Friday, December 19, 2025
Om Shanti To Departed Soul.
"ಅಗಲಿದ ಜೀವಕ್ಕೆ ಹೀಗೋಂದು ನಮನ".
ನೆನ್ನೆ ಮಧ್ಯಾಹ್ನ ನಮ್ಮನ್ನಗಲಿದ
"ಸರೋಜಿನಿ ಅಕ್ಕ" ನಿಗೆ ಕಡೆಯ ಅಶ್ರುತರ್ಪಣ.
ಈ ಸರೋಜಿನಿ ಅಕ್ಕ ನನ್ನ ವಾರಗಿತ್ತಿ (Co Sister) ಲೀಲಕ್ಕನ ತಂಗಿ.
ಪತಿ ಶ್ರೀಯುತ ಶ್ರೀನಿವಾಸ ತಂತ್ರಿ - ಪತ್ನಿ ಸರೋಜಿನಿ ದಂಪತಿಗಳ ಜೋಡಿ ನೋಡಿ ನಾವೆಲ್ಲ ಕಲಿತದ್ದು ಬಹಳಷ್ಟು.
ದಂಪತಿಗಳು ಮೈಸೂರು ವಾಸದಲ್ಲಿ ಕಷ್ಟಪಟ್ಟು ಮೇಲೆ ಬಂದದ್ದೂ ಒಂದು ಸಾಹಸ.
ಅದೂ ಸಹ ಎಲ್ಲರಿಗೂ ಮಾದರಿಯ ಜೀವನ ಎಂದರೆ ಹೆಚ್ಚಾಗದು.
ಮೈಸೂರಿನ ಸರಸ್ವತಿ ಪುರಂನಲ್ಲಿ ಇವರ ವಾಸ.
ಅಲ್ಲಿಯೇ ಪ್ರಾರಂಭಿಸಿದ ವಿಶ್ವನಾಥ ಕ್ಯಾಂಟಿನ್ ಸುತ್ತಮುತ್ತಲಿನ ಪ್ರಸಿದ್ಧ ತಿಂಡಿಯ ತಾಣ.
ಅಕ್ಕ ಮನೆಯಲ್ಲಿ ರುಚಿಯಾಗಿ ತಿಂಡಿ ಪದಾರ್ಥಗಳ ಮಾಡಿದರೆ ಪತಿ ಅದನ್ನು ಕ್ಯಾಂಟಿನ್ ಗೆ ಕೊಂಡುಹೋಗಿ ಅಲ್ಲಿ ವ್ಯಾಪಾರ. ಹೀಗೆ ದುಡಿದು, ಮೂವರು ಮಕ್ಕಳಾದ ವಿದ್ಯಾ,ಪ್ರಶಾಂತ್, ಪ್ರವೀಣ್ ರನ್ನು ಬೆಳೆಸಿದವರಿವರಿಬ್ಬರು.
ಅಕ್ಕ ತುಂಬು ಉತ್ಸಾಹಿ, ಎಲ್ಲರನ್ನೂ ಪ್ರೀತಿಸುವ ಹೃದಯ.
ತುಂಬಾ ಅಚ್ಚುಕಟ್ಟಾಗಿ, ಅಳತೆ ಪ್ರಮಾಣಗಳ ಆಚೀಚೆ ಮಾಡದೆ, ರುಚಿ ರುಚಿಯಾಗಿ ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಕುಟುಂಬದ ಮಂದಿಗೆ ಈಕೆ ಅನ್ನಪೂರ್ಣೆ.
ಇವರ ಬರೆದ ಒಂದು ಅಡಿಗೆ ಪುಸ್ತಕವೂ ಅವರ ಮಗಳು ವಿದ್ಯಾಳ ಪತಿ ಪ್ರಕಾಶ್ ವೈಲಾಯರ ಪ್ರೋತ್ಸಾಹದಿಂದ ಪ್ರಕಟವಾಗಿದೆ.
ಇತ್ತೀಚೆಗಷ್ಟೇ ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ವಾಸವಾಗಿರುವ ಮಗ ಪ್ರಶಾಂತನ ಮನೆಯಲ್ಲಿ ದೂರ ದರ್ಶನದ "ಚಂದನ ವಾಹಿನಿಯ ಆಹಾ ಎಂಥಾ ರುಚಿ" ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ನಮ್ಮೂರಿನ ಕೆಸು ಪತ್ರೊಡೆ" ಮಾಡಿ, ಬೆಣ್ಣೆ ಹಾಕಿ ಅಲ್ಲಿದ್ದ ಎಲ್ಲರಿಗೂ ಪ್ರೀತಿಯಿಂದ ತಿನ್ನಿಸಿದ್ದರು.
ಈ ದಂಪತಿಗಳ ಜೋಡಿಗೆ. ಕಣ್ಣಾಯಿತೇನೋ ಎನ್ನುವ ಹಾಗೆ "ಸರೋಜಿನಿ" ಅಕ್ಕ ನಮ್ಮನ್ನೆಲ್ಲಾ ಅಗಲಿದ್ದಾರೆ ನೆನ್ನೆಯ ದಿನ.
ಪ್ರತಿಯೋರ್ವರನ್ನೂ ಕರೆದು ಮಾತನಾಡಿಸಿ ತನ್ನಿರುವನ್ನು ಸ್ಥಾಪಿಸಿ, ನಗಿಸಿ, ತಾನೂ ಸಂತೋಷಪಟ್ಟು ಎಲ್ಲರೊಂದಾಗುವ ಈ ಜೀವ ಇನ್ನಿಲ್ಲ ಎಂಬುದನ್ನು ನಮಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ.
ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದೇ ಪ್ರಾರ್ಥನೆ.
ಮನೆಯವರಿಗೆಲ್ಲರಿಗೂ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ.
ಅಕ್ಕ ಸರೋಜಿನಿ ನಿಮ್ಮ ನೆನಪು ಸದಾ ನಮ್ಮೊಂದಿಗೆ.
ಓಂ ಶಾಂತಿ
ಪ್ರತಿಕ್ರಿಯೆಗಳು:
Krishnachar Joshi
ಅಯ್ಯೋ ಎಷ್ಟು ಲಕ್ಷಣವಾಗಿ ಇದ್ದ್ರಲ್ಲ ಅವರು
ಇವರನ್ನು ಎಲ್ಲೋ ನೋಡಿದ ನೆನಪು 
…ಅವರ ಆತ್ಮಕ್ಕೇ ದೇವರು ಸದ್ಗತಿ ನೀಡಲಿ ಓಂ ಶಾಂತಿ
mangala Lakshmi
ಓಂ ಶಾಂತಿ
ಯಾರೂ ಶಾಶ್ವತ ಅಲ್ಲ ಎನ್ನುವ ಅರಿವಿದ್ದರೂ ಹೇಗೋ ತುಂಬಾ ಹತ್ತಿರವಾಗಿ,ಮನಸ್ಸಿಗೆ, ಹೃದಯಕ್ಕೆ,ಆತ್ಮಕ್ಕೆ ಹತ್ತಿರವಾಗಿಬಿಡ್ತೇವೆ
ಅಂಥವರು ಅಗಲಿದಾಗ ಸಮಯವೇ ಮುಲಾಮು,,ಸಮಾಧಾನಕ್ಕೆ ಪದಗಳು ಇರೋದಿಲ್ಲ
Praveena Thantry
Thanks a lot for this wonderful note chikki. You have described her very accurately. Even we couldn't have written it any better..
Prakash Vailaya
Atte Namaste, for your note given new strength to all of us for that' BIG SALUTE
Prashanth Kumar
ಪ್ರಿಯ ಚಿಕ್ಕಿ, ಅಮ್ಮ ಮತ್ತು ಅವಳ ಸಾಧನೆಗಳನ್ನು ವಿವರಿಸುವ ಈ ಟಿಪ್ಪಣಿ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಅಂತಹ ಸಿಹಿ ಮಾತುಗಳಿಗೆ ಧನ್ಯವಾದಗಳು
Vathirajan Ramarao
Om shanti . Om shanti
Posted 19/12/2025


No comments:
Post a Comment