Saturday, December 27, 2025
Vidya Mandira Hogher Primary School, Harady, Brahmavara.
It is the school which started in 1950 by H Monappa Shetty, I went to this school first in 1954 and joined for Class 1, and continued till Class 6 and today the school has completed 75 years and celebrating "VIDYAMRUTHA"
The whole day program was organized by the Commiittee, starting from Flag Hoisting, Breakfast, Old Students Meet, sharing childhood days, Entertainment program, Lunch, Music Orchestra,
ಏನೆಲ್ಲಾ ಕಂಡೆ ಇವಳೆ
ಮಾವಯ್ಯ ನಾಣು ಮಗಳೆ
ನನ್ನವ್ರು ಊದಿರೆ ಕಹಳೆ
ಕಿವಿಗಿಂಪು ನನಗಿಲ್ಲ ರಗಳೆ || ಪ ||
ಸುತ್ತೆಲ್ಲ ಶೃಂಗಾರ ಕೇಳೆನ್ನ ಸರದಾರ
ಹತ್ತೂರ ಮಕ್ಕಳ ಸಮ್ಮಿಲನ |
ಅತ್ತವ್ರು ಯಾರಿಲ್ಲ ನಕ್ಕಿತ್ತು ಊರೆಲ್ಲ
ಮುತ್ತಿತ್ತು ನೆನಪಿನ ಸಂಕಲನ ||
ಕಂಡೆಷ್ಟು ವರ್ಷವೋ ಗೊತ್ತಿಲ್ಲ ಯಜಮಾನ
ಕೊಂಡಾಟ ಕಮ್ಮಿಯೇ ಇರಲಿಲ್ಲ |
ಕಾಣ್ಲಿಲ್ಲೆ ಗಾಳಿ ಮರ ಚಿಗುರಿತ್ತು ಮಾಯ್ನಮರ
ಆಡಿದ್ದ ನೆನಪಿನ್ನು ಮಾಸಿಲ್ಲ ||
ಆನಂದ ಸರ್ ಬಂದ್ರು ರಾಮಚಂದ್ರ ಸರ್ ಇದ್ರು
ಸದಾಶಿವ ಮೇಷ್ಟ್ರು ಖುಷಿ ಪಟ್ರು |
ಶಾಂತಮ್ಮ ಸಿಕ್ಕಿದ್ರು ದಿನಕರ ಸರ್ ಕರೆದಿದ್ರು
ಹುಟ್ಟಿದಾ ಹಬ್ಬ ಸಿಹಿ ಕೊಟ್ರು ||
ನರ್ತನ ಗಾಯನ ಮೃಷ್ಟಾನ್ನ ಭೋಜನ
ಯಾರ‌್ಯಾರು ಇದ್ದಿದ್ರೊ ಗೊತ್ತಿಲ್ಲ |
ಹೊತ್ತಾಯ್ತು ನಾನೆದ್ದೆ ನಮ್ಮೂರ ಬಸ್ಸ್ ಹಿಡ್ದೆ
ಯಜಮಾನ್ರೆ ಮನೆಯಾ ನೆನಪಾಯ್ತು ||
ಶಾಲೆಯಾ ಕಟ್ಟಿದ್ದ ಹಿರಿಯರೇ ಬಾಗುವೆ
ಬಾಳಿನಾ ಯಾತ್ರೆ ಶುರುವಲ್ಲೆ |
ಕಾಲ ಚಕ್ರದ ನಡುವೆ ಬಾಲ್ಯವೂ ಜೊತೆಯಾಯ್ತು
ಏಳಿಗೆಯಾಗಲಿ ಸ್ಥಳದಲ್ಲೇ ||
ಶೋಭಾ ಹರಿಪ್ರಸಾದ್ ಉಡುಪಿ
ಮುಗಿಯಿತು ಜಾತ್ರೆ
ಎಲ್ಲ ಕಡೆ ಹೀಗೆಯೇ ಜಾತ್ರೆ
ಎರಡು ದಿನ ಕಳೆದು ಮೌನ ಯಾತ್ರೆ
ಗೃಹಿಣಿಯರ ಕೈಯಲ್ಲಿ ಪಾತ್ರೆ
ಉದ್ಯೋಗಿಗೆ ಪುರುಸೊತ್ತಿಲ್ಲ ಕೂತ್ರೆ
ಆಲಸಿಯ ಕೈಯಲ್ಲಿ ಮಾತ್ರೆ
ಶೋಹ
That was a well organized 75- year celebration of Vidyamandira Higher Primary School Harady, Brahmavara.
Well Done Organizers.
Posted 31/12/2025









No comments:
Post a Comment