ಶುಕ್ರವಾರ, ದಶಂಬರ 12, 2025
ಶ್ರೀ ನಂದಿಕೇಶ್ವರ ದೇವಸ್ಥಾನ, ಹೆಗ್ಡೆ ಕೆರೆ, ಹಳ್ಳಾಡಿ.
ನನ್ನ ಅಕ್ಕನ ಮಗ ಕೃಷ್ಣ ಮೂರ್ತಿಯೊಡಣೆ ಹಾಲಾಡಿ ಗೆ ಹೋಗಿ ವಾಪಸ್ಸು ಬರುತ್ತಾ ಹಳ್ಳಾಡಿಯಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನ ದಲ್ಲಿ ದೇವರ ದರ್ಶನ ಪಡೆದೆವು.
ಕರಾವಳಿ ಜಿಲ್ಲೆಯಲ್ಲಿ ಚಾರಿತ್ರಿಕ ಮಹತ್ವ ಹೊಂದಿರುವ ದೇವಸ್ಥಾನಗಳಲ್ಲಿ ಒಂದಾದ ಉಡುಪಿ ಜಿಲೆಯ ಕುಂದಾಪುರ ತಾಲೂಕಿನ ಶ್ರೀ ನಂದಿಕೇಶ್ವರ ದೇವಸ್ಥಾನ. ಇಲ್ಲಿನ ದೇವರು ಲಿಂಗರೂಪಿಯಾಗಿದ್ದು ಪಾಣಿಪೀಠ ಆಷ್ಟಬಂದ ಒಳಗೊಂಡಿರುವುದು ಇಲ್ಲಿನ ವಿಶೇಷ.
ಇತ್ತೀಚೆಗೆ ಆಡಳಿತ ಸಮಿತಿ ರಚನೆಯಾಗಿದ್ದು ತನ್ಮೂಲಕ ನಾಗನ ಸನ್ನಿಧಾನ, ಅರ್ಭಕ ಧಾರಕೇಶ್ವರಿ ಸಹಿತ ವೀರಭದ್ರ ದೇವರ ಗುಡಿ, ಧೂಮಾವತಿ ಗುಡಿ ಹಾಗೂ ಹೆಬ್ಬಾಗಿಲು ಜೀರ್ಣೋದ್ಧಾರ ಗೊಂಡಿರುತ್ತದೆ.
ಸುಮಾರು 1300 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ, ಹತ್ತಿರ ಇರುವ ಗುಡ್ಡೆಟಿನ ಗಣಪತಿ ದೇವಸ್ಥಾನಕ್ಕೂ ಹತ್ತಿರವಾದ ಸಂಬಂಧವಿದೆ.
ಸುಮಾರು ಅರ್ಧ ಗಂಟೆ ದೇವಸ್ತಾನದ ಆವರಣದಲ್ಲಿ ಕಳೆದಿದ್ದು ಅಲ್ಲಿಂದ ವಾಪಸ್ಸು ಉಡುಪಿಗೆ ಹೊರಟೆವು.
Posted 21/12/2025

.jpg)






No comments:
Post a Comment