Tuesday, August 18, 2026

ಸ್ವಾತಂತ್ರ್ಯ ದಿನಾಚನರಣೆ 2026 - ಹೊಂಗಿರಣ ಶಾಲೆ

 ಶನಿವಾರ, ಆಗೋಸ್ಟ್ 15, 2026 

ಹೊಂಗಿರಣ ಸ್ಕೂಲ್ ಆಫ್ ಎಕ್ಸ್ ಲೆನ್ಸ್ , ಅಮಟೆಕೊಪ್ಪ, ಸಾಗರ ತಾಲೂಕ್ , ಶಿವಮೊಗ್ಗ ಜಿಲ್ಲೆ. 




ಶಾಲೆಯ ಮುಕ್ಯಸ್ಥೆ  ಶೋಭಾ ಸೋಮಯಾಜಿ ಅವರ ಆಹ್ವಾನದ ಮೇರೆಗೆ, ನಾವು (ಅಮ್ಮ, ರಿಷಿ , ಕವಿತಾ,  ಅಥರ್ವ ) ಶುಕ್ರವಾರ ಸಂಜೆ ಶೋಭಾಳ ಮನೆಯನ್ನು ಸೇರಿದ್ದೆವು. (ಅಣ್ಣಯ್ಯ ಪದ್ಮನಾಭ ಸೋಮಯಾಜಿ ಅವರ ಮಗಳು ಶೋಭಾ) 

ಸರಿಯಾಗಿ 9.30 ಗಂಟೆಗೆ ನಾಡಗೀತೆಯಾದ ನಂತರ ಶೋಭಾಳಯಿಂದ ಧ್ವಜಾರೋಹಣ ನೆರವೇರಿತು. ಅದೊಂದು ಶಿಸ್ತುಬದ್ಧವಾದ ವಿದ್ಯಾರ್ಥಿಗಳು, ಅಧ್ಯಾಪಕರು ಸೇರಿ ನಡೆದ ಕಾರ್ಯಕ್ರಮ. ತದ ನಂತರ ಎಲ್ಲರೂ ವೇದಿಕೆಯಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಯಾದರು. 


"ನಮ್ಮ ದೇಶ, ನಮ್ಮ ದೇಶ ನಮ್ಮ ದೇಶ ಭಾರತ " ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ , ಸ್ವಾತಂತ್ರ್ಯ ಹೋರಾಟದ ಪ್ರಾಸ್ತಾವಿಕ ನುಡಿಯನ್ನು ವಿದ್ಯಾರ್ಥಿ ಮುಖಂಡಳು ಮಾಡಿದಳು. 


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬ್ರಿಟೀಷರಿಂದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನೃತ್ಯ ರೂಪಕವಾಗಿ ಅತ್ಯಂತ ಸುಂದರವಾಗಿ ನಿರೂಪಿಸಿದರು .  ವಸತಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಶ್ರಮಕ್ಕೆ ಹಾರ್ದಿಕ ಅಭಿನಂದನೆಗಳು. 


ಸಿಹಿ ತಿಂಡಿ (ಮೈಸೂರು ಪಾಕ್) ವಿತರಣೆಯೊಂದಿಗೆ ಅಂದಿನ ಸಮಾರಂಭ ಸಂಪನ್ನ ಗೊಂಡಿತು. 


ಪುಸ್ತಕಗಳ ಉಡುಗೊರೆ 

ನಳಿನಿ ಮತ್ತು ಕವಿತಾ 

ಎಲ್ಲರಿಗೂ 80 ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. 


Posted 18/8/2026 



 










No comments:

Post a Comment