Tuesday, December 9, 2025

'ಸ್ಟೆoಟ್' ಅಂದರೇನು? - STENT

 9/12/2025

WhatsApp forwarded

ನಿಮಗೆಷ್ಟು ಗೊತ್ತು ಹೃದಯದ ಸ್ಟೆoಟ್

ಒಮ್ಮೆ ಹೃದಯದ ರಕ್ತನಾಳಕ್ಕೆ ಸ್ಟೆoಟ್ ಅಳವಡಿಸಿದರೆ, ಅದು  ಜೀವನ ಪರ್ಯoತ ಕಾರ್ಯ ನಿರ್ವಹಿಸುತ್ತದೆ ಎoಬುದು ತಪ್ಪು ನಂಬಿಕೆ ಅಥವಾ ಅರ್ಧ ಸತ್ಯ. 

 ಹೇಮಂತ್ ಚಿನ್ನು

'ಸ್ಟೆoಟ್' ನಮ್ಮ ಜೀವನವನ್ನು ಅಪಾಯದಲ್ಲಿದ್ದಾಗ ಪಾರು ಮಾಡಬಹುದು, ಆದರೆ ಅದು ಜೀವನಪರ್ಯಂತ ಕೆಲಸ ಮಾಡುವುದಿಲ್ಲ. ಅನೇಕ ಬಾರಿ ಇದರ ವೈಜ್ಞಾನಿಕ ಸತ್ಯವನ್ನು ವೈದ್ಯರು ಹೇಳುವುದಿಲ್ಲ ಅಥವಾ ಹೇಳಿದರೆ ರೋಗಿಗೆ ಆಘಾತವಾಗಬಹುದೆಂದು ಹೇಳದಿರಬಹುದು.

'ಸ್ಟೆoಟ್' ಅಂದರೇನು?

ಇದೊಂದು ಸೂಕ್ಷ್ಮ ಲೋಹದಿoದ ತಯಾರಿಸಿದ ಜಾಲರಿ ನಳಿಕೆ.

 ಹೃದಯದ ರಕ್ತನಾಳದಲ್ಲಿ ಬಲೂನ್ ಆಂಜಿಯೋಪ್ಲಾಸ್ಟೀ ಮಾಡಿ ಕೊಬ್ಬಿನ ಶೇಖರಣೆಯಿoದಾದ ಅಡೆ-ತಡೆಯನ್ನು (Plaqu) ನಿವಾರಿಸಿ ನಂತರ 'ಸ್ಟೆoಟ್' ಅಳವಡಿಸುತ್ತಾರೆ. ರಕ್ತನಾಳ ಕೊಬ್ಬಿನ ಫಲಕದಿoದ (Plaque)

ಕುಗ್ಗಿದಾಗ  ಅದರಲ್ಲಿ ರಕ್ತ ಚಲನವಲನೆ ಕಡಿಮೆಯಾಗಿ 'ಹೃದಯಾಘಾತ'ವಾಗುತ್ತದೆ. ಅದನ್ನು ತಡೆಯಲು 'ತಡೆ' ತೆರವುಗೊಳಿಸಿ ಸ್ಟೆoಟ್ ಹಾಕುತ್ತಾರೆ. ಸ್ಟೆoಟ್ ಹಾಕಿದಾಗ ರಕ್ತನಾಳ ಕುಸಿಯದೇ ರಕ್ತಚಲನವಲನ ಉತ್ತಮಗೊಳ್ಳುತ್ತದೆ.

ಎರಡು ವಿಧದ ಸ್ಟೆಂಟ್ ಗಳು.  

 ಬಿಎಂಎಸ್ (Bare Metal Stent), ಇದನ್ನು 1990 ರಿoದ ಬಳಸಲಾಗುತ್ತಿದೆ. 

ಡ್ರಗ್ ಎಲ್ಯೂಡಿoಗ್ ಸ್ಟೆoಟ್ (DES) ಇದು ನಿಧಾನವಾಗಿ ಔಷಧಿಯನ್ನು ಬಿಡುಗಡೆ ಮಾಡುತ್ತ, ರಕ್ತನಾಳವನ್ನು ತೆರೆದಿಡುತ್ತದೆ. ಈಗ ಎಲ್ಲಾ ಆಧುನಿಕ ಆಸ್ಪತ್ರೆಗಳು ಇದನ್ನೇ ಬಳಸುತ್ತವೆ. ಈಗ ಎರಡನೇ ಹಾಗೂ ಮೂರನೇ ಪೀಳಿಗೆ DES (Generation) ಸ್ಟೆoಟ್ ಗಳು ಲಭ್ಯವಿದ್ದು ರಕ್ತನಾಳ ಕುಗ್ಗುವಿಕೆ 2-3% ಮಟ್ಟಕ್ಕೆ ಇಳಿದಿದೆ. 

ಎಷ್ಟು ದಿವಸ ಸ್ಟೆoಟ್ ದೇಹದಲ್ಲಿ ಕೆಲಸ ಮಾಡಲು ಸಾಧ್ಯ ?

 ಸ್ಟೆಂಟ್ ಜೀವನಪರ್ಯoತ ಕೆಲಸ ಮಾಡಲು ಬಳಸಲಾಗುವುದು, ಅವು ಕರಗುವುದಿಲ್ಲ ಹಾಗೂ ಹೊರಗೆ ಬರುವುದಿಲ್ಲ. ಆದರೆ ಸ್ಟೆoಟ್ ದೀರ್ಘಕಾಲದವರೆಗೆ ಕೆಲಸ ಮಾಡದಿರಲು ಕಾರಣ ರಕ್ತನಾಳದ ಒಳಪದರದಲ್ಲಿರುವ ಜೀವಕೋಶಗಳಿoದಾದ ಅoಗಾoಶ (Tissue) ಸ್ಟೆoಟ್ ಸುತ್ತಲೂ ಬೆಳೆದು ಅದರ ಕ್ರಿಯಾಶೀಲತೆಯನ್ನು ಕಡಿಮೆ ಮಾಡುತ್ತವೆ. 15% ರೋಗಿಗಳಲ್ಲಿ ಇದು ಐದು ವರ್ಷಗಳಲ್ಲಿ ಕoಡುಬರುತ್ತದೆ. ಇದು ಬೇರೆ ರಕ್ತನಾಳಗಳಲ್ಲಿ ಕoಡುಬರಬಹುದು ಹಾಗೂ ಅದನ್ನು 'ಅಥಿರೋಸ್ಕ್ಲಿರೋಸಿಸ್' (Atherosclerosis) ಎನ್ನುತ್ತಾರೆ. ಸ್ಟೆoಟ್ ಹೃದಯದ ರೋಗವನ್ನು ಗುಣಪಡಿಸುವುದಿಲ್ಲ.

ಹೃದಯ ರೋಗ ಗುಣಪಡಿಸಲು ಪುನಃ ಹೃದಯಾಘಾತವಾಗದoತೆ ತಡೆಯಲು 'ಜೀವನ ಶೈಲಿಯಲ್ಲಿ ಬದಲಾವಣೆ' ತರುವುದು ಅತ್ಯಗತ್ಯ. ನoತರದ ದಿನಗಳಲ್ಲಿ, ಎರಡನೇ ಬಾರಿ ರಕ್ತನಾಳ ಕುಗ್ಗುವ ಸಾಧ್ಯತೆ ಕಂಡುಬರದೆ ಮುಂದುವರಿಯಬಹುದು ! ಅದನ್ನು ತಡೆಗಟ್ಟಲು ಔಷಧಿಗಳಾದ ಅಸ್ಪ್ರಿನ್ ಹಾಗೂ ಕ್ಲೋಪಿಡೋಗ್ರಿಲ್ ಬಳಸಲಾಗುತ್ತದೆ. ಈ ವಿಷಯದಲ್ಲಿ ಯಶಸ್ವಿಯಾಗಲು 'ಜೀವನ ಶೈಲಿ ಬದಲಾವಣೆ' ಅಗತ್ಯವಾಗುತ್ತದೆ.

ಸ್ಟಂಟ್ ತೆಗೆದು ಹಾಕಬಹುದಾ ಅಥವಾ ಬದಲಿಸಬಹುದಾ ?

ಅದನ್ನು ತೆಗೆದು ಹಾಕಲಾರದು. ಸ್ಟೆoಟ್ ಕಾರ್ಯ ನಿರ್ವಹಿಸದಿದ್ದರೆ, ಆಗ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. (Coronary Artery Bypass Grafting).

ಜೀವನ ಶೃಲಿಯಲ್ಲಿ ಬದಲಾವಣೆ ತರಲು ಧೂಮಪಾನವನ್ನು ಸಂಪೂರ್ಣ ನಿಲ್ಲಿಸಬೇಕು, ಸಕ್ಕರೆ ಕಾಯಿಲೆ ಹತೋಟಿಯಲ್ಲಿಟ್ಟುಕೊಳ್ಳಬೇಕು, ರಕ್ತದಲ್ಲಿ ಎಲ್ ಡಿ ಎಲ್ (LDL) ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ರಕ್ತದೊತ್ತಡದ ಮಾತ್ರೆಗಳನ್ನು ಸರಿಯಾಗಿ ಬಳಸಬೇಕು. ಆಹಾರದಲ್ಲಿ ಬದಲಾವಣೆ ಮಾಡಿ ಕೊಳ್ಳಬೇಕು. ನಿರಂತರವಾಗಿ ತಪ್ಪದೇ ವ್ಯಾಯಾಮವನ್ನು ಮುಂದುವರಿಸಬೇಕು 

ಅಗತ್ಯ ಬಿದ್ದರೆ ವೈದ್ಯರ ಆದೇಶದoತೆ  ಸಿಟಿ ಎಂಜಿಯೋಗ್ರಫಿ (CT Angiography) ಮಾಡಿಸಿಕೊಳ್ಳಬೇಕು.

10 ರಿಂದ 20 ವರ್ಷದ ವರೆಗೆ ಲೋಹದ ಸ್ಟೆoಟ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಹುದು. ಆದರೆ  ಸ್ಟೆoಟ್ ಕೊನೆಯವರೆಗಿನ ಪರಿಹಾರವಲ್ಲ.  ಮೊದಲ ಹoತದ ಪರಿಹಾರವಷ್ಟೇ!ಜೀವನ ಶೈಲಿ ಬದಲಾವಣೆ ಕೊನೆಯವರೆಗಿನ ಪರಿಹಾರ. ಸತ್ಯವನ್ನು ಅರಿತು ಭಯ ದೂರಮಾಡಿಕೊಳ್ಳಬಹುದು !

ಕರ್ನಾಟಕ ಶಿಕ್ಷಕರ ಬಳಗ


Posted 9/12/2025

No comments:

Post a Comment