ಶನಿವಾರ, 25 ಫೆಬ್ರುವರಿ 2023
ಕೆ.ಎಚ್. ಕಲಾಸೌಧ, ಹನುಮಂತನಗರ, ಬೆಂಗಳೂರು.
1960 ರ ದಶಕದ "ಸೀತೂ ಮದುವೆ"ಯ ಸನ್ನಿವೇಶ ವನ್ನು ಸೈಡ್ ವಿಂಗ್ ತಂಡದವರು ಬಹಳ ರಸವತ್ತಾಗಿ ರಂಗದ ಮೇಲೆ ತಂದಿರುವರು.
![]()  | 
| ಕಲಾವಿದರು | 
ಅದು ಬೀಚಿ ವಿರಚಿತ, ಶೈಲೇಶ್ ಕುಮಾರ್ ರಚಿಸಿ, ನಿರ್ದೇಶಿಸಿದ ನಗೆ ನಾಟಕ .
ಎಲ್ಲ ಪಾತ್ರಧಾರಿಗಳು ಸುಂದರವಾಗಿ ಅಭಿನಯಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಲು ಸಮರ್ಥವಾಗಿದೆ.
ಆಗಿನ ಕಾಲದಲ್ಲಿ ಕುಟುಂಬದ ಆಗು ಹೋಗುಗಳಲ್ಲಿ ಮನೆಯಲ್ಲಿಯ ವಿಧವೆ ಅಜ್ಜಿಯ ಪಾತ್ರವೂ ಮಹತ್ವ
ದಾಗಿರುತ್ತದೆ. ಮದುವೆ ಆಗಲಿರುವ ಗಂಡು, ತನ್ನ ನ್ಯೂನತೆಗಳೆನೂ ಇದ್ದರೂ ಹೆಣ್ಣಿನಿಂದ ಎಲ್ಲಾ ರೀತಿಯ ಸಂಭ್ರಮವನ್ನು ಕಾಣುತ್ತಾನೆ. ಅಡಿಗೆ, ಹಾಡು. ನ್ರತ್ಯ ಇತ್ಯಾದಿಗಳಲ್ಲಿ ಪರಿಣಿತಿ ಯಾಗಿರಬೇಕೆಂದು ದುರಾಸೆ.
ಸೀತೂ ಒಬ್ಬ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹೆಣ್ಣು. ಆದರೆ ಕೊನೆಯಲ್ಲಿ ಅವಳದ್ದೇ ಆದ ನಿಲುವನ್ನು ಹೊಂದಿ ಮದುವೆಯನ್ನು ಧಿಕ್ಕರಿಸಿರುವು ದನ್ನು ಹಾಸ್ಯ ಮಾಯವಾಗಿ ನಿರೂಪಿಸಿದ್ದಾರೆ.
ಎಲ್ಲಾ ಕಲಾವಿದರ ಅಭಿನಯ ತುಂಬಾ ಚೆನ್ನಾಗಿತ್ತು. ಅಜ್ಜಿಯ ಪಾತ್ರ, ಸಂಭಾಷಣೆ ಮೆಚ್ಚಿನದಾಗಿತ್ತು.
ಬರೆದಿರುವುದು 27/2/2023
.jpeg)



No comments:
Post a Comment