ಭಾನುವಾರ, 22 ಜನವರಿ 2023
ಶಿವರಾಮ ಕಾರಂತ ವೇದಿಕೆಯ 30 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶ್ರೀ ಸುಬ್ರಾಯ ಹೆಬ್ಬಾರ ತಂಡದವರಿಂದ ಯಕ್ಷಗಾನ ತಾಳ ಮದ್ದಳೆಯ ಕಾರ್ಯಕ್ರಮವೂ ಸಂಪನ್ನ ಗೊಂಡಿತು.
ಯಕ್ಷಗಾನ ತಾಳ ಮದ್ದಳೆಯು ಕರಾವಳಿ ಪ್ರದೇಶದಲ್ಲಿ ಜನಪ್ರಿಯವಾಗಿರುವ ಮನರಂಜನೆಯ, ಭಕ್ತಿಪ್ರಧಾನವಾದ ಮುಖ್ಯವಾಗಿ ಮಳೆಗಾಲದ ಕಾರ್ಯಕ್ರಮ.
ವೇಷಭೂಷಣ, ಅಭಿನಯ, ಕುಣಿತ, ವಿಲ್ಲದ ಯಕ್ಷಗಾನ. ಭಾಗವತರಿಂದ ತಾಳ, ಮ್ರದಂಗ (ಮದ್ದಳೆ) ಮತ್ತು ಅರ್ಥದಾರಿಗಳಿಂದ ಮಾತಿನ ವಾಗ್ಜರಿಯಿಂದ ಕಥಾ ಪ್ರಸಂಗದ ವಿವರಣೆ.
ಭಾಗವತರು - ಶ್ರೀ ಸುಬ್ರಾಯ ಹೆಬ್ಬಾರ್
ಮ್ರದಂಗ (ಮದ್ದಳೆ) -ಶ್ರೀ ನಾರಾಯಣ ಹೆಬ್ಬಾರ್
ಅರ್ಜುನ - ಶ್ರೀ ಶಶಾಂಕ್ ಅರ್ನಾಡಿ
ಹನುಮಂತ - ಶ್ರೀ ಪ್ರಸನ್ನ ಭಟ್ ಮಾಗೋಡು
ಕ್ರಷ್ಣ - ಶ್ರೀ ಸುಧಾಕರ ಜೈನ್
ಸಂಗೀತ - ಶ್ರೀ ಶ್ರೀಕರ ಹೆಗಡೆ
ಪ್ರಸಂಗ - ಶರಸೇತು ಬಂಧನ.
ಮಹಾಭಾರತ ದಲ್ಲಿಯ ಕುರುಕ್ಷೇತ್ರ ಯುದ್ಧದ ಮುಂಚೆ ಪಾಂಡವರಲ್ಲಿ ಒಬ್ಬನಾದ ಅರ್ಜುನ, ತೀರ್ಥ ಯಾತ್ರೆಗೆಂದು ದಕ್ಷಿಣ ಭಾರತದ ರಾಮೇಶ್ವರ (ಧನುಶ್ಕೋಡಿ) ಬರುತ್ತಾನೆ. ಅಲ್ಲಿಯ ಮರಳಿನ ಮೇಲೆ, ಒಂದು ಮಾತನಾಡುವ ಮಂಗವನ್ನು ನೋಡಿ ಅದನ್ನು ಹೀಯಾಳಿಸಿ ಅವಹೇಳನ ಮಾಡುತ್ತಾನೆ.
ಮತ್ತೆ ಅರ್ಜುನ ತನ್ನ ಬಗ್ಗೆ ಬಂಡಾಯ ಕೊಚ್ಚಿ ಕೊಳ್ಳುತ್ತಾ ತಾನು ಬಾಣದಿಂದ ಲಂಕೆಗೆ ಸೇತುನ್ನು ಮಾಡುವೆನು ಎಂದಾಗ, ಮಾತನಾಡುವ ಮಂಗ (ಹನುಮಾನ್) ಅದನ್ನು ತಾನು ಮುರಿದು ಹಾಕುವೆನು ಎಂದಾಗ ಅರ್ಜುನ ನಂಬಲಿಲ್ಲ. ಮೂರು ಬಾರಿ ಸೇತುವೆಯನ್ನು ಮಾಡಿದಾಗಲೂ, ಶ್ರೀರಾಮ ಭಕ್ತ ಹನುಮಾನ್ ಅದನ್ನು ಮುರಿದುಹಾಕುವನು.
ಇದರಿಂದ ಅವಮಾನ ಗೊಂಡ ಅರ್ಜುನ ಅಗ್ನಿ ಪ್ರವೇಶ ಮಾಡಿ ಸಾಯುವೆನು ಎಂದಾಗ ಕ್ರಷ್ಣನ ಪ್ರವೇಶ ಆಗಿ ಸಂಧಾನ ಮಾಡುತ್ತಾನೆ.
ಮ್ರದಂಗ ಸಹಾ ಚೆನ್ನಾಗಿ ನುಡಿಸಿದ್ದರು.
ಕೆಲವೇ ಜನ ಸಭಿಕರು ಇದ್ದುದು ಸ್ವಲ್ಪ ಮುಜುಗರವಾಯಿತು.
ಬರೆದಿರುವುದು 25/1/2023
No comments:
Post a Comment