Monday, June 24, 2024

ಎಲ್.ಎಸ್. ಶೇಷಗಿರಿ ರಾವ್ - ಜನ್ಮ ಶತಮಾನೋತ್ಸವ

 ಭಾನುವಾರ, 23 ಜೂನ್ 2024 

ವಿನಾಯಕ ದೇವಸ್ಥಾನ ಸಭಾಂಗಣ, ಅರ. ಟಿ. ನಗರ, ಬೆಂಗಳೂರು.

ಎಲ್.ಎಸ್. ಶೇಷಗಿರಿ ರಾವ್ - ಜನ್ಮ ಶತಮಾನೋತ್ಸವ 

ಶಿವರಾಮ ಕಾರಂತ ವೇದಿಕೆಯ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ "ಎಲ್.ಎಸ್. ಶೇಷಗಿರಿ ರಾವ್ ಅವರ ಜನ್ಮ ಶತಮಾನೋತ್ಸವ " ಸಂಪನ್ನ ಗೊಂಡಿತು,




ಕುಮಾರಿ ಪ್ರಣತಿ ಯಿಂದ ಪ್ರಾರ್ಥನೆಯಾದ  ಬಳಿಕೆ  ವೇದಿಕೆಯ ಅಧ್ಯಕ್ಷೆ ಡಾ. ದೀಪಾ ಫದ್ಕೆಯವರು ಸ್ವಾಗತ ಭಾಷಣ ಮಾಡಿ ಅತಿಥಿ ಗಳನ್ನೂ ಹಾಗೂ ಸಭಿಕರನ್ನು ಸ್ವಾಗತಿಸಿದರು.




ವೇದಿಕೆಯ ಗೌರವಾಧ್ಯಕ್ಷ ಎಸ್.ಅರ್. ವಿಜಯಶಂಕರ್ ಪ್ರಾಸ್ತಾವಿಕ ನುಡಿಗಳನ್ನು ಆದಿ ಎಲ್.ಎಸ್ ಶೇಷಗಿರಿ ರಾವ್ ಅವರ ಬದುಕು ಮತ್ತು ಬರಹ ವನ್ನು ವಿಸ್ತಾರವಾಗಿ ಪರಿಚಯಿಸಿದರು.



ಕನ್ನಡ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಡಾ ಪುರುಷೋತ್ತಮ ಬಿಳಿಮಲೆ ಅವರನ್ನು ಶಾಲು ಹಾರದೊಂದಿಗೆ ಸನ್ಮಾನಿಸಲಾಯಿತು.



ಇನ್ನೋರ್ವ ಅತಿಥಿ ಡಾ ಟಿ. ಎನ್. ವಾಸುದೇವ ಮೂರ್ತಿ , ಸಹ ಪ್ರಾಧ್ಯಾಪಕರು, ಆದಿ ಚುಂಚನಗಿರಿ ವಿಶ್ವ ವಿದ್ಯಾಲಯ ತಮ್ಮ ಉಪನ್ಯಾಸದಲ್ಲಿ ಎಲ್.ಎಸ್. ಶೇಷಗಿರಿ ರಾಯರ ಕನ್ನಡಕ್ಕೆ ಕೊಡುಗೆಯನ್ನು ಪ್ರಶಂಸಿದರು.


ಡಾ. ಪುರುಷೋತ್ತಮ ಬಿಳಿಮಲೆ ಅವರು ತಮ್ಮ ಭಾಷಣದಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ದಿಂದ ಮುಂದೆ ಆಗಬೇಕಾದ ಕೆಲಸಗಳನ್ನು ತಿಳಿಸಿದರು.

ಬಿಳಿಮಲೆ ಅವರಿಗೆ ಒಂದು ಕಿವಿ ಮಾತು.



ಎರಡು ದಿನಗಳ ಹಿಂದೆ ನಿಧನರಾದ ಹಿರಿಯ ಸಾಹಿತಿ, ಲೇಕಖಿ ಡಾ ಕಮಲಾ ಹಂಪನಾ ಅವರಿಗೆ ಒಂದು ನಿಮಿಷದ ಮೌನದೊಂದಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು.

ಕಮಲಾ ಹಂಪನಾ 

ಶ್ರೀಮತಿ ಛಾಯ ಉಪಾಧ್ಯ ಕಾರ್ಯಕ್ರಮ ನಿರೂಪಣೆ, ಧನ್ಯವಾದ ಸಮರ್ಪಣೆ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪ್ರಜಾವಾಣಿ 24/6/2024

ಕನ್ನಡ ಪ್ರಭ 24/6/2024

ಶ್ರೀ ಸುಧೀಂದ್ರ ಅವರು ಇಂದಿನ ಕಾರ್ಯಕ್ರಮಕ್ಕೆ ಲಘು ಉಪಹಾರ, ಚಾ ವನ್ನು ಪ್ರಾಯೋಜಿಸಿದ್ದರು.

ಬರೆದಿರುವುದು (Posted)  25/6/2024


No comments:

Post a Comment