ಜಯರಾಮ ಸೋಮಯಾಜಿ
21 ಜೂನ್ 2023 , ಬುಧವಾರ
ಗೆಳೆಯ ತಿರು ಶ್ರೀಧರ್ ಅವರ ಲೇಖನ - ಕನ್ನಡ ಸಂಪದ ದಲ್ಲಿ
(ನಮ್ಮ ಕನ್ನಡ ಸಂಪದ Kannada Sampada
ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)

See less
— with Nalini Somayaji and Jayarama Somayaji.
Happy birthday Jayarama Somayaji Sir
ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ನಮ್ಮ ನಡುವೆ ಇರುವ ವಿಶಾಲವ್ಯಾಪ್ತಿಯ ಸಾಹಿತ್ಯ, ಕಲೆ, ಶಿಕ್ಷಣ, ಪರಿಸರ ಮತ್ತು ಸಾಂಸ್ಕೃತಿಕ ಪ್ರೀತಿಗಳ ನೆಲೆಯಂತಿರುವವರು. ಈ ದಂಪತಿಗಳು ಭಾರತದಲ್ಲಷ್ಟೇ ಅಲ್ಲದೆ ಆಫ್ರಿಕಾದ ಹಲವು ದೇಶಗಳು ಮತ್ತು ಮಧ್ಯಪ್ರಾಚ್ಯದ ದುಬೈ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಕನ್ನಡ ಸಾಂಸ್ಕೃತಿಕ ಪರಿಸರದ ವಿಸ್ತಾರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂದು ಪೂಜ್ಯ ಜಯರಾಮ ಸೋಮಯಾಜಿ ಅವರ ಜನ್ಮದಿನ.
ಜಯರಾಮ ಸೋಮಯಾಜಿ ಅವರು ಸಾಲಿಕೇರಿ ಬ್ರಹ್ಮಾವರದ ಹತ್ತಿರದ ಬಿರ್ತಿ ಎಂಬಲ್ಲಿ 1948ರ ಜೂನ್ 21ರಂದು ಜನಿಸಿದರು. ತಂದೆ ಅಲ್ಲಿಯ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಸೋಮಯಾಜಿ. ತಾಯಿ ಕಾವೇರಿ. ಹಾರಾಡಿ ವಿದ್ಯಾಮಂದಿರ ಶಾಲೆಯಲ್ಲಿ ಜಯರಾಮ ಸೋಮಯಾಜಿ ಅವರ ವಿಧ್ಯಾಭ್ಯಾಸ ಆರನೇ ಕ್ಲಾಸಿನವರೆಗೆ ನಡೆದು ಏಳನೇ ಕ್ಲಾಸಿಗೆ ಬ್ರಹ್ಮಾವರದ ಎಸ್.ಎಮ್.ಎಸ್. ಹೈಸ್ಕೂಲಿಗೆ ಸೇರಿದರು. 1964ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ, ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣರಾಗಿ ಉಡುಪಿಯಲ್ಲಿಯ ಎಮ್.ಜಿ.ಎಮ್. ಕಾಲೇಜಿಗೆ ಪಿಯುಸಿ. ವಿಜ್ಞಾನ ವಿಭಾಗಕ್ಕೆ ಸೇರಿದರು. ಆಗ ಕು.ಶಿ.ಹರಿದಾಸ ಭಟ್ಟರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. 12ಕಿಲೋಮೀಟರ್ ಏರುತಗ್ಗುಗಳ ಸೈಕಲ್ ಪಯಣದಲ್ಲಿ ಓದು ಸಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1965ರಲ್ಲಿ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಗಳನ್ನಾಯ್ದು ಬಿ.ಎಸ್ಸಿ ಸೇರಿದರು. 1968 ಮಾರ್ಚ್ ತಿಂಗಳಲ್ಲಿ ಆರನೇ ರ್ಯಾಂಕ್ ಪಡೆದು ಬಿ.ಎಸ್ಸಿ ಪದವಿ ಗಳಿಸಿದರು. 1968-70 ಅವಧಿಯಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ. ಎಸ್ಸಿ ಓದಿ ಮೂರನೇ ರ್ಯಾಂಕ್ ಸಾಧನೆ ಮಾಡಿದರು.
ಜಯರಾಮ ಸೋಮಯಾಜಿ ಅವರು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿಗೆ ಎಮ್.ಟೆಕ್. ಓದಿಗೆ ಸೇರಿದರಾದರೂ ರುಚಿಸದೆ ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ ಭೌತಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ ಮೂಡಿತು. ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ ಎಂಬಲ್ಲಿ ಅಧ್ಯಾಪನಕ್ಕೆ ಸೇರಿದರು. 1974ರಲ್ಲಿ ನೈಜಿರಿಯಾ ದೇಶದ ಗೊಂಬೆ ಎಂಬ ಊರಿನಿಂದ ಪ್ರಾರಂಭಗೊಂಡು, ಆಫ್ರಿಕ ಖಂಡದ ಸಣ್ಣ ದೇಶ ದಿ ಗ್ಯಾಂಬಿಯಾ, ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ, ಗುಯುಕ್ ಎಂಬ ಗ್ರಾಮ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. ಹೋದೆಡೆಯಲ್ಲೆಲ್ಲ ತಮ್ಮ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳೊಡನೆ ಹಂಚಿದ್ದಲ್ಲದೆ ಅಲ್ಲಿನ ಸ್ಥಳೀಯರು ಮತ್ತು ಭಾರತೀಯ ಸಮುದಾಯದೊಡನೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಜಯರಾಮ ಸೋಮಯಾಜಿ ಅವರು 1986ರಲ್ಲಿ ದುಬೈಗೆ ಬಂದರು. ಅಲ್ಲಿನ ಜೆಮ್ಸ್ ಸಮೂಹದ ಪ್ರತಿಷ್ಟಿತ ಅವರ್ ಓನ್ ಇಂಗ್ಲಿಷ್ ಸಂಸ್ಥೆಯಲ್ಲಿ ಅಧ್ಯಾಪನ ಆರಂಭಿಸಿದರು. ಎರಡು ದಶಕಗಳಿಗೂ ಮೀರಿದ ಕಾಲ ದುಬೈನಲ್ಲಿದ್ದ ಸಂದರ್ಭದಲ್ಲಿ ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ದುಬೈ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ದುಬೈ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು. ದುಬೈ ಕನ್ನಡ ಸಂಘವೆಂದರೆ ಅತ್ಯಂತ ಕ್ರಿಯಾಶೀಲ ಎಂಬ ಪ್ರಸಿದ್ಧಿ ಮೂಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡದ ಸಂಘದ ಚಟುವಟಿಕೆಗಳೇ ಅಲ್ಲದೆ ಈ ದಂಪತಿಗಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿನ ಭಾರತೀಯ ಮನಗಳನ್ನು ಒಂದೆಡೆ ಕೂಡಿಸಿದ ಕೆಲಸ ಮಾಡುತ್ತಾ ಬಂದಿದ್ದರು.
ಎರಡು ದಶಕಗಳಿಗೂ ಹೆಚ್ಚು ಕಾಲದ ದುಬೈ ವಾಸದ ನಂತರ ಕನ್ನಡದ ಮಣ್ಣಿನಲ್ಲಿ ವಿಶ್ರಾಂತ ಜೀವನಕ್ಕೆ ಬಂದ ಜಯರಾಮ ಸೋಮಯಾಜಿ ಅವರು ತಮ್ಮ ಕುಟುಂಬದೊಡನೆ ವಿಜ್ಞಾನ ಶಿಕ್ಷಣ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ನಿರಂತರ ಸಕ್ರಿಯರಾಗಿದ್ದಾರೆ. ಸೋಮಯಾಜೀಸ್ ಲರ್ನಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸೋಮಯಾಜಿ ದಂಪತಿಗಳು ಬ್ಲಾಗ್ ಬರವಣಿಗೆ, ಯೂ ಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಅಂತಹ ಮಾಧ್ಯಮಗಳಲ್ಲಿ ತಮ್ಮ ಅನೇಕ ಉತ್ತಮ ಅಭಿರುಚಿಗಳನ್ನು ತೆರೆದಿಡುತ್ತಾ ಎಲ್ಲರೊಂದಿಗೆ ಅನುಪಮ ಬಾಂಧವ್ಯ ಹೊಂದಿದ್ದು ನಮಗೆಲ್ಲ ಪ್ರೇರಣೆ ಆಗಿದ್ದಾರೆ.
ಪೂಜ್ಯ ಹಿರಿಯರಾದ ಜಯರಾಮ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ
ಪ್ರತಿಕ್ರಿಯೆಗಳು:
ತಿರು ಶ್ರೀಧರ್:

ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ,
ಶ್ರೀಮತಿ Nalini Somayaji ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ.
ಜಯರಾಮ ಸೋಮಯಾಜಿ:
ಅನಂತಾನಂತ ಧನ್ಯವಾದಗಳು ತಿರು ಶ್ರೀಧರ್ ಅವರೇ.
ಆ ದೇವರ ಆಶೀರ್ವಾದ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಸದಾ ಇರಲಿ.
ನೂತನ್ ದೊಶೆಟ್ಟಿ:
ಹಿರಿಯ ಸಹೃದಯರಿಗೆ ಹಾರ್ದಿಕ ಶುಭಾಶಯಗಳು
ವಿಜಯಲಕ್ಷ್ಮಿ:
ಜನುಮ ದಿನದ ಶುಭಾಶಯಗಳು. ಬಾವಾಜಿ........
ಶ್ರೀಕೃಷ್ಣ ಮುಖ್ಯ ಪ್ರಾಣ ದೇವರು,ನಿಮಗೂ , ನಿಮ್ಮ ಕುಟುಂಬಕ್ಕೂ, ಸಕಲ , ಸೌಭಾಗ್ಯ, ಶ್ರೇಯಸ್ಸನ್ನು ಕೊಡಲಿ ಎಂದು ಪ್ರಾರ್ಥಿಸುವೆ.........................
ರುಕ್ಮಿಣಿ ಜಯರಾಮ ರಾವ್:
ಜಯರಾಮ ಸೋಮಯಾಜಿಯವರಿಗೆ ಆತ್ಮೀಯ ನಮಸ್ಕಾರಗಳು ಹಾಗೂ ಜನ್ಮದಿನದ ಶುಭಾಶಯಗಳು "
ಶಶಿಧರನ್ ಜಿ,
ಶ್ರೀ ಜಯರಾಮ ಸೋಮಯಾಜಿ ಅವರಿಗೆ ಅವರ ಹುಟ್ಟುಹಬ್ಬದ ಶುಭಾಶಯಗಳು. ಅವರ ಮುಂದಿನ ದಿನಗಳು ಸಂತೋಷದಾಯಕವಾಗಿರಲಿ ಎಂದು ಹಾರೈಸುತ್ತೇನೆ.
ಕ್ರಷ್ಣಮೂರ್ತಿ ಚಿಕ್ಕೆನಹಳ್ಳಿ:
shubhavagali aathmeeya jayarama. devaru ella olleyade adali
2
- Like
ಉಷಾ ಸುರೇಶ್ ಕುಕ್ಕೆಮನೆ:
ಹುಟ್ಟುಹಬ್ಬದ ಶುಭಾಶಯಗಳು ಮತ್ತು ಶುಭಹಾರೈಕೆಗಳು ಸೋಮಯಾಜಿ ಯವರಿಗೆ.ನಿಮಗೆ ಆಯುರಾರೋಗ್ಯ ಸಂಪತ್ತುಗಳನ್ನು ದೇವರು ದಯಪಾಲಿಸಲಿ.
ಗೀತಾ ಜಯಪ್ರಕಾಶ್:
Happy birthday Sir, Wishing you many more happier ones ahead....stay blessed always.
ಶೋಭನಾ ಮಾಲಿನಿ ವರ್ಗೀಸ್ (Ex Principal, Our Own School, Al Warqa , Dubai )
Many happy returns of the day Somayaji Sir. And prayers for a great year to follow. Always remember our brief time at al warqa with much warmth.

ಗಣೇಶ್ ರೈ :
ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯಃ ಆಯುಷ್ಯೆವೆಂದ್ರಿಯೆ ಪ್ರತಿತಿಷ್ಠತಿ
ಸದಾ ರಾಮ್
No comments:
Post a Comment