Thursday, May 11, 2023

ವಿಂಶತಿ ಉತ್ಸವ ( 2 ) - ಸತ್ಯ ನಾರಾಯಣ ಪೂಜೆ

 ಭಾನುವಾರ, ಏಪ್ರಿಲ್ 30, 2023 

ಜಹಿಯಾ ಕಮ್ಯುನಿಟಿ ಹಾಲ್,  ಬರ್ ದುಬೈ.


ದುಬೈ ಬ್ರಾಹ್ಮಣ ಸಮಾಜದ ಶೋಭಕ್ರತು ನಾಮ ಸಂವತ್ಸರದ "ಸತ್ಯನಾರಾಯಣ ಪೂಜೆ" ಯು ಭಾನುವಾರ ಏಪ್ರಿಲ್ 30 ನೇ ತಾರೀಕು ಸಂಪನ್ನ ಗೊಂಡಿತು.



ಎಂದಿನಂತೆ ಲಕ್ಷ್ಮೀ ಕಾಂತ ಭಟ್ಟರ ನೇತ್ರತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿದ್ದು ಮಧು-ಪ್ರಮಿಳ ಅವರು ಸಂಕಲ್ಪ ಪೂಜೆಗೆ ಸಹಕರಿಸಿದ್ದರು.


ಭಜನೆ, ವಿಷ್ಣು ಸಹಸ್ರ ನಾಮ, ಮಹಾ ಮಂಗಳಾರತಿ, ಪಂಚಾಂಗ ಶ್ರವಣ, ಪ್ರಸಾದ ಭೋಜನವು ಎಂದಿನಂತೆ ನಡೆಯಿತು.


ಬ್ರಾಹ್ಮಣ ಸಮಾಜದ 20 ನೇ ವರ್ಷದ "ವಿಂಶತಿ ಉತ್ಸವ" ಎಂದು ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೆರವೆರಿಸುವುದಾಗಿ ರೂವಾರಿ ಸುಧಾಕರ್ ರಾವ್ ಪೆಜಾವರ್ ತಿಳಿಸಿದರು.


2003 ರಲ್ಲಿ ಪ್ರಾರಂಬಿಸಿದ ಬ್ರಾಹ್ಮಣ ಸಮಾಜ, 20 ನೇ ವರ್ಷದ  ಎಲ್ಲಾ ಕಾರ್ಯಕ್ರಮಗಳಿಗೆ ಶುಭವನ್ನು ಕೋರುವೆವು.

ಸರ್ವೇ ಜನಾಃ ಸುಖಿನೋ ಭವಂತು.

ಸಮಸ್ತ ಸನ್ಮಂಗಳಾನಿ ಭವಂತು.

ಬರೆದಿರುವುದು 11/5/2023 




No comments:

Post a Comment