಿ ಸಾಗುತಿತ್ತು. ಸಕಲೇಶಪುರದ ನಂತರ ಅದು ಶಿರಾಡಿ ಘಾಟಿ. ಹಲವಾರು ಕಡೆ ಹೊಂಡಗಳು, ನೇರವಾಗಿ ಹೋಗಲು ಅಸಾಧ್ಯ. ಹಾಗಾಗಿ ನಮ್ಮ ವೇಗದ ಗತಿ ನಿಧಾನವಾಗಿ ಮಧ್ಯಾಹ್ನ 3.30 ಗಂಟೆಗೆ ಮಂಗಳೂರನ್ನು ತಲುಪಿ ಸ್ಮಿತಾ-ರಾಘವೇಂದ್ರ ಅವರ ಮನೆಯನ್ನೂ ತಲುಪಿ ಊಟ ಮಾಡಿದ್ದೂ ಆಯಿತು.


ದನಕ್ಕೆ ಪ್ರೀತಿಯ ಅನುಭವ 


ಸುಜಾತ, ವಿಜಯ, ಸ್ಮಿತಾ, ನಳಿನಿ 


ನಂತರ ಅಲ್ಲಿಂದ ಉಡುಪಿಯತ್ತ ಪಯಣ, ಉದ್ಯಾವರ ಅಮ್ಮನ ತಂಗಿ ಸುಜಾತ ಅವರ ಮನೆಗೆ 6 ಗಂಟೆಗೆ. ಅಲ್ಲಿ ಒಂದಿಸ್ಟು ತಿಂಡಿಗಳು, ಕಡುಬು, ಹಾಲುಬಾಯಿ ಇತ್ಯಾದಿ...

ಅಭಿಲಾಷ, ಅನಿಷ, ಶಮ,ದೊಡ್ಡ, ರಿಷಿ,ನಳಿನಿ, ಜಯರಾಮ 


ಸುಮಂಗಲಿ,  ಸುಶ್ರಾವ್ಯ, ನಳಿನಿ 

ನಂತರ ಅಲ್ಲಿಂದ ಹೊರಟು, ಊರಿನ ಕೇಂದ್ರ ಬಿರ್ತಿ ಸಾಲಿಕೇರಿಗೆ ಅರ್ಧ ಗಂಟೆಯ ಪಯಣ, ಮನೆ ಸೇರಿದ್ದಾಯಿತು.

ಅಲ್ಲಿ ಊಟ, ರಾತ್ರಿ ವಿಶ್ರಮಿಸಿ ಬೆಳಿಗ್ಗೆ ಸ್ನಾನ, ಪೂಜೆ, ತಿಂಡಿ (ಕಡುಬು, ಚಟ್ನಿ, ಕಾಯಿ ಹಾಲು) ಯ ಕಾರ್ಯಕ್ರಮಗಳನ್ನು ಮುಗಿಸಿ ಉಡುಪಿಯತ್ತ ಪಯಣ.

ಮಣಿಪಾಲ, ಪೆರಂಪಳ್ಳಿಯ ಸೈಟಿನತ್ತ ಹೋಗಿ, ಅಲ್ಲಿಂದ ಕಡಿಯಾಳಿ ದೇವಸ್ತಾನದ ಮಂಗಳರಾತಿಯನ್ನು ವೀಕ್ಸಿಸಿ ಅಮ್ಮನ ತಂಗಿ ವಿಜಯಳ ಮನೆಗೆ ಭೇಟಿ. ನಂತರ ಅಲ್ಲಿಂದ ಉದ್ಯಾವರ ಸುಜಾತಳ ಮನೆಯಲ್ಲಿ ಭರ್ಜರಿ ಊಟ.

ಮಧ್ಯಾಹ್ನ ಸ್ವಲ್ಪ ಹೊತ್ತಿನ ವಿಶ್ರಾಂತಿಯ ನಂತರ ಸಂಜೆ ಮಟ್ಟು, ಪಿತ್ರೋಡಿ ಬೀಚಿನ ಕಡೆಗೆ. ನಿರಂತರವಾದ ಸಮುದ್ರದ ಅಲೆಗಳನ್ನು ನೋಡುತ್ತಾ, ಹೊಯಿಗೆಯಲ್ಲಿ ಸ್ವಲ್ಪಹೊತ್ತು ನಡಿಗೆ, ಕೂತು ಸಮಯ ಕಳೆದದ್ದಾಯಿತು.

ನಂತರ ಒಂದು ಮರೆಯಲಾಗದ ಘಟನೆ - ಹೊರಡುವಾಗ ಬೀಚಿನಲ್ಲಿ ಕೂತಿದ್ದು, ಅಮ್ಮನ ಹಾಗೂ ನನ್ನ ಮೊಬೈಲುಗಳನ್ನು ಜೇಬಿನಲ್ಲಿ ಹಾಕಿ ಎದ್ದು ವಾಪಸ್ಸು ಹೊರಟದ್ದಾಯಿತು. ಅಮ್ಮನ ಮೊಬೈಲ್ ಹೊಯಿಗೆಯಲ್ಲಿ ಬಿದ್ದಿದ್ದು ಗೊತ್ತಾಗಲಿಲ್ಲ. ಸುಮಾರು ಹತ್ತು ನಿಮಿಷಗಳ ಕಾಲ ಕಾರಿನಲ್ಲಿ ಹೊರಟು ಬರುವಾಗ ಯಾರೋ ಮೊಬೈಲ್ ಕೇಳಿದರು. ನನ್ನ ಕಿಸೆಯಲ್ಲಿದ್ದ ಎರಡರಲ್ಲಿ ಒಂದೇ ಮೊಬೈಲ್ ಇದೆ. ಒಮ್ಮೆ ಶಾಕ್. ಕೂಡಲೇ ಕಾರನ್ನು ಹಿಂದೆ ತಿರುಗಿಸಿ ಕೂತಿದ್ದ ಸ್ತಳಕ್ಕೆ ಧಾವಿಸಿ ಮೊಬೈಲ್ ಗೆ ಹುಡುಕಾಟ. ಅದೇ ಸಮಯ ಹೊಯಿಗೆಯಲ್ಲಿದ್ದ ಮೊಬೈಲನ್ನು ಹಿಡಿದುಕೊಂಡು ಮೂರು ಹುಡುಗರು/ಹುಡುಗಿಯರು ಬರುತಿದ್ದರು. ಅದನ್ನು ನೋಡಿ, ದೇವರು ದೊಡ್ಡವನು, ಅಂತೂ ಸಿಕ್ಕಿತಲ್ಲಾ ಎಂಬ ಸಮಾಧಾನದಿಂದ ವಾಪಸ್ಸು ಉದ್ಯಾವರಕ್ಕೆ ಬಂದು, ಊಟ ಮಾಡಿ ಬಿರ್ತಿಗೆ ವಾಪಸ್ಸು ಬಂದೆವು.



ಮಾರನೇ ದಿನ, ಭಾನುವಾರ, ವಾಪಸ್ಸು ಬೆಂಗಳೊರಿಗೆ ಹೊರಡಬೇಕು. ಬೆಳಿಗ್ಗೆ ಸ್ನಾನ, ಪೂಜೆ, ಉಪಹಾರವನ್ನು ಪೂರೈಸಿ ಸುಮಾರು 12 ಗಂಟೆಯ ವರೆಗೆ ಮಾತುಕತೆ. ಅಭಿಲಾಷ, ಅನಿಷ, ಶಮ, ದೊಡ್ಡ....

ಬೆಳಿಗ್ಗೆ ರಿಷಿ ಉದ್ಯಾವರಕ್ಕೆ ಹೋಗಿ ಅಮ್ಮನನ್ನು ಕರೆದುಕೊಂಡು ಬಂದು ನಂತರ ಸಾಲಿಗ್ರಾಮ ಬೀಚಿಗೆ ಪುನಃ ಹೋಗಿ ಬಂದದ್ದೂ ಆಯಿತು.



ಶ್ರಾದ್ಧ ಊಟ, ಹೆಬ್ರಿ  

ಮಧ್ಯಾಹ್ನ 1 ಗಂಟೆಗೆ ಹೆಬ್ರಿಯನ್ನು ತಲುಪಿ ಅಲ್ಲಿ ವಾಸುದೇವ ಆಚಾರ್ಯರ ಶ್ರಾಧ್ದದ ಊಟ. ಶುಭ, ರಾಘು, ಲಹರಿ ಸಹ ಬೆಂಗಳೂರಿನಿಂದ ಬಂದು ಅವರೂ ಮಾಡಿ, ಒಟ್ಟಿಗೆ ಎರಡು ಕಾರುಗಳಲ್ಲಿ ಆಗುಂಬೆ, ಚಿಕ್ಕಮಗಳೂರು, ಹಾಸನ ದಾರಿಯಾಗಿ ಬೆಂಗಳುರಿನತ್ತ ಪಯಣ, ರಾತ್ರಿ 10 ಗಂಟೆಗೆ ಮನೆಗೆ ಸೇರಿದ್ದಾಯಿತು. ರಿಶಿಕಾಂತನ ಅಮೋಘ ಡ್ರೈವಿಂಗ್.


ಪಾರಂಪಲ್ಲಿ ಬೀಚಿಗೆ ದಾರಿ 




ಸುಮಾರು 7 ತಿಂಗಳಿಂದ ಮನೆಯಲಿದ್ದು, ಒಂದು ಹೊರ ಸಂಚಾರ, ಊರ ಭೇಟಿಯು ಖುಷಿ ತಂದಿತು.

ಬರೆದಿರುವುದು, ಗುರುವಾರ, 8 ಅಕ್ಟೋಬರ, 2020