ಮಂಗಳವಾರ, 14 ಮೇ 2024
ಲೀಲಾ ಸೋಮಯಾಜಿ
ನಾನು ಹಾರಾಡಿ ಪ್ರೈಮರಿ ಶಾಲೆಯಲ್ಲಿ ಮೂರೋ/ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿರುವಾಗ ನಮ್ಮ ಅಗ್ರಜ ಪದ್ಮನಾಭ ಸೋಮಯಾಜಿ ಅವರು, ಆರೂರು ಗುಂಡು ರಾವ್ ಅವರ ಮಗಳು ಲೀಲಾ ಅವರನ್ನು ಮದುವೆ ಆದರು. ಅದು 1955 ನೇ ವರ್ಷ ಇರಬಹುದು.
ಆಗ ನಮ್ಮ ಬಿರ್ತಿ ಸಾಲೆಕೇರಿ ಮನೆಯಲ್ಲಿ ಸೌಲಭ್ಯಗಳು ಸರಿಯಾಗಿ ಇರಲಿಲ್ಲ, ಶೌಚಾಲಯವೂ ಇರಲಿಲ್ಲ. ಹಳೆಯ ಮನೆ. ಅಗ್ರಜರು ಬ್ರಹ್ಮಾವರ ಹೈಸ್ಕ್ಕೊಲ್ ನಲ್ಲಿ ಚಿತ್ರಕಲಾ ಅಧ್ಯಾಪಕರು.
ನಾನು ನಳಿನಿಯನ್ನು ಮದುವೆ ಯಾದ ಸಂದರ್ಭ (1980) |
ಬಿರ್ತಿ ಮನೆ ಯಲ್ಲಿ ಪರಿವಾರ |
ಲೀಲಾ ಅವರು ಬಹಳ ಅಸಮಾಧಾನದಿಂದ ಮನೆಯಲ್ಲಿ ಇರುತಿದ್ದರು. ಮನೆಯಲ್ಲಿ ಎರಡು ಭಾಗ, ಒಂದನೇ ಭಾಗ ಹುಲ್ಲಿನ ಮಾಡು, ಅಡುಗೆ ಮನೆ, ಪಡಸಾಲೆ, ಎರಡನೇ ಭಾಗದಲ್ಲಿ ಚಾವಡಿ, ಕೋಣೆ ಮತ್ತು ಉಪ್ಪರಿಗೆ.
1957 ರಲ್ಲಿ ಅವರ ಮಗ ಶ್ರೀಕಾಂತನ ಜನನವಾಯಿತು. ಮನೆಯಲ್ಲಿ ಸಂಭ್ರಮ.
1963 ಸಮಯದಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಲೈ.ಐ. ಸಿ ಯ ಅಭಿವ್ರದ್ಧಿ ಅಧಿಕಾರಿಯಾಗಿ (Develoment Oficer), ಹತ್ತಿರದ ಹೆಬ್ರಿ ಯಲ್ಲಿ ಕೆಲಸ ಪ್ರಾರಂಭ ಮಾಡಿದರು.
ನಾನು, ನಳಿನಿ, ಅಚ್ಚಿ, ಲೀಲಾ |
ಅವರು ಅಲ್ಲಿ ಮನೆ ಮಾಡಿದಾಗ ನಮಗೆ ಶಾಲೆಯ ರಜ ಸಮಯದಲ್ಲಿ ಅಲ್ಲಿಗೆ ಹೋಗಿ ಇರುವ ಆಸೆ. ಅತ್ತಿಗೆ ಲೀಲಾ ಅವರು ರುಚಿ ರುಚಿಯಾದ ತಿಂಡಿ ತಿನಸುಗಳು ಮಾಡುವವರು.
1966 ನಲ್ಲಿ ಮಗಳು ಶೋಭಾಳ ಜನನ, 1973 ರಲ್ಲಿ ಮಗಳು ಶೈಲಾ ಳ ಜನನ.
ಲೀಲಾ, ನಾಗವೇಣಿ, ಸುನಂದ |
ತಂಗಿ ಸರೋಜಿನಿ, ಕುಸುಮ |
1971 ರಲ್ಲಿ ನಾನು ವಿದೇಶ, ಆಫ್ರಿಕಾದ ಸಿಯರಾ ಲಿಯೋನ್ ರಾಜ್ಯದ ಫ್ರೀ ಟೌನ್ ಕೆಲಸಕ್ಕಾಗಿ ಪಯಣ.
ಶ್ರೀ ಕಾಂತನು 1988 ಮೆ ತಿಂಗಳಲ್ಲಿ ಕೋಟ ಶ್ರೀಧರ್ ಹಂದೆ ಯವರ ಮಗಳು ಅಭಿಲಾಷ ಅವಳನ್ನು ಮದುವೆ ಆದನು.
ಹುಬ್ಬಳ್ಳಿಗೆ ಪಯಣ ... 1983 ಅಕ್ಟೋಬರ್ 1971 , ಉಡುಪಿ
1997 ರಲ್ಲಿ ಅಗ್ರಜ ಪದ್ಮನಾಭ ಸೋಮಯಾಜಿ ಅವರು ಆರೋಗ್ಯ ಸಮಸ್ಯೆಯಿಂದ ಹಾಗೂ 2004 ರಲ್ಲಿ ಶ್ರೀಕಾಂತನೂ ರಸ್ತೆ ಅಫಘಾತ ದಲ್ಲಿ ಮರಣ ಹೊಂದಿದರು.
ಲೀಲಾ ಅವರು ಸ್ವಪ್ರತಿಷ್ಟೇಯುಳ್ಳ, ಅಹಂ, ಗರ್ವ, ಹೃದಯದಲ್ಲಿ ಒಳ್ಳೆತನ ಇರುವ ಹೆಂಗಸು.
ಇತ್ತೀಚಿಗೆ ಮೊಮ್ಮಗ ಅನೀಶನ ಮದುವೆ ಸಂದರ್ಭದಲ್ಲಿ ಅವರ 87 ನೇ ಹುಟ್ಟುಹಬ್ಬವನ್ನು ಮಕ್ಕಳು, ಮೊಮ್ಮಕ್ಕಳು ಇರೊಡನೆ ಸಂಭ್ರಮಿಸಲಾಯಿತು.
ಅವರಿಗೆ ಆರೋಗ್ಯ, ಆಯುಸ್ಸು, ನೆಮ್ಮದಿಯನ್ನು ಶ್ರೀ ದೇವರು ಸದಾ ಕರುಣಿಸಲಿ ಎಂಬ ಹಾರೈಕೆಗಳು.
Posted 14/5/2024
No comments:
Post a Comment