ಗುರುವಾರ, ಮೇ, 16, 2024
ಸೇವಾ ಸದನ, ಮಲ್ಲೇಶ್ವರ, ಬೆಂಗಳೂರು.
ಭಾರತಿ ರಂಗತಂಡ ದವರು ಅರ್ಪಿಸಿದ ಸುಂದರವಾದ ಕನ್ನಡ ನಾಟಕ "ಆಚಾರ್ಯ ಚಾಣಕ್ಯ"
ಸುಮಾರು 80 ನಿಮಿಷಗಳ ನಾಟಕವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಅದ್ಭುತವಾದ ಸಂಭಾಷಣೆ, ಕಲಾವಿದರ ವೇಷ ಭೂಷಣ ಅತ್ಯಂತ ಮನ ಸೆಳೆಯುವಂತಿತ್ತು.
ಎಲ್ಲಾ ಕಲಾವಿದರ ಅಬಿನಯ, ಸಂಭಾಷಣೆಯಲ್ಲಿ ಸ್ಪಷ್ಟತೆ, ಮಾತಿನಲ್ಲಿ ಏರಿಳಿತ, ಆಕರ್ಷಣೀಯ ವಾಗಿತ್ತು.
ಆಚಾರ್ಯ ಚಾಣಕ್ಯನ ಕಥೆ ಹೆಚ್ಚಿನವರು ಓದಿ ತಿಳಿದು ಕೊಂಡಿರುತ್ತಾರೆ. ಪ್ರಸಕ್ತ ರಾಜಕೀಯ ವಾತಾವರಣದಲ್ಲಿ, ರಾಜಧರ್ಮ, ಪ್ರಜಾ ಧರ್ಮ, ಸನಾತನ ಧರ್ಮದ ಸಂಭಾಷಣೆಗಳು ಅತ್ಯಂತ ಸೂಕ್ತವಾಗಿರುತ್ತದೆ.
ಚಾರುವಾಕ ಮತ್ತು ಸಖಿ (ಬೊಂಬೆಗಳು)
ನಾಟಕದ ನಿರೂಪಣೆ ಚಾರುವಾಕ ಮತ್ತು ಸಖಿ, ಬೊಂಬೆಗಳ ಅಭಿನಯದ ಮೂಲಕ ಮಾಡಿರುವುದು ವಿಶೇಷವಾಗಿತ್ತು.
![]() |
| ಅಸ್ತಾ ವಕ್ರ ಮತ್ತು ರಾಜ |
ನಾಟಕದ ರಚನೆ "ಬಾಬು ಹಿರಣ್ಣಯ್ಯ", ನಿರ್ದೇಶನ "ಪ್ರದೀಪ ಅಂಚೆ"
![]() |
| ಕಲಾವಿದರುಗಳೊಂದಿಗೆ |
![]() |
| ವೈ.ಕೆ. ಶರ್ಮ ದಂಪತಿಗಳು |
![]() |
| ಪ್ರೇಕ್ಷಕರು |
ರಂಗ ಸಜ್ಜಿಕೆ, ಬೆಳಕು, ಹಿನ್ನೆಲೆ ಸಂಗೀತ ಎಲ್ಲವೂ ನಾಟಕದ ಮೆರುಗನ್ನು ಹೆಚ್ಚಿಸಿತ್ತು.
ಭಾರತಿ ತಂಡದ ಎಲ್ಲರಿಗೂ ಅಭಿನಂದನೆಗಳು.
Posted 17/5/2024












No comments:
Post a Comment