Sunday, June 11, 2023

ಮೂಕಜ್ಜಿಯ ಕನಸುಗಳು - ಕನ್ನಡ ನಾಟಕ

 ಭಾನುವಾರ, ಜೂನ್ 11, 2023 

ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.

ಮೂಕಜ್ಜಿಯ ಕನಸುಗಳು.

ಡಾ. ಕೋಟ ಶಿವರಾಮ ಕಾರಂತರ "ಜ್ಞಾನ ಪೀಠ ಪ್ರಶಸ್ತಿ " ವಿಜೇತ ಕಾದಂಬರಿ "ಮೂಕಜ್ಜಿಯ ಕನಸುಗಳು" ಆಧಾರಿತ  ಕನ್ನಡ ನಾಟಕವನ್ನು ಕಲಾ ಗಂಗೋತ್ರಿ ನಾಟಕ ತಂಡ ತುಂಬಾ ಸುಂದರವಾಗಿ ಪ್ರದರ್ಶನ ಮಾಡಿದರು.



ಮೂಕಜ್ಜಿಯ ಪಾತ್ರದಲ್ಲಿ ಶ್ರೀಮತಿ ಮಂಗಳಾ ಅವರು, ಸುಬ್ರಾಯ (ಮಾಣಿ) ಪಾತ್ರದಲ್ಲಿ ಸಿದ್ಧಾರ್ಥ್ ಭಟ್ ಅವರು  ಅದ್ಭುತವಾಗಿ, ಸ್ವಾಭಾವಿಕವಾಗಿ ನಟಿಸಿ, ಮೂಕಜ್ಜಿಯ ಲೋಕಕ್ಕೆ, ವಾತಾವರಣಕ್ಕೆ ಕೊಂಡೊಯ್ದರು. ಕರಾವಳಿ ಜನರ ಆಡುಭಾಷೆ, ರೀತಿನೀತಿ, ಅಹಂಕಾರ, ವಯಸ್ಸಾದ ಅಜ್ಜಿಯ ಮಾತಿಗೆ ಗೌರವ....ಎಲ್ಲವೂ ಚಂದ..







ಅಜ್ಜಿ ಮತ್ತು ಮಾಣಿಯ ನಡುವಿನ ಸಂಭಾಷಣೆ, ಮನೆಯ, ಹೆಂಡತಿ, ಮಕ್ಕಳೊಡನೆ ಸರಸ ಸಲ್ಲಾಪ, ಇತತರೊಡನೆ ಮಾತುಕತೆ ಎಲ್ಲವೂ ಸ್ವಭಾವಿಕವಾಗಿದ್ದು  ಹಾಗೂ ಇತರ ಸಂದರ್ಭಗಳು ನಿಜವಾಗಿಯೂ ನಮ್ಮನ್ನು ಅಲ್ಲಿಯೇ ಇರುವಂಥಹ  ವಾತಾವರಣವನ್ನು ಸ್ರಷ್ಟಿಸಿತ್ತು 




ನಾಟಕದ ರಂಗ ಪರಿಕರ, ಬೆಳಕು, ಸಂಗೀತ, ರಂಗ ವಿನ್ಯಾಸ, ಹಳ್ಳಿಯ ವಾತಾವರಣ, ಯಕ್ಷಗಾನ, ಎಲ್ಲವೂ ಬಹಳ ಸುಂದರವಾಗಿತ್ತು.








ನಾಟಕವನ್ನು ರಂಗ ಕರ್ಮಿ, ಅದ್ಭುತ ಕಲಾವಿದ  ಶ್ರೀ ಬಿ.ವಿ. ರಾಜಾರಾಂ ಅವರು ನಿರ್ದೆಶಿರುತ್ತಾರೆ.
ಯುಗಾಂತರ ಟಿ. ವಿ. ಸೀರಿ ಯಲ್ ನಲ್ಲಿ  ಶಾರದಾ ಪ್ರಸಾದ್ ಆಗಿ  ಬಿ.ವಿ.ರಾಜಾರಾಂ ಅವರ ಅಭಿನಯ ಅಮೋಘವಾಗಿತ್ತು.


ನಿರ್ದೇಶಕ ಬಿ. ವಿ. ರಾಜಾರಾಂ 

ಮೂಕಜ್ಜಿಯ ಕನಸುಗಳು  ಸಿನೆಮ ಗಿಂತ ನಾಟಕವು ಬಹಳ ಚೆನ್ನಾಗಿತ್ತು.

Posted 12/6/2023 

No comments:

Post a Comment