Thursday, December 21, 2023

HOME VISIT - DR. SARVAMANGALA SHASTRY

 ಮಂಗಳವಾರ, 19 ಡಿಸೆಂಬರ್ 2023 

ಹುಬ್ಬಳ್ಳಿ 

ಡಾ. ಸರ್ವಮಂಗಳಾ ಶಾಸ್ತ್ರಿ :

ನಾವು ಹುಬ್ಬಳ್ಳಿಗೆ ಬರುತ್ತಿದ್ದೇವೆ ಸರ್ವಮಂಗಳಾ ನಿಮ್ಮನ್ನು ನೋಡಲು ಸಾಧ್ಯವೇ ಎನ್ನುವ ಪ್ರೀತಿಯ ಕೊರಳಿನಿಂದ ಕೇಳಿರುವ ನಳಿನಿ ಸೋಮಯಾಜಿ ದಂಪತಿಗಳ ಪ್ರೀತಿಯ ಆಗಮನ ಅವರ ಸ್ನೇಹದ ನಿರ್ವಾಜ್ಯ ಪ್ರೀತಿಯ ಬೆಳಕು ಎಂದು ಮರೆಯಲು ಸಾಧ್ಯವೇ ಇಲ್ಲ. ಅನೇಕ ವರ್ಷಗಳಿಂದ ನಾವು ಫೇಸ್ಬುಕ್ನಲ್ಲಿ ಆತ್ಮೀಯರು. ಅವರ ಅವರ ಕ್ರಿಯಾಶೀಲ ವ್ಯಕ್ತಿತ್ವ, ಆಪ್ತತೆ ನನ್ನ ಮನಸ್ಸಿನಲ್ಲಿ ಸದಾ ಅಚ್ಚುಒತ್ತಿತ್ತು.ಅವರು ಹೀಗೆ ಭೇಟಿಯಾಗುತ್ತಾರೆ ಎನ್ನುವುದು. ನಂಬಲು ಸಾಧ್ಯವಾಗಿಲ್ಲ.ಮೊದಲ ಸಲ ಭೇಟಿಯಾದ ಆ ಪ್ರೀತಿಯ ಸ್ನೇಹದ ಕ್ಷಣಗಳು ಇನ್ನಷ್ಟು ಬೇಕೆನಿಸುತ್ತಿತ್ತು. ತುಂಬಾ ಸಂತೋಷವಾಯಿತು. ಇವರೊಂದು ಬೇರೆಯವರು ಎಂದು ನನಗೆ ಅನಿಸಲೇ ಇಲ್ಲ ಎಲ್ಲಿಯೂ ನನ್ನ ರಕ್ತ ಸಂಬಂಧಿಗಳು ಇಂದು ನನ್ನ ಜೊತೆಗಿದ್ದಾರೆ ಅನ್ನುವಂತಹ ಭಾವ ಮೂಡಿಸಿತ್ತು. ಅನಿವಾರ್ಯವಾಗಿ ಬೀಳ್ಕೊಟ್ಟೆ. ಈ ರೀತಿಯ ಭಾಂದವ್ಯ ಯಾವ ಆಸ್ತಿ ಅಂತಸ್ತಿಗಿಂತಲೂ ಹೆಚ್ಚು ಅನಿಸಿದ ಹೊತ್ತು ಇದು. ಇನ್ನೆಷ್ಟು ಮಾತುಗಳು ಹೃದಯದಾಳದಲ್ಲಿ ಹಾಗೆಯೇ ಉಳಿದಿದೆ. ಮತ್ತೊಮ್ಮೆ ಸಂಧಿಸೋಣ.ನಿಮ್ಮ ಪ್ರೀತಿಯ ಆಗಮನಕ್ಕೆ ನಿಮ್ಮೊಡನೆ ಕಲೆತ ಆ ಕ್ಷಣ ಹೊತ್ತಿಗಾಗಿ ನನ್ನ ಧನ್ಯತೆಯ ಕುಸುಮಗಳು. ನಿಮ್ಮ ಸ್ನೇಹ ನಿಷ್ಕಲ್ಮಶ ಪ್ರೀತಿ ನಿರಂತರವಾಗಿರಲಿ..ನಳಿನಿ ಯವರೇ...


ನಳಿನಿ ಸೋಮಯಾಜಿ :
ಸರ್ವ ಮಂಗಳ ನಿಮ್ಮ ಪ್ರೀತಿ ತುಂಬಿದ ಆತಿಥ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದು.
ನಿಮ್ಮಿಂದ ತಿಳಿಯುವುದು, ಕಲಿಯುವುದು ಸಾಕಷ್ಟಿದೆ.
ಸ್ನೇಹ ಪ್ರೀತಿ ನನ್ನುಸಿರು ಎಂಬುದಕ್ಕೆ ಸಾಕ್ಷಿ ನೀವು. ಖಂಡಿತಾ ಸಿಗುತ್ತಿರುವ ಆಗಾಗ. ಮನಪೂರ್ಣ ಪ್ರೀತಿಯ ಧನ್ಯವಾದಗಳು

ಅಂದು ಸಂಜೆ, ನಾವು ರಾಘವೇಂದ್ರ ಉಪಾಧ್ಯಾಯ, ವೀಣಾ, ಮತ್ತು ನಾವು , ಸರ್ವಮಂಗಳಾ ಅವರ ಮನೆಗೆ ಭೇಟಿಗೆ ಹೋದೆವು.
ಅತ್ಯಂತ ಆತ್ಮೀಯವಾಗಿ ನಮ್ಮನು ಸ್ವಾಗತಿಸಿ, ರುಚಿ ರುಚಿಯಾದ ಗೋಲಿ ಬಜೆ ಮತ್ತು ಕಾಫಿ ನ್ನು ಧಿಡೀರ್ ಎಂದು ತಯಾರಿಸಿ, ತಮ್ಮ ಆದರಾತಿತ್ಯವನ್ನು ತೋರಿದರು.

ಡಾ ಸರ್ವಮಂಗಳಾ ಅವರು ಕನ್ನಡ ಉಪನ್ಯಾಸಕಿಯಾಗಿ
ಕೆಲಸ ಮಾಡುತ್ತಿರುವರು
"ಪಾ.ವೆಂ. ಆಚಾರ್ಯರ" ಬದುಕು, ಬರಹ - ಒಂದು ಅಧ್ಯಯನಕ್ಕಾಗಿ ಪಿಎಚ್,ಡಿ. ಪದವಿಯನ್ನು ಪಡೆದಿರುತ್ತಾರೆ.

ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಾಹಿತ್ಯ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ್ದಾರೆ.

ನೂರಾರು ಲೇಖನಗಲ್ಲು ಪ್ರಕಟಿಸಿ ಸಾಮಾಜಿಕ ಸಾಹಿತ್ಯ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿದ್ದಾರೆ.
ಅದೊಂದು ಅವಿಸ್ಮರೀಯ ಮನೆ ಭೇಟಿಯಾಗಿತ್ತು.
ಬರೆದಿರುವುದು 22/12/2023

No comments:

Post a Comment