"ದೇವತಾರ್ಚನೆ ಮತ್ತು ವಿಚಾರಗಳು..!"
ದೇವತಾರ್ಚನೆಯಿಂದ ಮಾನವನು ಸಂಸಾರ ಪಾಶಗಳಿಂದ ಮುಕ್ತಿ ಹೊಂದಿ, ದೇವರಸಾನಿಧ್ಯವನ್ನು ಸೇರುತ್ತಾರೆ.
ದೇವರ ಆರಾಧನೆಯಲ್ಲಿ ಅನೇಕ ಪದ್ಧತಿಗಳಿವೆ, ಅವುಗಳಲ್ಲಿ ಮುಖ್ಯವಾದ 16 ರೀತಿಯಲ್ಲಿನ ಉಪಚಾರಗಳ ಪೂಜೆ "ಷೋಡಶೋಪಚಾರ" ಪೂಜೆ ಬಹಳ ಮುಖ್ಯವಾಗಿದೆ..
ಷೋಡಶೋಪಚಾರ ಮತ್ತು ವಿಶೇಷತೆಗಳು..!
೧. ಆಸನ
೨. ಪಾದ್ಯ
೩. ಅರ್ಘ್ಯ
೪. ಆಚಮನ
೫. ಸ್ನಾನ
೬. ವಸ್ತ್ರ
೭. ಯಜ್ಞೋಪವೀತ
೮. ಗಂಧ
೯. ಅಕ್ಷತೆ
೧೦. ಆಭರಣ
೧೧. ಪುಷ್ಪಮಾಲಿಕೆ
೧೨. ಧೂಪ
೧೩. ದೀಪ
೧೪. ಮಧುಪರ್ಕ
೧೫. ನೈವೇದ್ಯ
೧೬. ವಿಸರ್ಜನೆ ಅಥವಾ ಪುಷ್ಪಾಂಜಲಿ
ಷೋಡಶೋಪಚಾರ ಎಂದರೆ ಹದಿನಾರು ಉಪಚಾರಗಳು..
"ಉಪ" ಎಂದರೆ ಹತ್ತಿರ ಎಂದು ಚಾರ ಎಂದರೆ ಸಂಚರಿಸು ಎಂದರ್ಥ..
"ದೇವರಿಗೆ ಹತ್ತಿರವಾಗುವುದು ಎಂದರ್ಥ..!
೧. ಆಸನ : ದೇವರೆಂಬ ಅತಿಥಿಯನ್ನು ಮನೆಗೆ ಆಮಂತ್ರಿಸಿ ಕುಳಿತುಕೊಳ್ಳಲು ಆಸನಗಳನ್ನು ಏರ್ಪಡಿಸುವುದು..
೨. ಪಾದ್ಯ : ಕಾಲುಗಳನ್ನು ತೊಳೆಯಲು ನೀರು ಕೊಡುವುದು..
೩. ಅರ್ಘ್ಯ : ಕೈಗಳನ್ನು ಶುಧ್ದಿಪಡಿಸಿಕೊಳ್ಳಲು ನೀರನ್ನು ಕೊಡುವುದು..
೪. ಆಚಮನ : ಬಾಯಾರಿಕೆ ತೀರಲು ನೀರನ್ನು ಕೊಡುವುದು..
೫. ಸ್ನಾನ : ಪ್ರಯಾಣದ ಆಯಾಸ ಪರಿಹರಿಸಲು ಸ್ನಾನಕ್ಕೆ ನೀರನ್ನು ಕೊಡುವುದು..!
೬. ವಸ್ತ್ರ : ಸ್ನಾನಾನಂತರ ಧರಿಸಲು ಮಡಿಬಟ್ಟೆಗಳನ್ನು ಕೊಡುವುದು..
೭. ಯಜ್ಞೋಪವೀತ : ಮಾರ್ಗಮಧ್ಯದಲ್ಲಿ ಮೈಲಿಗೆಯಾದ ಯಜ್ಞೋಪವೀತ ಬದಲಾವಣೆ..
(ಪ್ರತಿದಿನ ಷೋಡಶೋಪಚಾರ ಮಾಡುವವರಿಗೆ ಬದಲಾಯಿಸೋ ಅವಶ್ಯಕತೆ ಇರುವುದಿಲ್ಲ)
೮. ಗಂಧ : ಶರೀರವು ಸುವಾಸನೆಯಿಂದ ಕೂಡಿರಲು ಶ್ರೀ ಗಂಧವನ್ನು ತೇಯ್ದು ಕೊಡಯವುದು..
೯. ಅಕ್ಷತೆ : ಶುಭವನ್ನುಂಟು ಮಾಡುವುದಕ್ಕೆ ಅಲಂಕಾರಾರ್ಥವಾಗಿ ಧರಿಸುವುದು..
೧೦. ಆಭರಣ : ದೇವರಿಗೆ ಧರಿಸಲಿಕ್ಕೆ ಆಭರಣ ಕೊಡುವುದು..
ಇಲ್ಲಿ ಆಭರಣವೆಂದರೆ ಅರಿಸಿನ, ಕುಂಕುಮ, ಗಂಧ, ಅಕ್ಷತೆ, .. ದೇವರ ಆಭರಣಗಳು ಎಲ್ಲವೂ ಸೇರುತ್ತವೆ..
೧೧. ಪುಷ್ಪಮಾಲಿಕೆ : ಬಂದ ಅತಿಥಿ ಗೆ ಹೂವಿನ ಹಾರ ಅಥವಾ ಹೂವು ಹಾಕಿ ಪೂಜಿಸುವುದು..
೧೨. ಧೂಪ : ಸುಗಂಧ ಪರಿಮಳಯುಕ್ತ ವಾತಾವರಣ ನಿರ್ಮಾಣ ಮಾಡುವುದು..
೧೩. ದೀಪ : ಪರಸ್ಪರ ವೀಕ್ಷಣೆಗಾಗಿ (ದೇವರು - ಭಕ್ತ) ಅನುಕೂಲ ಮಾಡಿಕೊಡುವುದು..
ಇಲ್ಲಿ ಅಷ್ಟೋತ್ತರ , _ಅರ್ಚನೆ ಅಷ್ಟಾವಧಾನ ಸೇವೆ, ಮಾಡಿ ದೇವರು ಮಾಡಿದ ಸಾಹಸಗಳನ್ನು ಹಾಡಿ ಹೊಗಳುವುದು..
೧೪. ಮಧುಪರ್ಕ : (ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ) ಯನ್ನು ಅರ್ಪಿಸುವುದು..
೧೫. ನೈವೇದ್ಯ : ನಿಮ್ಮ ಶಕ್ತಿಗೆ ತಕ್ಕಂತೆ ದೇವರಿಗೆ ಊಟ ಮಾಡಿಸುವುದು ( ನೀವು ಕಷ್ಟಪಟ್ಟು ದುಡಿದ ಹಣದಿಂದ ಮಾಡಿದ ನೈವೇದ್ಯವಾಗಿರಬೇಕು)
ಇಲ್ಲಿ ಆಡಂಬರದ ಅವಶ್ಯಕತೆ ಇರುವುದಿಲ್ಲ, ಭಕ್ತಿಯಿಂದ ಅರ್ಪಿಸಬೇಕಷ್ಟೆ..!
ದೇವರಿಗೆ ತುಪ್ಪದನ್ನ, ಮೊಸರನ್ನ, ಚಿತ್ರಾನ್ನ, ಶಾಲ್ತಾಹ್ನ, ಬೆಲ್ಲದನ್ನ , ಸಿಹಿಪೊಂಗಲ್, ಹುಳಿ ಅವಲಕ್ಕಿ, ಪುಳಿಯೊಗರೆ, ಸಜ್ಜಿಗೆ .. ಇತ್ಯಾದಿ ನೈವೇದ್ಯ ಮಾಡಬಹುದು..
"ಮಡಿಯಿಂದ ಮಾಡಿದರೆ ತುಂಬಾ ಶುಭವಾಗುವುದು..
ಇಲ್ಲಿ ತಾಂಬೂಲ ಇಡುವುದು ಅತ್ಯಂತ ಮುಖ್ಯವಾಗಿರುತ್ತದೆ, ದೇವರ ನೈವೇದ್ಯ ದ ನಂತರ ತಾಂಬೂಲ ಹಾಕಿಕೊಂಡು, ಅಡಿಗೆಯಲ್ಲಿನ ಗುಣಾವಗುಣಗಳನ್ನು ತೊಲಗಿಸುವರು..!
ನಂತರ
" ನೈವೇದ್ಯ ಮಾಡಿದ ತಕ್ಷಣ ಮಂಗಳಾರತಿ ಮಾಡಬಾರದು..!
(ಊಟ ಹಾಕಿ ತಕ್ಷಣ ಕೈ ತೊಳೆದುಕೊಳ್ಳಲು ನೀರು ಕೊಟ್ಟರೆ ಹೇಗಾಗುತ್ತೆ ಅಲ್ವಾ..? ಯೋಚಿಸಿ )
ನೈವೇದ್ಯ ಮಾಡಿ "ಸಾವಿತ್ರೀ ದೇವಿ ಸ್ತೋತ್ರ, ಅಥವಾ ಅನ್ನಪೂರ್ಣೇಶ್ವರಿ ಸ್ತೋತ್ರ ಅಥವಾ ದೇವರ ಸ್ತೋತ್ರ ಪಠಿಸಿ, ನಂತರ ಮಂಗಳಾರತಿ ಮಾಡಬೇಕು..!
ತುಪ್ಪದ ಬತ್ತಿಗಳಿಂದ ಆರತಿ ಬೆಳಗಬೇಕು..
ನಂತರ ನಮಸ್ಕಾರ ಮಾಡಬೇಕು..
೧೬. ವಿಸರ್ಜನೆ : ದೇವರನ್ನು ಆ ಸ್ಥಳದಿಂದ ವಿಸರ್ಜಿಸುವುದು, ಕಳುಹಿಸಿಕೊಡುವುದು..
ಇಲ್ಲಿ ಪೂರ್ಣಫಲ ಸಮೇತ ತಾಂಬೂಲ ಕೊಟ್ಟರೆ ಅಥವಾ ಫಲದಾನ ಮಾಡಿ , ಮತ್ತೆ ಬರುವಂತೆ ಆಮಂತ್ರಣದ ಪ್ರಾರ್ಥನೆ ಕೊಟ್ಟು ವಿಸರ್ಜಿಸುವುದು..;!
ಬೇರಯ ಭಕ್ತರ ಮನೆಗೂ ಹೋಗಿ ಬರುವಂತೆ ಕಳುಹಿಸುತ್ತೇವೆ..!
ಬೇರೆ ಬೇರೆ ತರಹ ಉಪಚಾರಗಳೂ ಇವೆ, ಸಾಧ್ಯವಾದಷ್ಟು ತಿಳಿಸೋ ಪ್ರಯತ್ನ ಮಾಡಿರುತ್ತೇವೆ..!
" ಗೊತ್ತಿಲ್ಲದೇ ಮಾಡುವುದಕ್ಕಿಂತ ಸ್ವಲ್ಪವಾದರೂ ತಿಳಿದಿದ್ದರೆ ಒಳ್ಳೆಯದಲ್ಕವೇ..!
ಶುಭವಾಗಲಿ..🙏
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
No comments:
Post a Comment