ವಾಟ್ಸ್ ಆಪ್ ಕೃಪೆ....
My Father with my sisters |
ವೃದ್ಧಾಪ್ಯದ ಜೊತೆಗೆ..
ಸ್ವತಃ ವೃದ್ಧಾಪ್ಯ ಸಹಿಸಿಕೊಂಡರೆ ಒಂದು ಉದ್ವೇಗವಿಲ್ಲದ ಜೀವನ ನಮದಾಗುತ್ತೆ.
ಎಲ್ಲ ಪ್ರಾಯಕ್ಕೂ ಬೇರೆಬೇರೆಯದೇ ಸೌಂದರ್ಯವಿದೆ. ಅದರ ಆನಂದವನ್ನು ಅನುಭವಿಸೋಣ.
ಕೂದಲಿಗೆ ಬಣ್ಣ ಬೇಕೋ, ಹಚ್ಚಿಕೊಳ್ಳಿ...ತೂಕ ಕಡಿಮೆಯಾಗಬೇಕೋ, ಮಾಡಿಕೊಳ್ಳಿ...
ಮನಕ್ಕೆ ಖುಷಿ ಕೊಡುವ ಬಟ್ಟೆ ಬೇಕೋ, ಹಾಕಿಕೊಳ್ಳಿ...ಮಕ್ಕಳಂತೆ ಆಡಿಕೊಂಡಿರಿ.
ಒಳ್ಳೆಯದನ್ನೇ ಯೋಚಿಸಿ. ಒಳ್ಳೆಯ ವಾತಾವರಣ ರೂಪಿಸಿಕೊಳ್ಳಿ.
ಕನ್ನಡಿಯಲ್ಲಿ ಕಾಣುವ ಅಸ್ತಿತ್ವವನ್ನು ಸ್ವೀಕರಿಸಿ.ಯಾವ ಕ್ರೀಮೂ ನಿಮ್ಮನ್ನು ಬೆಳ್ಳಗಾಗಿಸಲ್ಲ....
ಯಾವ ತೈಲವೂ ನಿಮ್ಮ ಕೂದಲು ಉದ್ದಗೊಳಿಸಲ್ಲ....
ಯಾವ ಸಾಬೂನೂ ಮಕ್ಕಳ ತ್ವಚೆಯಂತೆ ನಿಮದಾಗಿಸಲ್ಲ...
ಆ ಪ್ರಾಡಕ್ಟ್ ಗಳು ಬ್ರಾಂಡೆಡ್ ಆಗಿರಲಿ, ಅಥವಾ ಸಾಮಾನ್ಯದ್ದಿರಲಿ.
ಎಲ್ಲರೂ ಸಾಮಗ್ರಿ ಮಾರಲು ಸುಳ್ಳು ಹೇಳುತ್ತಾರೆ. ಅವೆಲ್ಲವೂ ನೈಸರ್ಗಿಕ ಕ್ರಿಯೆ.
ವಯಸ್ಸಾದಂತೆ ತ್ವಚೆಯಿಂದ ಕೂದಲವರೆಗೆ ಬದಲಾವಣೆ ಸಹಜ. ಹಳೆಯ ಗಾಡಿಗಳನ್ನು ರಿಪೇರಿ ಮಾಡಿ ನಡೆಸಬಹುದೇನೋ...ಹೊಸತು ಮಾಡಲು ಸಾಧ್ಯವೆ...?
ಯಾವ ಟೂತ್‌ಪೇಸ್ಟ್ ನಲ್ಲು ಉಪ್ಪೂ ಇರಲ್ಲ, ಬೇವೂ ಕೂಡ.ವ ಕ್ರೀಮಿನಲ್ಲೂ ಕೇಸರಿಯೂ ಇರಲ್ಲ.
ಎರಡು ಗ್ರಾಂ ಕೇಸರಿಗೆ ಐದು ಸಾವಿರ ಶ್ರೀಮಾನ್....!ಮೂಗು ದಪ್ಪವಿರಲಿ...ಕಣ್ಣು ಸಣ್ಣದಿರಲಿ ತೊಂದರೆಯಿಲ್ಲ...
ನೀವು ಬೆಳ್ಳಗಿಲ್ಲ...ತುಟಿಯ ಶೇಪ್ ಸರಿಯಿಲ್ಲ...ತೊಂದರೆಯಿಲ್ಲ.ನೆನಪಿಡಿ....ನಿಮ್ಮಲ್ಲಿ ಎಲ್ಲಾ ಸೌಂದರ್ಯವಿದೆ.
ನಿಮ್ಮ ಒಳಗಿನ ಸೌಂದರ್ಯ ಗುರುತಿಸಿ.ಇನ್ನೊಬ್ಬರಿಂದ ತನ್ನ ಸೌಂದರ್ಯದ ಬಗ್ಗೆ ವಾಹ್...ವಾಹ್...
ಹೇಳಿಸಿಕೊಳ್ಳುವುದಕ್ಕಿಂತ ತಾನೆ ತನ್ನ ಸೌಂದರ್ಯ ಅನುಭವಿಸುವುದು ಕ್ಷೇಮ.
My Father and My son |
ಎಲ್ಲ ಮಕ್ಕಳೂ ಏಕೆ ಸುಂದರವಾಗಿ ಕಾಣುತ್ತಾರೆಂದರೆ...ಅವರು ಛಲ ಮತ್ತು ಕಪಟವಿಲ್ಲದೆ ಮುಗ್ಧರಾಗಿರುತ್ತಾರೆ.
ದೊಡ್ಡವರಾದ ಮೇಲೆ ಇದೇ ಮಕ್ಕಳು ಛಲ ಮತ್ತು ಕಪಟದ ಜೀವನ ನಡೆಸುತ್ತ ಮುಗ್ದತೆ ತೊರೆಯುತ್ತಾರೆ.
ಹಣ ಖರ್ಚುಮಾಡಿ ಸೌಂದರ್ಯ ಖರೀದಿಸುವ ಪ್ರಯಾಸ ಪಡುತ್ತಾರೆ.
ಅದಕ್ಕೆ... ಮನಸ್ಸಿನ ಸೌಂದರ್ಯದ ಬಗ್ಗೆ ಧ್ಯಾನಿಸಿ.ಹೊಟ್ಟೆ ಬಂತೋ ಏನೂ ತೊಂದರೆಯಿಲ್ಲ...
ನಿಮ್ಮ ಶರೀರ ಪ್ರಾಯದ ಮೇಲೆ ಬದಲಾಗುತ್ತಿರುತ್ತೆ.ತೂಕವೂ ಹಾಗೇ ಮೇಲೆ ಕೆಳಗಾಗಬಹುದು....
ಅರ್ಥ ಮಾಡಿಕೊಳ್ಳಿ.
ಇಂಟರ್ನೆಟ್ ಸೋಷಿಯಲ್ ಮೀಡಿಯಾ ತರತರಹದ ಉಪದೇಶಗಳ ಸಾಗರ....ಅದು ತಿನ್ನಿ...ಇದು ಬೇಡ...
ತಣ್ಣಗಿರುವುದನ್ನು ಬಳಸಿ...ಬಿಸಿ ನೀರು ಕುಡೀರಿ....ಬೆಳಿಗ್ಗೆ ನಿಂಬೂರಸ ಕುಡೀರಿ...ರಾತ್ರಿ ಬೆಚ್ಚನೆ ಹಾಲು ಕುಡೀರಿ...
ಜೋರಾಗಿ ಉಸಿರಾಡಿ...ಉದ್ದ ಶ್ವಾಸ ತಗೊಳಿ...ಎಡದಿಂದ ಮಲಗಿ...ಬಲದಿಂದ ಏಳಿ..ಹಸಿರು ಸೊಪ್ಪು ತಿನ್ನಿ...
ಪ್ರೋಟೀನ್ ಇರೋ ಬೇಳೆ......ಹಾಗೆ... ಹೀಗೆ...ಎಲ್ಲಾ.
ಆ ರೀತಿಯ ಉಪದೇಶ ಒಂದು ದಿನ ಓದಲು ಕುಳಿತರೆ,.......ಕೊನಗೆ ಗೊತ್ತಾಗುವುದು...ಈ ಜೀವನವೇ ನಶ್ವರ.
ತಿನ್ನಲು ಏನೂ ಇರಲ್ಲ..ಬದುಕಲು ಸಾಧ್ಯವಿಲ್ಲ.ಅದರಲ್ಲೇ ಬಿದ್ದು ಮನಸ್ಸು ಅಸ್ವಸ್ಥವಾಗುತ್ತೆ.
ಆರೋಗ್ಯ ದೂರಾಗಿ ಮನಸ್ಸು ಒತ್ತಡಕ್ಕೊಳಗಾಗುತ್ತೆ...ನಾವು ಹುಟ್ಟಿರೋದೇ ಸಾಯೋದಕ್ಕೆ...
ಎಂದಾದರೂ ಅದು ಮಾತ್ರ ನಿಶ್ಚಿತ....ಇಲ್ಲಿಯವರೆಗೆ ಮಾರ್ಕೆಟಿನಲ್ಲಿ ಅಮೃತ ಮಾರಲು ಶುರುಮಾಡಿಲ್ಲ...!
ಅದಕ್ಕಾಗಿ ಎಲ್ಲವನ್ನೂ ಸರಿಯಾಗಿ ತಿನ್ನಿ....ಸ್ವಲ್ಪ ಸ್ವಲ್ಪ ಸ್ವಾದದೊಂದಿಗೆ ತಿನ್ನಿ.
ಒಳ್ಳೆಯ ಭೋಜನದಲ್ಲೂ ಖುಷಿಯಿದೆ...ಮನಸ್ಸನ್ನು ಕೊಂದು ಖುಷಿಯಿಂದಿರಲು ಸಾಧ್ಯವಾ...?
ಸಾಧ್ಯವಾದಷ್ಟು ನಡೀರಿ...ಅಲ್ಪಸ್ವಲ್ಪ ವ್ಯಾಯಾಮ ಮಾಡಿ...
ಬೆಳಿಗ್ಗೆ ರಾತ್ರಿ ಖುಷಿಯ ಹರಟೆಯೊಡನೆ ಅಡ್ಡಾಡಿ...ಕುಣಿದಾಡಿ...ಖುಷಿಯಾಗಿರಿ.
ಶರೀರಕ್ಕಿಂತಲೂ ಮನಸ್ಸನ್ನು ಸುಂದರವಾಗಿಟ್ಟುಕೊಳ್ಳಿ.
My Grandmother |
(ಮೂಲ: ನಾಸಿರ್ ಖಾನ್ ಕವನ. ಅನುವಾದ: ಶ್ರೀ ಕೆ. ಜಿ. ಕೃಷ್ಣಾನಂದ)
ಫೆಬ್ರವರಿ 8, 2023
No comments:
Post a Comment