ಮಂಗಳವಾರ, ಮೇ 30, 2023
ಶ್ರೀ ಕ್ಷೇತ್ರ ಉಚ್ಚಿಲ - ಮಹಾಲಕ್ಷ್ಮಿ ದೇವಸ್ಥಾನ
ಇತ್ತೀಚೆಗೆ ನವೀಕರಿಸಲ್ಪಟ್ಟ ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನ ಉಡುಪಿ=ಮಂಗಳೂರು ಹೈವೇ ನಲ್ಲಿದೆ.
ಅತ್ಯಂತ ಸುಂದರವಾಗಿ ಕಟ್ಟಿದ ದೇವಸ್ಥಾನವು ನೂರಾರು ಜನರನ್ನು ಆಕರ್ಷಿಸುತ್ತದೆ.
ವಿಶಾಲವಾದ ಸ್ಥಳದಲ್ಲಿ ಕಟ್ಟಲ್ಪಟ್ಟ ದೇವಸ್ಥಾನ, ಅತ್ಯಧುನಿಕವಾಗಿ ಕಂಗೊಳಿಸುತ್ತಿದೆ.
ದೇವಸ್ಥಾನದ ಗರ್ಭಗುಡಿಯ ಸುತ್ತಲ ಪ್ರಾಂಗಣ, ಹೊರಗೆ ಸಾಕಷ್ಟು ಜನರಿಗೆ ಧ್ಯಾನ ಮಾಡಲು ಸ್ಥಳ, ಕಾರ್ ಪಾರ್ಕಿಂಗ್ ಸ್ಥಳ, ಎಲ್ಲವೂ ಸುಸಜ್ಜಿತವಾಗಿದೆ.
ಉದ್ಯಾವರದ ದಿವಂಗತ ಶ್ರೀ ಸಾದಿಯ ಸಾವುಕಾರ್ ಅವರು ನ್ಯಾಷನಲ್ ಹೈವೇ ಸಮೀಪದ 14 ಎಕರೆ ಸ್ಥಳವನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಮಾಜಕ್ಕೆ ದಾನ ಮಾಡಿರುವರು.
ಇದರಲ್ಲಿ 6 ಎಕರೆ ಜಾಗವನ್ನು ದೇವಸ್ಥಾನಕ್ಕೆ ಉಪಯೋಗಿಸಲಾಗಿದೆ.
ದೇವಸ್ಥಾನದ ಹೊರ ಆವರಣದಲ್ಲಿ ಕೆರೆ ಇದೆ, ಇದಕ್ಕೆ ತಾಗಿ ನಾಗಾಲಯ ಸಹಾ ಇದೆ..
Posted 2/6/2023
No comments:
Post a Comment