Wednesday, April 5, 2023

SHRADDHANJALI - C. R SATYA

 Tuesday, 4th April 2023

C R SATYA


ಒಂದು ವಾರದ ಹಿಂದೆ ಸತ್ಯ ಅವರು ಕಳುಹಿಸಿದ ಸಂದೇಶ:(27/3/2023)

Dear All, you may recall I was under remission last 3 years after I had a bout of Lymphoma-a type of blood cancer. Unfortunately, it has reappeared again now and I need to undergo a 2nd round of treatment from this coming Wednesday . I will be helpless to attend any meeting/ function until I am cleared- which may take a few weeks or months. Until then, I will contact the group if there is anything to convey. Kindly don't call me or my wife on the status, as it would be difficult to analyse my status before treatment and evaluation are over. Thank you all for your cooperation and understanding. Sathya

4/4/2023 ಸತ್ಯ ಅವರ ಮಗಳು ಸೌಮ್ಯ ಅವರ ಸಂದೇಶ:

[10:38 PM, 4/4/2023] C R Satya:  am Sowmya, Sathya's daughter. With a heavy heart,  I would like to inform you that my father passed away at Baptist Hospital in the evening today.

[10:38 PM, 4/4/2023] C R Satya: Last respects on Thursday 8am onwards at our residence


ಶಿವರಾಮ ಕಾರಂತ ವೇದಿಕೆಯ ಕಾರ್ಯಕ್ರಮಗಳಲ್ಲಿ ಶ್ರೀ ಸಿ. ಅರ್. ಸತ್ಯ.

ಸಂತಾಪ ಸಂದೇಶಗಳು:

ಜಯರಾಮ ಸೋಮಯಾಜಿ .

ಶಿವರಾಮ ಕಾರಂತ ವೇದಿಕೆಯ ಸಕ್ರಿಯ ಸದಸ್ಯರಾಗಿದ್ದ ಸಾಹಿತಿ, ವಿಜ್ನಾನಿ, ಸಹೃದಯರು ಶ್ರೀ ಸಿ ಆರ್ ಸತ್ಯ ಅವರು ನಿನ್ನೆ ತಾ. 4/4/2023 ರಂದು ಇಹಲೋಕ ತ್ಯಜಿಸಿದ್ದಾರೆ. 

 ವೇದಿಕೆಯು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಯನ್ನು ಸಮರ್ಪಿಸುತ್ತದೆ.

ಶಶಿಕಲಾ ಸಿ. ಕಾರ್ಯದರ್ಶಿ, ಶಿವರಾಮ ಕಾರಂತ ವೇದಿಕೆ:


ಶಿವರಾಮ ಕಾರಂತ ವೇದಿಕೆ(ರಿ), ಆರ್ ಟಿ. ನಗರ

ವೇದಿಕೆ ತನ್ನ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿದೆ

ಬೆಂಗಳೂರಿನ,ಆನಂದ ನಗರದ ನಿವಾಸಿ, "ಆಚೆ ಮನೆ ಸುಬ್ಬಮ್ಮನವರ್ದು ಏಕಾದಶಿ ಉಪವಾಸ" ಪುಸ್ತಕ (ಹಾಸ್ಯ) ಪ್ರಕಟಿಸಿದ್ದರು. ಹಿರಿಯ ಸಾಹಿತಿ ಎ. ಆರ್ ಕೃಷ್ಣ ಶಾಸ್ತ್ರಿ ಗಳ ಮೊಮ್ಮಗ ಶ್ರೀಯುತ ಸಿ.ಆರ್ ಸತ್ಯ ರವರು.

60ರ ದಶಕದಲ್ಲಿ ಇಸ್ರೋ ನ ಪ್ರಖ್ಯಾತ ವಿಜ್ಞಾನಿ ಡಾ. ಸಿ.ಆರ್ ಸತ್ಯರವರು ನೆನ್ನೆ ಮಂಗಳವಾರ ರಾತ್ರಿ ಏಪ್ರಿಲ್ 4 ನೇ ತಾರೀಖಿನಂದು ಇಹ ಲೋಕವನ್ನು ತ್ಯಜಿಸಿದ್ದಾರೆ.

ಅವರ ಧರ್ಮ ಪತ್ನಿ ಶ್ರೀಮತಿ ಶ್ಯಾಮಲಾ ಮೇಡಂ ಮತ್ತು ಕುಟುಂಬದ ವರಿಗೆ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ

🙏ಭಾವಪೂರ್ಣ ಶ್ರದ್ಧಾಂಜಲಿಗಳು

ಶ್ರೀ ವೀರ ಶೇಖರ ಸ್ವಾಮಿ, ಉಪಾಧ್ಯಕ್ಷರು, ಶಿವರಾಮ ಕಾರಂತ ವೇದಿಕೆ:

ನಿಜಕ್ಕೂ ಅತ್ಯಂತ ಆಘಾತಕಾರಿ ಸುದ್ದಿ, ನಮ್ಮ ಪ್ರೀತಿಯ ಶ್ರೀ  C R ಸತ್ಯ ಸಾರ್ ಇನ್ನಿಲ್ಲಾ ಎನ್ನುವುದೇ ನಂಬಲು ಸಾಧ್ಯವಿಲ್ಲ. ಇಂತಹ ಸಹೃದಯ , ಸನ್ನಡತೆಯ , ಸದಾ ನಗುಮುಖದ ಅವರ ನೆನಪು ನಮ್ಮನ್ನು ಕಾಡುತ್ತದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರ ಅಪಾರ ಸೇವೆಯನ್ನು ನಮ್ಮ ವೇದಿಕೆ  ಸದಾ ನೆನೆಯುತ್ತದೆ. 

ಅಕ್ಕನಿಗೆ ಭಗವಂತ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ

ಮಹಾದೇವಪ್ಪ ಬಿ.

ಹೃದಯ ಹಿಂಡಿದಂತಾಯಿತು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ 

ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಶಾಂತಿ ಶಾಂತಿ 

ಜಯರಾಮ ಅಡಿಗ:

ಬಹಳ ಸಮಯದ ಅನಂತರ ಶಿವರಾಮ ಕಾರಂತ ವೇದಿಕೆಯ ಪಾವೆಂ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಸಿಕ್ಕಿ ಮನೆಗೊಮ್ಮೆ ಬನ್ನಿ ಎಂದು ಆಹ್ವಾನಿಸಿದಾಗ  ಅದೇ ಕೊನೆಯ ಭೇಟಿ ಅನಿಸಿರಲೇ ಇಲ್ಲ. 

ಮಾನ್ಯ ಸಿ.ಆರ್.ಗೆ ಶ್ರದ್ಧಾಂಜಲಿ.

ಶ್ರೀ ತಿರು ಶ್ರೀಧರ್ ಅವರಿಂದ "ಸಂಸ್ಕ್ರತಿ - ಸಲ್ಲಾಪ" ಜಾಲತಾಣದಲ್ಲಿಯ ಲೇಖನ:


ಸಿ.ಆರ್.ಸತ್ಯ
ಮಹಾನ್ ತಂತ್ರಜ್ಞ, ಕನ್ನಡದ ಬರಹಗಾರ ಮತ್ತು ಪರಿಸರ ನಿಷ್ಠಾವಂತ ಕಾರ್ಯಕರ್ತರಾಗಿ ಹೆಬ್ಬಾಳ ಕೆರೆ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಸಿ. ಆರ್. ಸತ್ಯ ನಿನ್ನೆ 2023ರ ಏಪ್ರಿಲ್ 4ರಂದು ನಿಧನರಾಗಿದ್ದಾರೆ. ಶ್ರೀಯುತರು ನವ ಕನ್ನಡದ ಸಾಹಿತಿಗಳ ಪಡೆಯ ನಿರ್ಮಾಪಕರಲ್ಲಿ ಪ್ರಮುಖರಾದ ಮಹಾನ್ ಸಾಹಿತಿ ಎ. ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮಗ.
ಚಿನ್ಯಾ ರಾಮಚಂದ್ರರಾವ್ ಸತ್ಯ ಅವರು 1942 ಆಗಸ್ಟ್ 12 ರಂದು ಜನಿಸಿದರು. 1964ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ ಪದವಿಯನ್ನು ಗಳಿಸಿದರು. 1965ರಲ್ಲಿ ಮುಂಬೈನ ಭಾಭಾ ಅಟಾಮಿಕ್ ಎನರ್ಜಿ ಎಸ್ಟಾಬ್ಲಿಷ್‌ಮೆಂಟ್‌ನಿಂದ ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ತರಬೇತಿ ಗಳಿಸಿದರು.
ಸತ್ಯ ಅವರು ತಿರುವನಂತಪುರಂನ ತುಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ರಾಕೆಟ್ ಇಂಜಿನಿಯರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೌಂಡಿಂಗ್ ರಾಕೆಟ್‌ಗಳು, ಪೇಲೋಡ್ ಏಕೀಕರಣ ಮತ್ತು ಪೇಲೋಡ್ ಅರ್ಹತೆಗೆ ಅಗತ್ಯವಿರುವ ಎಲ್ಲಾ ರಚನಾತ್ಮಕ ಮತ್ತು ಪೇಲೋಡ್ ಸಾಧನಗಳನ್ನು ಅವರು ವಿನ್ಯಾಸಗೊಳಿಸಿದರು.
ಮುಂದೆ ಸತ್ಯ ಅವರು ಕಾಂಪೋಸಿಟ್ ನೋಸ್‌ಕೋನ್‌ಗಳು ಮತ್ತು ರಾಕೆಟ್ ಮೋಟಾರ್ ಟ್ಯೂಬ್‌ಗಳ ಕ್ಷೇತ್ರಕ್ಕೆ ಬಂದರು. ಈ ಲೇಖನಕ್ಕೆ ಸಂಬಂಧಿತ ಚಿತ್ರಗಳಲ್ಲಿ ತುಂಬಾ ರಾಕೆಟ್ ನಿಲ್ದಾಣದಲ್ಲಿ ರಾಕೆಟ್ನೋಸ್ಕೋನ್ ಅನ್ನು ಹೊತ್ತ ಬೈಸಿಕಲ್ ಪಕ್ಕದಲ್ಲಿ ನಡೆಯುತ್ತಿರುವ ಸಿ ಆರ್ ಸತ್ಯ ಅವರನ್ನು ಕಾಣಬಹುದು. ಈ ಚಿತ್ರವನ್ನು ಪ್ರಸಿದ್ಧ ಫ್ರೆಂಚ್ ಮಾನವತಾವಾದಿ ಛಾಯಾಗ್ರಾಹಕ ಹೆನ್ರಿ ಕಾರ್ಟಿಯರ್ ಬ್ರೆಸನ್ ಅವರು ತೆಗೆದಿದ್ದು ವಿಶ್ವದಾದ್ಯಂತ ಪ್ರಸಿದ್ಧಿಗೊಂಡಿದೆ. ನಂತರದಲ್ಲಿ ಸತ್ಯ ಅವರು ಕಾಂಪೊಸಿಟ್ಸ್ ತಂತ್ರಜ್ಞಾನದಲ್ಲಿ ಫೈಬರ್‌ಗ್ಲಾಸ್ ಪ್ರಯೋಗಾಲಯದ ಮುಖ್ಯಸ್ಥರಾಗಿ ಹಾಗೂ ನಂತರದಲ್ಲಿ ಕಾಂಪೋಸಿಟ್ಸ್ ವಿಭಾಗದ ಗ್ರೂಪ್ ಡೈರೆಕ್ಟರ್ ಆಗಿ ಪೂರ್ಣ ಸಮಯ ಕೆಲಸ ಮಾಡಿದರು.
ಇಸ್ರೋದಲ್ಲಿದ್ದಾಗ, ಸತ್ಯ ಅವರು ತಮ್ಮ ಕೆಲಸದ ಜವಾಬ್ದಾರಿಯ ಭಾಗವಾಗಿ ಟಾಟಾ ಗ್ರೂಪ್‌ಗೆ ಸಲಹೆಗಾರರಾಗಿದ್ದರು. ಆ ಮೂಲಕ ಅವರು ಟಾಟಾ ಸಂಸ್ಥೆಗೆ ಬೆಂಗಳೂರಿನಲ್ಲಿ ಕಾಂಪೋಸಿಟ್ಸ್‌ನಲ್ಲಿ ಟಾಟಾ ಅಡ್ವಾನ್ಸ್‌ಡ್ ಮೆಟೀರಿಯಲ್ಸ್ ಲಿಮಿಟೆಡ್‌ ಎಂಬ ವಾಣಿಜ್ಯ ಉದ್ಯಮವನ್ನು ಸ್ಥಾಪಿಸಲು ನೆರವಾದರು. 1989ರಲ್ಲಿ ಇಸ್ರೋಗೆ ರಾಜೀನಾಮೆ ನೀಡಿದ ನಂತರ ಸತ್ಯ ಅವರು ಆ ಸಂಸ್ಥೆಗೆ ತಂತ್ರಜ್ಞಾನದ ಹಿರಿಯ ಉಪಾಧ್ಯಕ್ಷರಾಗಿ ಸೇರಿದರು. ಆ ಜವಾಬ್ದಾರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕಂಪನಿಯನ್ನು ನಿರ್ಮಿಸಿ, ರಕ್ಷಣಾ, ದೂರಸಂಪರ್ಕ ಮತ್ತು ವೈದ್ಯಕೀಯ ಉದ್ಯಮಗಳಿಗೆ ಹೆಚ್ಚು ಅತ್ಯಾಧುನಿಕ ಸಂಯೋಜನೆಗಳನ್ನು ತಯಾರಿಸುವ ಶ್ರೇಷ್ಠ ತಂಡ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದರು.
ಸತ್ಯ ಅವರು ಅತ್ಯುತ್ತಮ ಕನ್ನಡ ಮತ್ತು ಇಂಗ್ಲಿಷ್ ಬರಹಗಾರರಲ್ಲಿ ಒಬ್ಬರಾಗಿದ್ದರು. ಇವರು ಬರೆದಿರುವ ತಾಂತ್ರಿಕ ಮತ್ತು ವೈಜ್ಞಾನಿಕ ಲೇಖನಗಳು, ಮೈಸೂರು ವಿಶ್ವ ವಿದ್ಯಾಲಯದ ವಿಶ್ವಕೋಶದಲ್ಲಿ, ರಕ್ಷಣಾ ಇಲಾಖೆಯ ಪ್ರಕಟಣೆಗಳಲ್ಲಿ, ವಿಜ್ಞಾನ ಲೋಕ ಹಾಗೂ ಉತ್ಥಾನ ಮುಂತಾದ ನಿಯತಕಾಲಿಕಗಳಲ್ಲಿ ಮತ್ತು ವೈಜ್ಞಾನಿಕ ಲೇಖನ ಸಂಕಲನಗಳಲ್ಲಿ ಮೂಡಿಬಂದಿವೆ.
ಅವರು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಹಲವು ಪುಸ್ತಕಗಳನ್ನೂ ಪ್ರಕಟಿಸಿದ್ದರು. ಇವುಗಳಲ್ಲಿ ವ್ಯಕ್ತಿಚಿತ್ರಗಳಿವೆ, ಜೀವನಾನುಭವಗಳಿವೆ, ಹಾಸ್ಯ ಸಂಕಲನಗಳಿವೆ ಮತ್ತು ಸಂಶೋಧನೆಗಳಿವೆ.
ಸತ್ಯ ಅವರು ರಚಿಸಿದ ಹಾಸ್ಯ ಕವನ ‘ಆಚೇ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ 1959ರಲ್ಲಿ ಕೊರವಂಜಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಜನಪ್ರಿಯವಾಯಿತು. ಮುಂದೆ ಅಪರಂಜಿ ಪತ್ರಿಕೆಯಲ್ಲಿಯೂ ಅವರು ಅನೇಕ ಅಣಕ ಹಾಸ್ಯ ಲೇಖನಗಳನ್ನು ಬರೆಯುತ್ತ ಬಂದಿದ್ದರು. ತಿರುವನಂತಪುರದಲ್ಲಿ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಲ್ಲುಗಳ ಮೇಲೆ ಸತ್ಯ ಅವರು ಮಾಡಿದ ಸಂಶೋಧನೆಯ ಕುರಿತಾದ ‘ಅಳಿವಿಲ್ಲದ ಸ್ಥಾವರ’ ಪುಸ್ತಕಕ್ಕೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಪ್ರಶಸ್ತಿ ಸಂದಿತು. ಇವರೇ ಮೂಡಿಸಿರುವ ಇಂಗ್ಲಿಷ್ ಅನುವಾದ ‘ಸೆಂಟಿನಲ್ಸ್ ಆಫ್ ಗ್ಲೋರಿ’ಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಸಂದಿತು.
ಸತ್ಯ ಅವರು ದೇಶದ ಹಿರಿಯ ವಿಜ್ಞಾನಿಗಳು ಹಾಗೂ ನಾಯಕರೊಡನೆ ಒಡನಾಟ, ಅನೇಕ ದೇಶಗಳಲ್ಲಿನ ಪ್ರಯಾಣ ಮತ್ತು ತಮ್ಮ ಹವ್ಯಾಸಗಳಿಂದ ಮೂಡಿಬಂದ ಕುತೂಹಲಕಾರಿ ಅನುಭವಗಳನ್ನು ‘ತ್ರಿಮುಖಿ’ ಎಂಬ ಕೃತಿಯಲ್ಲಿ ಅಭಿವ್ಯಕ್ತಿಸಿದ್ದಾರೆ.
ಸತ್ಯ ಅವರು ಬೆಂಗಳೂರಿನ ಥೋರೋ ಫೌಂಡೇಶನ್‌ನ ಸದಸ್ಯ ಟ್ರಸ್ಟಿ ಆಗಿದ್ದು, ಹೆಬ್ಬಾಳ ಕೆರೆಯನ್ನು ತಾಂತ್ರಿಕವಾಗಿ ಪುನರುಜ್ಜೀವನಗೊಳಿಸುವಲ್ಲಿ ನಾಯಕತ್ವ ವಹಿಸಿದ್ದರು. ಯೋಜನೆಯನ್ನು ಕಾರ್ಯಗತಗೊಳಿಸಲು ಸಮಸ್ತ ರೂಪುರೇಷೆಗಳ ಪರಿಕಲ್ಪನೆಗಳನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದರು. ಅದರ ಆಧಾರದ ಮೇಲೆ ಸರ್ಕಾರವು ಈ ಕೆರೆಯ ಸಂರಕ್ಷಣಾ ಕಾರ್ಯಕ್ಕೆ ಟ್ರಸ್ಟ್ ಸ್ಥಾಪಿಸಿತು. ಹೆಬ್ಬಾಳ ಕೆರೆಯನ್ನು ಪೂರ್ಣ ಸಂರಕ್ಷಿಸಿ ಅದನ್ನು ಕೆರೆಗಳ ಪ್ರಾಧಿಕಾರಕ್ಕೆ ಒಪ್ಪಿಸುವವರೆಗೂ ಸತ್ಯ ಅವರು ಆ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇಂತಹ ಮಹನೀಯರ ಕುರಿತು ಅವರು ಬದುಕಿರುವಾಗ ಅರಿಯದೆ ಅವರು ನಿಧನರಾದಾಗ ಬರೆಯುತ್ತಿರುವ ಪ್ರಾಮಾಣಿಕ ದುಃಖ ನನ್ನದಾಗಿದೆ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)

ಭಾವಪೂರ್ಣ ಶ್ರದ್ಧಾಂಜಲಿ
ಸುಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ, ಪ್ರಖ್ಯಾತ ಸಾಹಿತಿ, ವಿದ್ವಾಂಸ ಪ್ರೊ. ಎ .ಅರ್. ಕೃಷ್ಣ ಶಾಸ್ತ್ರಿಗಳ ಮೊಮ್ಮಗ , ಸಾಹಿತಿ, ಲೇಖಕ, ಸಿ.ಆರ್.ಸತ್ಯ ಅವರ ನಿಧನ ಕರ್ನಾಟಕಕ್ಕೆ, ನಮ್ಮ ಸಮಾಜಕ್ಕೆ ನಿಜಕ್ಕೂ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ,

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

ಎಸ್. ಶೇಖರ್ ಬತ್ತದನದಿ ..............
ಸತ್ಯಾನ್ವೇಷಣೆ
ಆನಂದ ನಗರ-ನಗೆ ಬರಹ, ನೆನಪುಗಳ ಹಾದಿಯಲ್ಲಿ "ತ್ರಿಮುಖಿ" "ಅಳಿವಿಲ್ಲದ ಸ್ಥಾವರ"ದ ಸಂಶೋಧನೆಯು ಹಸನ್ಮುಖಿ ಪುರಂದರ ಮೇರು ಕೃತಿಗಳ ಅನುವಾದಾಮೃತ ದಾಸೋಹ ಹೆಬ್ಬಾಳ ಕೆರೆಯ ಪುನರುಜ್ಜೀವನದ ಥೋರೋ ಸಂಯೋಗ ಸುಬ್ಬಮ್ಮನ ಉಪ್ವಾಸದಿಂದ ವಿಶ್ವ ಪರ್ಯಟನೆಯ ಲೇಖನಗಳ ಸಾಲೆ ವಿಜ್ಞಾನ, ಕಲೆ, ಸಾರಸ್ವತ ಬರಹಕ್ಕೆ ಪ್ರಶಸ್ತಿಗಳ ಮಾಲೆ ಕಲಾಂ ರ (ಬಡ್ಡೀ) ಪರಮಾಪ್ತರಾದ ದಶಕಗಳ ಶಿಷ್ಯೊತ್ತಮ ಒತ್ತಕ್ಕಲ್, ಉಳಿ, ತಾಳೆ ಗರಿಗಳ ಎತ್ತಿ ಹಿಡಿದ ಸಂಭ್ರಮ. 'ತುಂಬಾ'ದಿಂದ ಪರಿಕ್ಷಾರ್ಥ ಪ್ರಾಯೋಗಿಕ ವೈಜ್ಞಾನಿಕ ಅನ್ವೇಷಣೆ ತುಂಬು ಜೀವನವ ಕ್ರಮಿಸಿದ ಬಾರದ ಲೋಕದ ಪಯಣಿಗ.. ಏಕೊ ಕಾಣೆ! ಭಾವಪೂರ್ಣ ಶ್ರದ್ಧಾಂಜಲಿ ಎನ್. ಶೇಖರ್ ಬತ್ತದ ನದಿ. ೦೪-೦೪-೨೦೨೩

ಬಾರದ ಲೋಕಕ್ಕೆ ತೆರಳಿದ ಸಕಲ ಕಲಾ ವಲ್ಲಭ ಸಿ. ಅರ್. ಸತ್ಯ......
ಎ.ಆರ್. ಕೃಷ್ಣಶಾಸ್ತ್ರಿಗಳ ಮೊಮ್ಮಗ, ಅಬ್ದುಲ್ ಕಲಾಂ ಅವರ ಒಡನಾಡಿ, ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ, ಹಾಸ್ಯ ಲೇಖಕ, ವೈಜ್ಞಾನಿಕ ಲೇಖಕ, ಸಂಗೀತಗಾರ. ಸಾಹಿತಿ, ಪರಿಸರ ಪ್ರೇಮಿ, ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಂಬ ಹಾಸ್ಯಮಯ ವಿಂಡಬಣಾತ್ಮಕ ಕೃತಿಯಿಂದ ನಾಡಿನ ಮನೆ ಮಾತಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸಿ.ಆರ್ ಸತ್ಯಾ ರವರು ಇಂದು ವಿಧಿವಶರಾಗಿದ್ದಾರೆ. ಸತ್ಯಾರವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ

ನಿಮ್ಮವನೇ ಉಮಾಸುತ

https://enantheeri.com/2023/04/05/cr_satya/


ಬರೆದಿರುವುದು 5/4/2023



No comments:

Post a Comment