ಭಾನುವಾರ, ಆಗೋಸ್ಟ್ 23, 2026
ತರಳಬಾಳು ಕೇಂದ್ರ, ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆ, ಆರ್. ಟಿ. ನಗರ, ಬೆಂಗಳೂರು , 80 ನೇ ಸ್ವಾತಂತ್ರ್ಯ ದಿನಾಚಾರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನೂತನವಾಗಿ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ, ಶ್ರೀ ವೀರಶೇಖರ ಸ್ವಾಮಿಯವರು ಅತ್ಯಂತ ಕಾಳಜಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡು ನಿಭಾಯಿಸಿದರು.
![]() |
| ಶ್ರೀಮತಿ ನಳಿನಿ ಚಡಗ - ಪ್ರಾರ್ಥನೆ |
![]() |
| ಶ್ರೀ ಚಂದ್ರಶೇಖರ ಚಡಗ - ಸ್ವಾಗತ |
ಶ್ರೀಮತಿ ನಳಿನಿ ಚಡಗ ಅವರಿಂದ ಪ್ರಾರ್ಥನೆಯಾದ ನಂತರ ವೇದಿಕೆಯ ಸಂಸ್ಥಾಪಕ/ಕೋಶಾಧಿಕಾರಿಯಾದ ಶ್ರೀಯುತ ಪಾ. ಚಂದ್ರಶೇಖರ ಚಡಗ ಅವರು ಪ್ರಾಸ್ತಾವಿಕ ನುಡಿಯನ್ನು ಆಡಿ ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ , ಇತ್ತೀಚೆಗೆ ನಿಧನರಾದ ವೇದಿಕೆಯ ಮಾಜಿ ಕೋಶಾಧಿಕಾರಿ ಶ್ರೀ ಚಂದ್ರಶೇಖರ ಕಾರಾಂತರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಮನರಂಜನಾ ಕಾರ್ಯಕ್ರಮದಲ್ಲಿ ಶ್ರೀ ಚಿದಂಬರ ಕೋಟೆ, ಯಶಸ್ವಿನಿ, ಶ್ರೀಮತಿ ರಜನಿ ರಾಧಾಕೃಷ್ಣನ್ ಹಾಗೂ ತಂಡದವರಿಂದ ಇತ್ತೀಚೆಗೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮ ಅವರಿಗೆ "ಗಾಯನ ಶ್ರದ್ಧಾಂಜಲಿ" ಯನ್ನು ಅರ್ಪಿಸಲಾಯಿತು.
![]() |
| ಎಸ್. ಜಾನಕಿ ಅಮ್ಮ |
ವೀರಶೇಖರ ಸ್ವಾಮಿಯವರಿಂದ ಅಧ್ಯಕ್ಷ ಭಾಷಣದ ನಂತರ ಅತಿಥಿಗಳಿಗೆ ಗೌರವ ಸಮರ್ಪಣೆ, ಶ್ರೀಮತಿ ಕೈವಲ್ಯ ಅರಸ್ ಅವರಿಂದ ಧನ್ಯವಾದ ಸಮರ್ಪಣೆ ನಡೆಯಿತು.
ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ಭಾರ್ಗವಿ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
![]() |
| ಯಶಸ್ವಿನಿ, ಚಿದಂಬರ ಕೋಟೆ |
Posted 24/8/2026
















No comments:
Post a Comment