Friday, May 12, 2023

ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು

 

ಶಿವಳ್ಳಿ ಬ್ರಾಹ್ಮಣರ ಕೆಲವು ಕುಲನಾಮಗಳ ಅರ್ಥ ತಿಳಿಯಿರಿ !


ಸೋಮಯಾಜಿ ದಂಪತಿ 

ಭಟ್ಟ -> ಸಂಸ್ಕೃತದ "ಭರ್ತಾ" ಪದದ ಕನ್ನಡ ರೂಪ. ಯಜಮಾನ, ಸ್ವಾಮಿ , ಪೂಜ್ಯ ಎಂದರ್ಥ.

ರಾವ್ -> ರಾಜಾ ಎಂಬ ಶಬ್ದ ಕನ್ನಡದಲ್ಲಿ ರಾಯ ಎಂದಾಯ್ತು . ಅದರ ಇಂಗ್ಲಿಷ್ ರೂಪಾಂತರವೇ  ರಾವ್ .

ಆಚಾರ್ಯ -> "ಆಚಾರ" ಎಂದರೆ "ನಿಯಮ". ಒಂದು ವಿಷಯದಲ್ಲಿ ಎಲ್ಲವನ್ನೂ ತಿಳಿದುಕೊಂಡವನು ಆಚಾರ್ಯ.

ಉಪಾಧ್ಯಾಯ -> ಪಾಠ ಮಾಡುವವನು

ತಂತ್ರಿ -> ದೇವಸ್ಥಾನಗಳ ಧಾರ್ಮಿಕ ಕಾರ್ಯಗಳ ನಿಪುಣ. ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠೆ ಮಾಡುವವ 

ಹೆಬ್ಬಾರ -> ಹಿರಿದು + ಹಾರುವ . ಹಾರುವ ಅಂದರೆ ಬ್ರಾಹ್ಮಣ . ಹಿರಿಯನಾದ ಬ್ರಾಹ್ಮಣ . 

ಅಡಿಗ -> ಅಂದರೆ "ಸೇವಕ". ದೇವರ ಸೇವೆ ಮಾಡುವವನು ಅಥವಾ ಪೂಜೆ ಮಾಡುವವನು .

ಐತಾಳ -> ಸಂಸ್ಕೃತದ 'ಆಹಿತಾನಲದ" ಕನ್ನಡ ರೂಪ. ಅನಲ ಅಂದ್ರೆ ಅಗ್ನಿ. ಆಹಿತಾ ಅಂದರೆ 'ಸ್ಥಾಪಿಸುವವನು". ಯಾಜ್ಞಿಕ ಎಂದರ್ಥ.

ಉಡುಪ -> ಉಡುಪಿಯವನು . ಬಹುತೇಕ ಉಡುಪರು ವಿಶ್ವಾಮಿತ್ರ ಗೋತ್ರಕ್ಕೆ ಸೇರಿದ್ದು , ಕಂದಾವರ ಮೂಲದವರು.

ಹೊಳ್ಳ ->  ಎರಡು ವ್ಯಾಖ್ಯಾನಗಳಿವೆ . ೧. ಹೊಳೆಯ ಬದಿಯವರು ೨. ಹೋತೃ ಅಥಾವ ಹೋಮ ಮಾಡುವವರು

ಮಯ್ಯ -> "ಮಹತ್ಯ" ಅಂದರೆ "ಗೌರವಾನ್ವಿತ" ಎಂದರ್ಥ 

ಬಲ್ಲಾಳ -> "ಬಲ್ಲ+ಆಳು" ಅಥಾವ "ಬಲವಾದ + ಆಳು ". ರಾಜರಿಂದ ನೇಮಕವಾದ ಗ್ರಾಮಗಳ ಆಡಳಿತಾಧಿಕಾರಿಗಳು . 

ನಕ್ಷತ್ರಿ -> ನಕ್ಷತ್ರ ಶಾಸ್ತ್ರ ಅಥವಾ ಜ್ಯೋತಿಷ ಬಲ್ಲವರು . 

ಚಡಗ -> ಸಂಸ್ಕೃತದ "ಷಡಂಗ" ಅಂದರೆ ೬ ರೀತಿಯ ಪೂಜಾವಿಧಿಗಳಲ್ಲಿ ನಿಪುಣ . 

ಸೋಮಯಾಜಿ - - ಸೋಮಯಾಗ ಮಾಡಿದ ಪೂರ್ವಜರಿಂದ 

ಕಾರಂತ -> ಕಾರ್ಯವಂತ ಎಂಬುದರ ಕನ್ನಡ ರೂಪ. ದೇವಸ್ಥಾನದ ಅಧಿಕಾರಿ . 



ವಾಟ್ಸ್ ಅಪ್ ಕೃಪೆ.
13/5/2023

No comments:

Post a Comment