Sunday, 14th May 2023
Karnataka State Assembly Election results were announced yesterday, 13th May.
Inspite of Congress having record of looting the Government coffers, people have forgotten and have short memory.
Bharatiya Janata party (BJP), lost badly having a strong leader and Prime Minister Narendra Modi at the centre.
State leaders have completely left to the centre, Modi and Amit Shah (Home Minister) made herculean effort to lift the spirit of BJP
Voters falling prey to FREEBIES announced by Congress and solid Muslim votes and divided Hindu votes, based on caste, creed, reservation etc...
See the results compared to 2018 assembly elections.
It's Congress who made it.
Very nice introspection of why BJP lost the elctions: Read below:
ಕರ್ನಾಟಕದ ಬಿ ಜೆ ಪಿ ಮುಖಂಡರುಗಳೇ - ಆತ್ಮಾವಲೋಕನ ಮಾಡಿಕೊಳ್ಳಿ.
ನಾನೊಬ್ಬ ಕರ್ನಾಟಕದ ಪ್ರಬುದ್ಧ ಹಿರಿಯ ನಾಗರಿಕ ಹಾಗೂ ಬಿ ಜೆ ಪಿ ಬೆಂಬಲಿಸುತ್ತಾ ಬಂದಿರುವ ಶ್ರೀ ನರೇಂದ್ರ ಮೋದಿಯವರ ಅಭಿಮಾನಿ. ಈ ದಿನ ನಿಮ್ಮ ಭವಿಷ್ಯ ನಿರ್ಧಾರವಾಗಲಿದೆ. ಮೋದಿಯವರ ಮಾರ್ಗದರ್ಶನದಲ್ಲಿ ನಮ್ಮ ರಾಜ್ಯಕ್ಕೆ ನಿಮ್ಮಿಂದ ಶುದ್ಧ ಹಾಗೂ ದಕ್ಷ ಆಡಳಿತವನ್ನು ನಿರೀಕ್ಷಿಸಿದ್ದ ನನ್ನಂತಹ ಲಕ್ಷಾಂತರ ಕನ್ನಡಿಗರು ನಿಮ್ಮ ಈ ಕೆಳಗಿನ ವರ್ತನೆಗಳಿಂದ ಭ್ರಮನಿರಸನಗೊಂಡಿದ್ದೇವೆ:.
1. ನಿಮ್ಮ ಆಡಳಿತದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತೃಣ ಮಾತ್ರವೂ ಕಡಿಮೆ ಆಗಲಿಲ್ಲ. ಅಧಿಕಾರಿಗಳು ವಸೂಲಿಮಾಡುತ್ತಿದ್ದ ಲಂಛದ ಪ್ರಮಾಣ ಇನ್ನೂ ಹೆಚ್ಚಾಯಿತು.ಇದೇ ಕಾರಣದಿಂದ ಅತ್ಯಂತ ಭ್ರಷ್ಟ ಕಾಂಗ್ರೆಸ್ ನವರು ನಿಮ್ಮನ್ನು 40 % ಕಮಿಷನ್ ಸರಕಾರ ಎಂದು ಆರೋಪ ಮಾಡಿದಾಗ ಜನರು ಇದನ್ನು ನಂಬಿದರು.
2. ನೀವು ಅಧಿಕಾರದಲ್ಲಿದ್ದರೂ ಸಹ, ನಿಮ್ಮನ್ನು ನಿತ್ಯವೂ ಕೇಳು ಭಾಷೆಯಲ್ಲಿ ನಿಂದಿಸುತ್ತಿದ್ದ ಸಿದ್ದರಾಮಯ್ಯನ ವಿರುದ್ಧ ಒಂದೇ ಒಂದು ಭ್ರಷ್ಟಾರದ ಹಗರಣವನ್ನು ಬಯಲಿಗೆಲಳೆಯಲಿಲ್ಲ. ನಿಮ್ಮ ಈ ನಿಷ್ಕ್ರಿಯತೆಯಿಂದ ಕಾಂಗ್ರೆಸ್ ನವರಿಗೆ ಲಾಭವಾಯಿತು. ಆ ವ್ಯಕ್ತಿಯ ಸುಳ್ಳು, ಸಮಾಜ ಒಡೆಯುವ ಹಾಗೂ ಮೋದಿ ಯವರ ಮೇಲಿನ ದ್ವೇಷದ ಹೇಳಿಕೆಗಳಿಂದ ನಮಗೆ ರೋಷ ಬರುತ್ತಿತ್ತು ಆದರೆ ಅಧಿಕಾರದ ಫಲ ಅನುಭವಿಸುತ್ತಿದ್ದ ನೀವು ಪರಿಣಾಮಕಾರಿಯಾಗಿ ಸಿದ್ದರಾಮಯ್ಯನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲೇ ಇಲ್ಲ.
3. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಲ್ಲಿ ಯಾವ ಸುಧಾರಣೆ ಆಗಲಿಲ್ಲ. ನಿಷ್ಕ್ರಿಯ ಪೊಲೀಸರ ಎದುರು ಅಟ್ಟಹಾಸದಿಂದ ಮೆರೆಯುವ ಕ್ರಿಮಿನಲ್ಗಳು.ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನೇ ಹಾಡು ಹಗಲು ಕೊಚ್ಚಿ ಹಾಕಿದರು. ಕರೋನ ಕಾಲದಲ್ಲಿ ಪೊಲೀಸರನ್ನು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೊಡೆದರು.ನೀವು “ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿಕೆ ಕೊಟ್ಟಿರಿ ಅಷ್ಟೇ..
4. ನಿಮ್ಮ ಪಕ್ಷ ಹಾಗೂ ಮಂತ್ರಿಮಂಡಲದಲ್ಲಿ ಒಗ್ಗಟ್ಟು ಹಾಗೂ ಸಮನ್ವಯತೆಯೆ ಇಲ್ಲ,ಕಾಂಗ್ರೆಸ್ ನಲ್ಲಿ ಆ ಪಪ್ಪು ಅಥವಾ ಸಿದ್ದರಾಮಯ್ಯ ಸುಳ್ಳಿನ ಹಾಗೂ ದ್ವೇಷಪೂರಿತ ಹೇಳಿಕೆಯನ್ನು ಕೊಟ್ಟರೆ ಆ ಪಕ್ಷದವರೆಲ್ಲರೂ ಒಗ್ಗಟ್ಟಾಗಿ ಬೆಂಬಲಿಸುತ್ತಾರೆ. ಆದರೆ ನಿಮ್ಮಲ್ಲಿ ಯಾರನ್ನು ಯಾರೂ ಬೆಂಬಲಿಸುವುದಿಲ್ಲ. ಮುಂಚೂಣಿಯಲ್ಲಿರುವ ನಾಯಕರೆನನಿಸಿಕೊಂಡಿರುವವರು ಉಡಾಫೆಯ ಹೇಳಿಕೆಗಳು ಹಾಗೂ ವೈಯಯಕ್ತಿಕ ನಿಂದನೆಗಳಲ್ಲಿ ನಿಸ್ಸೀಮರು.ನೀವು ಬರೀ ಲಾಭಾ ಕಾಂಕ್ಷಿಗಳು.
5. ವಿರೋದ ಪಕ್ಷದ 40% ಕಮಿಷನ್, ನಂದಿನಿ ದುರ್ಬಲಗೊಳಿಸುವುದು ಇತ್ಯಾದಿ ಆರೋಪಗಳಿಗೆ ಪರಿಣಾಮಕಾರಿಯಾಗಿ ಜವಾಬು ನೀಡಿ ಬಾಯಿ ಮುಚ್ಚಿಸಲು ಮೋದಿಯವರೇ ಬರಬೇಕಾಯಿತು.ನೀವು “ ಮಾನ ನಷ್ಟ ಮೊಕದ್ದಮೆ ಹೂಡಲು ಚಿಂತಿಸುತ್ತಿದ್ದೇವೆ” ಎಂದು ಹೇಳಿಕೆ ಕೊಟ್ಟಿರಿ ಅಷ್ಟೇ.
6. ಸಿದ್ದರಾಮಯ್ಯ ಆಡಳಿತದ ಭ್ರಷ್ಟಾಚಾರ ಹಗರಣಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಮೂಲೆಗುಂಪು ಮಾಡಿ ಜನಗಳನ್ನು ವಂಚಿಸಿದ್ದನ್ನು ನೀವು ಚುನಾವಣಾ ಸಮಯದಲ್ಲೂ ಜೋರಾಗಿ ಹೇಳಲೇ ಇಲ್ಲ. ನಕಲಿ ಪಡಿತರ ಚೀಟಿ ಹಾಗೂ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನೂರಾರು ಕೋಟಿ ನುಂಗಿದ್ದನ್ನು ಮೋದಿಯವರೇ ಹೇಳಬೇಕಾಯಿತು. ಅತ್ಯಂತ ಜವಾಬ್ದಾರಿಗಳ ಮಧ್ಯೆಯೂ ಮೋಡಿಯವರು ಪ್ರಚಾರಕ್ಕೆ ಬಂದು ಉತ್ಸಾಹ ಹಾಗೂ ಶಕ್ತಿ ತುಂಬಿ ಮತದಾರರನ್ನು ಪ್ರಭಾವಿಸಬೇಕಾಯಿತು?
7. ಸಿದ್ದರಾಮಯ್ಯ ಲಿಂಗಾಯಿತ ಮುಖ್ಯಮಂತ್ರಿಗಳು ಭ್ರಷ್ಟರು ಹೇಳಿಕೆಯನ್ನು.(ಇದು ಬಾಗಶಃ ಸತ್ಯ BSY ಮತ್ತು ಬೊಮ್ಮಾಯಿಯವರದು ಮಾತ್ರ ಭ್ರಷ್ಟ ಆಡಳಿತ ) ಚುನಾವಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ.
ನೀವು ಅಧಿಕಾರವನ್ನು ಸುಲಭವಾಗಿ ಗಳಿಸಿ ಜವಾಬ್ದಾರಿ ರಹಿತವಾಗಿ ಅನುಭವಿಸಬಹುದೆಂದು ಭಾವಿಸಿದ್ದೀರಿ.ಇದು ಕಾಂಗ್ರೆಸ್ಸ ನವರ ಮನೋಭಾವ. ದಯವಿಟ್ಟು ನೆನಪಿಡಿ There is no free lunch. ರಾಷ್ಟ್ರಪ್ರೇಮಿ,ಪ್ರಾಮಾಣಿಕ,ಪರಿಶ್ರಮಿ ಹಾಗೂ ಬಲಿಷ್ಟ ವಿಶ್ವ ನಾಯಕ ಮೋದಿ ಯವರಿಗೆ ನೀವು ಮಾಡುವ ಅವಮಾನ.ನಿಮ್ಮ ಎಲ್ಲ ವೈಫಲ್ಯಗಳನ್ನು ಬದಿಗಿಟ್ಟು ಮೋದಿ ಯವರು ನಿಮಗಾಗಿ ಮತದಾರರಲ್ಲಿ ವಿನಂತಿಸಿದ್ದಾರೆ ಅವರ ಮೇಲಿನ ವಿಶ್ವಾಸ ಹಾಗೂ ಪ್ರೀತಿಯಿಂದ ನಾವು ಮತ ಹಾಕಿದ್ದೇವೆ.ಬಹುಮತ ಬಂದರೆ ಹೊಂದಾಣಿಕೆ ರಾಜಕೀಯದ ಹಾಗೂ ನಿಷ್ಕ್ರಿಯ ಹಿರಿಯರನ್ನು ಪಕ್ಕಕ್ಕೆ ತಳ್ಳಿ ದಕ್ಷ,ಪ್ರಾಮಾಣಿಕ ಹಾಗೂ ಧೈರ್ಯವಂತರಿಗೆ ಮಂತ್ರಿಗಿರಿ ಕೊಡಿ.ನಾವು ನಿಮ್ಮಿಂದ ನಿರೀಕ್ಷಿಸುವುದು ಉತ್ತರ ಪ್ರದೇಶದ ಯೋಗಿ,ಅಸ್ಸಾಂನ ಹಿಮಾಂತ ಮಾದರಿ ಆಡಳಿತ ಹಾಗೂ ಅಣ್ಣಾಮಲೈ ರಂತಹ ರಾಜ್ಯಾಧ್ಯಕ್ಷರು. ಇದು ಸಾಧ್ಯ - ಆ ರಾಜ್ಯಗಳಿಗೂ ನಮಗೂ ಒಂದೇ ಸಂವಿದಾನ ತಾನೇ?.ಇದು ಅಸಾಧ್ಯವಲ್ಲ.
Another beautiful analysis of the result:
ಸ್ವಯಂಕೃತ ಅಪರಾಧದಿಂದ ಆತ್ಮಹತ್ಯೆಮಾಡಿಕೊಂಡ ಕರ್ನಾಟಕದ ಬಿಜೆಪಿ. ಹಲ್ಲಿಲ್ಲದ ಹಾವಾಗಿರುವ ಸಂಘ.
ಇದಾಗಲೇ ಕರ್ನಾಟಕದ ಚುನಾವಣೆ ಫಲಿತಾಂಶದ ಬಂದಿದೆ. ಕಾಂಗ್ರೇಸ್ ವಿಜಯ ಬಿಜೆಪಿ ಹೀನಾಯಸೋಲು ಎನ್ನುವುದನ್ನು ಟಿ ವಿಯಲ್ಲಿ ನೋಡುತ್ತಿದ್ದೇವೆ. ಐದುವರ್ಷಗಳ ಹಿಂದೆಯೇ ಮೋದಿ ಹೇಳಿದ್ದರು ಯಾವಾಗಲೂ ಮೋದಿ ಕಾರ್ಡ್ ನಡೆಯುವುದಿಲ್ಲ ಜನನಿಮ್ಮನ್ನು ಗಮನಿಸುತ್ತಾರೆ ಎಂಬುದಾಗಿ. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ. ಜನರ ಸಮಸ್ಯೆಗಳಿಗಾಗಿಲಿ ಕಾರ್ಯಕರ್ತರ ಭಾವನೆಗಳಿಗಾಗಲೀ ಸರಿಯಾಗಿ ಸ್ಪಂದಿಸಲೇಇಲ್ಲ. ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ನಡೆದ ಕೊಲೆಗಳಿಗೆ ನ್ಯಾಯವನ್ನು ಬಯಸಿ ಹಿಂದುಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಿದ್ದರು. ಅಧಿಕಾರ ಹಿಡಿದ ಬಿಜೆಪಿ ಯಾವುದೇ ಸಂಘಟನೆಯ ಕಾರ್ಯಕರ್ತನಿಗೆ ಧೈರ್ಯ ಕೊಡುವ ಕೆಲಸ ಮಾಡಲಿಲ್ಲ. ಕಾಂಗ್ರೇಸಿನ ದ್ವೇಷರಾಜಕೀಯದಿಂದ ಕೇಸು ಹಾಕಲ್ಪಟ್ಟು ಕೋರ್ಟಿಗೆ ಅಲೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಕೇಸಿನ ಹಿಂಸೆಯಿಂದ ಬಿಜೆಪಿ ತಪ್ಪಿಸಲಿಲ್ಲ. ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ಲೋಕಾಯುಕ್ತವನ್ನು ಮುಚ್ಚಿ ಭ್ರಷ್ಟಾಚಾರವನ್ನು ಮಾಡಿದ್ದರು ಆವಿಚಾರದಲ್ಲಿ ತನಿಖೆಮಾಡಲಿಲ್ಲ. ಲೋಕಾಯುಕ್ತವನ್ನು ಬಲಗೊಳಿಸಲಿಲ್ಲ. ಡಿಜಿ ಹಳ್ಳಿ ಕೆಜಿ ಹಳ್ಳಿ ಗಲಭೆಗಳನ್ನು ಸರಿಯಾಗಿ ನಿಭಾಯಿಸಲಿಲ್ಲ. ಶಿವಮೊಗ್ಗದಿಂದ ಹಿಡಿದು ಪ್ರವೀಣ್ ನೆಟ್ಟಾರು ಕೊಲೆವರೆಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸರಕಾರದ ಡೈಲಾಗು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಾಗುವ ಫೆವರಿಟ್ ವಿಷಯ ವಾಗಿತ್ತು ಆಗಲೂ ಎಚ್ಚರಾಗಲಿಲ್ಲ. ಗೃಹಸಚಿವರನ್ನು ಬದಲಾಯಿಸಲಿಲ್ಲ. ಸಾಲದ್ದಕ್ಕೆ ಖೈದಿಗಳಿಗೆ ದಿನಗೂಲಿ 500 ಮಾಡುತ್ತೇವೆ ಎನ್ನುವ ಮೂಲಕ ತಾವು ಕ್ರಿಮಿನಲ್ಗಳನ್ನು ಬೆಳೆಸುವವರು ಎನ್ನುವ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು. ಹಿಂದುತ್ವದ ಪಕ್ಷವೆಂದು ಹಿಂದುಗಳಿಗೆ ಭರವಸೆ ಎನ್ನಿಸುವ ನೆನಪಿರುವ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಕೇವಲ ಭಾಷಣದ ಹಿಂದುತ್ವವನ್ನು ಮಾತ್ರ ಹಿಂದೂಸಂಘಟನೆಗಳು ನೋಡಿದುವು. ಪ್ರಮೋದಮುತಾಲಿಕರಿಗೆ ಒಂದು ಸೀಟುಕೊಡುವ ಔದಾರ್ಯ ಬಿಜೆಪಿ ತೋರಲಿಲ್ಲ. ಬದಲಾಗಿ ಅರುಣ್ ಕುಮಾರ್ ಪುತ್ತಿಲರನ್ನು ಪುತ್ತೂರಿನಲ್ಲಿ ಮೂಲೆಗುಂಪುಮಾಡಲು ನೋಡಲಾಯಿತು. ಅವರು ಹಿಂದುನಾಯಕರೇ ಅಲ್ಲ ಎನ್ನುವ ರೀತಿಯಲ್ಲಿ ಸಂಘದ ಹಿರಿಯರು ತಮ್ಮ ಹರುಕು ನಾಲಗೆಯನ್ನು ಹರಿಬಿಟ್ಟರು. ಪುತ್ತಿಲರ ತೇಜೋವಧೆಗೆ ಪಾರ್ಟಿಹಾಗೂ ಸಂಘ ಜಂಟಿಯಾಗಿ ಇಳಿಯಿತು. ಸಂಘಪರಿವಾರದಿಂದ ಹೋದವರು ಕಾಂಗ್ರೇಸಿಗರನ್ನೂ ಮೀರಿಸುವ ಬ್ರಷ್ಟಾಚಾರಕ್ಕೆ ಇಳಿದಾಗ ಸಂಘದ ಹಿರಿಯರು ಕಣ್ಣುಮುಚ್ಚಿಕೊಂಡು ರಾಜಕೀಯ ನಮ್ಮ ಕೆಲಸವಲ್ಲ ಎನ್ನುತ್ತಾ ಕೇಶವಕೃಪದಲ್ಲಿ ಕಡ್ಲೆ ತಿನ್ನುತ್ತಿದ್ದರು. ಕರೆದು ಬುದ್ದಿ ಹೇಳುವ, ಎಚ್ಚರಿಕೆ ನೀಡುವ, ಪಕ್ಷದ ಹೈಕಮಾಂಡಿನ ಗಮನಕ್ಕೆ ತರುವ ಕೆಲಸವನ್ನು ಮಾಡಲಿಲ್ಲ. ಸ್ವಯಂಸೇವಕರು ಕೇಳಿದರೆ ಬಿಜೆಪಿ ಇಂದು ಸಂಘಕ್ಕಿಂತ ದೊಡ್ಡದಾಗಿ ಬೆಳೆದಿದೆ ಎಂದು ನಾಚಿಕೆ ಇಲ್ಲದೆ ತಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳತೊಡಗಿದ್ದರು.
ಯಾವುದ್ಕಕೂ ಪ್ರಯೋಜನವಿಲ್ಲದ ಯಕ್ಷಗಾನದ ವಿದೂಷಕನಂತೆ ಮಾತನಾಡುವ ಅಪ್ರಾಮಾಣಿಕ ರಾಜ್ಯಾಧ್ಯಕ್ಷರನ್ನು ಬಿಜೆಪಿ ಆಯ್ಕೆಮಾಡಿಕೂರಿಸಿತು. ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಪಕ್ಷದ ಅಧ್ಯಕ್ಷರ ಜನಪ್ರಿಯತೆಯನ್ನು ನೋಡಿಯೂ ಪಕ್ಷ ಕಣ್ಣುಮುಚ್ಚಿಕೂತಿದ್ದರ ಫಲವಾಗಿ ಅಹಂಕಾರದಿಂದ ನೆಲಬಿಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರು ಕಾರ್ಯಕರ್ತರ ಬೇಡಿಕೆಗೆ ವಿರುದ್ಧವಾಗಿ ಪುತ್ತೂರಿನಲ್ಲಿ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿ. ತನ್ನದೇ ಜಾತಿಯ ಕಾಂಗ್ರೇಸಿನ ಅಭ್ಯರ್ತೀಯನ್ನು ಜಾತಿಮಗ ಎಂದು ಗೆಲ್ಲಿಸುವ ಒಳ ಒಪ್ಪಂದಕ್ಕೆ ಯೋಜನೆ ರೂಪಿಸಿದಂತೆ ತೋರುತ್ತದೆ. ಭಾಸವಾಗುತ್ತಿದೆ. ಇಂತಹ ಅನೇಕ ಅವಿವೇಕವನ್ನು ರಾಜ್ಯ ಬಿಜೆಪಿ ಮಾಡುತ್ತಿದ್ದಾಗಲೂ ಸಂಘದ ಹಿರಿಯರು ತಪ್ಪನ್ನು ತಪ್ಪು ಎಂದುಹೇಳುವ ಧೈರ್ಯಮಾಡಲಿಲ್ಲ. ಧರ್ಮಕ್ಕಾಗಿ ಜೀವಕೊಡಲು ಸಿದ್ಧರಿರುವ ಕಾರ್ಯಕರ್ತರ ಭಾವನೆಗಳಿಗೆ ಬೆಂಬಲವಾಗಿ ನಿಲ್ಲಲಿಲ್ಲ. ಹಿಂದೆ ಮಂಗಳೂರಿನಲ್ಲಿ ಡಿಸ್ಕೋಕಲ್ಬ್ ನಲ್ಲಿ ಹಿಂದೂ ಕಾರ್ಯಕರ್ತರು ದಾಳಿಮಾಡಿದ್ದಾಗ ಸಿಟಿ ರವಿಯವರು ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಡಹೇರಿದಾಗ ಬಿಜೆಪಿಯ ಪರಿಸ್ಥಿತಿ ಹೇಗಾಗಿತ್ತೋ ಅಂತಹುದೇ ಅವರಿಸ್ಥಿತಿ ಇಂದು ಪುತ್ತೂರಿನಲ್ಲಿ ಆಯಿತು. ಬಿಜೆಪಿ ಹಿಂದೂನಾಯಕರನ್ನು ಬೆಳೆಯಲು ಬಿಡುತ್ತಿಲ್ಲ ಎನ್ನುವ ಭಾವನೆ ಎಲ್ಲಡೆ ಕಾರ್ಯಕರ್ತರಮನಸ್ಸಿನಲ್ಲಿ ಗಟ್ಟಿಯಾಗತೊಡಗಿತು. ಕಾಂಗ್ರೇಸಿನವರು 40% ಸರಕಾರ ಎಂದು ಆಪಾದನೆ ಮಾಡಿದಾಗ ಬಿಜೆಪಿಕಾರ್ಯಕರ್ತರೇ ಇದು ಸತ್ಯ ಎಂದು ಪರಸ್ಪರ ಮಾತಾನಾಡುವುದನ್ನು ಸಮಾಜನೋಡಿದೆ. ಪಾರ್ಟಿ ವಿತ್ ಡಿಫರೆನ್ಸ್ ಎನ್ನುವ ಬಿಜೆಪಿ ಚುನಾವಣೆ ಸಮಯದಲ್ಲಿ ಕಾಂಗ್ರೇಸನ್ನು ನಾಚಿಸುವಂತೆ ಹಣಹಂಚಲು ಮುಂದಾದ ವರದಿಗಳು ಜನರ ಬಾಲಲ್ಲಿ ಓಡಾಡುತ್ತಿರುವುದು ಸುಳ್ಳಲ್ಲ. ಎಷ್ಟೇ ಸೀಟುಬಂದರೂ ಶಾಸಕರನ್ನು ಖರೀದಿಸಿ ಸರಕಾರರಚಿಸುತ್ತೇವೆ ಎನ್ನುವಷ್ಟು ಅಹಂಕಾರ ಬಜೆಪಿಗರಲ್ಲಿ ಮನೆಮಾಡಿತ್ತು. ಇವರಿಗೆ ಕಾರ್ಯಕರ್ತರ ಅಗತ್ಯವೇ ಇಲ್ಲ ಎನ್ನುವಮನಸ್ಥಿತಿಗೆ ನಾಯಕರು ಬಂದಿದ್ದರು. ಬಿಜೆಪಿಯ ಮತದಾರರು ರಾಷ್ಟ್ರೀಯ ಚಿಂತನೆಯ ಮತದಾರರು. ತಾವು ಚುನಾಯಿಸಿದ ಶಾಸಕ ಜಿಹಾದಿಗಳೊಂದಿಗೆ ಸೇರಿಕೊಂಡು ಪಾಲುಗಾರಿಕೆಯ ಉದ್ಯಮ ನಡೆಸುತ್ತಾನೆಂದು ತಿಳಿದಾಗ ಹೇಗೆ ಸಹಿಸಿಕೊಳ್ಳುತ್ತಾನೆ. ಅಲ್ಪಸಂಖ್ಯಾತರು ನಿವು ಎಷ್ಟೇಸೌಲಭ್ಯಕೊಡಿ ಅನುದಾನಕೊಡಿ ಅವರೆಂದಿಗೂ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಅವರಿಗೆ ಭಾರತವನ್ನು ಇಸ್ಲಾಮೀಕರಣ ಅತವಾ ಕ್ರಿಶ್ಚನೀಕರಣ ಮಾಡುವ ಗುರಿ ಇದೆ. ಇದಕ್ಕೆ ಕಾಂಗ್ರೇಸಿಗರ ಮುಕ್ತ ಬೆಂಬಲವೂಇದೆ. ಗೋಹತ್ಯೆನಿಷೇಧ ಹಿಂತೆಗೆಯುತ್ತೇವೆ, ಮತಾಂತರ ನಿಷೇಧ ಹಿಂಪಡೆಯುತ್ತೇವೆ ಎಂಬುದಾಗಿ ಕಾಂಗ್ರೇಸಿಗರು ಮುಕ್ತವಾಗಿಯೇ ಹೇಳುತ್ತಾರೆ. ಆದರೆ ನಿಮ್ಮಲ್ಲಿ ಜನಸಂಖ್ಯಾನಿಯಂತ್ರಣ ಕಾನೂನು ಮಾಡುವ ತಾಕತ್ತು ಇದೆಯಾ? ಸಮಾನ ನಾಗರಿಗ ಸಂಹಿತೆ ತರುವ ತಾಕತ್ತು ಇದೆಯಾ? ದೇವಾಲಯಗಳನ್ನುಸರಕಾರದಿಂದ ಮುಕ್ತಮಾಡುವ ತಾಕತ್ತು ಇದೆಯಾ? ಪಠ್ಯಪುಸ್ತಕ ಪರಿಷ್ಕರೆಣೆಯ ಸಮಿತಿಯನ್ನೂ ಶಿಖಂಡಿಗಳಂತೆ ವಿರೋಧಪಕ್ಷಕ್ಕೆ ಹೆದರಿ ವಿಸರ್ಜಿಸಿದವರು ನೀವು. ಪರೇಶ್ ಮಾಸ್ತನ ಭೀಕರ ಹತ್ಯೆ ಸಹಜಸಾವು ಎಂದು ರೀಪೋರ್ಟ್ ಬಂದಾಗ ನಿಮ್ಮ ಪ್ರತಿಕ್ರಿಯೆ ಏನಿತ್ತು ? ಅದು ಸಹಜಸಾವಾ? ಸರ್ಕಾರ ನಿಮ್ಮದೇ ಇತ್ತಲ್ಲವಾ? ಡಿಕೆ ರವಿ, ಹತ್ಯೆಕೇಸಿಗೆ ನ್ಯಾಯೊದಗಿಸಿದಿರಾ? DYSP ಗಣಪತಿಯವರು ತನ್ನಸಾವಿಗೆ ಯಾರುಕಾರಣ ಎಂಬುದಾಗಿ ವಿಡಿಯೋಮಾಡಿ ಸತ್ತಿದ್ದಾರೆ. ಅದರ ತನಿಖೆ ಏನಾಯಿತು? ಡಿಕೆಶಿ ಅನಾರೋಗ್ಯದ ಕಾರಣ ಕೊಟ್ಟು ಜಾಮೀನುಪಡೆದು ಪಾರ್ಟಿಕೆಲಸಮಾಡುವಾಗ ನೀವೇಕೆ ಇದನ್ನು ಕೋರ್ಟಿನಲ್ಲಿ ಪ್ರಶ್ನಿಸಲಿಲ್ಲ? ಬಿಜೆಪಿನಾಯಕರಲ್ಲಿ ಒಳಒಪ್ಪಂದದೊಂದಿಗೆ ವ್ಯವಹಾರ ನಡೀತಿದೆ ಎನ್ನುವುದು ಜನರಿಗೆ ಚೆನ್ನಾಗಿ ಅರಿವಿಗೆ ಬಂದಿದೆ. ಕಾಂಗ್ರೇಸಿಗರಿಗೆ ಹಣಕೊಟ್ಟರೆ ಸರಕಾರೀ ಖಚೇರಿಗಳಲ್ಲಿ ಕೆಲಸ ಆಗುತ್ತದೆ. ಆದರೆ ಬಿಜೆಪಿಯವಿರಿಗೆ ಹಣಕೊಟ್ಟರೂ ಕೆಲಸ ಆಗುವುದಿಲ್ಲ ಎನ್ನುವಷ್ಟು ಬೀಜೇಪಿಯ ಕೀರ್ತಿ ಬಿಜೆಪಿಯ ಕಾರ್ಯಕರ್ತರಬಾಯಲ್ಲೇ ಕೇಳುತ್ತದೆ. ಬಿಜೆಪಿಕಾರ್ಯಕರ್ತರು ಕಾಂಗ್ರೇಸ್ ನಾಯಕರ ಕೈಗೆ ಫೈಲ್ಕೊಟ್ಟು ಹಣಕೊಟ್ಟು ಕೆಲಸಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರೆ ನಿಮ್ಮದು ಜನಹಿತದ ಆಡಳಿತವಾ? ನಿವೆಲ್ಲಾ ಪ್ರಮಾಣಿಕರಾ?
ಮೋದಿ ಯೋಗಿ ಯಾರೇ ಬರಲಿ ಒಂದು ಒಸ್ತುವಿಗೆ ಮಾರುಕಟ್ಟೆಗೆ ಬಿಡುವಾಗ ಜಾಹೀರಾತಿನ ಅವಶ್ಯಕತೆ ಇರುತ್ತದೆ. ಆಗ ಜನ ಒಮ್ಮೆ ಅದನ್ನು ಖರೀದಿಸುತ್ತಾರೆ. ಆದರೆ ಆ ವಸ್ತು ನಿರಂತರ ಚಲಾವಣೆಯಲ್ಲಿರಬೇಕಾದರೆ ಅದರ ಗುಣಮಟ್ಟ ಉತ್ತಮವಾಗಿರಬೇಕು. ಕಳಪೆಗುಣಮಟ್ಟದ ವಸ್ತುವಿಗೆ ಎಷ್ಟೇಜಾಹೀರಾತು ಕೊಟ್ಟರೂ ಜನ ಅದನ್ನು ಖರೀದಿಸುವುದಿಲ್ಲ. ಕರ್ನಾಟಕ ಬಿಜೆಪಿ ನಾಯಕರದ್ದೂ ಇದೇ ಹಣೆಬರಹ ಯೋಗಿ ಮೋಡೆಲ್ ಇಡೀ ದೇಶದಲ್ಲಿ ಮನೆಮಾತಾಗಿದೆ. ನಮ್ಮ ರಾಜ್ಯದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಡೈಲಾಗ್ ಇಡೀದೇಶದ ಕಾಮಿಡಿಯಾಗಿದೆ. ಸಂಘದ ನಾಯಕರೂ ಹಲ್ಲಿಲ್ಲದ ಹಾವಿನಂತಾಗಿದ್ದಾರೆ ಪ್ರಶ್ನೆಮಾಡುವ ಸ್ವಯಂಸೇವಕರನ್ನು ದೂರ ಇಡುತ್ತಾರೆ. ಅಧಿಕಾರದ ಆಸೆಗೆ ಬಿಜೆಪಿ ಆಪರೆಶನ್ ಕಮಲಮಾಡಹೊರಟಾಗ ಎಲ್ಲರೂ ಮೌನಾಗಿಯೇ ಸಮ್ಮತಿಸಿದ್ದರು. ಈಗ ಬಿಜೆಪಿಯಲ್ಲಿ ಅರ್ಧಜನ ಹೊರಗಿನಿಂದಬಂದವರಿದ್ದಾರೆ ಎನ್ನುತ್ತಾರೆ. ಸಂಘಪರಿವಾರದಿಂದಲೇ ಬಂದ ಸುನೀಲ್ ಕುಮಾರ್, ಸಿ ಟಿ ರವಿ, ನಳಿನ್ ಕುಮಾರ್ ಕಟಿಲ್ ಇವರೆಲ್ಲಾ ಪ್ರಾಮಾಣಿಕರಾ? ಕಾರ್ಯಕರ್ತರನ್ನು ಕೇಳಿದರೆ ಉತ್ತರಹೇಳುತ್ತಾರೆ. ಇಂದು ಬಿಜೆಪಿಯಲ್ಲಿ ಎದುರುನಿಲ್ಲಿಸಿ ತೋರಿಸಬಹುದಾದ ಪ್ರಮಾಣಿಕ ಸಂಘದ ಸ್ವಯಂಸೇವಕ ಶಾಸಕರು ಎಷ್ಟಿದ್ದಾರೆ? ಯಾರಿದ್ದಾರೆ ? ಇಡೀ ಸಮಾಜವನ್ನು ಮುನ್ನಡೆಸುವ ನಾಯಕತ್ವಗುಣ ಇರುವ ಪ್ರಾಮಾಣಿಕ ನಾಯಕರು ಯಾರಿದ್ದಾರೆ ? ಸಂಘದಂಗಳದಲ್ಲಿ ಬೇಳೆದವರು ಹೆಚ್ಚಿನವರು ಪೀಟೀಲು ಬಾರಿಸುವವರೇ ಆಗಿದ್ದಾರೆ ಇದೊಂದು ಸ್ವಯಂಕೃತ ಅಪರಾಧ ಇದೊಂದು ಆತ್ಮ ಹತ್ಯೆ. ಇದೊಂದು ನಿಸ್ವಾರ್ಥ ಸಮರ್ಪಣಾಭಾವದ ಪ್ರಮಾಣಿಕ ಕಾರ್ಯಕರ್ತರ ಕೊಲೆ, ಇದು ಮೋದಿ ಯೋಗಿ ಇವರಿಗೆ ಮಾಡಿದ ಘೋರ ಅವಮಾನ. ಇದೊಂದು ಹಿಂದುತ್ವದ ಪಾರ್ಟಿ ಎನ್ನುವ ವಿಡಂಬನೆ. ರಾಜ್ಯ ಬಿಜೆಪಿ ಈ ಕೂಡಲೇ ಎಚ್ಚೆತ್ತು ಸಂಪೂರ್ಣ ಪಕ್ಷವನ್ನು ಪುನರಚಿಸದೇ ಹೋದಲ್ಲಿ ಯೋಗ್ಯರನ್ನು ಪ್ರಾಮಾಣಿಕ ರಾಷ್ಟ್ರವಾದಿಗಳನ್ನು ಉನ್ನತಸ್ಥಾನದಲ್ಲಿ ಪ್ರತಿಷ್ಟಾಪಿಸದೇ ಹೋದಲ್ಲಿ ಮೃತ್ಯವಿಗೆ ಎದೆಕೊಟ್ಟು ನಿಲ್ಲುವ ಹಿಂದೂನಾಯಕರನ್ನು ಬೆಳೆಸದೇ ಇದ್ದಲ್ಲಿ, ಜಾತಿರಾಜಕಾರಣದ ಬಾಲದಲ್ಲಿ ನೇತಾಡುವ ಬುದ್ಧಿಯನ್ನು ಬಿಡದೇ ಹೋದಲ್ಲಿ ಕರ್ನಾಟಕದ ಬಿಜೆಪಿಗೂ ಭವಿಷ್ಯಿಇಲ್ಲ ಕರ್ನಾಟಕದ ಹಿಂದುಗಳಿಗೂ ಭವಿಷ್ಯ ಇಲ್ಲ. ಬಿಜೆಪಿಯ ನಾಯಕರು ಮುಂದಿನ ಬಾರಿ ಅಧಿಕಾರಕ್ಕೆಬರಲು ಹಿಂದುಕಾರ್ಯಕರ್ತರ ಹೆಣಬೀಳುವುದನ್ನು ರಣಹದ್ದುಗಳಂತೆ ನೋಡುತ್ತಾ ಕುಳಿತುಕೊಳ್ಳದಿರಲಿ. ಸಂಘದ ಹಿರಿಯರು ರಾಜಕೀಯನಮ್ಮ ಕೆಲಸ ಅಲ್ಲ ಅದು ಬಿಜೆಪಿಯಕೆಲಸ ಎನ್ನುತ್ತಾ ಅಲ್ಲಿನಡೆಯುವ ಅನ್ಯಾಯಗಳನ್ನು ನೋಡಿಯೂ ತಪ್ಪೆನ್ನುವ ಅರಿವಿದ್ದೂ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿನ ಸಭೆಯಲ್ಲಿ ಉಪಸ್ಥತರಿದ್ದ ಭೀಷ್ಮದ್ರೋಣರಂತೆ ಮೌನವಹಿಸಿ ಸಂಪೂರ್ಣ ಕುಲನಾಶಕ್ಕೆ ಕಾರಣರಾಗದಿರಲಿ. ಇಂದಿನಿಂದ ಪುನಃ ಮುಂದಿನ ಯುದ್ಧಕ್ಕೆ ಕಾರ್ಯಕರ್ತರ ಸೇನೆಯನ್ನು ಸಿದ್ಧಮಾಡುವ ಕೆಲಸನಡೆಯಲಿ. ಆದರೆ ಸೈನ್ಯದ ನೇತೃತ್ವವಹಿಸುವವನು. ಉತ್ತರ ಕುಮಾರ ನಾಗದಿರಲಿ. ಇದು ಒಬ್ಬ ಅಸಹಾಯಕ ಕಾರ್ಯಕರ್ತನಾಗಿ ದೇವರಲ್ಲಿ ಮಾಡುವ ಪ್ರಾರ್ಥನೆ. ಬಿಜೆಪಿ ಮುಖಂಡರಿಗೆ ಬುದ್ಧಿಕೊಡು ಸಂಘದ ಹಿರಿಯರಿಗೆ ವಿವೇಕಕೊಡು. ಹಿಂದುತ್ವದ ಕಾರ್ಯಕರ್ತರಿಗೆ ಸಮಾಜದಲ್ಲಿ ಶಕ್ತಿಕೊಡು. ಪಾರ್ಟಿಯಲ್ಲಿ ಮರ್ಯಾದೆ ಕೊಡು.
ಜೈ ಹಿಂದ್ ಜೈ ಶ್ರೀರಾಮ್
ನಟೇಶ್ ಉಡುಪಿ
ಮೋದಿಯವರಿಗೆ,ಬಿಜೆಪಿಯ ಕಾರ್ಯಕರ್ತರಿಗೆ ಹಾಗೂ ಕರ್ನಾಟಕದ ಜನತೆಗೆ ದ್ರೋಹ ಮಾಡಬೇಡಿ -
14/5/2023
No comments:
Post a Comment