ಬುಧವಾರ, ಫೆಬುವರಿ 1, 2023
ಸುಲೋಚನ ಅತ್ತೆ, ( ಬಿ. ವಿ. ಕೆದಿಲಾಯರ ಪತ್ನಿ) ಇಂದು ಸಂಜೆ 4 ಗಂಟೆಗೆ ನಿಧನರಾದರೆಂದು ತಿಳಿಸಲು ಅತೀವ ದುಃಖವೆನಿಸುತ್ತಿದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ.
..........ರಮೇಶ್ ಭಟ್ ಅವರಿಂದ ಸುದ್ದಿ
ಬಿ ವಿ ಕೆದಿಲಾಯರಿಗೆ ಈ ಇಳಿ ವಯಸ್ಸಿನಲ್ಲಿ ಪತ್ನಿ ವಿಯೋಗ ಆಗಿರುವುದು ಅತೀ ದುಃಖವೆನಿಸುತ್ತದೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥನೆ.
.......ಪ್ರತಿಕ್ರಿಯೆ - ಜಯರಾಮ ಸೋಮಯಾಜಿ
ಕೆದಿಲಾಯರೇ
ನಿಮ್ಮ ಧರ್ಮ ಪತ್ನಿ ಯವರು ಇಹಲೋಕ ತ್ಯಜಿಸಿರುವುದು ಕೇಳಿ ದುಃಖವಾಯಿತು. ಅವರ ಆತ್ಮಕ್ಕೆ ಚಿರಶಾಂತಿ, ಸದ್ಗತಿ ಯನ್ನು ಶ್ರೀ ದೇವರು ಕರುಣಿಸಲಿ ಎಂದು ಪ್ರಾರ್ಥಿಸುವೆವು.
ನಿಮಗೆ ಸಾಂತ್ವನ ಹೇಳಲು ನಾನು ಸಣ್ಣವ. ಆದರೂ ಒಂದು ಸಂತಾಪದ ಮಾತು.
....... ಸಂದೇಶ ..... ಜಯರಾಮ ಸೋಮಯಾಜಿ
ನಾಳೆ, ತಾ.3.2.2023ರಂದು ಬೆಳಿಗ್ಗೆ 9ಗಂಟೆಗೆ ಸುಲೋಚನ ಅತ್ತೆ ಅವರ ಪಾರ್ಥಿವ ಶರೀರಕ್ಕೆ ಶಾಸ್ತ್ರ ವಿಧಿಗಳನ್ನು ಪೂರೈಸಿ, 10.00ಕ್ಕೆ ಮನೆಯಿಂದ ಹೊರಟು, ಪೀಣ್ಯ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಿದ್ದಾರೆ.
......ರಮೇಶ್ ಭಟ್
ನಾವು (ನಾನು, ನಳಿನಿ) ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಪೀಣ್ಯ ಹತ್ತಿರದ ನಾಗಸಂದ್ರ ದಲ್ಲಿರುವ ಕೆದಿಲಾಯರ ಮನೆಗೆ ಹೋಗಿ, ಪಾರ್ಥಿವ ಶರೀರದ ಧಾರ್ಮಿಕ ವಿಧಿ ವಿಧಾನಗಳನ್ನು ವೀಕ್ಷಿಸಿ , ನಂತರ ಪೀಣ್ಯದ ರುದ್ರಭೂಮಿ (Crematorium) ಗೆ ತೆರಳಿ, ಅಲ್ಲಿಯ ಶಾಸ್ತ್ರ ವಿಧಿಗಳನ್ನು ನೋಡಿ, ಪಾರ್ಥಿವ ಶರೀರವನ್ನು ಬೆಂಕಿಯ ಒಲೆಗೆ ಕಳುಹಿಸಿದ ನಂತರ ವಾಪಸ್ಸು ಮನೆಗೆ ಬಂದು ಸ್ನಾನಾದಿಗಳನ್ನು ಪೂರೈಸಿ ಊಟ ಮಾಡಿದೆವು.
ಪುರೋಹಿತ ಅನಂತ ಉಪಾದ್ಯರು ಶಾಸ್ತ್ರ ವಿಧಿಗಳನ್ನು ಕ್ರಮ ಪ್ರಕಾರವಾಗಿ ನೆರವೇರಿಸಿದ್ದರು.
ಬಿ. ವೆಂಕಟಕ್ರಷ್ಣ ಕೆದಿಲಾಯರಿಗೆ ಓರ್ವ ಪುತ್ರ ಶಶಿ, ಅಮೇರಿಕಾದಲ್ಲಿ ಕೆಲಸ ಮಾಡುತ್ತಿರುವ ನಿವಾಸಿ, ಈರ್ವರು ಪುತ್ರಿಯರು ಜ್ಯೋತಿ (ಡಾಕ್ಟರ್), ಗಂಡ ಡಾಕ್ಟರ್ ಶ್ರೀನಿವಾಸ್, ಮತ್ತು ಆಶಾ ಮತ್ತು ಅವಳ ಗಂಡ , ಬೆಂಗಳೂರಿನಲ್ಲಿ ಮನೆ, ವಾಸಿಸುತ್ತಿರುವರು.
ಕೆದಿಲಾಯರು ವಿದ್ವಾಂಸರು, ಅವರ ತಂದೆ, ಶ್ರೀನಿವಾಸ ಕೆದಿಲಾಯರು (ಶಾಸ್ತ್ರಿಗಳು) ನನ್ನ ಅಮ್ಮನ ಹಿರಿಯ ಸಹೋದರ, ಉಡುಪಿಯ ಹತ್ತಿರದ ಬಾಳೆಕುದುರಿನಲ್ಲಿ ಮನೆ ಇತ್ತು. ಅದು ನನ್ನ ಅಜ್ಜನ ಮನೆಯಾಗಿತ್ತು.
ಬಾಲ್ಯದಲ್ಲಿ ಅಮ್ಮನೊಡನೆ ದೋಣಿಯಲ್ಲಿ ಹೊಳೆ ದಾಟಿಕೊಂಡು, ಶ್ರಾದ್ಧ ಇತ್ಯಾದಿ ಕಾರ್ಯಕ್ರಮಗಳಿಗೆ ಹೋದ ನೆನಪುಗಳು.
2014 ರಲ್ಲಿ ಶಶಿಯ ಮಗನ ಬೆಂಗಳೂರಿನಲ್ಲಿ ಬ್ರಹ್ಮೋಪದೇಶ ಸಂದರ್ಭದಲ್ಲಿ ತೆಗೆದ ಫೋಟೋ.
No comments:
Post a Comment