Tuesday, February 14, 2023

ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನ - ಸಂಭ್ರಮ

 ಶನಿವಾರ, ಫೆಬ್ರವರಿ 11, 2023 

ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಬೆಂಗಳೂರು.


ಅದೊಂದು ಅದ್ದೂರಿಯ ಕನ್ನಡ ಸಾಹಿತ್ಯ ಪರಿಷತ್ತು , ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಕ್ರಮ.




ಬೆಳಿಗ್ಗೆ 8 ಗಂಟೆಗೆ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ಆದ ನಂತರ ಗಣ್ಯರಿಂದ ದ್ವಜಾರೋಹಣ ನಡೆಯಿತು.


ನಂತರ ವಿವಿಧ ಸಂಘಟನೆಗಳಿಂದ ಪ್ರದರ್ಶನ, ಡೊಳ್ಳು ಕುಣಿತ, ಬೊಂಬೆಗಳಿಂದ ನ್ರತ್ಯ, ಶಾಲಾ  ಮಕ್ಕಳಿಂದ ಕವಾಯತು, ಕನ್ನಡ ಜಾಗ್ರತಿ ಮೆರವಣಿಗೆ  ನಡೆಯಿತು.




ನೆರೆದಿದ್ದ ಸರ್ವರಿಗೂ ಬೆಳಿಗ್ಗಿನ ಉಪಾಹಾರ, ಉಪ್ಪಿಟ್ಟು, ಕೇಸರಿ ಬಾತ್ .... 

ಸುಮಾರು ೧೨ ಗಂಟೆಗೆ, ಗಣ್ಯರ ಆಗಮನ, ಸಭಾ ಕಾರ್ಯಕ್ರಮ.


ಕಾಂಗ್ರೆಸ್ ಶಾಸಕ , ಮಾಜಿ ಮಂತ್ರಿ ಶ್ರೀ ಕ್ರಷ್ಣ ಬೈರೇಗೌಡ ರ ಉದ್ಘಾಟನಾ ಭಾಷಣ ರಾಜಕೀಯ ಪ್ರೇರಿತ ವಾಗಿತ್ತು. ಕೇಂದ್ರ ಸರಕಾರದಿಂದ ಹಿಂದಿ ಭಾಷೆ ಹೇರಿಕೆ, ಚರಿತ್ರೆಯನ್ನು ತಿರುಚುವಿಕೆ, ಭಿನ್ನತೆಯಲ್ಲಿ ಏಕತೆಯನ್ನು ಕಾಣುವ ಮನಸ್ತಿತಿ ಇಲ್ಲದಿರುವುದು, ಇತ್ಯಾದಿ, ಇತ್ಯಾದಿ ....

ಸಮ್ಮೇಳನದ ಅಧ್ಯಕ್ಷರಾದ  ಡಾ. ಸಿ ಅರ್ ಚಂದ್ರಶೇಖರ್, ಖ್ಯಾತ ಮನೋ ವೈದ್ಯರು ಹಾಗೂ ವೈದ್ಯ ಸಾಹಿತಿಗಳು, ತಮ್ಮ ಭಾಷಣದಲ್ಲಿ ಕನ್ನಡಕ್ಕೆ, ಕನ್ನಡ ಸಾಹಿತ್ಯಕ್ಕೆ ಇರುವ ಸಂಕಟಗಳು,  ಅದರ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನೂ ನೀಡಿದರು.


ಮಧ್ಯಾಹ್ನದ ನಂತರ ಕುವೆಂಪು ವಿಚಾರ ಗೋಷ್ಠಿ, ಮಹಿಳಾ ಕವಿ ಗೋಷ್ಠಿ,  ಡಾ. ನಾ ಸೋಮೇಶ್ವರ ಅಧ್ಯಕ್ಷತೆಯಲ್ಲಿ ಚಿಂತನಾ ಗೋಷ್ಠಿ ನಡೆಯಿತು.


ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ, ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು.

ಸಂವೇದನಾ ಕ್ರಿಯೇಷನ್ಸ್ ಮತ್ತು ತಂಡದವರಿಂದ "ಶ್ರೀ ಕ್ರಷ್ಣ ಸಂಧಾನ" ನಗೆ ನಾಟಕ ಸಂಪನ್ನ ಗೊಂಡಿತು.

ಬರೆದಿರುವುದು ಫೆಬ್ರುವರಿ 15, 2023 




No comments:

Post a Comment