14/6/2024
ಮನೆಯ ಚಾವಡಿ (sit out)
ನಾನು ದಕ್ಷಿಣ ಕನ್ನಡದವಳು. ನಮ್ಮಲ್ಲಿ ಮನೆಯ ಪ್ರವೇಶದಲ್ಲಿರುವ ಜಾಗಕ್ಕೆ “ಜಗುಲಿ” ಎನ್ನುತ್ತಾರೆ. ಈಗ ನಾವು “ಸಿಟ್ ಔಟ್” ಎನ್ನುವ ಪದವನ್ನು ಅದರ ಬದಲಿಗೆ ಬಳಸುತ್ತಿದ್ದೇವೆ ಎಂದು ನನ್ನ ಅನಿಸಿಕೆ.
ನಾನು ನಮ್ಮ ಕ್ಯಾಂಪಸ್ ನಲ್ಲಿ ಮನೆ ಕಟ್ಟಿದಾಗ ಮನೆಯ ಪ್ರವೇಶದಲ್ಲಿ ಒಂದು ಪುಟ್ಟ ಸಿಟ್ ಔಟ್ ಕಟ್ಟಿಸಿದ್ದೆ. ಸುಮಾರು ಎಂಟಡಿ x ಹತ್ತಡಿಯ ಅಳತೆಯದ್ದಿದ್ದಿರಬಹುದದು. ಹೆಂಚಿನ ಮಾಡು ಹಾಗೂ ಒಳಗೆ ಕುಳಿತುಕೊಳ್ಳಲು ಅದರ ಮೂರು ಕಡೆ ಮರದ ಚೌಕಟ್ಟು ಹೊಂದಿದ್ದ ರೆಡ್ ಆಕ್ಸೈಡಿನ ಸಿಮೆಂಟ್ ಕಟ್ಟೆ. ಆ ಸಿಟ್ ಔಟ್ ಕಬ್ಬಿಣದ ಗ್ರಿಲ್ ನಿಂದ ಆವರಿಸಲ್ಪಟ್ಟಿತ್ತು. ಒಂದು ರೀತಿಯ ಪುಟ್ಟದಾದ ಆಪ್ತವಾದ ಜಾಗ ಅದಾಗಿತ್ತು. ನಮ್ಮ ಮನೆಗೆ ಯಾರೇ ಬಂದರೂ ಎಲ್ಲರೂ ಸೇರಿ ಕುಳಿತು ಕಥೆ ಹೊಡೆಯುತ್ತಿದ್ದ ಜಾಗ ಅದಾಗಿತ್ತು. ಗಾಳಿ ಮಳೆ ಬಂದಾಗ ನೀರು ಒಳಗೆ ಸಿಡಿಯುತ್ತಿದ್ದ ಕಾರಣ ಅಲ್ಲಿ ಕೂರಲು ಕಷ್ಟವಾಗುತ್ತಿತ್ತು. ಆ ಸಮಯದಲ್ಲಿ ಅದರ ಬಳಕೆ ಕಡಿಮೆಯಾಗುತ್ತಿತ್ತು. ಅದರ ಎಡಪಕ್ಕದಲ್ಲಿ ನಮ್ಮ ಕಾರ್ ಶೆಡ್ ಇತ್ತು.
ನಮ್ಮ ಮನೆಯ ಶಂಕರಿ ಅದರ ಎಡ ಪಕ್ಕದಲ್ಲಿ ಗಿಡಬಳ್ಳಿಗಳನ್ನು ನೆಟ್ಟಿದ್ದಳು. ಹೀಗಾಗಿ ಅಲ್ಲೊಂದು ಹಸಿರ ಹಂದರವಿತ್ತು. ನೋಡಲು ಸುಂದರವಾಗಿ ಕಾಣುತ್ತಿತ್ತು. ಅದರಿಂದ ಆಗಾಗ್ಗೆ ತೊಂದರೆಯೂ ಆಗುತ್ತಿತ್ತು. ಅಲ್ಲೆಲ್ಲಾ ಇಲಿಗಳಿದ್ದ ಕಾರಣ ಹಾವುಗಳು ಇಲಿಗಳನ್ನು ಬೇಟೆಯಾಡಲು ಆ ಬಳ್ಳಿಗಳನ್ನು ಹತ್ತಿ ನಮ್ಮ ಸಿಟ್ ಔಟಿನ ಮಾಡಿನ ಹೆಂಚಿನ ಸಂದಿಯಲ್ಲಿ ಕುಳಿತಿರುತ್ತಿದ್ದವು. ಒಮ್ಮೆ ನನ್ನ ಸೊಸೆ ಕೂತಿದ್ದಾಗ ಅವಳು ತಲೆ ಎತ್ತಿ ನೋಡಿದಾಗ ಅವಳ ತಲೆಯ ಮೇಲಿನ ಮಾಡಿನ ಭಾಗದಲ್ಲಿ ಹಾವು ಹರಿದಾಡುತ್ತಿತ್ತು. ಮೊದಲೇ ಹಾವೆಂದರೆ ಹೆದರುವ ಅವಳು ಕೆಲವು ದಿನ ಸಿಟ್ ಔಟ್ ನಲ್ಲಿ ಕುಳಿತುಕೊಳ್ಳಲೇ ಇಲ್ಲ. ಸ್ವಲ್ಪ ಧೈರ್ಯಸ್ಥರಾದ () ನಾವು ಕೂಡಾ ಅಲ್ಲಿ ಕುಳಿತುಕೊಳ್ಳಲು ಯೋಚಿಸುವಂತಾಗಿತ್ತು. ಒಮ್ಮೆಯಂತೂ ಶಂಕರಿ ಸಿಟ್ ಔಟಿನ ಗೇಟ್ ತೆಗೆದು ಒಳಬರುವಾಗ “ನಾಗರಾಜ” ಅಲ್ಲಿನ ಕಟ್ಟೆಯ ಮೇಲೆ ಪವಡಿಸಿದ್ದ. ಅವಳ ಕಿಟಾರನೆ ಕಿರುಚುವಿಕೆ ಕೇಳಿ ಏನೋ ಆಗಿರಬೇಕೆಂದು ಭಾವಿಸಿ ನಾವು ಹಿಂಬಾಗಿಲಿನಿಂದ ಹೊರಬಂದು ಗ್ರಿಲ್ ಮೂಲಕ ಇಣುಕಿ ನಾಗರಾಜನನ್ನು ನೋಡಿ ಧೈರ್ಯಗೆಟ್ಟಿದ್ದೆವು. ಕೊನೆಗೆ ಬಾಲಣ್ಣ ಬಂದು ಉದ್ದನೆಯ ಕೋಲಿನಿಂದ ನಿಧಾನವಾಗಿ ಅದನ್ನು ದೂಡುತ್ತಾ ಹೊರಹಾಕಿದರು. ಇಂತಹ ಘಟನೆಗಳಾದದ್ದು ಕೆಲವೇ ಕೆಲವಾದರೂ ನಮ್ಮಲ್ಲಿ ಮರೆಯಲಾರದ ಛಾಪು ಮೂಡಿಸಿದವುಗಳಾಗಿವೆ.
ಆ ಸಿಟ್ ಔಟ್ ನ ಕಟ್ಟೆಯಲ್ಲಿ ನಮ್ಮಲ್ಲಿ ಬಂದ ಬಹಳಷ್ಟು ಮಹನೀಯರು ಕುಳಿತು ಹೋಗಿದ್ದಾರೆ. ನಮ್ಮ ಎಷ್ಟೋ ಹಳಹಳಿಕೆಯ ಮಾತುಗಳು ಅಲ್ಲಿ ನಡೆದಿವೆ. ನಮ್ಮ ಎಷ್ಟೋ ಹರಟೆಗಳಿಗೆ ಅದು ಸಾಕ್ಷಿಯಾಗಿದೆ. ಮನೆಯ ಒಳಗಿನ ಬದುಕು ಸಾಕೆನಿಸಿದಾಗ ಆ ಸಿಟ್ ಔಟ್ ನಮಗೆ ಸ್ಥಳಾವಕಾಶ ನೀಡಿ ಹೊರಗಿನ ಹರವನ್ನು ತೋರಿಸಿದೆ. ನಮ್ಮ ಓದುವಿಕೆಗೆ ಆಪ್ತ ಹಾಗೂ ಸೂಕ್ತ ಜಾಗವಾಗಿ ತನ್ನನ್ನು ತೆರೆದುಕೊಂಡಿದೆ.
ನಮ್ಮ ಮನೆಯನ್ನು ನವೀಕರಿಸಿದಾಗ ಕಾರಣಾಂತರಗಳಿಂದ ಆ ಸಿಟ್ ಔಟನ್ನು ನೆಲಸಮ ಮಾಡಿ ಹೊಸದಾದ, ದೊಡ್ಡದಾದ ಸಿಟ್ ಔಟನ್ನು ಮಾಡಲಾಯಿತು. ಆದರೂ ಆ ಹಳೆಯ ಸಿಟ್ ಔಟಿನ ನೆನಪು ಇನ್ನೂ ಮನದ ಮೂಲೆಯಲ್ಲಿ ಇಣುಕಿ ಹಾಕುತ್ತಿರುವುದನ್ನು ತಪ್ಪಿಸಲೇ ಆಗುತ್ತಿಲ್ಲ!!

No comments:
Post a Comment