Saturday, April 15, 2023

SOURAMANA YUGADI

 Saturday, 15th April 2023

Birthimane, Bengaluru

Souramana Yugadi comes every year 14/15 April 

This year is SHOBHAKRATU Samvatsara, Yugadi is celebrated with morning darshan of God through the mirror placed previous night.

ಸೌರಮಾನ ಯುಗಾದಿಯ ವರ್ಷಾರಂಭದ ಮೊದಲ ದಿನದ ಶನಿವಾರದಂದು ಮೂಲ ಬಿಂಬದ ಲಿಂಗರೂಪದಲ್ಲಿ ನಮ್ಮೆಲ್ಲರಿಗೂ ಯುಗಾದಿಯಂದು ಪ್ರಾಪ್ತವಾದ ಶ್ರೀ ಮಂಗಳಾದೇವಿ ಅಮ್ಮನವರ ವಿಷುಕಣಿಯ ದರ್ಶನ🥭😍


ಪ್ರಥಮವಾಗಿ ಶ್ರೀ ಮಂಗಳಾದೇವಿ ಅಮ್ಮನವರ ಚರಣಾರವಿಂದಗಳಲ್ಲಿ ನಮಸ್ಕರಿಸುತ್ತಾ ತಮಗೆಲ್ಲರಿಗೂ ಸೌರಮಾನ ಯುಗಾದಿಯ ಪ್ರೀತಿ ಪೂರ್ವಕ ಶುಭಾಶಯಗಳು.👏




ಸೂರ್ಯ ನಾರಾಯಣನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಯನ್ನು ಪ್ರವೇಶಿಸುವ 'ಮೇಷ ಸಂಕ್ರಮಣದ' ಮರುದಿನದ 'ಹೊಸ 'ವಿಕ್ರಮಶಕೆ'ಯ ಹೊಸವರ್ಷದ ಇಂದಿನ ಸೌರಮಾನ ಯುಗಾದಿಯನ್ನು ನವ ಚೈತನ್ಯದಿಂದ ಆಚರಿಸಿ ತನ್ನ ಸನ್ನಿಧಾನಕ್ಕೆ ವಿಷುಕಣಿಯ ದರ್ಶನಕ್ಕೆ ಪ್ರಾತಃಕಾಲ ಮಹಾತಾಯಿಯು ಅನುಗ್ರಹಿಸಿದ್ದಾಳೆ👏


ವಿಷುಕಣಿಯ ದರ್ಶನವನ್ನು ಪಡೆದು ಹೊಸ ವರ್ಷದಲ್ಲಿ ಸಂಪದ್ಭರಿತ ಸುಖ ಶಾಂತಿ, ಸಮೃದ್ಧಿಯುತ ಜೀವನ ಪ್ರಾಪ್ತಿಗಾಗಿ ಮಹಾದೇವಿಯಲ್ಲಿ ಪ್ರಾರ್ಥಿಸುತ್ತಾ ಸಮಸ್ತ ನಾಡಿನ ಜನತೆಗೆ ಸೌರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಹರ್ಷದಾಯಕವಾಗಿ' ಕ್ಷೇಮದಾಯಕವಾಗಿರಲಿ ಎಂಬ ಸಂಕಲ್ಪದಿಂದ ತಾಯಿಯಲ್ಲಿ ಆಶೀರ್ವಾದವನ್ನು ಕೋರುತ್ತಾ ತಮಗೆಲ್ಲರಿಗೂ ನೂತನ
ಶೋಭಕೃತನಾಮ ಸಂವತ್ಸರವು ನಿತ್ಯ ಶುಭ ಸನ್ಮಂಗಳ ಶ್ರೇಯಸ್ಸನ್ನುಂಟುಮಾಡಲಿ.

ಸಮಸ್ತ ಲೋಕಾ ಸರ್ವೇ ಜನಾ ಸುಖಿನೋ ಭವಂತು

Posted 16/4/2023



No comments:

Post a Comment