Monday, January 23, 2023

ಶಿವರಾಮ ಕಾರಂತ ವೇದಿಕೆ - 30 ನೇ ವಾರ್ಷಿಕೋತ್ಸವದ ಸಂಭ್ರಮ

 ಭಾನುವಾರ, 22 ಜನವರಿ  2023  

ತರಳಬಾಳು ಕೇಂದ್ರ ಗ್ರಂಥಾಲಯ, ಅರ್.ಟಿ.ನಗರ, ಬೆಂಗಳೂರು.

ಶಿವರಾಮ ಕಾರಂತ  ವೇದಿಕೆ(ರಿ)
ಆರ್. ಟಿ. ನಗರ, ಬೆಂಗಳೂರು 

ಸುಮಾರು 3 ದಶಕಗಳ ಇತಿಹಾಸದ ಸಾಹಿತ್ಯ ವೇದಿಕೆ ಶಿವರಾಮ ಕಾರಂತ ವೇದಿಕೆ.
ವೃತ್ತಿಯಲ್ಲಿ ಆದಾಯ ತೆರಿಗೆ ಇಲಾಖೆಯ ಬಹುದೊಡ್ಡ ಜವಾಬ್ದಾರಿಯಲ್ಲಿದ್ದರೂ, ಸಾಹಿತ್ಯ ಆಸಕ್ತಿಯನ್ನು ಪ್ರವೃತ್ತಿಯಾಗಿಸಿಕೊಂಡಿದ್ದ,
ಶಿವರಾಮ ಕಾರಂತರಿಂದ ಸ್ಫೂರ್ತಿ ಗೊಂಡ. ಪಾ . ಚಂದ್ರಶೇಖರ ಚಡಗ ಸರ್ ರವರು ಹುಟ್ಟು ಹಾಕಿದ ಈ ಸಂಸ್ಥೆ ಗೆ ಇದೀಗ 30 ವರ್ಷಗಳು. ಜೊತೆ ಜೊತೆ,  ಅಪರೂಪದ ಪುಸ್ತಕಗಳನ್ನು ಸೇರಿದಂತೆ ಅಗಾಧ ಪುಸ್ತಕ ಭಂಡಾರ ಗ್ರಂಥಾಲಯ ಬೆಳೆಸಿ ಪೋಷಿಸಿಕೊಂಡು ಬಂದವರು. 

ಇವರನ್ನು ಇಡೀ ವೇದಿಕೆಯ ಸಮಿತಿಯ ಎಲ್ಲಾ ಸದಸ್ಯರು,  ಅತಿಥಿಗಳೊಂದಿಗೆ ಸೇರಿ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಸದಸ್ಯರು, ಪ್ರಮುಖರು, ಸಭಾಸದರು ಸಾಕ್ಷಿಯಾದರು.

ಇವರ ಕನಸು ವೇದಿಕೆ ಮತ್ತಷ್ಟು ಎತ್ತರಕ್ಕೆ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳಬೇಕು. ಗ್ರಂಥಾಲಯದ ಪುಸ್ತಕಗಳನ್ನು ಎರವಲು ಪಡೆದು ಓದುವ ಓದುಗರ ಸಂಖ್ಯೆ ಬಹಳವಾಗಿ ಅಧ್ಯಯನಶೀಲ ಕೇಂದ್ರವಾಗಿ ಸದುಪಯೋಗವಾಗಬೇಕು.

ವೇದಿಕೆಯ ಬಗ್ಗೆ ಇವರ ಅಚಲ ಧ್ಯೇಯ, ನಿಷ್ಕಾಮ ಪ್ರೀತಿಗೆ ಶಿರಭಾಗಿ ನಮನಗಳು🙏


ಶಿವರಾಮ ಕಾರಂತ ವೇದಿಕೆಯ 30 ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಮುಖ್ಯ ಅತಿಥಿಗಳಾದ ಶ್ರೀ ಪಿ.ಶೇಷಾದ್ರಿ, ಡಾ. ಕೆ ಸತ್ಯನಾರಾಯಣ ಅವರಿಂದ ಕಾರಂತರ ಬಗ್ಗೆ ಉಪನ್ಯಾಸ, 30 ವರುಷ,  ನಿರಂತರವಾಗಿ 270 ಕ್ಕೂ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿಕೊಂಡು ಬಂದ ಸಂಸ್ಥಾಪಕ ಅಧ್ಯಕ್ಷರಾದ  ಶ್ರೀ ಪಾ. ಚಂದ್ರಶೇಖರ ಚಡಗರಿಗೆ ಸನ್ಮಾನ,  ಸುಬ್ರಾಯ ಹೆಬ್ಬಾರ ತಂಡದವರಿಂದ "ಶರಸೇತು ಬಂಧನ" ತಾಳಮದ್ದಲೆ ನಡೆದು ವಾರ್ಷಿಕೋತ್ಸವವು ಸಂಪನ್ನ ಗೊಂಡಿತು.
\
ದಿನಾಂಕ  :22.01.2023ರ ಭಾನುವಾರ, ಸಂಜೆ ನಡೆದ ವೇದಿಕೆಯ 30ನೇ ವಾರ್ಷಿಕೋತ್ಸವ ಸಂಭ್ರಮ.

ಪಾ.ಚಂದ್ರಶೇಖರ ಚಡಗರವರು ಗೌರವ ಸಂಸ್ಥಾಪಕರು, ಇವರ ಮಾರ್ಗದರ್ಶನದಲ್ಲಿ , ವೇದಿಕೆಯ ಅಧ್ಯಕ್ಷರು ಡಾ. ದೀಪಾ ಫಡ್ಕೆ ರವರ ನೇತೃತ್ವದಲ್ಲಿ ಸಮಿತಿಯ ಸದಸ್ಯರ ಜವಾಬ್ದಾರಿಯಲ್ಲಿ ಉತ್ತಮ ಕಾರ್ಯಕ್ರಮ ಮೂಡಿಬಂತು.

ವೇದಿಕೆಯು ಶ್ರೀ ಪಿ. ಶೇಷಾದ್ರಿ ರವರು, ಖ್ಯಾತ ಚಲನಚಿತ್ರ ನಿರ್ದೇಶಕರು ಮತ್ತು ಶ್ರೀ, ಕೆ. ಸತ್ಯನಾರಾಯಣ ರವರು ಕಥೆಗಾರ, ಕಾದಂಬರಿಕಾರ ಇಂತಹ


ಸಾಧಕ ಅತಿಥಿಗಳ ಉತ್ಕೃಷ್ಟ ಉಪನ್ಯಾಸಕ್ಕೆ ಸಾಕ್ಷಿಯಾಯಿತು.

ಆಧುನಿಕ, ವೈಚಾರಿಕ, ಧೀಮಂತಿಕೆಯ ಸಂಗಮ ಕಾರಂತರು. ಅವರ ಹೆಸರಿನಲ್ಲಿ, ಅವರ ಆಶೀರ್ವಾದ ದಲ್ಲಿ


3 ದಶಕಗಳಿಂದ  ಸಮಕಾಲೀನ ಕನ್ನಡ ಸಾಹಿತ್ಯ ಸಂಘರ್ಷ ಗಳಿಗೆ ಕಾರಣವಾಗಿರುವ  ನಮ್ಮ ಶಿವರಾಮ ಕಾರಂತ ವೇದಿಕೆಯ ಕಾರ್ಯ ಶ್ಲಾಘನೀಯ. ಬೆಂಗಳೂರು ಉತ್ತರ ಭಾಗದ ಏಕೈಕ ಸಾಹಿತ್ಯ ವೇದಿಕೆ ಅಂದರೆ ತಪ್ಪಾಗಲಾರದು. ಇದನ್ನು ಹುಟ್ಟುಹಾಕಿ, ಬೆಳಸಿ, ಪೋಷಿಸಿಕೊಂಡು ಬರುತ್ತಿರುವ ನಮ್ಮ  ಗೌರವ ಸಂಸ್ಥಾಪಕರು, ಪ್ರಸ್ತುತ ಕಾರ್ಯಧ್ಯಕ್ಷರು, ಮಾರ್ಗದರ್ಶಕರೂ ಆಗಿರುವ ಶ್ರಿ ಪಾ. ಚಂದ್ರಶೇಖರ ಚಡಗ ಸರ್ ರವರು. ಅವರ ಮತ್ತೊಂದು ಸಾಧನೆ ಅಗಾಧ, ಅಪರೂಪದ  ಪುಸ್ತಕಗಳ ಜ್ಞಾನಭಂಡಾರ ಹೊಂದಿರುವ ನಮ್ಮ ಗ್ರಂಥಾಲಯ,  ಸರಸ್ಪತಿಯ ಜ್ಞಾನದೇಗುಲದಲ್ಲಿ  ನಡೆದ

 30ನೇ ವಾರ್ಷಿಕೋತ್ಸವ ಸಂಭ್ರಮ.

ಕಾರ್ಯಕ್ರಮದ ನೋಟ

ಕಾರ್ಯಕ್ರಮದ ಅಧ್ಯಕ್ಷತೆ::::

ಈ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ  ಸ್ಥಾನ ಅಲಂಕರಿಸಿದ್ದವರು

 ಶ್ರೀ ಕೆ. ಸತ್ಯನಾರಾಯಣ ರವರು


ಇವರು ಆದಾಯ ತೆರಿಗೆ ಇಲಾಖೆಯಲ್ಲಿ ಹಿರಿತನದ ಜವಾಬ್ದಾರಿ ನಿರ್ವಹಿಸಿದ್ದಾರೆ, ಜೊತೆಜೊತೆಗೆ ನಿರಂತರವಾಗಿ   ಯಾರಿಗಾದರೂ ಸರಿ ಬೆರಗು ಹುಟ್ಟಿಸುವಂತಹ ಇವರ  ಬೃಹತ್  ಸಾಹಿತ್ಯ ಸೇವೆ. ಇವರ ಬರಹಗಳಲ್ಲಿ ಕಾಣುವ ವಸ್ತು ವೈವಿಧ್ಯ, ಚಿಂತನ ಕ್ರಮ, ಆಳ ಅಧ್ಯಯನ,  ಆಕರ್ಷಕ ಹಾಗೂ ಪಾಂಡಿತ್ಯ ಪೂರ್ಣ ಪ್ರಸ್ತುತಿ ಇವೆಲ್ಲವನ್ನೂ ಮೀರಿದ ಸರಳ ಸಜ್ಞನಿಕೆ. ಕನ್ನಡ ಸಾಹಿತ್ಯ ಲೋಕದ ಬಹುಮುಖ ಪ್ರತಿಭೆ. 

ಇವರು ಕಾರಂತರ ಕಾದಂಬರಿಗಳ ಬಗ್ಗೆ ವಿಶೇಷವಾಗಿ ಕಾರಂತರ ಪ್ರವಾಸ ವಿಷಯಗಳ ಕುರಿತು  ಅದ್ಭುತ ಒಳನೋಟಗಳ ಬಿಚ್ಚಿಟ್ಟರು.

ಉದಯವಾಣಿ 23/1/2023
ಕನ್ನಡ ಪ್ರಭ 23/1/2023 


ಹೊಸ ದಿಗಂತ 23/1/

ವಿಶ್ವವಾಣಿ 23/1/2023 

ವಿಜಯ ಕರ್ನಾಟಕ 23/1/2023 


ಮುಖ್ಯ ಅತಿಥಿಗಳು: ಪಿ. ಶೇಷಾದ್ರಿ ಯವರು



ಪ್ರತಿಭೆ ವಂಶಪಾರಂಪರ್ಯವಾಗಿ ಬರುವುದಿಲ್ಲ, ವಂಶಪಾರಂಪರ್ಯವಾಗಿ ಸಕ್ಕರೆ ಕಾಯಿಲೆ ಬರಬಹುದು.ಸಾಧನೆಗೆ ಪೂರಕ ಪರಿಸರ, ಪರಿಶ್ರಮ  ಎನ್ನುವ ಗ್ರಾಮೀಣ ಸೊಗಡಿನ ಇವರನ್ನು  ಚಿಕ್ಕಂದಿನಲ್ಲಿ ಆಕರ್ಷಿಸಿದ್ದು ಚಿತ್ರಕಲೆ, ಪಠ್ಯಪುಸ್ತಕಗಳಿಗಿಂಥ  ಹೆಚ್ಚುಸೆಳೆದದ್ದು ಸಾಹಿತ್ಯಾತ್ಮಕ ಕೃತಿಗಳು. ಊರಿನ ಅನೇಕರಿಗೆ ಅಂಚೆ ಕಾರ್ಡ ಬರೆದುಕೊಡುವ ಮುಂದಾಳತ್ವದಲ್ಲಿ ಬರವಣಿಗೆ ಕಲೆ  ಆಗಲೇ ಸಿದ್ಧಿಸಿತ್ತು. ಹಳ್ಳಿಯ ಹುಡುಗನಲ್ಲಿದ್ದ ನೈಜ ಬೆರಗು, ಕುತೂಹಲ, ಕಲ್ಪನೆಗಳು

ಮುಂದೆ ಬದುಕು ಕಟ್ಟಿಕೊಳ್ಳುವ ತಲ್ಲಣಗಳ ನಡುವೆಯೂ ಈ ಸುಪ್ತ ಪ್ರತಿಭೆಗೆ ಸಿಕ್ಕ ಅವಕಾಶಗಳನ್ನು ಮೆಟ್ಟಿಲು ಮಾಡಿ ಹತ್ತುತ್ತಾ ಸಾಧಿಸಿದ್ದು ಅಮೋಘ. ಕಲಾತ್ಮಕ ಸದಭಿರುಚಿಯ ಚಲನಚಿತ್ರಗಳ ನಿರ್ಮಾಣ. ಯಶಸ್ವಿ ಚಲನಚಿತ್ರ ನಿರ್ದೇಶಕ ರಾಗಿ, 9 ರಾಷ್ಟಪ್ರಶಸ್ತಿಗಳ  ಪಡೆದು ದಾಖಲೆ ಮಾಡಿರುವ ಏಕೈಕ ನಿರ್ದೇಶಕರು ಪಿ. ಶೇಷಾದ್ರಿ ಸರ್.

ಇವರು ನಮ್ಮ ಶಿವರಾಮ ಕಾರಂತ ವೇದಿಕೆಯ 30ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಆಗಮಿಸಿರುವುದು  ನಮ್ಮೃಲ್ಲರಿಗೂ  ಅಭಿಮಾನದ ವಿಷಯ. 

ಇವರದು ಬೆರಗಿನ ಆಳದ ಬದುಕು. ಬದುಕಿನಲ್ಲಿ ಸಣ್ಣ ವಿಷಯಗಳನ್ನೂ ಅದ್ಭುತವಾಗಿಸಿಕೊಂಡವರು. ಕಾರಂತರಿಂದ ಪತ್ರ ಪಡೆದು ಸಂಭ್ರಮಿಸಿ ಚಿತ್ರಣ. ಮುಂದೆ ಅವರ ಕಾದಂಬರಿಗಳ ಚಲನಚಿತ್ರವಾಗಿಸುವ  ಸಂದರ್ಭಗಳಲ್ಲಿ  ಸೃಜನಾತ್ಮತೆಗೆ ಎದುರಾದ  ಚಾಲೆಂಜಸ್ ಗಳ ಬಗ್ಗೆ ಹಾಗೂ ಇತರೆ ಚಲನಚಿತ್ರ ವಸ್ತು ವಿಷಯಗಳ ಕುರಿತು ಅವರ ಮಾತುಗಳು. ಆ ಸಂದರ್ಭಗಳನ್ನು ಕಟ್ಟಿಕೊಟ್ಟಿದ್ದು ಬಹಳ ಇಷ್ಟವಾಯಿತು.


ಇದೇ ಸಮಯದಲ್ಲಿ ವೇದಿಕೆಯನ್ನು ಕಟ್ಟಿ ಬೆಳಸುವಲ್ಲಿ ಶ್ರಮಿಸಿದ ಮಹನೀಯರನ್ನು ಗೌರವಿಸಲಾಯಿತು.


1) ಶ್ರೀ ಎಸ್ ಆರ್ ವಿಜಯ ಶಂಕರ್ ರವರು

ಖ್ಯಾತ ಕನ್ನಡ ಸಾಹಿತ್ಯ ವಿಮರ್ಶಕರು, ಶಿವರಾಮ ಕಾರಂತ ವೇದಿಕೆಯ ಬೆಳವಣಿಗೆಯ ಪಾಲುದಾರರು, ನಮ್ಮ

ವೇದಿಕೆಯ ಗೌರವಾಧ್ಯಕ್ಷರು, ಮಾರ್ಗದರ್ಶಕರು. 

2) ಶ್ರೀಮತಿ ರಾಧಾ ರಾಮಸ್ವಾಮಿಯವರು::

ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ, ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾಗಿ, ವೇದಿಕೆ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಹೆಗಲು ಕೊಟ್ಟಿರುವ,  ಧಾರ್ಮಿಕ ಅನೇಕ ಪ್ರವಚನಗಳನ್ನು ನೀಡುತ್ತಾ ಬಂದಿರುವ ಧರ್ಮ ಜ್ಞಾನ ಸಂಪನ್ನೆ. ಸರಸ್ಪತಿ ಸ್ವರೂಪಿ ಶ್ರೀಮತಿ ರಾಧಾ ರಾಮಸ್ವಾಮಿ ಯವರು. 

3) ಶ್ರೀ ವೀರಶೇಖರ ಸ್ವಾಮಿ ರವರು


 
ಭೂಜಲವಿಜ್ಞಾನಿಯಾಗಿ  ಸೇವೆ ಸಲ್ಲಿಸಿ ನಿವೃತ್ತಿ, ಅನೇಕ ಸಂಘಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳ ಹೊಣೆ ಜತೆಗೆ ಧಾರವಾಹಿ, ಸಿನಿಮಾ ಕಲಾವಿದನಾಗಿ ಬಣ್ಣ ಹಚ್ಚಿ ಅಭಿನಯಿಸುತ್ತಿರುವ ಕ್ರಿಯಾಶೀಲರು, ಪ್ರಸ್ತುತ ವೇದಿಕೆಯ ಉಪಾಧ್ಯಕ್ಷರು. 

4) ಶ್ರೀ ಜಯರಾಮ ಸೋಮಯಾಜಿ ರವರು :

ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಹೊರದೇಶಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನಕ್ಕೆ ಬೆಂಗಳೂರಿಗೆ ಬಂದವರು. ಸದಾ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಕ್ರಿಯಾಶೀಲರು, ಕೊರೋನಾ ಸಂದರ್ಭದಲ್ಲಿ ವೆಬಿನಾರ್ ಆನ್ಲೈನ್ ಸಭೆ ಏರ್ಪಡಿಸಿ, ಅನೇಕ ಕಾರ್ಯಕ್ರಮ ಗಳ ಯಶಸ್ಸಿಗೆ ಕಾರಣರಾದ, ಪ್ರಸ್ತುತ ನಮ್ಮ ವೇದಿಕೆಯ ಖಜಾಂಚಿಗಳು.

5) ಶ್ರೀಮತಿ ಸತ್ಯಭಾಮ ರವರು:

ಈ ಗ್ರಂಥಾಲಯ ಪ್ರತಿಯೊಂದು ಪುಸ್ತಕದ ಆಪ್ತಗೆಳತಿ ಇವರು. ಮನೆಗೆಲಸ ನಾನೇ ಮಾಡುವೆ, ಮನೆಕೆಲಸದವರಿಗೆ ಕೊಡಬಹುದಾದ ಹಣದಲ್ಲಿ ಪುಸ್ತಕಗಳನ್ನು ಕೊಡಿಸಿ ಎಂದು ತನ್ನ ಪತಿಗೆ ತಿಳಿಸಿ ಮದುವೆಯಾದಗಿನಿಂದ ಕೊಂಡು ಓದಿದ ಪುಸ್ತಕಗಳು ಅದೆಷ್ಟೋ, ನಮ್ಮ ಗ್ರಂಥಾಲಯ ನೂರಾರು ಪುಸ್ತಕಗಳ ಎರವಲು ಪಡೆದು ಸದಾ ಓದುವ ಎಲ್ಲರ ಅಕ್ಕರೆಯ ಶ್ರೀಮತಿ ಸತ್ವಭಾಮರವರು, ಸಮಿತಿ ಸದಸ್ಯರು.

6) ಶ್ರೀ ಚಂದ್ರಶೇಖರ ಕಾರಂತರು.

ವೇದಿಕೆಯ ನಿಕಟಪೂರ್ವ ಖಜಾಂಚಿಗಳು, ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವ ವಿಷಯದಲ್ಲಿ ವೇದಿಕೆಗೆ ಶ್ರಮಿಸಿದ ಅನುಭವಿಗಳು.

ಇದೇ ಸಂದರ್ಭದಲ್ಲಿ "ನೀಲಕುರಂಜಿ ಕಥಾ ಸಂಕಲನ" ಕ್ಕೆ

ಕೇಂದ್ರ ಆಕಾಡೆಮಿ ಯುವ ಪುರಸ್ಕಾರ ಪಡೆದ ನಮ್ಮ ಭಾಗದ ಯುವಕ ಶ್ರೀ ದಾದಾಫೀರ್  ಜಯಮನ್ ಇವರನ್ನು ಸನ್ಮಾನಿಸಲಾಯಿತು.

ಇಡೀ ಕಾರ್ಯಕ್ರಮ ವನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು,  ಕಾರ್ಯಕ್ರಮವು ಯೂ ಟೂಬ್ ನಲ್ಲಿ ಶಾಶ್ವತವಾಗಿ ಸಿಗುವಂತೆ ಶ್ರಮಿಸಿದವರು  ಶ್ರೀ ಶಿವಸುಬ್ರಮಣ್ಯ ಸರ್ ರವರು, ಪತ್ರಿಕೋದ್ಯಮಿಗಳು, ಖ್ಯಾತ ಪಕ್ಷಿಛಾಯಾಗ್ರಾಹಕರು.

ಹಾಗೆಯೇ ಕಾರ್ಯಕ್ರಮಕ್ಕೆ ಕಾರಣಾಂತರದಿಂದ ಬರಲಾಗದ

ಶ್ರೀ ಬಿ. ವಿ.  ಕೆದಿಲಾಯಿ ರವರು

ಶ್ರೀ ಸಿ.ಆರ್ ಸತ್ಯ ರವರು

ಡಾ. ಆರ್.  ಆರ್ ಪಾಂಗಾಳ್ ಮುಂತಾದ  ಇತರೆ ಮಹನೀಯರ ಸೇವೆಯನ್ನು  ಈ ಸಂದರ್ಭದಲ್ಲಿ ವೇದಿಕೆ ಕೃತಜ್ಞತೆಯಿಂದ ಸ್ಮರಿಸುತ್ತದೆ.



ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಭಾಗವತರು ಶ್ರೀ ಸುಬ್ರಾಯ ಹೆಬ್ಬಾರ್ ಮತ್ತು ತಂಡದಿಂದ

ಕಾರ್ಯಕ್ರಮದಲ್ಲಿ ಅನೇಕ ಹಿರಿಯರು ಮಹನೀಯರು ಉಪಸ್ಥಿತರಿದ್ದರು.

ಸಾಹಿತ್ಯ ರಸ ಆಸ್ವಾದಕರು ಸಭಾಸದರು. ಅವರ ಉಪಸ್ಥಿತಿಯ ಮೆರಗು ಕಾರ್ಯಕ್ರಮಕ್ಕೆ ಭೂಷಣವಾಗಿತ್ತು.

ಕಾರ್ಯಕ್ರಮಕ್ಕೆ ಯಶಸ್ವಿಗೆ ಧನಮನ ‌ಸಹಾಯ ಮಾಡಿದ ಮಹನೀಯರೆಲ್ಲರಿಗೂ ವೇದಿಕೆಯ ಪರವಾಗಿ ಧನ್ಯವಾದಗಳು.

ಹಿರಿಯರಾದ ಪಾ. ಚಂದ್ರಶೇಖರ ಚಡಗ ಸರ್ ರವರ ಸಾಹಿತ್ಯ ಪ್ರೇಮ ಸೇವಾ ಹಾದಿಗೆ ವಂದಿಸುತ್ತಾ,

ಧನ್ಯವಾದಗಳು.

ಶಶಿಕಲಾ ಆರ್

ದೀಪಾ ಫಡಕೆ ನಿರೂಪಿಸಿದ " ಶಿವರಾಮ ಕಾರಂತ ವೇದಿಕೆ ನಡೆದು ಬಂದ ದಾರಿ" : ಶಿವ ಸುಬ್ರಮಣ್ಯಂ ವಿರಚಿತ 30 ನೇ ವಾರ್ಷಿಕೋತ್ಸವದ ಸಂಭ್ರಮ ಯೂ ಟ್ಯೂಬ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ.



ಶಿವರಾಮ ಕಾರಂತ ವೇದಿಕೆ ನಡೆದು ಬಂದ ದಾರಿ - ಶ್ರೀ ವಿಜಯಶಂಕರ್ ಅವರ ವಿಶ್ಲೇಷಣೆ 

ಸಂಯೋಜಿಸಿರುವುದು  23/1/2023 


No comments:

Post a Comment