Wednesday, December 27, 2023

ಸುಭಾಷಿತ ನುಡಿ ಮುತ್ತುಗಳು - 5

 ಸುಭಾಷಿತ ನುಡಿ ಮುತ್ತುಗಳು - 5 



1. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 

***********************************

2. ಆತ್ಮ ವಿಶ್ವಾಸ ಒಂದು ಮಹಾ ಆಯುಧ. ಅದು ಎಲ್ಲಾ ಸಂದರ್ಭದಲ್ಲಿ ಜಯ ತಂದು ಕೊಡದಿರಬಹುದು. ಆದರೆ ಯಾವುದೇ ಸವಾಲನ್ನು ಎದುರಿಸಲು ಧೈರ್ಯ ತುಂಬುತ್ತದೆ.

**********************************

3. ಈ ಸುಂದರವಾದ ಮುಂಜಾನೆಯಲ್ಲಿ ನಿಮ್ಮ ಸುಂದರವಾದ ಮುಖದಲ್ಲಿ ಇರಲಿ ಚಿಕ್ಕದೊಂದು ಮುಗುಳ್ನಗೆ ಇರಲಿ.

**********************************

4. ಈ ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನ. ನಾವಿಲ್ಲಿ ಆಟಗಾರರಷ್ಟೇ. 

ನಿಯಮದಿಂದ ಆಟ ಆಡಿದರೆ ಗೆಲುವು ನಿಶ್ಚಿತ. ನಿಯಮ ಮೀರಿ ಆಟ ಆಡಿದರೆ ಸೋಲು ಖಚಿತ. 

********************************************

5. ಅಳುವಾಗ ಒಬ್ಬನೇ ಅಳಬೇಕು, ನಗುವಾಗ ಗುಂಪಿನಲ್ಲಿ ನಗಬೇಕು. 

ಗುಂಪಿನಲ್ಲಿ ಅತ್ತರೆ ನಾಟಕ ಅಂತಾರೆ. ಒಬ್ಬನೇ ನಕ್ಕರೆ ಹುಚ್ಚು ಎನ್ನುತ್ತಾರೆ.

****************************************

6. ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹ ಕ್ಕಿಂತ ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಉತ್ತಮ. 

******************************************
7. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 
************************************
8. ನಮ್ಮನ್ನು ಇಷ್ಟ ಪಡುವವರು ನಮ್ಮ ಸಾವಿರ ತಪ್ಪು ಕಂಡರೂ ಕೈ ಹಿಡಿದು ತಿದ್ದಲು ಬಯಸುತ್ತಾರೆ... 
ಆದರೆ ನಮ್ಮನ್ನು ಇಷ್ಟಷಡದಿರುವವರು ನಮ್ಮ ಸಾವಿರ ಒಳ್ಳೆಯ ಗುಣ ಅಡಗಿ ದ್ದರೂ ಒಂದೇ ಒಂದು ತಪ್ಪು ಕಂಡು ಹಿಡಿದು ದೂರವಾಗುತ್ತಾರೆ... 
***********************************
9. ಸಮಯ ಒಳ್ಳೆಯದೇ ಆಗಲಿ, ಕೆಟ್ಟದೆ ಆಗಲಿ..., ಒಂದು ಪಾಠವನ್ನು ಕಲಿಸೇ ಕಲಿಸುತ್ತದೆ. ಒಳ್ಳೆಯ ಸಮಯದಲ್ಲಿ ಎಲ್ಲರೂ ನಮ್ಮವರಾಗಿದ್ದರೆ ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗುತ್ತಾರೆ. 
ಸಮಯ.... ಮುಖವಾಡಗಳನ್ನು ಕಳಚೋದಂತೂ ಸತ್ಯ. 
***********************************
10. ಜೀವನದಲ್ಲಿ ಶಾಂತವಾಗಿರಲು ಎರಡು ಉಪಾಯಗಳು. ಮರೆಯಲಾಗದಂತಹ ವ್ಯಕ್ತಿಗಳನ್ನು ಕ್ಷಮಿಸಿ ಬಿಡಿ. ಕ್ಷಮಿಸಲಾಗದಂತಹ ವ್ಯಕ್ತಿಗಳನ್ನು ಮರೆತುಬಿಡಿ.
**********************************
11. ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಶ್ರೇಷ್ಠ ಎತ್ತರದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗ ಬಲ್ಲವು. 
************************************
12. ದಾನ ಮಾಡಿದರೆ ಹಣ ಹೋಗುತ್ತದೆ, ಲಕ್ಷ್ಮಿ ಹೋಗುವುದಿಲ್ಲ. 
ಗಡಿಯಾರ ಕೆಟ್ಟರೆ ಗಡಿಯಾರ ನಿಲ್ಲುತ್ತದೆ. ಸಮಯ ನಿಲ್ಲುವುದಿಲ್ಲ. 
ತಪ್ಪನ್ನು ಮುಚ್ಚಿಟ್ಟು ಕೊಳ್ಳುವುದರಿಂದ ತಪ್ಪು ಮುಚ್ಚು ತ್ತದೆ. ಆದರೆ ನಿಜ ಮುಟ್ಟುವುದಿಲ್ಲ. 
************************************
13. ಮನುಷ್ಯ ಎರಡು ಜಾಗದಲ್ಲಿ ಬಾಯಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು... 
ಒಂದು ಊಟ ಮಾಡುವಾಗ,..... ಇನ್ನೊಂದು ಮಾತನಾಡುವಾಗ..... 
ಒಂದು ಆರೋಗ್ಯವನ್ನು ಕಾಪಾಡುತ್ತದೆ... ಇನ್ನೊಂದು ಸಂಬಂಧಗಳನ್ನು ಉಳಿಸುತ್ತದೆ... 
***************************************
14. ಕುಪಿತಗೊಂಡ ಮನಸ್ಸು ಯಾವಾಗಲೂ ಕಲ್ಮಶದ ಆಗರ
ಸಮಾಧಾನಗೊಂಡ ಮನಸ್ಸು ಸದಾ ಚೈತನ್ಯದ ಸಾಗರ.
*************************************
15. ನಗುತ ಬಾಳುವೆಯೊ ನಗಿಸುತ ಬಾಳುವೆಯೊ.ಈ ಎರಡು ಮುಖ್ಯವಲ್ಲ. ಯಾರನ್ನೂ ಅಳಿಸದೇ ಬಾಳುವುದೇ ಅತಿ ಮುಖ್ಯ. 
**************************************
16. ಕಲ್ಪನೆಗೆ ಹೂವಾದರೇನು.... ಮುಳ್ಳಾದರೇನು.. 
ಕಲ್ಪಿಸುವವರ ಹೃದಯ ಮೃದು ವಾಗಿದ್ದರೆ ಮುಳ್ಳು ಕೂಡಾ ಮೃದುವಾಗಿ ಹೂವಾಗುತ್ತೆ...! 
**************************************
17. ತುಂಬಾ ಮಾತನಾಡುತಿದ್ದೆ, ಜೀವನ ಮೌನವಾಗಿ ಇರೋದನ್ನ ಕಲಿಸಿದ! 
ಸದಾ ನಗುತ್ತಿದ್ದೆ, ಜೀವನ ಅಳುವುದನ್ನು ಕಲಿಸಿದ!! 
ಎಲ್ಲರ ಜೊತೆ ಬೆರೆತು ಖುಷಿಯಾಗಿದ್ದೆ, ಒಂಟಿಯಾಗಿರೋದನ್ನ ಕಲಿಸಿದ!!!
************************************
18. ನಾನೇನು ಮಾಡಬಲ್ಲೆ ಎಂದು ಎದೆಗುಂದದೆ, ನಾನು ಅದನ್ನು ಮಾಡಬಲ್ಲೆ ಎಂಬ ನಂಬಿಕೆ ಯಿಂದ ಪ್ರಯತ್ನಿಸಿದರೆ ನಾವು ಏನನ್ನೂ ಸಾಧಿಸಬಹು
************************************
19. ತುಂಬಾ ಮಾತನಾಡುತಿದ್ದೆ, ಜೀವನ ಮೌನವಾಗಿ ಇರೋದನ್ನ ಕಲಿಸಿದ! 
ಸದಾ ನಗುತ್ತಿದ್ದೆ, ಜೀವನ ಅಳುವುದನ್ನು ಕಲಿಸಿದ!! 
ಎಲ್ಲರ ಜೊತೆ ಬೆರೆತು ಖುಷಿಯಾಗಿದ್ದೆ, ಒಂಟಿಯಾಗಿರೋದನ್ನ ಕಲಿಸಿದ!!
**********************************
20. ಕಲ್ಪನೆಗೆ ಹೂವಾದರೇನು.... ಮುಳ್ಳಾದರೇನು.. 
ಕಲ್ಪಿಸುವವರ ಹೃದಯ ಮೃದು ವಾಗಿದ್ದರೆ ಮುಳ್ಳು ಕೂಡಾ ಮೃದುವಾಗಿ ಹೂವಾಗುತ್ತೆ...!
**********************************
21. ಇರುವುದೊಂದೇ ಜೀವನ.. ಸಿಗುವುದು ಕೆಲವೇ ದಿನ.. ತಿಳಿಯದೆ ಕಳೆದ ಬಾಲ್ಯ.. 
ಗೊತ್ತಿಲ್ಲದೆ ಜಾರುವ ಹರೆಯ.. ಕರೆಯದೆ ಬರುವ ಮುದಿತನ.. 
ಎಲ್ಲವುಗಳನ್ನು ಅನುಭವಿಸುತ್ತಾ, ಬಾಳುವುದೇ ಬದುಕು.. 
**********************************
22. ಒಬ್ಬರ ಸರಳ ಸ್ವಭಾವ ಅವರ ಬಲಹೀನತೆ ಅಲ್ಲ. ಪ್ರಪಂಚದಲ್ಲಿ ನೀರಿಗಿಂತ ಸರಳ ಯಾವುದು ಇಲ್ಲ. ಆದರೆ ಅದರ ರಭಸಕ್ಕೆ ಎಲ್ಲವನ್ನೂ ಸೋಲಿಸುವ ಸಾಮರ್ಥ್ಯವಿದೆ. 
**********************************
23. ಬದುಕಿನಲ್ಲಿ ಸ್ನೇಹ ಸಂಬಂಧ ಅಥವಾ ಒಡಹುಟ್ಟಿದವರ ಬಾಂಧವ್ಯ ಬಲವಾಗಿರಬೇಕೇ ಹೊರತು ಬಲವಂತವಾಗಿರಬಾರದು. 
**********************************
24. ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ.
***********************************
25. ಸೇವೆ ಎಂದಿಗೂ ಪ್ರದರ್ಶನ ವಾಗಬಾರದು.... ಅದೊಂದು ನಿದರ್ಶನವಾಗಬೇಕು. ಆದರ್ಶವಾಗಬೇಕು. 
**********************************
26. ಸಂತೋಷದಿಂದ ಇರುವವರ ಹತ್ತಿರ ಎಲ್ಲವೂ ಇರುತ್ತದೆ ಅಂತಲ್ಲ, ಇದ್ದುದರಲ್ಲಿ ತೃಪ್ತಿ ಕಾಣುವ ಗುಣವೇ ಅವರ ಸಂತೋಷಕ್ಕೆ ಕಾರಣ. 
********************************
27. ಸಂಬಂಧ... ಕಾರಣವಿಲ್ಲದೆ ಪರಿಚಯವಾಗಿ  ಕಾಳಜಿಯಿಂದ ಗಟ್ಟಿಯಾಗಿ ನಂಬಿಕೆಯಿಂದ ಮುಂದುವರೆದು ನಿಯತ್ತಿನಿಂದ ಜೊತೆಗಿದ್ದು ಯೋಗ್ಯತೆ ಯಿಂದ ಉಳಿಸಿಕೊಳ್ಳಬೇಕು.. 
********************************
28. ನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ಸಂಗತಿಗಳು ಸಾಕಷ್ಟಿರುತ್ತವೆ. ಅವುಗಳನ್ನು ಗ್ರಹಿಸಿ ಖುಷಿ ಪಡುವುದನ್ನು ರೂಢಿಸಿಕೊಂಡವರಿಗೆ ಜಗತ್ತೇ ಸುಂದರವೆನ್ನಿಸುತ್ತದೆ. 
**********************************
29. ಸಮಾಜದಲ್ಲಿ ನಮ್ಮ ಸಂಬಂಧವನ್ನು ಉತ್ತಮಗೊಳಿಸಲು ಒಂದಕ್ಷರ ವ್ಯತ್ಯಾಸವಷ್ಟೇ ಇರುವುದು. 'ನಾನು' ಎನ್ನದೆ 'ನಾವು' ಎಂದರೆ ಸಾಕು. ಸಮಾಜ ಜಗತ್ತು ಎಲ್ಲವೂ ಸುಂದರವಾಗಿ ನಮ್ಮದಾಗು ತ್ತದೆ. 
**********************************
30. ನೀರು ಬೆಂಕಿಯಿಂದ ಬಿಸಿ ಯಾಗುತ್ತದೆ ನಿಜ.. ಆದರೂ ಕೂಡಾ ಬೆಂಕಿಯನ್ನು ಆರಿಸೊ ಗುಣವನ್ನು ಬಿಟ್ಟು ಕೊಡುವುದಿಲ್ಲ. ಹಾಗೆಯೇ ನಾವು ಕೂಡಾ ಎಂತವರ ಜೊತೆ ಸೇರಿದರು ಕೂಡಾ ನಮ್ಮತನವನ್ನು ಬಿಟ್ಟು ಕೊಡಬಾರದು. 
*************************************
31. ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ ಏಕೆಂದರೆ ಸೇವೆಯ ಪ್ರತಿಫಲವನ್ನು ನೀಡುವುದು ಭಗವಂತನೇ ವಿನಃ ಮನುಷ್ಯನಲ್ಲ.. 
*************************************
32. ಹೊಗಳಿ ಅಟ್ಟಕ್ಕೇರಿಸುವ ಸಾವಿರ ಜನರಿಗಿಂತ, ಇದ್ದುದನ್ನು ಇದ್ದಂತೆ ಹೇಳುವ ಒಬ್ಬ ವ್ಯಕ್ತಿ ಮೇಲು.
************************************
33. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಗಿಡ ಮರವಾಗಿ ಬೆಳೆಯುವುದಿಲ್ಲ, ಹಳ್ಳ ಸಾಗರವಾಗುವುದಿಲ್ಲ. ಹಾಗಿದ್ದಾಗ ಎಲ್ಲಾ ಸಮಸ್ಯೆಗಳಿಗೆ ಕ್ಷಣ ಮಾತ್ರದಲ್ಲಿ ಪರಿಹಾರ ಸಿಗಬೇಕೆಂದು ಹೇಗೆ ಆಶಿಸಲು ಸಾಧ್ಯ? ಕಾಲ ಎಲ್ಲವನ್ನೂ ಸರಿ ಪಡಿಸುತ್ತದೆ. ತಾಳ್ಮೆಯೊಂದೇ ಮಾರ್ಗ.... 
***********************************
34. ಯಾವ ಸಂಬಂಧವಾದರೂ ಸರಿ ಅನಿವಾರ್ಯಕ್ಕೋ ಅಥವಾ ಒತ್ತಾಯಕ್ಕೋ Manufacturer ಪ್ರಯತ್ನಿಸಬಾರದು. ಅದು ಹೆಚ್ಚು ಸಮಯ ನಮ್ಮ ಜೊತೆ ಉಳಿಯಲಾರದು. 
**********************************
35. ನಮ್ಮನ್ನು ಯಾರೂ ಗೌರವಿಸುವುದಿಲ್ಲ ಅಂತ ಬೇಜಾರಾಗಬೇಡಿ. ಏಕೆಂದರೆ ಬಟ್ಟೆಯ ಅಂಗಡಿಯಲ್ಲಿ ಒಬ್ಬರಿಗೆ ಇಷ್ಟವಾಗಿದೆ ಬಿಟ್ಟು ಹೋದ ಬಟ್ಟೆಗಳು ಮತ್ತೊಬ್ಬರಿಗೆ ತುಂಬಾ ಇಷ್ಟವಾಗುತ್ತವೆ... 
ಜೀವನ ಕೂಡಾ ಅಷ್ಟೇ. 
**************************************
36. ಮನೆಯಿಂದ ಹೊರಗೆ ಹೋಗುವಾಗ 'ಬುದ್ದಿ' ಜೊತೆಯಲ್ಲಿರಬೇಕು, ಯಾಕಂದರೆ ಈ ಪ್ರಪಂಚವೇ ಒಂದು ಸಂತೆ...!!! ಆದರೆ ಮನೆಯ ಒಳಗೆ ಬರುವಾಗ 'ಹೃದಯ' ಜೊತೆಯಲ್ಲಿರಬೇಕು ಯಾಕೆಂದರೆ ಅಲ್ಲಿರುವದು ಒಂದು ಸುಂದರವಾದ 'ಕುಟುಂಬ'
**************************************
37. ನಾವು ಸಂಪಾದಿಸಿದ್ದು ಯಾವದೂ ನಮ್ಮದಲ್ಲ. ಆದರೆ ಒಳ್ಳೆಯ ಗುಣ ನಡತೆ ದಾನ ಧರ್ಮ ನಾವು ಮಾಡಿದ ಪುಣ್ಯ ಇಷ್ಟವಾದವರ ಹೃದಯದಲ್ಲಿ ಪ್ರೀತಿ ಇವುಗಳೇ ನಾವು ಸಂಪಾದಿಸೋ ಕೋಟಿ ಆಸ್ತಿ..!! 
***************************************
38. ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿರಬೇಕೋ ಹಾಗೆಯೇ ಬಾಯಿಂದ ಹೊರಬರುವ ಮಾತುಗಳೂ ಅಷ್ಟೇ ಶುದ್ಧವಾಗಿರಬೇಕು.
ಆಗ ಸಂಬಂಧಗಳು ಮತ್ತು ಸ್ನೇಹ ಎರಡೂ ಗಟ್ಟಿಯಾಗಿರುತ್ತದೆ ಹಾಗೂ ಬೆಳೆಯುತ್ತದೆ.
************************************
39. ಇಂದಿನ ಒಳ್ಳೆಯ ಹವ್ಯಾಸ ನಿಮ್ಮ ಮುಂದಿನ ಜೀವನವನ್ನು ಉತ್ತಮವಾಗಿರುತ್ತದೆ. ಉತ್ತಮ ಹವ್ಯಾಸಗಳನ್ನು ರೂಡಿಸಿ ಕೊಳ್ಳೋಣ
******************************************
40. ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇರಬಹುದು ಆದರೆ..
 ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ. 
******************************************
41. ಕೇವಲ ಶಿಕ್ಷಣ ಪಡೆದ ಮಾತ್ರಕ್ಕೆ ಮನುಷ್ಯ ಸುಶಿಕ್ಷಿತನೆನಿಸಿಕೊಳ್ಳಲಾರ... 
ಸಂಸ್ಕಾರದೊಂದಿಗೆ ಮಾನವೀಯ ಮೌಲ್ಯಗಳ ಬೆಳೆಸಿಕೊಂಡರೇನೇ ಪಡೆದ ಶಿಕ್ಷಣ ಸಾರ್ಥಕವೆನಿಸುವುದು.
***************************************
42. ಸ್ವಾಭಿಮಾನ ಕಳೆದುಕೊಂಡು ಸಾವಿರ ಜನರ ಮಧ್ಯೆ ಇರುವುದಕ್ಕಿಂತ ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು
***************************************
43. ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದೆ ಇರಬಹುದು ಆದರೆ..
 ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಶಕ್ತಿ ಎರಡಕ್ಕೂ ಇದೆ. 
****************************************
44. ಧಾರಾಳವಾಗಿ ಕೊಟ್ಟರೂ ಎಳ್ಳಷ್ಟೂ ಕಡಿಮೆಯಾಗದ ಸಂಪತ್ತು ಅಂದರೆ ಒಳ್ಳೆಯ ಮಾತುಗಳು
************************************
45. ಖುಷಿಯ ಸಂದರ್ಭದಲ್ಲಿ ಕೈ ಕುಲಕುವುದರಿಂದ ಸಂಬಂಧಗಳು ಅರಳುವುದಿಲ್ಲ. ಕಷ್ಟ ಕಾಲದಲ್ಲಿ ಕೈ  ಹಿಡಿದಾಗ ಮಾತ್ರ ಅದು ಬೆಳಗುತ್ತದೆ. 
**************************************
46. ಜೀವನದಲ್ಲಿ.ಯಾವತ್ತೂ ಬೇರೆಯವರಿಗೆ ಬುದ್ದಿವಾದ ಹೇಳಬೇಡಿ.‌ ಏಕೆಂದರೆ ಎಷ್ಟೋ ಜನ ಅವರ ಜೀವನದಲ್ಲಿ ತಾವೇ ಬುದ್ದಿವಂತರೆಂದು ನಂಬಿರುತ್ತಾರೆ.‌ ಅಂತಹವರಿಗೆ ಬುದ್ದಿ ಹೇಳಿ ಪೆದ್ದರಾಗುವುದಕ್ಕಿಂತ ಸುಮ್ಮನಿದ್ದು ಬುದ್ದರಾಗುವುದೇ ಒಳ್ಳೆಯದು.
***************************************
47. ಬೆಳೆಸಿದವರೆದುರು ಬಾಗಿದರೆ ಬದುಕು. ಅರಿವಿನೆದುರು ಬಾಗಿದರೆ ಬೆಳಕು. ಪ್ರೀತಿ ವಿಧೇಯತೆಗಳಲ್ಲಿ ಬಾಗುವವರು ಎಲ್ಲರೆದೆಯ ಗೆಲ್ಲಬಲ್ಲರು. ದರ್ಪ ಅಹಂಕಾರಗಳಲ್ಲಿ ಬೀಗುವವರು ಕಾಲನೆದುರು ಉರಿದು ಬೂದಿಯಾಗುವರು. ಇದು ಜಗದ ಸತ್ಯ. ಯುಗ ಯುಗದ ಸತ್ಯ. 
**************************************
48. ಜೀವನದಲ್ಲಿ ಎಂದಿಗೂ ನಿರಾಶರಾಗಬೇಡಿ. ಸೂರ್ಯ ಅಸ್ತಂಗತವಾಗುತಿದ್ದಂತೆಯೇ, ಆಗಸದಲ್ಲಿ ನಕ್ಷತ್ರಗಳು ಮಿನುಗುತ್ತವೆ ಎಂಬುದು ನೆನಪಿರಲಿ. 
***************************************
49. ಕಷ್ಟವೋ ಸುಖವೇ ಎಲ್ಲವೂ ನಿನ್ನ ಪ್ರಕಾರವೇ. 
ನೀನು ಕೊಟ್ಟದ್ದನ್ನು ಅನುಭವಿಸುವುದಷ್ಟೇ ನನ್ನ ಕರ್ತವ್ಯ. 
ಮುಂದೆ ಆಗಬಹುದಾದುದೆಲ್ಲವೂ ನಿನ್ನ ಇಚ್ಛೆ. ಆ ಇಚ್ಛೆಗೆ ವಿರುದ್ಧವಾಗಿ ನಡೆಯುವ ಶಕ್ತಿ ನನಗಿಲ್ಲ. 
ಆದರೆ ಬಂದ ಕಷ್ಟಗಳನ್ನು ತಡೆದು ನಿಲ್ಲುವ ಶಕ್ತಿಯನ್ನು ಕೊಡು... ಭಗವಂತ. 
***************************************
50. ಹೂವು ಅರಳಿದಾಗ ನೋಡುವ ಜನರು ಬಹಳ. ಅದೆ ಹೂವು ಬಾಡಿದ ಮೇಲೆ ತುಳಿಯುವವರೂ ಬಹಳ ಜನ. ಅದೆ ರೀತಿ ಜೀವನ ನಗುವ ಮುಖಕ್ಕೆ ಇರುವ ಬೆಲೆ ಅಳುವ ಮುಖಕ್ಕೆ ಇರಲ್ಲ. ಇದನ್ನು ಅರಿತು ನಡೆದರೆ ಅದೆ ಸುಂದರ ಬದುಕು. 
***************************************


No comments:

Post a Comment