Avala Kaagada ಅವಳ ಕಾಗದ - ಕನ್ನಡ ನಾಟಕ
Brought to you by E Hottige Trust on the occasion of their 10th anniversary, in association with Kappanna Angala.\
Come watch me perform Tagore stories in Kannada. Concept and Direction: DrShripad Bhat Adaptation: Sudha Adukala. Design: Shwetha Hasan. Lighting: Sreenivas G Kappanna.
ಶ್ರೀಮತಿ ಅಹಲ್ಯಾ ಬಲ್ಲಾಳ್ ಅವರು ಕಲಾವಿದೆ.
ಪುರಿಯ ಸಮುದ್ರ ತೀರದಲ್ಲಿ ಅವಳು ಹೊಯಿಗೆಯ ಮೇಲೆ ಕೂತು ಅವಳ ನೆನಪಿನ ಕಥನ.
ಹಿನ್ನೆಲೆಯಲ್ಲಿ ಸಮುದ್ರದ ತೆರೆಗಳ ನಿರಂತರವಾದ ಸದ್ದು.
ಮನೆಯಲ್ಲಿಯ ಎಲ್ಲಾ ಕೆಲಸಗಳು, ಆದರೂ ಮನೆಯವರಿಂದ ದೂಷಣೆ.
ರೂಪವತಿಯೂ, ಬುದ್ಧಿವಂತೆಯೂ ಆದ ಹೆಣ್ಣೊಬ್ಬಳು ತನ್ನ ಸ್ವಾಭಾವಿಕವಾದ ಪ್ರತಿಭಟಿಸುವ ಗುಣದಿಂದಲೇ ತನ್ನ ಪತಿಯಿಂದಲೂ, ಅವನ ಕುಟುಂಬದಿಂದಲೂ ದೂರವಾಗಿ ಕಲ್ಕತ್ತ ಬಿಟ್ಟು ಪುರಿಯ ಕ್ಷೇತ್ರದಲ್ಲಿ ಇರಬೇಕಾಗಿ ಬರುತ್ತದೆ. ತನ್ನನ್ನು ಎಂದೂ ಅರಿಯಲು ಯತ್ನಿಸದ ಪತಿಗೆ, ಅವನ ಮನೆಯ ತನ್ನ ಹಿಂದಿನ ದಿನಗಳ ನೆನಪು ಮಾಡಿಕೊಂಡು ಪತ್ರದ ಮುಖೇನ ಅವಳು ತನ್ನ ಅಂತರಂಗವನ್ನು ತೆರೆದಿಡುತ್ತಾ ಹೋಗುತ್ತಾಳೆ. ಆ ಮೂಲಕ ಪ್ರೇಕ್ಷಕರಿಗೆ ಸುಮಾರು ನೂರು ವರ್ಷಗಳ ಹಿಂದಿನ ಕಾಲಘಟ್ಟದ ಭಾರತದ ಸ್ತ್ರೀಲೋಕದ ಪರಿಚಯವಾಗುತ್ತದೆ. ಅವಳು ಚಂದ್ರಿ ಹಾಗೂ ಬಿಂದು ಎಂಬ ಎರಡು ನತದೃಷ್ಟ ಹೆಣ್ಣುಗಳ ದುರಂತಮಯ ಬದುಕಿನ ಚಿತ್ರಣವನ್ನು ತರುತ್ತಾಳೆ. ಜೊತೆಗೆ ತನ್ನದೇ ಆದ ನೋವು, ನಲಿವುಗಳನ್ನೂ ನಿವೇದಿಸಿಕೊಳ್ಳುತ್ತಾಳೆ. ಚಂದ್ರಿ, ಬಿಂದು ಎಂಬ ಹೆಣ್ಣುಮಕ್ಕಳು ತಮ್ಮ ಅಂತ್ಯ ದುರಂತಮಯವಾದರೂ, ಅಂತರಂಗದಲ್ಲಿ ಪ್ರತಿಭಟನೆಯ ಕಾವನ್ನು ಕಡೆಯತನಕ ಉಳಿಸಿಕೊಳ್ಳುವವರು! ಅಂತೆಯೇ ಪ್ರಶ್ನಿಸುವ ಗುಣವುಳ್ಳ ನಿರೂಪಕಿ, ಆ ಕಾರಣಕ್ಕಾಗಿಯೇ ಪುರಿ ಕ್ಷೇತ್ರದ ಯಾತ್ರೆಯ ನೆಪದಲ್ಲಿ ಸಾಗುಹಾಕಲ್ಪಟ್ಟವಳು. ಅದರ ಅರಿವಿನಿಂದಲೇ ಗಂಡನಿಗೆ ಬಹುಕಾಲದ ನಂತರ ಪತ್ರ ಬರೆಯಲು ಕೂರುತ್ತಾಳೆ ಮತ್ತು ಗೌರವ ಸಂಭೋದನೆಯನ್ನು ಮಾಡುತ್ತಲೇ ಅನ್ಯಾಯದ ಒಂದೊಂದೇ ಎಳೆಯನ್ನು ತೆರೆದಿಡುತ್ತಾಳೆ. ಅಹಲ್ಯಾ ಬಲ್ಲಾಳರು ಈ ಮೂರೂ ಸ್ತ್ರೀ ಪಾತ್ರಗಳನ್ನು ಬಹಳ ಪರಿಣಾಮಕಾರಿಯಾಗಿಯೂ, ಪ್ರೇಕ್ಷಕರ ಮನ ಕಲಕುವಂತೆಯೂ ಅಭಿನಯಿಸಿದರು.
ಗೋವುಗಲೊಡನೆ ಪ್ರೀತಿ, ವಾತ್ಸಲ್ಯ, ಪ್ರಸವ ವೇದನೆ, ಕ್ರೂರಿ ಗಂಡನಿಂದ ನಿಂದನೆ ಕೊಲೆ, ನೇಣು ಕಂಬಕ್ಕೆ ಹೋಗುವ ನಿರ್ಧಾರ.....
ಎಲ್ಲಾ ನೆನಪುಗಳನ್ನು ಕಾಗದ ದಲ್ಲಿ ಬರೆದು ತಿಳಿಸುವ ಅಭಿಲಾಷೆ.....
ಅಹಲ್ಯಾ ಅವರ ಅಭಿನಯ ಅದ್ಭುತ, ನೋವು, ಕ್ರೌರ್ಯ, ಪ್ರೀತಿ, ಸಹನೆ,ದುಗುಡ, ದುಮ್ಮಾನ, ಕೋಪ.....
ಒಂದು ಗಂಟೆಯ ನಾಟಕ, ಪ್ರೇಕ್ಷಕರು ನಿಶಬ್ದವಾಗಿ ಏಕಾಗ್ರತೆಯಿಂದ ವೀಕ್ಷಿಸಿದ ನಾಟಕ.
ಅಹಲ್ಯಾ ಬಲ್ಲಾಳ್ ಅವರಿಗೆ ಅಭಿನಂದನೆಗಳು.
ಬರೆದಿರುವುದು 3/5/2023
No comments:
Post a Comment