Friday, June 7, 2024

SUYODHANA - KANNADA DRAMA

 Friday, 7th June 2024

Chowdiah Memorial Hall, Malleshwara, Bengaluru.


ದ್ರೋಣ, ಕರ್ಣ,ಶಕುನಿ, ಸುಯೋಧನ, ಕೃಷ್ಣ, ಧರ್ಮಜ, ಭೀಮ, ಭೀಷ್ಮ 

ಸುಯೋಧನ- ವೈ, ಕೃಷ್ಣ ಶರ್ಮ ವಿರಚಿತ ಒಂದು ಅದ್ಭುತವಾದ ಕನ್ನಡ ನಾಟಕ.
ಮಹಾಭಾರತದಲ್ಲಿ ದುರ್ಯೋಧನನ ಪಾತ್ರವನ್ನು ವಿಭಿನ್ನವಾಗಿ ಯೋಚಿಸಿ ಬರೆದ ನಾಟಕ.
ಈ ನಾಟಕವನ್ನು "ಸಂಧ್ಯಾ ಕಲಾವಿದರು"  ರಂಗಭೂಮಿಯ ಮೇಲೆ ಅದ್ಭುತವಾಗಿ ಪ್ರದರ್ಶಿಸಿ ಪ್ರಶಂಷೆಗೆ ಪಾತ್ರರು.






ಕೃಷ್ಣ, ದುರ್ಯೋಧನ, ಭೀಮ, ಭೀಷ್ಮ, ಶಕುನಿ, ಧರ್ಮಜ, ದ್ರೋಣ, ಕರ್ಣ-- ಈ ಪಾತ್ರಗಳಲ್ಲಿಯ ನಿರರ್ಗಳವಾದ  ಸಂಭಾಷಣೆಯೊಂದಿಗೆ ಅಭಿನಯ, ಕಲಾವಿದರ ಪ್ರತಿಭೆಯನ್ನು ಪ್ರದರ್ಶಿಸುತ್ತದೆ.

ನಾಟಕದಲ್ಲಿ ಕೃಷ್ಣನನ್ನು ಖಳನಾಯಕನಾಗಿ, ಕಪಟ ನಾಟಕ ಸೂತ್ರಧಾರಿ,ಎಂದು ಬಿಂಬಿಸಿ ದುರ್ಯೋಧನನನ್ನು ಒಬ್ಬ ಸಮರ್ಥ, ಮೇಧಾವಿ ಕುರುವಂಶದ ರಾಜನಾಗಿ ತೋರಿಸುತ್ತದೆ. ಕೃಷ್ಣನನ್ನು ಹಿಂದೆ ಮುಂದಿಲ್ಲದೇ ಜರಿಯುತ್ತಾನೆ, ಹೀಯಾಳಿಸುತ್ತಾನೆ.

ಭೀಷ್ಮ, ದ್ರೋಣ, ಶಕುನಿ, ಮತ್ತು ಕರ್ಣನು ಪ್ರೇತಗಳಾಗಿ  ಬರುವ ಸನ್ನಿವೇಶ, ಸಂಭಾಷಣೆ, ಅದ್ಭುತ.
ನಾಟಕದಲ್ಲಿ ಬೆಳಕು, ಸಂಗೀತ, ಕಲಾವಿದರ ವೇಷ ಭೂಷಣ ಎಲ್ಲವೂ ಅದ್ಭುತವಾಗಿತ್ತು.

ನಾಟಕದ ನಂತರ ಕಲಾವಿದರೊಂದಿಗೆ ಫೋಟೋ ಗಳು:





ಸುಮಾರು 2 ಗಂಟೆಗಳ ಕಾಲ ವಿರಾಮವಿಲ್ಲದೇ ನಡೆದ ನಾಟಕ, ಸಭಿಕರನ್ನು ಸೆರೆ ಹಿಡಿದು ಇಟ್ಟಿತ್ತು.
ನಾಟಕಕದ ಉಚಿತ ಪ್ರದರ್ಶನಕ್ಕೆ ಅನುವು ಮಾಡಿದ ಕೃಷ್ಣ ಶರ್ಮ, ಸಂಧ್ಯ ಶರ್ಮ ದಂಪತಿಗಳಿಗೆ ಅಭಿನಂದನೆಗಳು.

ಬರೆದಿರುವುದು 8/6/2024





No comments:

Post a Comment