Thursday, June 20, 2024

ಕಡಲ ತಡಿಯ ಅನುಭವ

 16/6/2024

ಕಡಲ ತಡಿಯ ಭೋರ್ಗರತ 

ನಿನ್ನೆಯಿಂದ ನಾವು ಎಂಟೋಬತ್ತು ಜನ ಕಡಲತಡಿಯ ಒಂದು ಸುಂದರ ಜಾಗದಲ್ಲಿ ಉಳಿದಿದ್ದೇವೆ.

ನಿನ್ನೆಯಿಂದಲೂ ಇಲ್ಲಿ ಕೇಳುತ್ತಿರುವುದು ಬರೀ ಕಡಲ ಭೋರ್ಗರೆತ.

ಹೆಪ್ಪಾದ  ಮೊಸರನ್ನು ಕಡೆದಾಗ ಸಿಗುವ ಬೆಣ್ಣೆಯಂತೆ ಕಡಲು ತನ್ನ ರಭಸದ ಚಲನೆಯ ಮಥನದ ಅನುಭವದಿಂದ ಪಡೆಯುವ ಫಲವೇ ಈ ನೊರೆಯಾಗಿರಬಹುದೇ?? ಹಾಗಾದರೆ ನಮ್ಮ ಬದುಕಿನ ಅನುಭವದಿಂದ ಕಲಿಯುವ ಪಾಠಗಳ ಫಲಶ್ರುತಿ ಈ ನೊರೆಯಂತೆ ಇರುತ್ತದೆಯೇ??

ಇರಬಹುದು ....ಈ ಅನುಭವಗಳು ನಮ್ಮ ಚಿಂತನೆಯ ಕ್ರಮವನ್ನು, ಬದುಕನ್ನು ನೋಡುವ ದೃಷ್ಟಿ ಕೋನವನ್ನು  ಬದಲಿಸಿ , ನಮ್ಮ ವ್ಯಕ್ತಿತ್ವವನ್ನು ರೂಪಿಸುವ ಪರಿ ಕಡಲಿನ ನೊರೆಯ ಸೃಷ್ಟಿ ಯಂತೆ ಯಾಕಾಗಿರಬಾರದು??

ಆ ನೊರೆ ಬಲು ಹಗುರ, ತೀರ ತಲುಪಿದ ಒಂದೇ ಕ್ಷಣದಲ್ಲಿ ಮರಳಿ ನೊಡನೆ ಮಿಳಿತವಾಗುತ್ತದೆ.ಇಲ್ಲವೇ ಪುನಃ ಅಲೆಯನೋದಗೂಡಿ ನೀರಿನಲ್ಲಿ ಒಂದಾಗುತ್ತದೆ.

ನಮ್ಮ ಚಿಂತನೆ ಕೂಡಾ ಹಾಗೇ ಅಲ್ಲವೇ?? ಪ್ರತಿ ಅನುಭವದ ಮೂಸೆಯಲ್ಲಿ ಮಿಂದೆದ್ದಾಗ ಆಯಾಯ ಪರಿಸ್ತಿತಿ ಗನುಗುಣ ವಾಗಿ  ಅದು ರೂಪಿತವಾಗುತ್ತದೆ.

ವಿಷಯ ಎಲ್ಲ್ಲಿಂದ ಎಲ್ಲಿಗೋ ಹೋಗುತ್ತಿರುವಂತಿದೆ. ಈಗಲೂ ಕಡಲ ಬೋರ್ಗರೆತವನ್ನು ಕೇಳುತ್ತಲೇ  ಇದನ್ನು ಬರೆಯುತಿದ್ದೇನೆ. ಕಡಲಿನ ಅಲೆಗಳಂತೆ ನನ್ನ ತಲೆಯಲ್ಲೂ  ವಿಚಾರಗಳ ಅಲೆಗಳು ನಿರಂತರವಾಗಿ ಚಲಿಸುತ್ತಿದೆ, ಭೋರ್ಗರೆಯುತ್ತಿವೆ. ಇದು ಕೂಡಾ ನಿತ್ಯ, ನಿರಂತರ ಪ್ರಕ್ರಿಯವಲ್ಲವೇ?? ಇದಕ್ಕೆಲ್ಲ ಭಾಷೆಗಳ ಉಪಮೆಗಳು ಬೇಕೇ?? ನೋಡುವ ನೋಟಕಷ್ಟೇ ಸಾಕಲ್ಲವೇ?? ಕೇಳುವ ಕಿವಿಯೂ ಬೇಕಲ್ಲವೇ??

ಅರಿತು ಮಿಡಿಯುವ ಮನ್ನಸ್ಸು ಇದ್ದರೆ ಸಾಕಲ್ಲವೇ??



Posted 20/6/2024


No comments:

Post a Comment