Wednesday, February 15, 2023

ಶುಭಾಷಿತ - ನುಡಿ ಮುತ್ತುಗಳು (2)

 


1. ನಾವು ದುಡಿದು ಸಂಪಾದಿಸಿದ ಹಣ ನಾವು ಅನುಭವಿಸುತ್ತೇವೆಯೋ-ಇಲ್ಲವೋ ಖಚಿತವಾಗಿಲ್ಲ. ಆದರೆ... ಹಣ ಸಂಪಾದಿಸುವ ಸಲುವಾಗಿ ಪಾಪ-ಕರ್ಮಗಳನ್ನು ಮಾಡಿದರೆ ಅದನ್ನು ನಾವು ಅನುಭವಿಸಲೇ ಬೇಕು. 

*******************************************
2. ಅದ್ಬುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು, ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಪಾಠ ಕಲಿಸಿದರೆ ನಂಬಿಕೆಗಳು ಶಕ್ತಿ ತುಂಬುತ್ತವೆ. 
*******************************************
3. ಶರೀರ ಸುಂದರವಾಗಿರಲಿ ಇಲ್ಲದಿರಲಿ, ನಾವಾಡುವ ಮಾತುಗಳು ಸುಂದರವಾಗಿ ಇರಬೇಕು. ಏಕೆಂದರೆ ಜನರು ಮುಖವನ್ನು ಮರೆಯುತ್ತಾರೆ. ನಾವಾಡುವ ಮಾತುಗಳು ಎಂದಿಗೂ ಮರೆಯುವುದಿಲ್ಲ. 
*****************************************
4. ಮಾತು ಬರುತ್ತೆ ಅಂದ ಮಾತ್ರ ಕ್ಕೆ ಬುದ್ದಿವಂತರು ಅಂತ ಅಲ್ಲ. ಯಾರ ಹತ್ರ ಹೇಗೆ ಮಾತಾಡಬೇಕು ಅನ್ನುವ ಜ್ಞಾನ ಇರುವವನು ಮತ್ರ ಬುದ್ದಿವಂತ. 
*****************************************
5. ವಾದದಿಂದ ತಾತ್ಕಾಲಿಕ ಗೆಲುವಾದಂತೆ ಕಾಣುತ್ತದೆ. ತಾಳ್ಮೆ ಹಾಗಲ್ಲ, ತಕ್ಷಣಕ್ಕೆ ಸೋತಂತೆ ಕಂಡರೂ ಭವಿಷ್ಯದಲ್ಲಿ ಒಳ್ಳೆಯದೆ. 
*****************************************
6. ಮನುಷ್ಯನಾಗಿ ಹುಟ್ಟಿದ ಮೇಲೆ ಹೊಗಳಿಕೆ ತೆಗಳಿಕೆ, ಮಾನ ಅವಮಾನ, ಲಾಭ ನಷ್ಟ, ಸೋಲು ಗೆಲುವು ಎಲ್ಲಾ ಸಹಜ. ಅವುಗಳಿಗೆ ಅಂಜದೆ ಬದಕಿ ತೋರಿಸುವುದೇ ಜೀವನ. 
*****************************************
7. ಮನೆಯಲ್ಲಿ ಹಿರಿಯರ ಕೈಯಲ್ಲಿ ನಿರ್ಧಾರ ಇರುವವರೆಗೆ ಮನೆ ಒಡೆಯುವುದಿಲ್ಲ. ಮನೆಯಲ್ಲಿ ಎಲ್ಲರೂ ಹಿರಿಯರಾಗಲು ಪ್ರಾರಂಭಿಸಿದಾಗ ಮನೆ ಒಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. 
******************************************
8. ಒಂದೇ ಒಂದು ಕ್ಷಣದ ಕೋಪ ಇಬ್ಬರು ವ್ಯಕ್ತಿಯನ್ನು ದೂರ ಮಾಡಬಲ್ಲದು! ಏಕೆಂದರೆ ಕೋಪದಲ್ಲಿ ನಾವಾಡುವ ಮಾತುಗಳು ಬರುವುದು ಮನಸ್ಸಿನಿಂದಲ್ಲ. 
*****************************************
8. ಶುದ್ಧವಾದ ನಡತೆ, ತೂಕವಾದ ಮಾತು, ಸಹಾಯ ಮಾಡುವ ಮನೋಭಾವ ಇವೆಲ್ಲವೂ ಜನನ ಮರಣದ ನಡುವೆ ಇರುವ ನಿಜವಾದ ರೇಖೆಗಳು. ಈ ರೇಖೆ ಯಾರಲ್ಲಿ ಇರುತ್ತದೆಯೋ ಅಂತವರಿಗೆ ಭಗವಂತನೆ ಅದೃಷ್ಟದ ರೇಖೆಯನ್ನು ದಯಪಾಲಿಸುತ್ತಾನೆ. 
****************************************
9. ಬದುಕುವ ಛಲವಿದ್ದರೆ ನಿನ್ನ ಶತ್ರುಗಳ ಎದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ. 
**************************************
10. ತಿಂದು ಬಿಸಾಡಿದ ಬೀಜ ದಿಂದಲೇ ಹೆಮ್ಮರ ಬೆಳೆಯುವುದು. ಯಾರೋ ನಿಮ್ಮನ್ನು ತಿರಸ್ಕರಿಸಿದರೆಂದು ಕುಗ್ಗಬೇಡಿ, ತಿರಸ್ಕರಿಸಿದವರೇ ಪುರಸ್ಕರಿಸುವಂತೆ ಬೆಳೆಯಿರಿ.
**************************************
11.ನಂಬಿಕೆ ಓದುವುದಕ್ಕೆ ಮೂರು ಅಕ್ಷರಗಳು ಇರಬಹುದು. ಆದರೆ ಸಂಪಾದಿಸುವದಕ್ಕೆ ತುಂಬಾ ಕಷ್ಟ. ಏಕೆಂದರೆ ಇದು ಹಣಕ್ಕಿಂತಲೂ ದುಬಾರಿ. 
***************************************
12. ವಿಪರ್ಯಾಸವೆಂದರೆ ಇದ್ದದ್ದನ್ನು ಇದ್ದ ಹಾಗೆ ಹೇಳುವವರು ಇದ್ದೂ ಇಲ್ಲದವರಂತಾಗುತ್ತಾರೆ. ಇಲ್ಲದ್ದನ್ನು ಇದ್ದ ಹಾಗೆ ಇದ್ದದ್ದನ್ನು ಇಲ್ಲದ ಹಾಗೆ ಹೇಳುವವರು ಇದ್ದಬದ್ದವರಿಗೆಲ್ಲಾ ಮೆಚ್ಚುಗೆಯಾಗುತ್ತಾರೆ. 
**************************************
13. ಪರಿಪೂರ್ಣ ಬದುಕಿಗಾಗಿ ಬೇಕಿರುವುದು ಪದವಿಗಳಲ್ಲ. ಪವಿತ್ರವಾದ ಮನಸ್ಸು. ಹೃದಯ ವೈಶಾಲ್ಯತೆ. 
************************************
14. ಸ್ವಲ್ಪ ಹೊತ್ತು ನಗುವುದರಿಂದ ಫೋಟೋ ಅಷ್ಟು ಸುಂದರವಾಗಿ ಬರುವುದಾದರೆ ಜೀವನಪೂರ್ತಿ ನಗುತ್ತಿದ್ದರೆ ಜೀವನ ಎಷ್ಟು ಸುಂದರವಾಗಿರಬಹುದು. 
*************************************
15. ಗೆದ್ದವರು ಸಂತೋಷದಿಂದ ಇರುತ್ತಾರೆ, ಸೋತವರು ಯೋಚಿಸುತ್ತ ಇರುತ್ತಾರೆ, ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.
*************************************
16. ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಇರಲಿ . 
*************************************
17. ನಮ್ಮ ಆಡಂಬರ, ಅಹಂಕಾರ, ಚೆಲುವು ಎಲ್ಲವೂ ಸಾವಿನ ಮುಂದೆ ಸೋತು ಹೋಗುತ್ತದೆ. ಆದರೆ... ಗುಣ ಸಾವನ್ನು ಗೆದ್ದು ಬಿಡುತ್ತದೆ. 
************************************
18. ನಿಮ್ಮನ್ನು ನೀವು ಜ್ಞಾನಿಗಳು ಎಂದುಕೊಳ್ಳುವುದು ತಪ್ಪಲ್ಲ, ಆದರೆ.. ಬೇರೆಯವರನ್ನು ಮೂರ್ಖರು ಎಂದುಕೊಳ್ಳುವುದು ದೊಡ್ಡ ತಪ್ಪು.
**************************************
19. ದುಡಿಯೋನಿಗೆ ಗೊತ್ತು ಮಣ್ಣಿನ ಬೆಲೆ, ಹೆತ್ತವರಿಗೆ ಗೊತ್ತು ಹೆಣ್ಣಿನ ಬೆಲೆ. ಬಡವರಿಗೆ ಗೊತ್ತು ದುಡ್ಡಿನ ಬೆಲೆ. ಈ ಮೂರೂ ತಿಳಿದವರಿಗೆ ಗೊತ್ತು ಜೀವನದ ಬೆಲೆ. 
**************************************
20. ಮುಳ್ಳಿನ ಮೇಲೆ ಆಪಾದನೆ ಹೇಗೆ ಮಾಡಲಿ? ನೋಡದೆ ಕಾಲಿಟ್ಟವನು ನಾನೇ.. 
ಬೇರೆಯವರನ್ನು ಕೆಟ್ಟವರೆಂದು ಹೇಗೆ ಆಪಾದನೆ ಮಾಡಲಿ? ತಿಳಿಯದೆ ಅವರನ್ನು ನಂಬಿದ್ದು ನಾನೇ...
*************************************
21. ಕೆಲವರಿಗೆ ಸೂರ್ಯ ಬಿಸಿಲು ಅನ್ನಿಸುತ್ತಾನೆ, ಇನ್ನು ಕೆಲವರಿಗೆ ಬೆಳಕು ಎನ್ನಿಸುತ್ತಾನೆ. 
ಹಾಗೆಯೇ ನಾವು ಕೂಡಾ ಕೆಲವರಿಗೆ ಒಳ್ಳೆಯವರು ಅನ್ನಿಸಿದರೆ ಇನ್ನೂ ಕೆಲವರಿಗೆ ಕೆಟ್ಟವರು ಅನಿಸಬಹುದು. ಅದಕ್ಕೆ ಯಾವತ್ತು ನಮ್ಮ ಯೋಜನೆಯಂತೆ ಬದುಕಬೇಕು. ಜನರ ಯೋಚನೆಯಂತಲ್ಲ.. 
*************************************
22. ಅವಕಾಶ ವೆಂಬುದು ಹಾಲಿನೊಳಗೆ ಅದ್ದಿದ ಬಿಸ್ಕತ್ತಿನಂತೆ. ಸ್ವಲ್ಪ ತಡ ಮಾಡಿದರೂ ಕೈ ತಪ್ಪಿ ಹೋಗುತ್ತದೆ! 
*************************************
23. ಮನುಷ್ಯ ಮುಹೂರ್ತ ಇಲ್ಲದೆ ಹುಟ್ಟುತ್ತಾನೆ , ಮುಹೂರ್ತ ಇಲ್ಲದೆ ಸಾಯುತ್ತಾನೆ., ಆದರೆ ಇಡೀ ಜೀವನ ಶುಭ ಮುಹೂರ್ತದ ಹುಡುಕಾಟದಲ್ಲಿ ರುತ್ತಾನೆ. 
**************************************
24. ನಿಂದನೆ, ಟೀಕೆ, ತೆಗೆಳಿಕೆಗಳಿಗೆಲ್ಲಾ ನೀವು ಉತ್ತರಿಸುತ್ತಾ ಇದ್ದರೆ, ಸದಾ ಅದೊಂದೇ ಕೆಲಸವನ್ನು ಮಾಡುತ್ತಾ ಇರಬೇಕಾಗುತ್ತದೆ. ಟೀಕೆಗಳನ್ನು ಕೇಳಿಸಿ ಕೊಳ್ಳಬೇಕು, ಅವುಗಳಿಂದ ನಾವು ತಿದ್ದಿಕೊಳ್ಳುವುದಿದ್ದರೆ ತಿದ್ದಿ ಕೊಳ್ಳಬೇಕು. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ನಿಮ್ಮ ಪಾಡಿಗೆ ನೀ ವಿರಬೇಕು. 
**************************************
25. ನಾನು ಮತ್ತಷ್ಟು ತಿಳಿಯಬೇಕು ಎಂಬುದು "ಜ್ಞಾನ".ನನಗೆ ಎಲ್ಲವೂ ತಿಳಿದಿದೆ ಎನ್ನುವುದು "ಅಜ್ಞಾನ" ತಾನೂ ತಿಳಿಯುತ್ತಾ ಪರರಿಗೆ ತಿಳಿಸುವುದು "ಸುಜ್ಞಾನ".
**************************************
26. ಸುಮನೋಹರದ ಸುಪ್ರಭಾತವು ಮೂಡುತಿರುವುದು ಪ್ರಕೃತಿಯ ಮಡಿಲಲ್ಲಿ, ನಿಮ್ಮಲ್ಲಿ ಮೂಡಿಸಲಿ ಸುಭಿಕ್ಷೆಯನ್ನು.
*************************************
27. ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ, ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು.
*************************************
28. ನೀನೇನು ಅಂತ ನಿನಗೆ ಗೋತ್ತಿರುವಾಗ ಯಾರ ಅಭಿಪ್ರಾಯಕ್ಕಾಗಿಯೂ ಕಾಯ ಬೇಡ, ಏಕೆಂದರೆ ಎಲ್ಲರನ್ನೂ ಮೆಚ್ಚಿಸಲು ಹೋದರೆ ಮುಂದೊಂದು ದಿನ ಹುಚ್ಚನಾಗುತ್ತೀಯ. ಇಲ್ಲಿ ಮೆಚ್ಚಿ ಮಾತನಾಡುವವರಿಗಿಂತ ಚುಚ್ಚಿ ಮಾತನಾಡುವವರು ಹೆಚ್ಚು. 
*************************************
29. ಜೀವನದಲ್ಲಿ ನಡೆಯುವ ಸರಿ ತಪ್ಪುಗಳನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡಿ ಒಳ್ಳೆಯ ಮಾರ್ಗವನ್ನು ತೋರಿ ಸಿದವರು ಯಾಕೆ ಆಗಿರಲಿ ಅವರನ್ನು ಗೌರವಿಸುವ ಗುಣ ನಮ್ಮದಾಗಿರಲಿ. 
************************************
30. ಓದಲು ಒಂದು ಕ್ಷಣ ಬೇಕಾಗುತ್ತದೆ, ಯೋಚನೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ, ತಿಳಿದುಕೊಳ್ಳಲು ಒಂದು ದಿನ ಬೇಕಾಗುತ್ತದೆ, ಆದರೆ ಉಳಿಸಿಕೊಳ್ಳಲು ಪೂರ್ತಿ ಜೀವನವೇ ಬೇಕಾಗುತ್ತದೆ. ಅದೇ ವಿಶ್ವಾಸ. 
************************************
31. ಯಾರು ಇದ್ದುದರಲ್ಲಿ ತೃಪ್ತಿ ಹೊಂದಿರುತ್ತಾನೋ, ಯಾರು ತನ್ನ ಕೆಲಸ ತಾನೇ ಮಾಡಿಕೊಳ್ಳುತ್ತಾನೋ, ಯಾರು ಪರೋಪಕಾರ ಸೇವಾ ಭಾವನೆ ಹೊಂದಿದ್ದಾನೋ ಹಾಗೂ ಯಾರು ದಿಂಬಿಗೆ ತಲೆ ಕೊಟ್ಟ ಕೂಡಲೇ ನಿದ್ರಿಸುತ್ತಾನೋ, ಯಾರು ಅಲಾರಂ ಇಲ್ಲದೆ ಏಳುತ್ತಾನೋ ಅವನೇ ಅತಿ ಸುಖೀ ಮನುಷ್ಯನು. 
**************************************
32. ಸ್ನೇಹ ಸಂಬಂಧಗಳು ಯಾವ ರೀತಿ ಇರಬೇಕೆಂದರೆ, ಕನ್ನಡಿ ಹಾಗೂ ನೆರಳಿನಂತೆ. ಕನ್ನಡಿ ಎಂದೂ ಸುಳ್ಳು ಹೇಳುವುದಿಲ್ಲ ನೆರಳು ಎಂದೂ ನಮ್ಮ ಬಿಡುವುದಿಲ್ಲ. 
****************************************
33. ಜೀವನದಲ್ಲಿ ನಾವು ಸೋಲುವುದು ಸಣ್ಣ ತಪ್ಪುಗಳಿಗೆ ಹೊರತು ದೊಡ್ಡ ತಪ್ಪುಗಳಿಗಲ್ಲ, ಉದಾಹರಣೆಗೆ ನಾವು ಎಡವುದೂ ಸಣ್ಣ ಕಲ್ಲಿಗೆ ಹೊರತು ದೊಡ್ಡ ಬಂಡೆಗಲ್ಲಿಗಲ್ಲ.
***************************************
34.ಹಾಲಿನ ಜೊತೆ ಸೇರಿಸಿದ ನೀರು ಕೊಡ ಹಾಲಾಗುತ್ತದೆ, ಹಾಗೆ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ.
************************************
35. ನಿಮ್ಮ ಮುಖದಲ್ಲಿ ಮಂದಹಾಸದಿಂದ ಎಚ್ಚರಗೊಳ್ಳುವುದರಿಂದ  ಆ ದಿನ ನೀವು ಎದುರಿಸುತ್ತಿರುವ ಅರ್ಧದಷ್ಟು  ಸಮಸ್ಯೆ ಗಳನ್ನು ಪರಿಹರಿಸುತ್ತದೆ. 
**********************************
36. ಒಳ್ಳೆಯ ಮುಂಜಾನೆಯ ಜೊತೆ ಧೈರ್ಯದಿಂದಿರಿ, ಏಕೆಂದರೆ ಉತ್ತಮ ವಿಷಯಗಳು ಮುಂಬರುವ ದಾರಿಯಲ್ಲಿವೆ.
***********************************
37. ಒಳ್ಳೆಯ ನಡತೆಯಿಂದ ನಮಗೆ ಯಾವುದೇ ಆರ್ಥಿಕ ಲಾಭ ಸಿಗದೇ ಇರಬಹುದು...!! 
ಆದರೆ ಅಂತಹ ಗುಣಕ್ಕೆ ಸಾವಿರಾರು ಮನಸ್ಸುಗಳನ್ನು ಗೆಲ್ಲುವ ಶಕ್ತಿಯಿರುತ್ತದೆ...!!! 
ಲಾಭ-ನಷ್ಟವನ್ನು ಯಾವತ್ತೂ ಹಣದಲ್ಲೇ ಅಳೆಯಬಾರದು...!!! 
***********************************
38. ಜೀವನದಲ್ಲಿ ನಂಬಿಕೆಯೇ ಒಂದು ದೊಡ್ಡ ಸಂಬಂಧ. 
ನಂಬಿಕೆ ಇಲ್ಲದಿದ್ದರೆ ಯಾವುದೇ ಸಂಬಂಧ ಗಳಾಗಲಿ ಪ್ರೀತಿಯಲ್ಲಿ ಸ್ನೇಹವಾಗಿ ಹೆಚ್ಚು ದಿನ ಉಳಿಯುವುದಿಲ್ಲ. 
***********************************
39. ನೀವು ನೋಡುವ ಪ್ರತಿಯೊಂದು ಸೂರ್ಯೋದಯವು ದೇವರಿಂದ ನಿಮಗೆ ಉಡುಗೊರೆ ಯಾಗಿದೆ. 
**************************************
40. ಬಯಸಿದ್ದನ್ನು ಪಡೆಯ ಬೇಕೆನ್ನುವ ಹಠ ಇರಬೇಕು ಆದರೆಮತ್ತೊಬ್ಬರಿಂದ ಕಿತ್ತುಕೊಂಡು ಬದುಕುವ ಚಟ ಇರಬಾರದು. ಬದುಕಿನಲ್ಲಿ ಹಠ ಇರಲಿ ಆದರೆ ಯಾರನ್ನು ತುಳಿದು ಬದುಕುವ ಮನಸ್ಥಿತಿ ಬೇಡ. 
****************************************
41. ಯೋಗ್ಯತೆ ಎನ್ನುವುದು ಹೇಳಿಕೊಳ್ಳುವುದಕ್ಕೆ. ತೋರಿಸಿ ಕೊಳ್ಳುವುದು ಅಲ್ಲ. ನಾವು ಆಡುವ ಒಳ್ಳೆಯ ಮಾತು ಹಾಗೂ ಮಾಡುವ ಒಳ್ಳೆಯ ಕಾರ್ಯ ಬೇರೆಯವರ ಅನುಭವಕ್ಕೆ ಬರುವಂಥದ್ದು, ಅದೇ ನಿಜವಾದ ಯೋಗ್ಯತೆ. 
****************************************
42. ನಿಮ್ಮ ಮೇಲಿನ ನಂಬಿಕೆಯೊಂದಿಗೆ ಬೆಳಿಗ್ಗೆ ಎದ್ದೇಳಿ, ಮತ್ತು ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗುತ್ತವೆ. 
****************************************
43. ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು ಕಲಿತು ಬಿಡಬೇಕು. ಏಕೆಂದರೆ ಇಲ್ಲಿ ಕಣ್ಣೀರು ಒರೆಸುವ ವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ. 
***************************************
44. ಅದೃಷ್ಟವಂತ ಎಂದರೆ ಅವಕಾಶಗಳನ್ನು ಪಡೆಯುವವನು. 
ಬುದ್ದಿವಂತ ಎಂದರೆ ತನ್ನ ಅವಕಾಶಗಳನ್ನು ತಾನೇ ಸೃಷ್ಟಿಸಿಕೊಳ್ಳುವ ನು.
*************************************
45. ಕಲ್ಪನೆಯ ಕೋಟೆಗೆ ಮಹಾರಜನಗುವುದಕ್ಕಿಂತ ವಾಸ್ತವದ ಗುಡಿಸಲಿಗೆ ಯಜಮಾನನಾಗುವುದು ಉತ್ತಮ. 
*************************************
46. ಯಾರೊಬ್ಬರಿಗಾಗಿಯೂ ಅಳಬೇಡಿ. ಅವರು ನಿಮ್ಮ ಕಣ್ಣೀರಿಗೆ ಯೋಗ್ಯವಲ್ಲ. ಯಾರು ನಿಮ್ಮ ಕಣ್ಣೀರಿಗೆ ಯೋಗ್ಯನೋ ಅವರು ನಿಮ್ಮನ್ನು ಅಳಲು ಬಿಡುವುದಿಲ್ಲ. 
************************************
47. ಪ್ರೀತಿಯು ಮನೆಯ ಕಳಸವಿದ್ದಂತೆ, ಮಾನವೀಯತೆಯೇ ಮನೆಯ ಖಜಾನೆ, ಸಿಹಿ ಮಾತು ಮನೆಯ ಸಂಪತ್ತು ಮತ್ತು ಶಾಂತಿ ಮನೆಯ ಮಹಾಲಕ್ಷ್ಮಿ. 
************************************
48. ಸಮಾಜದಲ್ಲಿ ನಮ್ಮ ಸ್ನೇಹ ಸಂಬಂಧವನ್ನು ಉತ್ತಮಗೊಳಿಸಲು ಒಂದಕ್ಷರ ವ್ಯತ್ಯಾಸವಷ್ಟೇ ಇರುವುದು. ನಾನು ಎನ್ನದೇ ನಾವು ಎಂದರೆ ಸಾಕು, ಸಮಾಜ, ಜಗತ್ತು ಎಲ್ಲವೂ ಸುಂದರವಾಗಿ ನಮ್ಮದಾಗು ತ್ತದೆ. 
***********************************
49. ಇದು ಹೊಸ ಬೆಳಿಗ್ಗೆ ಆದ್ದರಿಂದ ನಿಮ್ಮ ದಿನವನ್ನು ನಿಮ್ಮ ಮಗುವಿನಂತೆ ಪ್ರಕಾಶಮಾನವಾಗಿ ಮಾಡಲು ಪ್ರಯತ್ನಿಸಿ. 
***********************************
50. ಸಜ್ಜನರ ಸಂಗ ಮಾಡುವಾಗ ಹಸಿದ ಹೊಟ್ಟೆಯಲ್ಲಿ ಇರುವ ಪ್ರಸಂಗ ಬಂದರೂ ಬಿಡಬೇಡ...*
ಮೃಷ್ಟಾನ್ನ ಭೋಜನ ಇಕ್ಕಿದರೂ ದುರ್ಜನರ ಸಂಗ ಮಾಡಬೇಡ.*
************************************
51. ದುಡ್ಡಿಲ್ಲದವ ಬಡವನಲ್ಲ, ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ. ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದು ರಲ್ಲೇ ಬದುಕು. ಅವರು ನಿನ್ನ ಎದುರುಡ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ. 
************************************
52. ಅರಳುವ ಹೂವಿಗೆ ಪ್ರತೀ ದಿನವೂ ಒಂದು ಹೊಸ ಜೀವನ. ಹಾಗೆಯೇ ಮನುಷ್ಯನು ಕೂಡ ತನ್ನ ಜೀವನದ ಪ್ರತೀ ದಿನವನ್ನು ಹೊಸದಿನವೆಂದು ಜೀವಿಸಿ ದರೆ ಜೀವನ ತುಂಬಾ ಸುಂದರ ವಾಗಿರುತ್ತದೆ. 
************************************
53. ನಿಮಗೆ ಎಲ್ಲೇ ಹೋದರೂ ಗೌರವ ಸಿಗುತ್ತದೆ ಎಂದಾದರೆ ಅದಕ್ಕೆ ಕಾರಣ ನಿಮ್ಮ ಸ್ವಭಾವ ಮತ್ತು ನಡತೆಯಲ್ಲಿ ಜೊತೆಗೆ ಬೆರೆಯಿರಿ. ಆದರೆ ಸ್ವಭಾವ ಮತ್ತು ನಡತೆಯನ್ನು ಬದಲಾಯಿಸ ಬೇಡಿ. 
ದೀಪವನ್ನು ಎಲ್ಲೇ ಹಚ್ಚಿದರು ಅದರ ಸ್ವಭಾವ ಬೆಳಕು ನೀಡುವುದು ಮಾತ್ರ. 
************************************
54. ಸುಂದರ ಬದುಕು ಧಿಡೀರೆಂದು ಘಟಿಸುವುದಿಲ್ಲ. ಪ್ರೀತಿ ಸಂತೋಷ, ತಾಳ್ಮೆ ಮತ್ತು ತ್ಯಾಗ ಗಳಿಂದ ಅದನ್ನು ನಾವೇ ನಿರ್ಮಿಸಿ ಕೊಳ್ಳಬೇಕು. 
**************************************
55. ಒಳ್ಳೆಯದ ರಲ್ಲಿ ಕೆಟ್ಟದ್ದನ್ನು ಹುಡುಕ  ಬದಲು ಕೆಟ್ಟವರಲ್ಲಿ ಒಳ್ಳೆಯದನ್ನು ಹುಡುಕಿ. ಆಗ ನೋಡಿ ನಿಮ್ಮ ಜೀವನ ಎಷ್ಟೊಂದು ಸಂತೋಷಮಯವಾಗುತ್ತದೆಂದು . 
***************************************
56. ಪ್ರತಿಭೆ ಮತ್ತು ರೂಪ ದೇವರ ಕೊಡುಗೆ. ಕೀರ್ತಿ ಮತ್ತು ಹಣ ಮನುಷ್ಯ ಸೃಷ್ಟಿ. ವ್ಯಕ್ತಿತ್ವ ಮತ್ತು ಅಹಂಕಾರ ನಾವೇ ರೂಪಿಸಿ ಕೊಂಡಿದ್ದು. ಆಲೋಚಿಸಿ... ಮುಂದೆ ನಡೆಯಿರಿ.
***************************************
57. ದಾರಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕಗಳು ಸಮಸ್ಯೆಗಳು ಅವಶ್ಯವಾಗಿ ಎದುರಾಗುತ್ತವೆ. ಆದರೆ ಪರಮಾತ್ಮನು ಅವರ ಜೀವನ ದೋಣಿಯನ್ನು ಎಂದೂ ಮುಳುಗಲು ಬಿಡುವುದಿಲ್ಲ.. 
*************************************************
58. ಹಾಗಲಕಾಯಿ ಯಂತಹ ಕಹಿಯಾದ ಜನರು ತೊಂದರೆಯಲ್ಲಿ ಸಹಾಯ ಮಾಡುತ್ತಾರೆ. ಸಕ್ಕರೆ ಯಂತಹ ಸಿಹಿಯಾದ ಜನರು ಸಮಯ ನೋಡಿ ಮೋಸ ಮಾಡುತ್ತಾರೆ.. 
***************************************
59. ಸೂರ್ಯ ಚಂದ್ರ ರಿಗೂ ಗ್ರಹಣಗಳಿವೆ. ಗ್ರಹಣ ಗಳಿಗೆ ಮೋಕ್ಷವಿದೆ. ಮನುಷ್ಯನಿಗೂ ಕಷ್ಟ ಗಳೆಂಬ ಗ್ರಹಣಗಳಿವೆ. ಕಷ್ಟ ಗಳಿಗೂ ಮೋಕ್ಷವಿದೆ. ತಾಳಿದವನು ಬಾಳಿಯಾನು. 
*************************************
60. ಮನುಷ್ಯರ ನಡುವಿನ ಅಂತರ ಎಷ್ಟು ಅಂದರೆ ನಂಬಿಕೆ ಇದ್ದರೆ ಸಾಸಿವೆ ಗಿಂತ ಹತ್ತಿರ. ನಂಬಿಕೆ ಇಲ್ಲದಿದ್ದರೆ ಆಕಾಶ ಮತ್ತು ಭೂಮಿಯಷ್ಟು ದೂರ... ನಂಬಿಕೆಯೇ ಜೀವನ. 
*************************************
61. ಹಾಗಲಕಾಯಿ ಯಂತಹ ಕಹಿಯಾದ ಜನರು ತೊಂದರೆಯಲ್ಲಿ ಸಹಾಯ ಮಾಡುತ್ತಾರೆ. ಸಕ್ಕರೆ ಯಂತಹ ಸಿಹಿಯಾದ ಜನರು ಸಮಯ ನೋಡಿ ಮೋಸ ಮಾಡುತ್ತಾರೆ.. 
**************************************
62. ಸೂರ್ಯ ಚಂದ್ರ ರಿಗೂ ಗ್ರಹಣಗಳಿವೆ. ಗ್ರಹಣ ಗಳಿಗೆ ಮೋಕ್ಷವಿದೆ. ಮನುಷ್ಯನಿಗೂ ಕಷ್ಟ ಗಳೆಂಬ ಗ್ರಹಣಗಳಿವೆ. ಕಷ್ಟ ಗಳಿಗೂ ಮೋಕ್ಷವಿದೆ. ತಾಳಿದವನು ಬಾಳಿಯಾನು. 
**************************************
63. ಎಲ್ಲಿ ಕೇಳಿದ ಮಾತುಗಳು ಅಲ್ಲಿಯೇ ಮರೆಯ ಬೇಕು. ಇಲ್ಲಿನ ಮಾತುಗಳು ಅಲ್ಲಿಗೆ ಅಲ್ಲಿನ ಮಾತುಗಳು ಇಲ್ಲಿಗೆ ಹೇಳುವುದರಿಂದ ಜೀವನ ನಾಶವಾಗುತ್ತದೆ. 
**************************************
64. ಇನ್ನೊಬ್ಬರ ದೃಷ್ಟಿಯಲ್ಲಿ ಕೆಟ್ಟವರಾಗಿ ಕಂಡರೂ ಚಿಂತಿಸಬೇಕಾದ, ನಿಮ್ಮ ಮನಸ್ಸಿಗೆ ನಾನು ಒಳ್ಳೆ ಕೆಲಸ ಮಾಡಿದ್ದೇನೆ ಅನ್ನಿಸಿದರೆ ಸಾಕು. ಅದು ದೇವರು ಮೆಚ್ಚುತ್ತಾನೆ. 
**************************************



No comments:

Post a Comment