Saturday, June 3, 2023

ಸುಭಾಷಿತಗಳು - ನುಡಿಮುತ್ತುಗಳು - 3


 1. ಸಮಯಕ್ಕೆ ಸಿಗದ ವಸ್ತುಗಳು, ಸಮಯಕ್ಕೆ ಆಗದ ಬಂಧುಗಳು, ಸಮಯವನ್ನೇ ನೀಡದ ಸಂಬಂಧಗಳು, ಭಾವನೆಗಳನ್ನು ಅರಿಯದ ಬಂಧುಗಳು, ಬತ್ತಿ ಹೋದ ನದಿಯಲ್ಲಿ ಬಟ್ಟೆ ಒಗೆದಂತೆ. 

*****************************************

2. ಬಾಳ ಕದನದಲ್ಲಿ ಭರವಸೆಗಳು ಬೇಕು... ಜೀವ ರಾಶಿಯಲ್ಲಿ ಮಾನವರಿಗೆ ಆದ್ಯತೆ... ನಾವೇ ಮೂಢರಾದರೆ ಜ್ಞಾನಕ್ಕೆಲ್ಲಿ ಪೂಜ್ಯತೆ... ಇಲ್ಲಿ ಈಸಬೇಕು ಇದ್ದು ಜಯಿಸಬೇಕೆಂದು. 

***************************************

3. ಯಾರ ಮುಂದೆ ಯಾವ ರೀತಿ ಮುಖವಾಡ ಧರಿಸಬೇಕೆಂದು ಅರ್ಥವಾಗುತ್ತಿಲ್ಲ! ಅವಸರ ನೋಡಿ ನನ್ನವರೆಂದರೂ ಕೂಡ ಉಪಯೋಗಿಸುತ್ತಾರೆ. 

**********************************

4. ಮಾತು ಮುತ್ತು... ಮೌನ ಬಂಗಾರ.* ಅತಿಯಾಗಿ ಮಾತಾಡಿ* ಅಲ್ಪನೆನಿಸಿಕೊಳ್ಳುವ ಬದಲು,*

ಮಿತವಾಗಿ ಮಾತಾಡಿ,*ಆತ್ಮೀಯನೆನಿಸಿಕೊಳ್ಳುವುದು ಉತ್ತಮ.*

*********************************

5. ಶುದ್ಧವಾದ ನಡತೆ, ತೂಕವಾದ ಮಾತು, ಸಹಾಯ ಮಾಡುವ ಮನೋಭಾವ ಇವೆಲ್ಲವೂ ಜನನ ಮರಣದ ನಡುವೆ ಇರುವ ನಿಜವಾದ ರೇಖೆಗಳು. ಈ ರೇಖೆ ಯಾರಲ್ಲಿ ಇರುತ್ತದೋ ಅಂತಹವರಿಗೆ ಭಗವಂತನೇ ಅದೃಷ್ಟದ ರೇಖೆಯನ್ನು ದಯಪಾಲಿಸು ತ್ತಾನೆ.

**********************************

6. ಸೂರ್ಯ ಚಂದ್ರ ಬದಲಾಗುವುದಿಲ್ಲ. ಪೃಕೃತಿಯ ಸೃಷ್ಟಿಯಲ್ಲಿ ಬದಲಾಗಿದ್ದು ಮನುಷ್ಯ ಮತ್ತು ಮನುಷ್ಯತ್ವ

****************************************

7. ನೇರವಾಗಿ ಮಾತನಾಡುವವರನ್ನು ಕಳೆದು ಕೊಳ್ಳಬೇಡಿರಿ.. ಅಂತವರ ಮನಸ್ಸು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ.

***************************************

8. ಅತಿಯಾದ ರೂಪ ಸೀತೆಗೆ ಮುಳುವಾಯಿತು. ಅತಿಯಾದ ಗರ್ವ ರಾವಣನಿಗೆ ಕೇಡುಂಟುಮಾಡಿತು. ಅತಿಯಾದ ದಾನ ಬಲಿಯನ್ನು ನಾಶ ಮಾಡಿತು. ಆದುದರಿಂದ ಅತಿಯಾಗಿ ಯಾವುದನ್ನೂ ಮಾಡಬಾರದು.

***************************************

9. ಇದ್ದವರು ಇಲ್ಲದವರು ಎಂದು ಗುದ್ದಾಡಬೇಡಿ.. ಎದ್ದು ಹೋಗುವವರೆ ಎಲ್ಲರೂ ಒಂದು ದಿನ.. 

ಇದ್ದವರು ಚಿನ್ನ ತಿನ್ನಲ್ಲ.. ಇಲ್ಲದವರೇನು ಮಣ್ಣು ತಿನ್ನಲ್ಲ. 

ಎಲ್ಲರನ್ನೂ ಸಮಾನವಾಗಿ ಕಾಣಿರಿ, ಇದು ವಿಶಾಲವಾದ ಲೋಕ, 

ಇಬ್ಬರೂ ತಿನ್ನೋದು ಅನ್ನವನ್ನು. ಕೊನೆಗೆ ಇಬ್ಬರೂ ಸೇರೋದು ಮಣ್ಣನ್ನೇ.. 

***************************************

10. ಬೆಚ್ಚನೆ ಮನೆಯೊಳಗೆ ಪುಕ್ಕಟೆ ವಿದ್ಯುತ್  ಇರಲು......ವೆಚ್ಚಕೆ  2000 ಹೊನ್ನಿರಲು .....😍

ಉದ್ಯೋಗ ಮಾಡದೆ ಸಿಗುವ ಭರಪೂರ ಭತ್ಯೆ ಇರಲು. 

ಇಚ್ಚೆಯನರಿತು 10 ಕೆಜಿ ಅಕ್ಕಿ ಕೊಡುವ ಸರ್ಕಾರವಿರಲು .

ಮನೆಯೊಡತಿಗೆ ಬೇಜಾರಾದಾಗ ತವರಿಗೆ ಹೋಗಲು ಪುಕ್ಕಟೆ ಬಸ್ ಇರಲು, 

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ... ಮತದಾರ... 

ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು...

****************************************

11. ಹುಟ್ಟು ಎಲ್ಲೋ... ಸಾವು ಎಲ್ಲೋ... ಬದುಕಿನ ಪಯಣ ಇನ್ನೆಲ್ಲೋ... 

ಆದರೆ ಪಯಣದ ದಾರಿಯಲ್ಲಿ ಸಿಗುವ ಸ್ನೇಹ... ಪ್ರೀತಿ... ವಿಶ್ವಾಸ ಮಾತ್ರ... ಮನಸ್ಸಿಗೆ ತುಂಬಾ ಹತ್ತಿರ ವಾಗಿರುತ್ತದೆ. ನೆನಪುಗಳು ಜೀವಂತ ಶಾಶ್ವತ.. 

***************************************

12. ನಮ್ಮ ಆಡಂಬರ, ಅಹಂಕಾರ, ಚೆಲುವು ಎಲ್ಲವೂ ಸಾವಿನ ಮುಂದೆ ಸೋತು ಹೋಗುತ್ತದೆ. ಆದರೆ.. ಗುಣ ಸಾವನ್ನು ಗೆದ್ದು ಬಿಡುತ್ತದೆ. 

*************************************

13. ನಕ್ಕರೆ ಕಲ್ಮಷವಿರಬಾರದು. ಪ್ರೀತಿಸಿದರೆ ದ್ವೇಷವಿರಬಾರದು. ಪ್ರಾರ್ಥಿಸಿದರೆ ಕೆಟ್ಟ ಗುಣವಿರಬಾರದು. ದಾನ ಮಾಡಿದರೆ ಪ್ರತಿಫಲದ ನಿರೀಕ್ಷೆಯಿರಬಾರದು. 

*************************************

14. ಮನುಷ್ಯ ಆಸ್ತಿಯನ್ನು ಕಳೆದುಕೊಂಡು ಬಡವನಾಗುವುದಿಲ್ಲ. ಆತ್ಮೀಯ ರನ್ನು ಕಳೆದುಕೊಂಡಾಗ ಬಡವನಾಗುತ್ತಾನೆ. 

***************************************

15. ಬದುಕು ನಾವೆಣಿಸಿದಂತೆ ಅತೀ ಸುಲಭವೂ ಅಲ್ಲ ಕಷ್ಟವೂ ಅಲ್ಲ. ಬಂದಂತೆ ಸ್ವೀಕರಿಸಿದರೆ ಎದುರಿಸುವ ಶಕ್ತಿ ತಂತಾನೆ ಬರುತ್ತದೆ. 

*************************************

16. ಯಾರಿಗೇ ಆಗಲಿ, ಅಗತ್ಯಕ್ಕಿಂತ ಹೆಚ್ಚಾಗಿ ಪ್ರಾಮುಖ್ಯತೆ ಕೊಟ್ಟರೆ ನಮ್ಮನ್ನು ಕಸ ಕ್ಕಿಂತ ಕಡೆಯಾಗಿ ನೋಡುತ್ತಾರೆ. 

****************************************

17. ಪಾಪದ ಹೊರೆ ಹೆಚ್ಚಾಗುವಷ್ಟು ಗಳಿಸಬಹುದು. ಸಾಲದ ಹೊರೆ ಹೆಚ್ಚಾಗುವಷ್ಟು ಖರ್ಚು ಮಾಡಬಾರದು. ಕಾಯಿಲೆಗಳು ಹೆಚ್ಚಾಗುವಷ್ಟು ತಿನ್ನಬಾರದು. ಕಲಹಗಳು ಹೆಚ್ಚಾಗುವ ಹಾಗೆ ಮಾತನಾಡಬಾರದು. ಚಿಂತೆ ಹೆಚ್ಚಾಗುವಷ್ಟು ಯೋಚಿಸಬಾರದು

****************************************

18. ಒಬ್ಬ ಶಾಂತ ಸ್ವಭಾವದ ವ್ಯಕ್ತಿಯ ಮನಸ್ಸು, ಅತ್ಯಂತ ಶಕ್ತಿಯುತವಾಗಿ ಇರುತ್ತದೆ. ಎಂತಹ ಸಂದರ್ಭದಲ್ಲೂ ಧೈರ್ಯಗೆಡುವುದಿಲ್ಲ. 

****************************************

19. ತಲೆ ತಗ್ಗಿಸಿ ನಿನ್ನ ಕೆಲಸ ನೀನು ಮಾಡಿದರೆ, ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ

***************************************

20. ಗಟ್ಟಿಮುಟ್ಟಾದ ಮೂಳೆಗಳಿಂದ ಕೂಡಿದ ಕಾಲು ಜಾರುವುದರಿಂದ ಆಗುವ ಅನಾಹುತ ಕ್ಕಿಂತ....! 

ಮೂಳೆ ಗಳೇ ಇಲ್ಲದ ನಾಲಿಗೆ ಜಾರುವುದರಿಂದ ಆಗುವ ಅಪಾಯವೇ ಹೆಚ್ಚು.....!!! 

****************************************

21. ಅಹಂಕಾರವು ಒಂದು ಮಾನಸಿಕ ಕಾಯಿಲೆ ಯಾಗಿದ್ದು ಇದಕ್ಕೆ ಚಿಕಿತ್ಸೆ ಯನ್ನು ಪೃಕೃತಿ ಮತ್ತು ಸಮಯ ಮಾತ್ರ ಕೊಡುತ್ತದೆ.

**************************************

22. ಜೀವನ ಎಂದಿಗೂ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 

ನಾವೇ ಜೀವನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. 

***************************************

23. ಜೀವನದಲ್ಲಿ ಏನು ಮಾಡಬೇಕೆಂದು "ರಾಮಾಯಣ" ಹೇಳಿ ಕೊಡುತ್ತದೆ. 

ಜೀವನದಲ್ಲಿ ಏನು ಮಾಡಬಾರದೆಂದು "ಮಹಾಭಾರತ" ಹೇಳಿ  ಕೊಡುತ್ತದೆ. 

ಜೀವನದಲ್ಲಿ ಹೇಗೆ ಬದುಕ ಬೇಕೆಂಬುದನ್ನು "ಭಗವದ್ಗೀತೆ" ಹೇಳಿ ಕೊಡುತ್ತದೆ.

*****************************************

24. ವ್ಯಕ್ತಿ ಶ್ರೇಷ್ಟನೆನಿಸುವುದು ಸಂಸ್ಕಾರದಿಂದಲೇ ಹೊರತು ಜನ್ಮ ಜಾತಿಯಿಂದಲ್ಲ;ಯೋಗ್ಯವಾದ ಆಚಾರ ವಿಚಾರ ,ಸಂಸ್ಕಾರ ಮಾನವನನ್ನು ದೈವತ್ವಕ್ಕೇರಿಸುತ್ತದೆ. 

****************************************

25. ಒಂದು ಕ್ಷಣ ನೋವಾದರೂ ಮನಸ್ಸಲ್ಲಿ ಇಟ್ಟುಕೊಳ್ಳದೆ ಅಲ್ಲೇ ಮರೆತು ಮತ್ತೆ ಮಾತನಾಡುವುದೇ ನಿಜವಾದ ಸ್ನೇಹ, ಪ್ರೀತಿ. ಯಾಕೆಂದರೆ ಪ್ರತಿ ಪ್ರೀತಿ ಸ್ನೇಹ ಸಂಬಂಧದಲ್ಲೂ ಮುನಿಸು ಕೋಪ ಜಗಳ ಇದ್ದಷ್ಟೂ ಸಂಬಂಧ ಗಟ್ಟಿಯಾಗುವುದು. 

******************************************

26. ಸುಂದರ ಬದುಕು ದಿಢೀರೆಂದು ಘಟಿಸುವುದಿಲ್ಲ. ಪ್ರೀತಿ ಸಂತೋಷ, ತಾಳ್ಮೆ ಮತ್ತು ತ್ಯಾಗ ಗಳಿಂದ ಅದನ್ನು ನಾವೇ ನಿರ್ಮಿಸಿ ಕೊಳ್ಳಬೇಕು! 

*****************************************

27. ನಡೆವ ಹಾದಿಯಲ್ಲಿ ಚುಚ್ಚುವ ಮುಳ್ಳು ದ್ದರೆ ಪಾದರಕ್ಷೆ ಮೆಟ್ಟಿ ನಡೆ. 

ಬದುಕಿನ ಹಾದಿಯಲ್ಲಿ ಚುಚ್ಚಿ ಮಾತನಾಡುವವರಿದ್ದರೆ ಪಾದರಕ್ಷೆ ಬಿಡುವ ಸ್ಥಳದಲ್ಲಿ ಬಿಟ್ಟು ನಡೆ

*****************************************

28. ಎಲ್ಲರಿಗೂ ಒಳ್ಳೆಯದನ್ನೇ ಬಯಸುವವರು ತುಂಬಾ ನೋವು ಅನುಭವಿಸುತ್ತಾರೆ. ಏಕೆಂದರೆ ಅವರ ಬಗ್ಗೆ ಯೋಚಿಸುವುದನ್ನೇ ಅವರು ಬಿಟ್ಟಿರುತ್ತಾರೆ. 

*****************************************

29. ನೀವು ಗೆದ್ದು ಸಾಧಿಸುವ ತನಕ ಏನೇ ಕತೆ ಹೇಳಿದರೂ.... ಅದನ್ನು ಕೇಳುವ ಮನಸ್ಸು, ಉತ್ಸಾಹ ಯಾರಿಗೂ ಇರುವುದಿಲ್ಲ. ಗೆದ್ದ ನಂತರ ಅವರಾಗಿಯೇ ದಯವಿಟ್ಟು ನಿನ್ನ ಕತೆ ಹೇಳು ಅಂತಾರೆ. ಗೆದ್ದ ನಂತರ ಸಿಗುವ ಸ್ಥಾನ ಮಾನ ಗಳೇ ಬೇರೆ. ಹೀಗಾಗಿ ಗೆಲ್ಲಬೇಕು. 

***************************************

30. ಹಣ ಮುಖ್ಯ ಎನ್ನುವವರಿಗೆ ಒಳ್ಳೆಯತನ ಕಡಿಮೆ!!! ಒಳ್ಳೆಯತನ ಮುಖ್ಯ ಎನ್ನುವವರಿಗೆ ಹಣ ಕಡಿಮೆ. 

***************************************

31. ಸುಂದರ ಬದುಕು ದಿಢೀರೆಂದು ಘಟಿಸುವುದಿಲ್ಲ. ಪ್ರೀತಿ ಸಂತೋಷ, ತಾಳ್ಮೆ ಮತ್ತು ತ್ಯಾಗ ಗಳಿಂದ ಅದನ್ನು ನಾವೇ ನಿರ್ಮಿಸಿ ಕೊಳ್ಳಬೇಕು! 

***************************************

32. ಒಂದು ಕಾಲದಲ್ಲಿ ಮಂತ್ರ ಕೆಲಸ ಮಾಡ್ತಾ ಇದ್ದವು, ನಂತರ ಯಂತ್ರಗಳು ಕೆಲಸ ಮಾಡಲು ಪ್ರಾರಂಭಿಸಿದವು, ಈಗ ಕೇವಲ ಷಡ್ಯಂತ್ರ ಗಳು ಕೆಲಸ ಮಾಡ್ತಾಳೆ. 

***************************************

33. ಸಂಬಂಧಗಳು ಒಬ್ಬರ ಸ್ವಾಭಿಮಾನವನ್ನು ಮತ್ತೊಬ್ಬರು ಗೌರವಿಸುವಂತಿದ್ದಾಗಷ್ಟೇ ನಿಜವಾದ ಗಟ್ಟಿತನವನ್ನು ತೋರಬಲ್ಲವು. 

****************************************

34. ಅತಿಯಾಗಿ ಮಾತನಾಡಿದರೆ ವಿವಾದ... 

ಅನಾವಶ್ಯಕವಾಗಿ ಮಾತನಾಡಿದರೆ ಅವಮಾನ... 

ಅವಷ್ಯಕತೆ ಇದ್ದಷ್ಟೇ ಮಾತನಾಡಿದರೆ ಗೌರವ..

************************************

35. ದೊಡ್ಡವನಾಗಲು ಪ್ರಯತ್ನಿಸಬೇಕು, ಒಳ್ಳೆಯವನಾಗಲು ಪ್ರಯತ್ನಿಸು ಆಗ ನೀನೆ ದೊಡ್ಡವನಾಗುತ್ತಾ.

***********************************

36. ನಮ್ಮೊಳಗೇ ಸಮಾಧಾನ ಇಲ್ಲದಿದ್ದಲ್ಲಿ, ಹೊರ ಜಗತ್ತಿನಲ್ಲಿ ಶಾಂತಿ ಹುಡುಕಲು ಸಾಧ್ಯವಿಲ್ಲ. 

***********************************

37. ನಂಬಿ ಬದುಕುವುದು ಬೇರೆ. ನಂಬಿ ಸುತ್ತಾ ಬದುಕುವುದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತದೆ. ನಂಬಿ ಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತದೆ. 

**********************************

38. ಹೊಲಿಗೆ ಸರಿ ಇದ್ದರೆ ಬಟ್ಟೆ ಸಂದರ. ನಾಲಿಗೆ ಸರಿ ಇದ್ದರೆ ಬದುಕು ಸುಂದರ ಆದಾಯ ಪಾದರಕ್ಷೆ ತರ ಚಿಕ್ಕ ದಾದರೆ ಕಚ್ಚುತ್ತೆ  ದೊಡ್ಡ ದಾದರೆ ಹೆಜ್ಜೆ ತಪ್ಪುತ್ತದೆ. ಎಲ್ಲಾ ವಿಷಯದಲ್ಲೂ ಎಚ್ಚರ ಇರಬೇಕು. 

*************************************

39. ಮೋಡವು ಕೂಡ ಯಾವಾಗಲೂ ಕವಿದಿರುವುದಿಲ್ಲ ಹಾಗೆಯೇ ಸಮಸ್ಯೆ ಕೂಡ ಬೆನ್ನ ಟಿಕೊಂಡಿರುವುದಿಲ್ಲ...!!*  ಒಂದೊಂದು ಹೆಜ್ಜೆಯು ಸೋಲು ಗೆಲುವಿನ ಆಟ, ಒಂದೊಂದು ಸರಿ ತಪ್ಪುಗಳು ಅನುಭವದ ಪಾಠ...!!*

ಬದುಕು ಇರುವ ತನಕ ಬಂಡಿ ಮಾತ್ರ ಸಾಗಿಸಬೇಕು...!!*

**************************************

40. ಕಣ್ಗಳು ಕೆರೆಯಲ್ಲ ಆದರೂ ತುಂಬಿ ಬರುತ್ತದೆ. ವೈರತ್ವ ಬೀಜವಲ್ಲ ಆದರೂ ಬಿತ್ತಲಾಗುತ್ತಿದೆ. 

ತುಟಿಗಳು ಬಟ್ಟೆಯಲ್ಲ ಆದರೂ ಹೊಲೆಯಲಾಗುತ್ತದೆ. ವಿಧಿ ಸಖಿ ಅಲ್ಲ ಆದರೂ ಮುನಿಸುಕೊಳ್ಳುತ್ತದೆ. 

ಬುದ್ದಿ ಕಬ್ಬಿಣದವಲ್ಲ ಆದರೂ ತುಕ್ಕು ಹಿಡಿಯುತ್ತದೆ. ಆತ್ಮ ಸನ್ಮಾನ ದೇಹವಲ್ಲ  ಆದರೂ ಗಾಯ ವಾಗುತ್ತದೆ. 

ಮನುಷ್ಯ ಋತುಮಾನವಲ್ಲ ಆದರೂ ಬದಲಾಗುತ್ತಾ ಇರುತ್ತಾನೆ. 

*****************************************

41. ಎಲ್ಲರನ್ನೂ ಹಿಂದಿಕ್ಕಿ ಮುಂದೆ ಹೋದವನು, ಸ್ಪರ್ಧೆಯನ್ನು ಗೆಲ್ಲಬಹುದು. ಆದರೆ.. ಎಲ್ಲರನ್ನೂ ಕರೆದುಕೊಂಡು ಮುಂದೆ ಬಂದವನು ಜೀವನವನ್ನೇ.. ಗೆಲ್ಲುತ್ತಾನೆ. 

***************************************

42. ಅದೃಷ್ಟ ದಿಂದ ಬಂದಿದ್ದು ಅಹಂಕಾರ ಕೊಡುತ್ತೆ.. ಬುದ್ದಿ ಉಪಯೋಗಿಸಿ ಸಂಪಾದಿಸಿದ್ದು ಸಂತೋಷ ಕೊಡುತ್ತೆ... ಕಷ್ಟಪಟ್ಟು ಸಂಪಾದಿಸಿದ್ದು ಸಂತೃಪ್ತಿ ಕೊಡುತ್ತೆ.. 

*****************************************

43. ಬದುಕು ಎಂಬುದು ಕೊಳಲು ಇದ್ದಂತೆ, ಅನೇಕ ರಂಧ್ರಗಳಲ್ಲಿ ಖಾಲಿ ಖಾಲಿ ಭಾಗಗಳು ತುಂಬಿರುತ್ತದೆ. ಯಾವಾಗ ಅದನ್ನು ಜಾಣ್ಮೆಯಿಂದ ಬಳಸಲು ಆರಂಭಿಸುತ್ತೇವೋ ಆಗ ಮಧುರ ಸಂಗೀತ ಹೊರಹೊಮ್ಮುತ್ತದೆ.. 

****************************************

44. ತನ್ನ ಗುಟ್ಟನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ... 

ಯಾಕೆಂದರೆ ಜೀವನದಲ್ಲಿ ಯಾವ ಮಿತ್ರ ಯಾವಾಗ ಶತ್ರುವಾಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ..

****************************************

45. ದೇವರು ಎಂಬುದು ಕಣ್ಣಿಗೆ ಕಾಣದ ಒಂದು ಶಕ್ತಿ. ಅದು ಕರೆದರೆ ಬರುವುದಿಲ್ಲ. ಅದು ಇರುವ ಕಡೆ ಮನುಷ್ಯ ಹೋಗಲು ಸಾಧ್ಯವೂ ಇಲ್ಲ. ನಾವು ಮಾಡುವ ಕೆಲಸದಲ್ಲಿ ಆಡುವ ಮಾತಿನಲ್ಲಿ ಬದುಕುವ ರೀತಿಯಲ್ಲಿ ದೇವರನ್ನು ಕಾಣಬೇಕು.... 

***************************************

46. ಹೂವಿನ ಬೆಲೆ ಬಾಡುವ ತನಕ, ಜೀವನದ ಬೆಲೆ ಸಾಯುವ ತನಕ. ಮಂಜಿನ ಬೆಲೆ ಕರಗುವ ತನಕ

ಆದರೆ ಸ್ನೇಹ ಪ್ರೀತಿ ಭೂಮಿ  ಇರುವ ತನಕ... 

***************************************

47. ನಿಮ್ಮ ನಗುವನ್ನು ಕಂಡು ಸಂತೈಸಿ ಕೊಳ್ಳುವ ಜೀವಗಳ ಸಮಾಧಾನ ಕ್ಕಾದರೂ ನೀವು ಸದಾ ನಗುತ್ತಿರಬೇಕು

*************************************

48. ಹೊಲಿಗೆ ಸರಿ ಇದ್ದರೆ ಬಟ್ಟೆ ಸಂದರ. ನಾಲಿಗೆ ಸರಿ ಇದ್ದರೆ ಬದುಕು ಸುಂದರ ಆದಾಯ ಪಾದರಕ್ಷೆ ತರ ಚಿಕ್ಕ ದಾದರೆ ಕಚ್ಚುತ್ತೆ  ದೊಡ್ಡ ದಾದರೆ ಹೆಜ್ಜೆ ತಪ್ಪುತ್ತದೆ. ಎಲ್ಲಾ ವಿಷಯದಲ್ಲೂ ಎಚ್ಚರ ಇರಬೇಕು. 

*************************************

49. ಆಕಾಶದಿಂದ ಮಳೆಯು ಸುರಿಯುತ್ತದೆ ಎಂದು ಯಾವ ನಂಬಿಕೆಯಿಂದ ಗಿಡ ಮರಗಳು ಬದುಕುತ್ತವೋ, ಹಾಗೆಯೇ ನಮಗೂ ಒಳ್ಳೆಯ ಕಾಲ ಬರುತ್ತೆ ಎಂಬ ಧೃಡ ನಂಬಿಕೆಯಿಂದ ಬದುಕಬೇಕು. 

**************************************

50. ಸಾಧ್ಯವೇ ಇಲ್ಲ ಎಂದು ಕೊಂಡರೆ ಏನನ್ನೂ ಸಾಧಿಸಲಾಗದು, ಪ್ರಯತ್ನಿಸು ವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ ವಾಗುತ್ತದೆ, ಸೋತರೆ ಅನುಭವ ಸಿಗುತ್ತದೆ. 

************************************

51. ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ, ಇದ್ದುದರಲ್ಲೇ  ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ. 

************************************

52. ಆಸೆ ಗಳಿಗಾಗಿ ಬದುಕ ಬೇಡ, "ಆದರ್ಶ" ಕ್ಕಾಗಿ ಬದುಕು... ದೀರ್ಘವಾದ ಜೀವನ ಮುಖ್ಯವಲ್ಲ, ದಿವ್ಯವಾದ ಜೀವನವೇ ಮುಖ್ಯ.

***********************************

54. ಒಳ್ಳೆಯ ಜನರನ್ನು ಹುಡುಕ ಬೇಡಿ ಸಿಗೋದಿಲ್ಲ, ಸ್ವತಃ ನೀವೇ ಒಳ್ಳೆಯ ಮನುಷ್ಯರಾಗಿ ಬಿಡಿ. ಒಳ್ಳೆಯ ಜನರು ನಿಮ್ಮನ್ನೇ ಹುಡುಕುತ್ತಾ ಬರುತ್ತಾರೆ. 

**********************************

55. ಅರಳಿದ ಪ್ರತೀ ಹೂವು ಒದಣಗುತ್ತದೆ, ಮಾಗಿದ ಹಣ್ಣುಗಳು ಕೊಳೆಯುತ್ತವೆ, ಒಣಗಿದ ಎಲೆಗಳು ಉದುರಿ ಹೋಗುತ್ತೇವೆ ಆದರೆ ನಂಬಿಕೆಯಿಂದ ರೂಪುಗೊಂಡ ಬಂಧವು ಶಾಶ್ವತವಾಗಿರುತ್ತದೆ. 

************************************

56. ಒಳ್ಳೆಯ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಒಳ್ಳೆಯ ಹೃದಯ ವಿರಬೇಕು. 

ಒಳ್ಳೆಯ ಬುದ್ದಿವಂತಿಕೆ ಅಲ್ಲ ಯಾಕೆಂದರೆ ಬುದ್ದಿ ಯಾವತ್ತೂ ತರ್ಕ ಬಾವದಿಂದ ನೋಡುತ್ತದೆ. 

ಆದರೆ ಹೃದಯ ಯಾವತ್ತೂ ಪ್ರೇಮ ಬಾವದಿಂದ ನೋಡುತ್ತದೆ. 

****************************************

57. ನಿಮ್ಮ ಮನಸ್ಸು ನೋವಿನಿಂದ ಕೂಡಿದಾಗ, ನಿಮ್ಮ ಮುಖದಲ್ಲಿ ಸದಾ ನಗುವನ್ನು ಬಯಸುವ ವ್ಯಕ್ತಿಗಳೊಡನೆ ಸಮಯ ಕಳೆಯಿರಿ. ಏಕೆಂದರೆ ಅವರು ಎಂದಿಗೂ ಉರಿಯುವ ಬೆಂಕಿಗೆ ತುಪ್ಪ ಸರಿಯುವುದಿಲ್ಲ. 

****************************************

58. ಕೈಯಲ್ಲಿ ಕೋಟಿ ಇದ್ದರೂ ಹಿರಿಯರ ಕಂಡೊಡನೆ ಕಾಲಿಗೆ ಬೀಳು ಸಂಸ್ಕಾರ, 

ಎಷ್ಟೇ ಆಧುನಿಕತೆ ಬಂದರೂ ಹಣೆಯ ಮೇಲಿನ ಬೊಟ್ಟು ಸಂಸ್ಕಾರ, 

ಡಿಗ್ರಿ ಮೇಲೆ ಡಿಗ್ರಿ ಪಡೆದರೂ ಗುರುಗಳು ಕಂಡಾಗ ತೋರುವ ಭಯ ಭಕ್ತಿ ಸಂಸ್ಕಾರ. 

*****************************************




No comments:

Post a Comment