Wednesday, February 8, 2023

MANGALAARATHI (ಮಂಗಳಾರತಿ)

 ಮಹಾ ಮಂಗಳಾರತಿ 


ಭಗವಂತನಿಗೆ ಭಗವದ್ಭಕ್ತರು ವಿವಿಧ ರೀತಿಯ ಆರತಿಯಿಂದ ಸಂತುಷ್ಟನಾಗುತ್ತಾನೆಂದು ಹಿಂದಿನಿಂದಲೂ ನಡೆದು ಬಂದ ಪಧ್ಧತಿ ಎಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಮನಸ್ಸು ಶ್ರದ್ದಾ ಭಕ್ತಿ ಬಹು ಮುಖ್ಯ ಬನ್ನಿ ಸಂಖ್ಯೆಯ ದೃಷ್ಟಿಯಲ್ಲಿ ಆರತಿಯಲ್ಲಿ ಯಾವ ಫಲ ತಿಳಿಯೋಣ.

1. ಏಕಾರತಿ ( ಒಂದು) ‌‌‌‍- ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ.

2. ದ್ವಿ ಆರತಿ( ಎರಡು)  - ಮಾಡುವುದರಿಂದ ದಾಂಪತ್ಯ ಸಖ್ಯ ಫಲ ದೊರೆಯುತ್ತದೆ.

3. ತ್ರಯ ಆರತಿ( ಮೂರು)  - ಮಾಡುವುದರಿಂದ ಕುಟುಂಬ ಅಭಿವೃದ್ಧಿಯುಂಟಾಗುತ್ತದೆ.

4. ಪಂಚ ಆರತಿ( ಐದು)  - ಮಾಡುವುದರಿಂದ ಪರಿಸರದಲ್ಲಿ ಸಸ್ಯವೃದ್ದಿ ಆಗುತ್ತದೆ.

5. ನವ ಆರತಿ ( ಒಂಬತ್ತು) - ಮಾಡುವುದರಿಂದ ಇಡೀ ವರ್ಷ ವೃದ್ದಿ ಫಲ ದೊರೆಯುತ್ತದೆ.

6. ಏಕಾದಶ ಆರತಿ( ಹನ್ನೊಂದು)  - ಮಾಡುವುದರಿಂದ ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.

7. ದ್ವಾದಶ ಆರತಿ( ಹನ್ನೆರಡು)  - ಮಾಡುವುದರಿಂದ ಸುಖ ನೆಮ್ಮದಿಯುಂಟಾಗುತ್ತದೆ.


8. ಷೋಡಶ ಆರತಿ( ಹದಿನಾರು)  - ಮಾಡುವುದರಿಂದ ವಿಶೇಷ ಧನಲಾಭವುಂಟಾಗುತ್ತದೆ.

9.  ಏಕವಿಂಶತಿ( ಇಪ್ಪತ್ತೊಂದು)  ಮಾಡುವುದರಿಂದ ರಾಜ್ಯಲಾಭ ದೊರೆಯುತ್ತದೆ.

10. ಚತುರ್ವಿಂಶತಿ ಆರತಿ( ಇಪ್ಪತ್ನಾಲ್ಕು) - ಉತ್ತಮ ಮಳೆ ಬೆಳೆ ಉಂಟಾಗುತ್ತದೆ.

11. ನಕ್ಷತ್ರ ಆರತಿ( ಇಪ್ಪತ್ತೇಳು)- ಸಕಲ ದೇವತೆಗಳು ಅನುಗ್ರಹಿಸುತ್ತಾರೆ.

12. ನಾಗ ಆರತಿ ಮಾಡುವುದರಿಂದ ಉತ್ತಮ ಸಂತಾನ ವೃದ್ಧಿಯಾಗುತ್ತದೆ.

13. ಕೂರ್ಮ ಆರತಿ- ಮಾಡುವುದರಿಂದ ಧೈರ್ಯ ಸ್ತೈರ್ಯ ಧೃಡತೆವುಂಟಾಗಿ ಭಗವಂತನ ಪೂರ್ಣಾನುಗ್ರಹವಾಗುತ್ತದೆ.

14. (ನೂರೆಂಟು) ಅಷ್ಟೋತ್ತರ ಶತದೀಪ - ಲಕ್ಷ್ಮೀ ನಾರಾಯಣ ರ ಸಂಪೂರ್ಣ ಕೃಪಾಕಟಾಕ್ಷವುಂಟಾಗುತ್ತದೆ


ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ.

From WhatsApp

9/2/2023

No comments:

Post a Comment