ಯುಗಾಂತರ ಧಾರಾವಾಹಿ.
---- ಶ್ರೀಮತಿ ಜಯಶ್ರೀ ಭಟ್,
ಸೇತುರಾಮ್ ರವರು ನನಗೆ ಮಂಥನ ಧಾರಾವಾಹಿ ಮೂಲಕ ಪರಿಚಯವಾದವರು. ಅವರ ಧಾರಾವಾಹಿಗಳೇ ಅವರ ವ್ಯಕ್ತಿತ್ವದ ಆಳ ಪರಿಚಯ ಮಾಡಿಕೊಡುತ್ತದೆ. ಮತ್ತು ಅದು ಜನ ಸಮುದಾಯಕ್ಕೆ ನಮ್ಮ ನಮ್ಮ ಅಂತರಾಳದ ಪರಿಚಯವನ್ನು ಮಾಡಿಕೊಡುತ್ತವೆ. ಇವರ ಧಾರಾವಾಹಿಗಳು ಬದುಕಿನ ಸಮನ್ವಯದ ಪ್ರತೀಕ. ಯಾರೂ ಕೆಟ್ಟವರಲ್ಲ.... ಯಾರೂ ಪೂರ್ತಿ ಒಳ್ಳೆಯವರಲ್ಲ. ಆದರೆ ಪರಿಸ್ಥಿಗಳಿಗೆ ತಕ್ಕ೦ತೆ, ಸ೦ಬ೦ಧಗಳಿಗೆ ಅನುಗುಣವಾಗಿ ವ್ಯಕ್ತಿತ್ವಗಳು ತಮ್ಮ ಪರಿಚಯವನ್ನು ಅನಾವರಣಗೊಳಿಸುತ್ತವೆ. ರ೦ಗಧಾಮ ಮೊದಲು ಕೆಟ್ಟವನ೦ತೆ ಕಂಡರೂ ಕೊನೆಯಲ್ಲಿ ಆತನಲ್ಲಿ ಸ್ವಲ್ಪ ಮಟ್ಟಿನ ಪರಿವರ್ತನೆ ಖುಷಿ ಕೊಟ್ಟಿತು. ಇಲ್ಲಿ ಪ್ರತಿಯೊ೦ದೂ ಪಾತ್ರವೂ ಭಿನ್ನ ಮತ್ತು ಅದು ಬದುಕಿನ ವಿವಿಧ ಆಯಾಮ ಮತ್ತು ಮಜಲುಗಳನ್ನು ತಿಳಿಸುತ್ತವೆ. ತಾಯಿ ಮಗಲೇ ಆದರೂ ಸ್ವ೦ತ ವ್ಯಕ್ತಿತ್ವ ಮತ್ತು ಸ್ವಾತ೦ತ್ರ್ರ್ಯ ವಿಷಯಕ್ಕೆ ಬ೦ದಾಗ ಬೇರೆಯಾಗಿ ನಿಲ್ಲುತ್ತವೆ. ಮತ್ತು ಅದೇ ಅ೦ತರಾಳ ಮನುಷ್ಯನದ್ದು. ಮನುಷ್ಯನ ಒಳಗಣ ಮನಸಿನ ಭಾವವನ್ನೇ ಹೊರ ತೋರಿಸುವ ಪಾತ್ರ ಮತ್ತು ಮಾತು ಅದ್ಧುತ, ಅದು ಬಹುಶಃ ಸೇರುತಾಮ್ ರವರಿಗೆ ಮಾತ್ರ ಸಾಧ್ಯ. ಅವರ ಮಾಗಿ ದ ಮನಸು, ಅನುಭವ ಇದರಲ್ಲಿ ಎದ್ದು ಕಾಣುತ್ತದೆ. ಇಡೀ ಜಗತ್ತಿನ ಮೂಲ ಮತ್ತು ಅದು ನಡೆದು ಬ೦ದ ಆಯಾಮವನ್ನು ಈ ಧಾರಾವಾಹಿಯಲ್ಲಿ ಕ೦ಡೆ. ನಮ್ಮ ಮನಸುಗಳು ಪರಿಚಯವನ್ನು ನಮಗೇ ಮಾಡಿಕೊಡುವ ಧಾರಾವಾಹಿ ಇದು. ಇದು ಮಾತ್ರ ಅ೦ತಲ್ಲ. ಅವರ ಎಲ್ಲಾ ಧಾರಾವಾಹಿ ನಾಟಕಗಳು ವಾಸ್ತವ ಬದುಕಿಗೆ ಹತ್ತಿರ ಮತ್ತು ನಮ್ಮನ್ನು ನಾವು ಅರಿಯುವಲ್ಲಿ ನೆರವು ಮಾಡುತ್ತವೆ. ರಮಾನ೦ದ ಆಶೆ ಬುರುಕನಾದರೂ ಕ್ರೂರಿ ಅನಿಸುವುದಿಲ್ಲ. ಮಾನಸ ಮತ್ತು ಅವರ ತ೦ದೆ ನಡುವಿನ ಸ೦ಭ೦ದ. ಮಾನಸ ಮತ್ತು ಸಚಿನ ನಡುವಿನ ಸ೦ಬ೦ಧ ಬದುಕಿನ ಅಗತ್ಯಗಳ ಪೂರೈಕೆಯಾಗಿ ಕಾಣುವ ನ೦ತರ ಅವರು ತಮ್ಮದನ್ನೇ ಅನುಸರಿಸುವ ವಿಚಿತ್ರ ಪಾತ್ರಗಳು.
ಎಲ್ಲಾ ಪಾತ್ರಗಳೂ ಅಭಿನಯಕ್ಕೆ ನ್ಯಾಯ ನೀಡಿವೆ ಅಲ್ಲದೇ ಅವರಿ೦ದ ಆ ನಟನೆ ತರಿಸುವಲ್ಲಿ ಸೇತುರಾ೦ ರವರ ನಿರ್ದೇಶನ ಚೆನ್ನಾಗಿತ್ತು ಅ೦ತ ಹೇಳಬಹುದು. ಸರಕಾರೀ ವ್ಯವಸ್ಥೆಗಳ ಅನಾವರಣ ಮತ್ತು ರಾಜಕೀಯದ ವಿವಿಧ ಆಯಾಮಗಳನ್ನು ತೆರೆದಿಟ್ಟು ಹೊಸ ಲೋಕ ಒ೦ದನ್ನು ತೋರಿಸಿಕೊಟ್ಟಿದ್ದೀರಿ. ಓ ಇದು ಹೀಗೆ ಅಲ್ವಾ ಅ೦ತಾನೂ ಅನಿಸಿತ್ತು.
ಇನ್ನೊ೦ದು ಟಿವಿ ಜಗತ್ತಿನ ಪರದೆ ಹಿ೦ದಿನ ಬದುಕನ್ನು ತೆರೆದಿಟ್ಟ ರೀತಿ ತು೦ಬಾ ಚೆನ್ನಾಗಿತ್ತು. ಅದರ ಹಿ೦ದೆ ಓಡುವವರಿಗೆ ಒ೦ದು ಕ್ಷಣ ಆಲೋಚಿಸಿ ಮು೦ದೆ ಹೆಜ್ಜೆ ಇಡಬೇಕು ಅನ್ನುವ ಅಲೋಚನೆ ಮು೦ದಿನ ಪೀಳಿಗೆಗೆ ಕೊಟ್ಟಿದೆ ಅನ್ನಬಹುದು. ಸು೦ದರ ಜಗತ್ತಿನ ಹಿ೦ದಿನ ಕರಾಳ ಸತ್ಯ ತೆರೆದಿಟ್ಟ ರೀತಿ ಅದ್ಧುತ.
ಒಟ್ಟಿನಲ್ಲಿ ನನ್ನನ್ನೇ ನಾನು ತೊಡಗಿಸಿಕೊ೦ಡು ನೋಡಿದ ಧಾರಾವಾಹಿ ಇದು. ನನ್ನನ್ನೇ ನಾನು ಪ್ರಶ್ನಿಸಿಕೊ೦ಡ ಧಾರಾವಾಹಿ ಇದು. ಧಾರಾವಾಹಿ ನೋಡುವುದೇ ಒ೦ದು ಸತ್ಸ೦ಗದ೦ತೆ ಅನಿಸಿತ್ತು ಅಲ್ಲದೇ ಹಬ್ಬವಾಗಿ ಪರಿಣಮಿಸಿತ್ತು ನನಗೆ. ನನ್ನ ಮನೆಯಲ್ಲಿ ಟಿವಿ ಇಲ್ಲ ನಾನು ಯುಟ್ಯೂಬ್ ನಲ್ಲೇ ನೋಡಬೇಕು. ಇಲ್ಲಿ ಇನ್ನೂ ಕೆಲವು ಕ೦ತು ಬಾಕಿ ಇದೆ.
ಒಟ್ಟಿನಲ್ಲಿ ಈ ಧಾರಾವಾಹಿ ಸಮಾಜ ಸುಧಾರಣೆ ಯಾಗುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಸೇತುರಾ೦ ರವರ ಸಾಮಾಜಿಕ ಸವಾಬ್ದಾರಿ ಇದರಲ್ಲಿ ಎದ್ದು ಕಾಣುತ್ತಿದೆ. ಸೇತುರಾ೦ ರವರೇ ನಿಮಗೆ ನೀವೇ ಸಾಟಿ. ಮೆಚ್ಚಿದ್ದೇನೆ. ನಿಮ್ಮನ್ನು ಜೀವಿಸಿದ್ದೇನೆ. ತಿದ್ದಿಕೊ೦ಡಿದ್ದೇನೆ. ಬೆಳೆದಿದ್ದೇನೆ. ನಿಮ್ಮ ಶ್ರಮ ಸಾರ್ಥಕವಾಗಿದೆ ಸರ್. ನಿಮಗಿದೋ ಹೃದಯಾಳದ ತಲೆಬಾಗಿ ನಮನ. ಎಲ್ಲಾ ಪಾತ್ರಧಾರಿಗಳಿಗೂ ನಮನ.
ಮತ್ತೇ ನೋಡುವ ಸದವಕಾಶ. ಪ್ರತಿ ಸೋಮವಾರದಿoದ ಶುಕ್ರವಾರವಾರದವರೆಗೆ ಮತ್ತೇ ಯುಗಾoತರದ ಘಟನೆಗಳು ಪುನರಾವರ್ತನೆ.
ಗೋಪಾಲ ಕ್ರಷ್ಣ
ಮೊದಲನೇ ಸಂಚಿಕೆಯಿಂದ ನೋಡಿದವನು ನಾನು. ಎಷ್ಟೋ ಸಲ ಸಂಭಾಷಣೆ ಕೃತಕ, ಪಾತ್ರಗಳ ನಡಾವಳಿ ವಿಭಿನ್ನ ವಿಚಿತ್ರ, ಸಾಮಾನ್ಯ ಪ್ರಸಂಗಗಳಲ್ಲಿ ಹೀಗೆ ಯಾರು ವರ್ತಿಸುತ್ತಾರೆ.... ಮೊದಲಾದ ಅನಿಸಿಕೆಗಳು ಮನದಲ್ಲಿ ಹಾದು ಹೋಗುತ್ತಿತ್ತು. ತಮಾಷೆ ಅಂದರೆ ಸುಮಾರು ಎಪಿಸೋಡು ಗಳಲ್ಲಿ ಮೊದಲನೇ ಬಾರಿಗೆ ಸಂಭಾಷಣೆ ಅರ್ಥ ಆಗದೇ ಮರು ಪ್ರಸಾರ ನೋಡಿದ್ದೂ ಇದೆ. ಒಂದು ರೀತಿ ನವ್ಯಕಾವ್ಯದ ಅನುಭವ ಕೊಟ್ಟಿತು....
ಆದರೂ ಕೊನೇ ಸಂಚಿಕೆ ವರೆಗೆ ಹಿಡಿದು ಇಟ್ಟುಕೊಂಡಿತು ಮತ್ತು ಇಷ್ಟು ಬೇಗ ಮುಗಿಯಬಾರದಿತ್ತು ಅನಿಸಿತು.
ಎಲ್ಲಾ ಪಾತ್ರಗಳಿಗೂ ನೈಜತೆಯ ಲೇಪನ ಇದ್ದು ಇನ್ನೂ ಹಲವು ತಿಂಗಳುಗಳ ಕಾಲ ಮೇಷ್ಟ್ರು ತಲೇಲಿ ಇರ್ತಾರೆ, ಅರುಂಧತಿ ಕಾಡುತ್ತಾಳೆ, ಅದೇ ರೀತಿ ರಂಗಧಾಮ ಸಹ. ಮಿಕ್ಕ ಪಾತ್ರಗಳೂ ಸಹ ಮನಸಿನಲ್ಲಿ ಹುದುಗಿ ವೆ.
ಒಳ್ಳೆಯ ಧಾರಾವಾಹಿ ನೀಡಿದ ಇಡೀ ತಂಡಕ್ಕೆ ಅಭಿನಂದನೆಗಳು.
23/5/2023
No comments:
Post a Comment