ಇಬ್ಬರು ದರೋಡೆಕೊರರಿಂದ ಬ್ಯಾಂಕ್ 🏠 ಒಂದರಲ್ಲಿ ದರೋಡೆ ನಡೆದಿತ್ತು.
ಒಬ್ಬ ದರೊಡೆಕೋರ ಕೂಗಿ ಹೇಳಿದ:- "ಯಾರೊಬ್ರೂ ಒಂದು ಚೂರೂ ಅಲ್ಲಾಡಬೇಡಿ. ನಿಂತಲ್ಲೇ ನಿಲ್ಲಿ. ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ, ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು. ಹುಷಾರ್"...
( ಇದನ್ನು ಮ್ಯಾನೇಜ್ಮೆಂಟ್ ನಲ್ಲಿ "ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್" ಎನ್ನುತ್ತಾರೆ. ಅಂದ್ರೆ, ಯೋಚಿಸುವ ರೀತಿಯಲ್ಲಿ ವಿಶೇಷತೆ. )
ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು...
ಒಬ್ಬ ಮಹಿಳೆ ಮಾತ್ರ ಅವರ ಮಾತು ಕೇಳದೇ ಮುಂದೆ ಬರಲು ಯತ್ನಿಸಿದಳು. ಆಗ ಆ ದರೊಡೆಕೋರ ಹೇಳಿದ ಸರಿಯಾಗಿ ನಾನು ಹೇಳಿದಂತೆ ನಡೆದುಕೊ. ಇಲ್ಲಿ ದರೋಡೆ ನಡೆಯುತ್ತಿದೆ ರೇಪ್ ಅಲ್ಲ...
(ಇದನ್ನು ಬೀಯಿಂಗ್ ಪ್ರೊಫೆಷನಲ್ ಅಂತಾರೆ. ಅಂದರೆ ಮಾಡಬೇಕಾದ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು. ಬೇರೆ ಪ್ರಚೋದನೆಗೆ ಒಳಗಾಗದಿರುವುದು...)
ದರೋಡೆ ಮುಗಿಸಿ ಹಣದೊಂದಿಗೆ ಮನೆಗೆ ಮರಳಿದಾಗ ಏನೂ ಓದದ ಸಣ್ಣ ಕಳ್ಳ ಹೆಚ್ಚು ಓದಿದ್ದ ದೊಡ್ಡ ಕಳ್ಳನಿಗೆ "ಕದ್ದ ಹಣ ಎಷ್ಟಿದೆ ಅಂತ ಎಣಿಸೋಣ" ಅಂದ...
ಅದಕ್ಕೆ ದೊಡ್ಡ ಕಳ್ಳ (6 ನೆ ಕ್ಲಾಸ್ ಓದಿದ್ದ) ಹೇಳಿದ "ಇಷ್ಟೊಂದು ದುಡ್ಡು ಎಣಿಸೋಕೆ ಪೂರ್ತಿ ದಿನ ಬೇಕು ಅದರ ಬದಲು ನ್ಯೂಸ್ ನೋಡಿದ್ರೆ ಅವ್ರೇ ಹೇಳ್ತಾರೆ ಬಿಡು. ಎಷ್ಟಿದೆ ಅಂತ" ಅಂದ..
ಇದು ಅನುಭವ (expeerience) ಈಗಿನ ಕಾಲಕ್ಕೆ ಅಗತ್ಯವಾಗಿರುವ ಗುಣ...)
ಇದಾದನಂತರ ಬ್ಯಾಂಕ್ ಮ್ಯಾನೇಜರ್ superviser ಗೆ ಹೇಳಿದ "ಪೊಲೀಸ್ ಗೆ ಫೋನ್ ಮಾಡೋಣ" ಅಂತ. ಆಗ superviser ಹೇಳಿದ "ತಡೆಯಿರಿ. ಅದಕ್ಕೂ ಮೊದಲು ನಾವು ಈಗಾಗಲೇ ಸ್ವಂತಕ್ಕೆ 70 ಲಕ್ಷ ಬಳಸಿಕೊಂಡಿದ್ದೇವೆ ಅದರ ಜೊತೆ ಇನ್ನೂ 10 ಲಕ್ಷ ತೆಗೆದುಕೊಂಡು ಅಮೇಲೇ ಪೊಲೀಸ್ ಕರೆಸಿದ್ರೆ ಒಳ್ಳೆದು ಅಲ್ವೇ"... ಅಂದ......
( ಇದನ್ನು ಸ್ವಿಮ್ ವಿಥ್ ದ ಟೈಡ್ ಅಂದ್ರೆ ಅಲೆಯ ದಿಕ್ಕಿನಲ್ಲಿ ಈಜುವುದು ಅಂತ. ಎಂತಹದೇ ಕೆಟ್ಟ ಪರಿಸ್ಥಿತಿಗಳನ್ನೂ ನಮ್ಮ ಅನುಕೂಲವಾಗುವಂತೆ ಪರಿವರ್ತಿಸುವುದು ಅಂತ..)
ಮರುದಿನ ಎಲ್ಲಾ ನ್ಯೂಸ್ ಚಾನಲ್ ನಲ್ಲಿ ಬ್ರೇಕಿಂಗ್ ನ್ಯೂಸ್ "ಬ್ಯಾಂಕಿನಿಂದ 1 ಕೋಟಿ ರೂಪಾಯಿ ಹಣ ದರೋಡೆ" ಅಂತ ಸುದ್ದಿ......
ಕಳ್ಳರು ಗಾಬರಿಯಿಂದ 10 ಸಾರಿ ಎಣಿಸಿದರೂ ಇದ್ದಿದ್ದು 20 ಲಕ್ಷ ಮಾತ್ರ.. ಅವರಿಗೆ ಅರಿವಾಗಿದ್ದೇನಂದ್ರೆ ನಾವು ಪ್ರಾಣ ಪಣಕ್ಕಿಟ್ಟು 20 ಲಕ್ಷ ಕದ್ದೆವು ಆದ್ರೆ ಬ್ಯಾಂಕ್ ಮ್ಯಾನೇಜರ್ & superviser ಏನೂ ಕಷ್ಟ ಪಡದೆ 80 ಲಕ್ಷ ಗಳಿಸಿದರು...
( ನೀತಿ : ಒಬ್ಬ ಕಳ್ಳ ನಾಗುವುದಕ್ಕಿಂತ educated ಆಗುವುದು ಉತ್ತಮ ಆಯ್ಕೆ....
Knowledge is as worth as gold....
ಈ ಪ್ರಪಂಚದಲ್ಲಿ ಜ್ಞಾನ ಕ್ಕಿಂತ ಬೆಲೆ ಬಾಳುವ ಶಕ್ತಿ...ಯಾವುದೂ ಇಲ್ಲ ...
From WhatsApp
No comments:
Post a Comment