Monday, February 20, 2023

ಶಿವರಾಮ ಕಾರಂತ ವೇದಿಕೆ - ಪಾ. ವೆಂ. ಸ್ಮರಣೆ

 ಭಾನುವಾರ, 29 ಫೆಬ್ರುವರಿ 2023 

ಶ್ರೀ ವಿನಾಯಕ ದೇವಸ್ಥಾನ ಸಭಾಂಗಣ, ಅರ್.ಟಿ. ನಗರ, ಬೆಂಗಳೂರು.


ಶಿವರಾಮ ಕಾರಂತ ವೇದಿಕೆಯ ಫೆಬ್ರುವರಿ ತಿಂಗಳ ಕಾರ್ಯಕ್ರಮ "ಪಾ. ವೇಂ. ಸಂಸ್ಕರಣೆ" ಮತ್ತು ಎಸ್. ದಿವಾಕರ್ ಅವರ ಉಪನ್ಯಾಸ ದೊಂದಿಗೆ ಸಂಪನ್ನಗೊಂಡಿತು.


ಶ್ರೀಮತಿ ಶಶಿಕಲಾ, ಕಾರ್ಯದರ್ಶಿ ಅವರು ವಿವರವಾಗಿ ವರದಿಯನ್ನು ಬರೆದಿರುವರು.

"ಸಾಹಿತ್ಯ ಲೋಕ"

 ದಿ:19.02.2023ರ ಭಾನುವಾರ ಸಂಜೆ 4 ಗಂಟೆಗೆ

ಶಿವರಾಮ ಕಾರಂತ ವೇದಿಕೆ ಮತ್ತು ಪಾ.ವೆಂ. ಆಚಾರ್ಯ ಟ್ರಸ್ಟ್.  ಸಹಯೋಗದಲ್ಲಿ


"ಪಾ.ವೆಂ ಆಚಾರ್ಯ- ಒಂದು ನೆನಪು" ಕಾರ್ಯಕ್ರಮ ನಡೆಯಿತು.

ಶಿವರಾಮ ಕಾರಂತ ವೇದಿಕೆಯ ಸಂಸ್ಥಾಪಕರು, ಪ್ರಸ್ತುತ ಕಾರ್ಯಾಧ್ಯಕ್ಷರಾದ ಪಾ. ಚಂದ್ರಶೇಖರ ಚಡಗ ರವರ ಮಾರ್ಗದರ್ಶನದಲ್ಲಿ , ವೇದಿಕೆಯ ಅಧ್ಯಕ್ಷರಾದ ಡಾ. ದೀಪಾ ಫಡ್ಕೆ ರವರ ನೇತೃತ್ವದಲ್ಲಿ, ಸಮಿತಿ ಸದಸ್ಯರು ಸಹಭಾಗಿತ್ವದಲ್ಲಿ, ವೇದಿಕೆ ಯ ಹಿರಿಯರಾದ  ಶ್ರೀ ಜಯರಾಮ್ ಸೋಮಯಾಜಿ ರವರು, ಶ್ರೀ ವೀರಶೇಖರ ಸ್ವಾಮಿ ರವರು ಮುಂದಾಳತ್ವದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಯಿತು. ಹಿರಿಯರಾದ ಶ್ರೀ ಸಿ. ಆರ್ ಸತ್ಯ  ಸರ್ ಉಪಸ್ಥಿತರಿದ್ದರು.



 ಕಾರ್ಯಕ್ರಮದ 
ಮುಖ್ಯ ಅತಿಥಿಗಳು:ಎಸ್ ದಿವಾಕರ್  ರವರು ಹಿರಿಯ ವಿಮರ್ಶಕರು, ಕಥೆಗಾರರು 

"ಪಾ.ವೆಂ ಆಚಾರ್ಯ-ಚಿಂತಾಮಣಿ-ನೆನಪು"

ತಮ್ಮದೇ ಒಳನೋಟಗಳಿಂದ ವಿಶ್ಲೇಷಾತ್ಮಕ  ಬರಹಗಳನ್ನು ಬರೆಯುತ್ತಿದ್ದ,  ಪತ್ರಿಕಾ ಧರ್ಮಕ್ಕೆ ಮಾದರಿಯಾಗಿದ್ದ ವೈಜ್ಞಾನಿಕ ಬರಹಗಾರರು.  ಸಂಪಾದಕರಾಗಿ ಕಸ್ತೂರಿ ಮಾಸಪತ್ರಿಕೆಯನ್ನು ಬಹುಎತ್ತರಕ್ಕೆ ಕೊಂಡೊಯ್ದು, ಕನ್ನಡ ಮತ್ತು ನಾಡು ಕಟ್ಟುವಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಶ್ರೇಷ್ಠ ಪತ್ರಕರ್ತರು, ಬರಹಗಾರರು, ಕವಿ, ಚಿಂತಕ, ಮಾರ್ಗ ದರ್ಶಕ  ಪಾ.ವೆಂ. ಆಚಾರ್ಯರು. 




ಆರೋಗ್ಯ ಪೂರ್ಣ ಸಮಾಜದ  ಬೆಳವಣಿಗೆಗೆ ಪಾ.ವೆಂ. ಆಚಾರ್ಯರ ರವರ ಸಾಧನೆಗಳು ಮುನ್ನೆಲೆಗೆ ಬರಬೇಕು. ಅವರ ಹಾದಿ, ಆದರ್ಶಗಳು ಎಲ್ಲರ ಸ್ಪೂರ್ತಿಯಾಗಬೇಕು ಎನ್ನುವ  ನಿಲುವು ಪಾ.ವೆಂ ಆಚಾರ್ಯ ಟ್ರಸ್ಟ್ ನದು. ಶ್ರೀಮತಿ ಛಾಯಾ ಕೆ. ಉಪಾಧ್ಯ (ಪಾ.ವೆಂ ರವರ ಮೊಮ್ಮಗಳು) ಟ್ರಸ್ಟ್ ನ


ವ್ಯವಸ್ಥಾಪಕ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಎಸ್ ದಿವಾಕರ್ ರವರು , ಡಿ.ವಿ.ಜಿ ಯವರ ಮೊಮ್ಮಗ ಎನ್ನುವುದು ಮತ್ತೊಂದು ವಿಶೇಷ., ಇವರು   ನೊಬೆಲ್ ಪುರಸ್ಕೃತ ರಿಂದ ಹಿಡಿದು ಬಹಳಷ್ಟು ಬರಹಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ದಾಖಲೆ ಇವರದು. ಅದನ್ನು ಚದುರಂಗರವರು ಹೀಗೆ ಮೆಚ್ಚುಗೆ ಯಿಂದ ಉದ್ಗರಿಸಿದ್ದಾರೆ.

"ಇಷ್ಟೊಂದು ಕಥೆಗಳ ಅನುವಾದ ಒಬ್ಬರೇ ಮಾಡುವುದೆಂದರೆ ಎಂಟೆದೆ ಬೇಕು. ಇಲ್ಲಿನ ಕಥೆಗಳು ಕನ್ನಡ ದವುಗಳೇ ಎಂಬ ಭ್ರಮೆ ಹುಟ್ಟಿಸುವಷ್ಟು ಯಶಸ್ವಿಯಾಗಿದೆ ಇವರ ಅನುವಾದ"- 

 


ವಿಷಯ ಯಾವುದೇ ಇರಲಿ ತಮ್ಮ ಅಧ್ಯಯನ ಅನುಭವದ ಆಳದಿಂದ ಮಾತನಾಡುವ ಕೌಶಲ್ಯ ದವರು

ಹಿರಿಯ ವಿಮರ್ಶಕರು, ಕಥೆಗಾರರು ಎಸ್. ದಿವಾಕರ್ ಸರ್ ರವರು.


ಇನ್ನು "ಪಾ.ವೆಂ ಎಂಬ ಚಿಂತಾಮಣಿ" ಆಚಾರ್ಯರ ಕುರಿತ ಉಪನ್ಯಾಸದಲ್ಲಿ. ಡಿವಿಜಿ ಮತ್ತು ಆಚಾರ್ಯರ ತುಲನಾತ್ಮಕ ಪತ್ರಿಕೋಧ್ಯಮ ಧರ್ಮದ ವಿಷಯವಾಗಿ ಅವರ ಸೈದ್ಧಾಂತಿಕತೆ, ಮೌಲ್ಯಗಳ ಕುರಿತು ಬಹಳಷ್ಟು ತಿಳಿಸಿದರು.   ಪಾ.ವೆಂ ರವರ ಪ್ರಬಂಧಗಳ ವಿಶೇಷತೆಯಿಂದ ಹಿಡಿದು ಅವರ ಸಾಧನೆಯ ಹತ್ತು ಹಲವು ಕೃಷಿಯನ್ನು ಸಂದರ್ಭ ಸಹಿತ ಆಕರ್ಷಕ ವಾಗಿ ಕಟ್ಟಿಕೊಟ್ಟರು.

Facebook Link Address:

https://m.facebook.com/100085636043383/videos/1128950227799174/?mibextid=Nif5oz

ಈ ಕಾರ್ಯಕ್ರಮ ಯೂ ಟೂಬ್ ನಲ್ಲಿ ಲಭ್ಯವಿದ್ದು ಅದಕ್ಕಾಗಿ ಶ್ರಮಿಸಿದವರು ಶ್ರೀ ಶಿವಸುಬ್ರಮಣ್ಯ ರವರು, ಪತ್ರಕರ್ತರು  ಮತ್ತು ಶ್ರೀ ಸುಧೀರ್ ರವರು , ಸಂಘ ಪರಿವಾರದವರು.

 ಪ್ರಾರ್ಥನೆ: ಶ್ರೀಮತಿ ಮಾಯಾ ಮತ್ತು ಶ್ರೀಮತಿ  ಶಾಲಿನಿ ರವರು


ನಿರೂಪಣೆ ನಿರ್ವಹಣೆ :ಶ್ರೀಮತಿ ಜ್ಯೋತಿ ಗಿರಿ ರವರು

ಭಾಗವಹಿಸಿದ ಸಾಹಿತ್ಯಾಭಿಮಾನಿಗಳೆಲ್ಲರಿಗೂ ಧನ್ಯವಾದಗಳು

ಶಶಿಕಲಾ ಆರ್

ಕಾರ್ಯದರ್ಶಿ

No comments:

Post a Comment