Friday, November 19, 2021

ಸಕಾರಾತ್ಮಕ ಯೋಚನೆ (POSITIVE THINKING)

 ಸಕಾರಾತ್ಮಕ ಯೋಚನೆ (POSITIVE THINKING)


ಮಹಿಳೆಯೊಬ್ಬಳು ತನ್ನ ದಿನದ ಸಂತೋಷವನ್ನು ಪ್ರತಿದಿನ ಮಲಗುವ ಮೊದಲು ಕಾಗದದ ಮೇಲೆ ಬರೆಯುತ್ತಿದ್ದಳು ... ಒಂದು ರಾತ್ರಿ ಅವಳು ಹೀಗೆ ಬರೆದಳು:

"ನಾನು ಖುಷಿಯಾಗಿದ್ದೇನೆ"

ನನ್ನ ಪತಿ ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತಾರೆ ಎಂಬುದು ನನಗೆ ಸಂತೋಷದ ವಿಷಯ, ಏಕೆಂದರೆ ಅವನು ಸುಖವಾಗಿದ್ದಾನೆ ಮತ್ತು ಅವನು ನನ್ನ ಬಳಿ ಇದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದ..

ನಾನು ಖುಷಿಯಾಗಿದ್ದೇನೆ

ನನ್ನ ಮಗನದು ದಿನಾ ಬೆಳಿಗ್ಗೆ ಒಂದೇ ದೂರು ರಾತ್ರಿಯಿಡೀ ಸೊಳ್ಳೆಗಳು ಮತ್ತು ಕೀಟಗಳು ಮಲಗಲು ಬಿಡುವುದಿಲ್ಲ ಎಂಬ ವಿಷಯದಲ್ಲಿ ಎಂದು ನನಗೆ ಸಂತೋಷವಾಗಿದೆ. ಅಂದರೆ, ಅವನು ರಾತ್ರಿಯನ್ನು ಮನೆಯಲ್ಲಿ ಕಳೆಯುತ್ತಾನೆ, ಮತ್ತು ಅಲ್ಲಿ ಇಲ್ಲಿ ತಿರುಗಾಡಲು ಹೋಗುವುದಿಲ್ಲ. ಧನ್ಯವಾದ ದೇವರೆ..

ನಾನು ಖುಷಿಯಾಗಿದ್ದೇನೆ

 ಪ್ರತಿ ತಿಂಗಳು, ವಿದ್ಯುತ್, ಗ್ಯಾಸ್, ಪೆಟ್ರೋಲ್, ನೀರು ಇತ್ಯಾದಿಗಳಿಗೆ ಸಾಕಷ್ಟು ಹಣ ಪಾವತಿಸಬೇಕಾಗುತ್ತದೆ. ಅಂದರೆ, ಈ ಎಲ್ಲಾ ವಸ್ತುಗಳು ನನ್ನ ಬಳಿ ಇವೆ, ಮತ್ತು ನನ್ನ ಬಳಕೆಯಲ್ಲಿವೆ. ಇದು ಇಲ್ಲದಿದ್ದರೆ, ಜೀವನ ಎಷ್ಟು ಕಷ್ಟ? ಧನ್ಯವಾದ ದೇವರೆ..

ನಾನು ಖುಷಿಯಾಗಿದ್ದೇನೆ

 ದಿನದ ಕೊನೆಗೆ ನನಗೆ ಆಯಾಸವಾಗುತ್ತದೆ ನಿಜ, ಅಂದರೆ ದಿನವಿಡೀ ಕಷ್ಟಪಟ್ಟು ದುಡಿಯುವ ಶಕ್ತಿ ಮತ್ತು ಧೈರ್ಯ ನನ್ನಲ್ಲಿದೆ, ದೇವರ ದಯೆಯಿಂದ ಮಾತ್ರ ಇದು ಸಾಧ್ಯವಾಗಿದೆ.

ನಾನು ಖುಷಿಯಾಗಿದ್ದೇನೆ

ಪ್ರತಿದಿನ ನನ್ನ ಮನೆಯನ್ನು ಸ್ವಚ್ಛ ಮಾಡಬೇಕು ಅಲ್ಲದೇ, ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಬೇಕು ಎಂಬದು  ನನಗೆ ಸಂತೋಷದ ವಿಷಯ. ಅದೃಷ್ಟವಶಾತ್, ನನಗೆ ಮನೆ ಇದೆ. ಸೂರು ಇಲ್ಲದವರ ಗತಿಯೇನು? ಧನ್ಯವಾದಗಳು ದೇವರೇ, ಧನ್ಯವಾದಗಳು..

ನಾನು ಖುಷಿಯಾಗಿದ್ದೇನೆ

 ಕೆಲವೊಮ್ಮೆ, ನಾನು ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುತ್ತೇನೆ. ಅಂದರೆ, ನಾನು ಹೆಚ್ಚಾಗಿ ಆರೋಗ್ಯವಾಗಿರುತ್ತೇನೆ. ಧನ್ಯವಾದಗಳು ದೇವರೇ, ಧನ್ಯವಾದಗಳು..

ನಾನು ಖುಷಿಯಾಗಿದ್ದೇನೆ

 ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸುವಾಗ, ಉಡುಗೊರೆಗಳನ್ನು ನೀಡುವಾಗ ಪರ್ಸ್ ಖಾಲಿಯಾಗುತ್ತದೆ. ಅಂದರೆ, ನನಗೆ ಪ್ರೀತಿಪಾತ್ರರು, ನನ್ನ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರು, ನನ್ನ ಸ್ವಂತದವರು ಯಾರಿಗೆಲ್ಲಾ ನಾನು ಉಡುಗೊರೆಗಳನ್ನು ನೀಡಬಹುದು?  ಅದಿಲ್ಲದಿದ್ದರೆ ಜೀವನ ಎಷ್ಟು ನೀರಸ..? ಧನ್ಯವಾದಗಳು ದೇವರೇ, ಧನ್ಯವಾದಗಳು..

ನಾನು ಖುಷಿಯಾಗಿದ್ದೇನೆ ಎಂದು ಪ್ರತಿದಿನ ಅಲಾರಾಂ ಶಬ್ದ ಕೇಳಿದ ಮೇಲೆ  ಎದ್ದೇಳುತ್ತೇನೆ. ಅಂದರೆ, ಪ್ರತಿದಿನ, ನಾನು ಹೊಸ ಬೆಳಿಗ್ಗೆ ನೋಡುತ್ತೇನೆ. ಇದು ಕೂಡ ದೇವರ ವರವೆ!

ಈ ಜೀವನ ಸೂತ್ರವನ್ನು ಅನುಸರಿಸಿ, ತನ್ನ ಮತ್ತು ತನ್ನ ಜನರ ಜೀವನ ಸುಖಮಯವಾಗಿರಲಿ  ಮತ್ತು  ಶಾಂತಿ ನೆಮ್ಮದಿ ಇರಲಿ ಎಂದು ಬಯಸೋಣ... ಚಿಕ್ಕದೋ ದೊಡ್ಡದೋ ಕಷ್ಟದಲ್ಲಿಯೂ ಸುಖವನ್ನು ಹುಡುಕು, ಅದೇನೇ ಇರಲಿ, ಆ ದೇವರಿಗೆ ಕೃತಜ್ಞತೆ ಸಲ್ಲಿಸಿ, ಜೀನ ಸುಖಮಯವಾಗಿರಲಿ..!! ಶ್ರೀಹರಿ


ವಾಟ್ಸ್ ಆಪ್ ಕೃಪೆ.

20 ನವಂಬರ 2021 

SUGAMA BHAJANE - 2

 Friday, 19th November 2021

ZOOM PLATFORM

That was another session of "SUGAMA BHAJANA MANDALI", spent more than 2 hours singing bhajans by the members, both young and old, men and women.

Pushpa Madhusudan Talitaya, hosted today's Bhajan.


The following people were present:

1. Sudhaker Rao Pejavar, Latha

2. Surya Lakshmi

3. Udaykumar Savithri

4. Rajeshwara Holla, Hemalatha

5. Prashanth, Supriya, Anirudh

6. Sudhakar Khandige, Sumangali


7. Ashok. Kalpana, Ananya, Akshatha

8. Ramachandra Udupa, Raghavendra


9. Jayarama Somayaji, Nalini

10 Madusudan Talitaya, Pushpa


Bhagyada lakshmi Baramma - Pushpa, Madusudan

Aarathi Song - Rajeshwara Holla

Shankaraya - Udayakumar

Mangala - Ramachandra Udupa

Abhinandane - Surya Kumar


Chinthane - Sudhaker Rao Pejavar.


Thank you Udayakumar for nicely edited Four videos.

Written Saturday, 20th Nov. 2021




Thursday, November 18, 2021

SHIVARAMA KARANTHA 120th BIRTHDAY

October 10, 2021

GOOGLE MEET PROGRAM 




As I was in ooru, attending some function, Mr Veerashekhara Swamy assured that he is going to take care of Google meet.

But I got call when I was travelling with family in the car going to some place, that I only should admit people for the meet.

With my mobile, I admitted the people joining the program.

There were about 30 people joined the program.

Nadoja Dr Hampa Nagarjayya remembered the times he spent with Dr Shivarama Karantha. 

Shri Jayanth Kaykini, enumerated various faces of Karantha, his contribution in various fields, and his personality.

Mrs, Indira Sharan, Secretary compered the program beautifully.

Shri Pa Chandrashekhara Chadaga also spoke about the Karantha Vedike and Lakshminarayana Chadaga Memorial Library.

URVI - SEVEN MONTHS

Tuesday, 16th November 2021
BirthiMane, Bengalooru



 It was Karthika Month, Uththana Dwadashi, Tulasi Habba.



Our little baby, pretty, cute  URVI, completed 7 months.



Mom prepared KesariBath cake like, and it was presented, and it was very tasty,


We all wished OOOOOrrrVVViiii Happy Happy Birthday and Many Many Many........More

Written Friday, 19th Nov. 2021


Wednesday, November 17, 2021

ತುಳಸಿ ಹಬ್ಬ - ಉತ್ಥಾನ ದ್ವಾದಶಿ

 ಮಂಗಳವಾರ, ನವಂಬರ 16, 2021 

ಬಿರ್ತಿಮನೆ, ಬೆಂಗಳೂರು 


ಎಲ್ಲೆಡೆ ತುಳಸಿ ಹಬ್ಬದ ಸಂಭ್ರಮ. ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯ ನಂತರ ಬರುವ ಹಬ್ಬ ತುಳಸಿ ಹಬ್ಬ 

ಉತ್ಥಾನ ದ್ವಾದಶಿ ಎಂದೂ ಈ ಹಬ್ಬವನ್ನು ಕರೆಯುತ್ತಾರೆ. ಇದು ಹೆಂಗಳೆಯರ ಹಬ್ಬ ಎಂದರೂ ತಪ್ಪಾಗಲಾರದು. ಉತ್ಥಾನ ಎಂದರೆ ಏಳು, ಎಚ್ಚರಗೊಳ್ಳು ಎಂದು ಅರ್ಥ. ಚಾತುರ್ಮಾಸದ ಕಡೆಯ ದಿನವಾದ ಇದು ವಿಷ್ಣುವನ್ನು ಜಾಗೃತಗೊಳಿಸುವ ದಿನ.


ಬೆಂಗಳೂರಿನ ನಮ್ಮ ಮನೆ "ಬಿರ್ತಿಮನೆ" ಯಲ್ಲಿಯೂ ತುಳಸಿ ಹಬ್ಬದ ಸಂಭ್ರಮ.

ತುಳಸಿ ಕಟ್ಟೆ ಗೆ ನೆಲ್ಲಿ ಗಿಡವನ್ನು ಜೋಡಿಸಿ, ದೀಪ, ಹೂವುಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿದ್ದಾಯಿತು.


ಹಿಂದೆ ಅಮೃತಪ್ರಾಪ್ತಿಗಾಗಿ ದೇವದಾನವರು ಕ್ಷೀರಸಮುದ್ರದಲಿ ಮಂದರಪರ್ವತವನ್ನು ಕಡುಗೋಲಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ, ಮಾಡಿಕೊಂಡು ಶ್ರೀಹರಿಯ ಅದ್ಭುತ ಮಹಿಮೆಯ ಸಹಾಯದಿಂದ ಸಮುದ್ರಮಥನ ಮಾಡಿದರು. ಆಗ ಅಮೃತಕಲಶವನ್ನು ಹಿಡಿದುಕೊಂಡು ಶ್ರೀಹರಿಯು ವೈದ್ಯರೂಪನಾಗಿ ಸಮುದ್ರಮಧ್ಯದಿಂದ ಧನ್ವಂತರೀರೂಪದಿಂದ ಅವತರಿಸಿದನು. ಆ ದಿನ ಕಾರ್ತಿಕ ಹುಣ್ಣಿಮೆಯಾಗಿತ್ತು. ತಕ್ಷಣ ಅವನ ಕಣ್ಣಿಂದ ಆನಂದಾಶ್ರುವಿನ ಹನಿಗಳು ಅಮೃತಕಲಶದಲ್ಲಿ, ಬೀಳಲು ತುಳಸಿಯ ಜನನವಾಯ್ತು.

ಈ ದಿನವನ್ನು " ಉತ್ಥಾನ ದ್ವಾದಶಿ" ಎಂದೂ ಕರೆಯುತ್ತಾರೆ.


ತನ್ನಿಮಿತ್ತ ನಿಮಗೆ ತುಲಸಿಯ ಕತೆ.

ತುಳಸೀ ಕಟ್ಟೆಯಲ್ಲಿ ವಿಷ್ಣು ಸ್ವರೂಪವಾದ ನೆಲ್ಲಿ ಕೊಂಬೆಯನ್ನು ನೆಟ್ಟು "ತುಲಸೀ ಪೂಜೆ" ಮಾಡುವ ಸಂಪ್ರದಾಯ ಎಲ್ಲಕಡೆಗಳಲ್ಲಿದೆ.

ಆಷಾಢ ಶುದ್ಧ ಏಕಾದಶಿಯ "ಶಯನೈಕಾದಶಿ" ಯಂದು ಮಲಗಿದ ಮಹಾವಿಷ್ಣುವು ಇಂದು ಏಳುತ್ತಾನೆ.

ಆದ್ದರಿಂದ ಇದಕ್ಕೆ "ಉತ್ಥಾನ (ಏಳುವುದು) ದ್ವಾದಶಿ" ಎಂದು ಹೇಳುತ್ತಾರೆ.

ವಿಷ್ಣುವಿನ ಯೋಗನಿದ್ರಾಕಾಲದ ಆಷಾಢ ಶುದ್ಧ ದ್ವಾದಶಿಯಿಂದ,ಕಾರ್ತೀಕ ಶುದ್ಧ ದ್ವಾದಶಿವರೆಗಿನ ಈ ನಾಲ್ಕು ತಿಂಗಳು ಮದುವೆ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ.

ಉತ್ತರ ಕರ್ನಾಟಕ ಮತ್ತು ಕರಾವಳಿಯಲ್ಲಿ ಈಗಲೂ ಇದು ಚಾಲ್ತಿಯಲ್ಲಿದೆ.

ತುಲನೆ ಇಲ್ಲದ ಸಸ್ಯವಾದ್ದರಿಂದ ತುಲಸೀ ಎಂಬ ಹೆಸರು ಬಂದಿದೆ.

ತುಳಸಿಯಲ್ಲಿ ಬಿಳಿ ಮತ್ತು ಕರಿ_ತುಳಸಿ ಎಂದು ಎರಡು ಪ್ರಭೇದಗಳಿವೆ.

ರಾಮತುಳಸಿ,ಕೃಷ್ಣತುಳಸಿ ಎಂಬ ಹೆಸರುಗಳೂ ಇವೆ.

ಔಷಧೀಯ ಗುಣ ಎರಡಲ್ಲೂ ಒಂದೇ ರೀತಿ ಇದೆ.

ಸುಮಂಗಲಿಯರು ಪ್ರತಿದಿನ ತುಳಸಿ ಪೂಜೆ ಮಾಡುತ್ತಾರೆ.

ಶಾಲಗ್ರಾಮ ಮತ್ತು ಶಂಖದ ಮೇಲೆ ತಪ್ಪದೆ ತುಳಸಿಯ ಕುಡಿ ಇರಲೇ ಬೇಕು ಎಂದು ಶಾಸ್ತ್ರಗಳು ಸಾರಿವೆ.

ತುಳಸೀದಳ ಮಿಶ್ರಿತ ತೀರ್ಥ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.




ಸಂಜೆಯ ಸಮಯ ರವಿ ವಿದ್ಯಾ ಮತ್ತು ಊರ್ವಿ ಮನೆಗೆ ಬಂದಿರುವುದೂ ವಿಶೇಷ.

ನಂತರ ದೀಪ ಹಚ್ಚುವಿಕೆ, ಪಟಾಕಿ, ನಕ್ಷತ್ರ ಕಡ್ಡಿ, ನೆಲಚಕ್ರ ಇತ್ಯಾದಿ ಸಂಭ್ರಮ.




ಹಾಗೇ ಊರ್ವಿಯ ಏಳು ತಿಂಗಳು ಹುಟ್ಟಿದ ದಿನದ ಸಂಭ್ರಮ.




ಅದೊಂದು ವಿಶೇಷವಾದ ದಿನ. ಸಂಭ್ರಮಿಸಿದ್ದೂ ಆಯಿತು.


ಸಂಗ್ರಹಿಸಿದ್ದು/ಬರೆದಿರುವುದು, ಗುರುವಾರ ನವಂಬರ 18.


SHRADDHANJALI - SRINATH KEDLAYA

 Tuesday, 16th November 2021



Sorry to inform the sudden demise of my son Srinath yesterday

That was a shocking message from Srinath's father Prabhakara Kedlaya.


Srinath is known to us for many years, since he was going to college in Mysuru.


Later, he used to come to Abudhabi via Dubai, to visit his father, who was working there.


He was 50 year old, aspiring entrepreneur based in Bengaluru, wife Sindhu, an advocate.


It was very sad, that Srinath passed away due to Cardiac arrest on Monday 15th Nov. early morning at home at Jayanagara/Basavanagudi.


Spoke to Prabhakara Kedlaya, father, 82 years, conveyed condolences.

May his soul Rest in Peace.

OM SHANTHI.... ON SADGATHI..

ಆತ್ಮೀಯರೇ,

ಇದೇ ತಿಂಗಳ 15/11/2021 ರಂದು ನನ್ನ ಮಗನಾದ ಶ್ರೀನಾಥ ಕೆದಿಲಾಯ ದೈವಾಧೀನರಾಗಿರುವದಕ್ಕೆ ವಿಷಾದಿಸುತ್ತೇವೆ.

ದಿನಾಂಕ 26/11/2021, ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ವೈಕುಂಠ ಸಮಾರಾಧನೆಯನ್ನು  ಬಸವನಗುಡಿಯ ಸುಬ್ರಹ್ಮಣ್ಯ ಮಠದಲ್ಲಿ ಏರ್ಪಡಿಸಲಾಗಿದೆ. ತಾವೆಲ್ಲರೂ ಅಗತ್ಯವಾಗಿ ಬಂದು ಕಾರ್ಯಕ್ರಮವನ್ನು ಪೂರೈಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

ಪ್ರಭಾಕರ ಕೆದಿಲಾಯರಿಂದ 


Sunday, November 14, 2021

ತಿಥಿ - ದೇವತೆಗಳು

 ಯಾವ ತಿಥಿಯಲ್ಲಿ ಯಾವ ದೇವತೆಗಳು

ಯಾವ ತಿಥಿಯಲ್ಲಿ ಯಾವ "ದೇವತೆಗಳು" ಜನಿಸಿದ್ದಾರೆ?

ಪಾಡ್ಯಮಿ ತಿಥಿ ಯಲ್ಲಿ ಬ್ರಹ್ಮದೇವರು ಹುಟ್ಟಿದ್ದಾರೆ..!

ಬ್ರಹ್ಮ ದೇವರು 
ಬಿದಿಗೆ ತಿಥಿಯಲ್ಲಿ ಅಶ್ವಿನಿ ದೇವತೆಗಳು ಹುಟ್ಟಿದ್ದಾರೆ..!

ಅಶ್ವಿನಿ ದೇವತೆ 
ತದಿಗೆ ತಿಥಿಯಲ್ಲಿ ಗೌರೀದೇವಿ ಜನಿಸಿದ್ದಾರೆ..

(ಅದಕ್ಕೆ ತದಿಗೆ ಗೌರಿ ಎನ್ನುತ್ತಾರೆ)

ಗೌರಿ ದೇವಿ 
ಚೌತಿ ತಿಥಿಯಲ್ಲಿ ವಿನಾಯಕ ದೇವರು ಹುಟ್ಟಿದ್ದಾರೆ..!

(ಅದಕ್ಕೆ ವಿನಾಯಕ ಚತುರ್ಥಿ ಅಂಥ ಆಚರಿಸೋದು)

ವಿನಾಯಕ ದೇವರು 
ಪಂಚಮಿ ತಿಥಿಯಲ್ಲಿ ನಾಗದೇವತೆಗಳು ಜನಿಸಿದ್ದಾರೆ..!

(ಅದಕ್ಕೆ ನಾಗರ ಪಂಚಮಿ ಅಂಥ ಆಚರಿಸೋದು)

ನಾಗ ದೇವತೆ 
ಷಷ್ಠೀ ತಿಥಿಯಲ್ಲಿ ಕುಮಾರಸ್ವಾಮಿ ಹುಟ್ಟಿದ್ದಾರೆ..!

(ಅದಕ್ಕೆ ಕುಮಾರ ಷಷ್ಠಿ ಅಂಥ ಆಚರಿಸೋದು)

ಕುಮಾರ ಸ್ವಾಮಿ ದೇವರು 
ಸಪ್ತಮೀ ತಿಥಿಯಲ್ಲಿ ಸೂರ್ಯನಾರಾಯಣ ದೇವರು ಜನಿಸಿದ್ದಾರೆ..!

(ಅದಕ್ಕೆ ರಥಸಪ್ತಮಿ ಅಂಥ ಆಚರಿಸೋದು)

ಸೂರ್ಯನಾರಾಯಣ ದೇವರು 
ಅಷ್ಟಮಿ ತಿಥಿಯಲ್ಲಿ ಅಷ್ಠಮಾತೃಕೆಯರು ಜನಿಸಿದ್ದಾರೆ..!

(ದೇವಿ ಅಷ್ಟಮಿ, ದುರ್ಗಾಷ್ಟಮಿ ಅಂಥ ಆಚರಿಸ್ತಾರೆ)

ಅಷ್ಟ ಮಾತೃಕೆ 
ನವಮಿ ತಿಥಿಯಲ್ಲಿ  ದುರ್ಗಾದೇವಿ ಜನಿಸಿದ್ದಾರೆ..

(ದುರ್ಗಾನವಮಿ ಅಂಥ ಆಚರಿಸ್ತಾರೆ,)

ದುರ್ಗಾ ದೇವಿ 
ದಶಮಿ ತಿಥಿಯಲ್ಲಿ ದಶ ದಿಕ್ಕುಗಳ 

ಅಧಿ ದೇವತೆಗಳು ಹುಟ್ಟಿದ್ದಾರೆ.!

ಆದಿ ದೇವತೆ 
ಏಕಾದಶಿ  ತಿಥಿಯಲ್ಲಿ ಕುಬೇರ ಹುಟ್ಟಿದ್ದಾರೆ..!

ಕುಬೇರ 
ದ್ವಾದಶಿ ತಿಥಿಯಲ್ಲಿ ವಿಷ್ಣು ನಾರಾಯಣ  ಹುಟ್ಟಿದ್ದಾರೆ..!

(ಉತ್ಥಾನ ದ್ವಾದಶಿ ಅಂಥ ಆಚರಿಸಿ ವಿಷ್ಣು ಮತ್ತು ತುಳಸೀ ಪೂಜೆ ಮಾಡೋದು)

ವಿಷ್ಣು ನಾರಾಯಣ 
ತ್ರಯೋದಶಿ ತಿಥಿಯಲ್ಲಿ ಧರ್ಮದೇವತೆ ಹುಟ್ಟಿದ್ದಾರೆ..!

ಧರ್ಮ ದೇವತೆ 

ಚತುರ್ದಶಿ ತಿಥಿಯಲ್ಲಿ ಈಶ್ವರ ದೇವರು ಹುಟ್ಟಿದ್ದಾರೆ..!

(ಅದಕ್ಕೆ ಶಿವರಾತ್ರಿ ಹಬ್ಬವನ್ನು ಚತುರ್ದಶಿ ದಿನದಂದು ಮಾಡೋದು)

ಈಶ್ವರ ದೇವರು 
ಹುಣ್ಣಿಮೆ ತಿಥಿಯಂದು ಚಂದ್ರ  ದೇವರು ಹುಟ್ಟಿದ್ದಾರೆ..!

ಚಂದ್ರ ದೇವರು 
ಅಮಾವಾಸ್ಯೆಯಲ್ಲಿ ಪಿತೃ ದೇವತೆ ಹುಟ್ಟಿದ್ದಾರೆ..!

(ಅದಕ್ಕೆ ಮಹಾಲಯ ಅಮಾವಾಸ್ಯೆ ಅಂಥ ಮಾಡಿ ಪಿತೃಕಾರ್ಯ ಮಾಡೋದು, ಅಮಾವಾಸ್ಯೆ ಯಲ್ಲಿ ತರ್ಪಣ

ಪಿತೃ ದೇವರು 

ಕೊಡೋದು)

(ಸಂಗ್ರಹಿಸಿದ್ದು)

Friday, November 12, 2021

ರಕ್ತ ಧ್ವಜ - ಕನ್ನಡ ನಾಟಕ

 ಶುಕ್ರವಾರ, 12 ನವಂಬರ 2021 

ಸಿ.ಎಸ್. ಅಶ್ವತ್ ಕಲಾಮಂದಿರ, ಏನ್.ಅರ್.ಕಾಲೋನಿ.ಬೆಂಗಳೂರು 


ಬಸವರಾಜ್ ಕಟ್ಟಿಮನಿ ಅವರ ಕಾದಂಬರಿ ಆಧಾರಿತ ಕನ್ನಡ ನಾಟಕ " ರಕ್ತ ಧ್ವಜ".

"ದೃಶ್ಯ (ರಿ)" ನಾಟಕ ತಂಡವು ಪ್ರಥಮ ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇಸಿತು.

ಸುಮಾರು ಮೂವತ್ತಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು , ಮಕ್ಕಳನ್ನೂ  ಒಳಗೊಂಡು ಪ್ರಸ್ತುತ ಪಡಿಸಿದ ನಾಟಕ ಪ್ರಥಮ ಪ್ರದರ್ಶನದಲ್ಲಿ ಯಶಸ್ಸನ್ನು ಕಂಡಿದೆ ಎದ್ನು ಹೇಳಬಹುದು.


ಅಚ್ಚಳಿಯದೇ ಉಳಿದ ಘಟನೆಗಳು.. ಮನಃಪಟಲದಲ್ಲಿ ಅನುರಣಿಸುತ್ತಿರುತ್ತವೆ..

ಸಂದರ್ಭ ಅದನ್ನು ಹೊರಹಾಕುತ್ತದೆ..

ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ದೃಶ್ಯ ಪ್ರಯೋಗಿಸುತ್ತಿರುವ ಹೊಸ ನಾಟಕ

"ರಕ್ತ-ಧ್ವಜ"
ರಚನೆ : ಬಸವರಾಜ್ ಕಟ್ಟೀಮನಿಯವರ - ರಕ್ತ-ಧ್ವಜ (ಕಥೆ) ಹಾಗೂ ಬಸವರಾಜ್ ಆರ್ ರವರ ಈಸೂರಿನ ಚಿರಂಜೀವಿಗಳು ಕಥೆಯಾಧಾರಿತ
ರಂಗರೂಪ ವಿನ್ಯಾಸ ಹಾಗೂ ನಿರ್ದೇಶನ : ಶ್ರೀಮತಿ ದಾಕ್ಷಾಯಣಿ ಭಟ್
ದಿನಾಂಕ : 12/11/2೦21
ಸ್ಥಳ : ಡಾ। ಸಿ ಅಶ್ವಥ್ ಕಲಾ ಭವನ, ಎನ್ ಆರ್ ಕಾಲೋನಿ

ಸಮಯ : ಸಂಜೆ 7:೦೦ಕ್ಕೆ

ಭಾರತ ಸ್ವಾತಂತ್ರದ ಮುಂಚೆ ಹಳ್ಳಿಗಳಲ್ಲಿ ಸಂಗ್ರಾಮದ ಕಿಚ್ಚನ್ನು ಒಳಗೊಂಡು , ಬ್ರಿಟಿಷರ ದಬ್ಬಾಳಿಕೆ, ಹೆಂಗಸರು, ಮಕ್ಕಳು ಹಿರಿಯರು, ಬ್ರಿಟಿಷರ ಆಳ್ವಿಕೆಯ ವಿರುದ್ಧ ಪ್ರತಿಭಟನೆ, ಕಂದಾಯ ಕೊಡದೇ ಬಾರದೆಂಬ ಹಠ, ಪೋಲಿಸರಿಂದ ಲಾತಿ ಹೊಡೆತ, ಗುಂಡಿಕ್ಕುವುದು, ಹಾಗೂ ಹಲವಾರು ನಾಗರಿಕರು ನೆೇಣು  ಗಂಬಕ್ಕೆ ಎರಬೇಕಾಗಿ ಬಂದು ಹುತಾತ್ಮರಾದ ಕಥೆಯ ಹೃದಯ ಸ್ಪರ್ಶಿ ನಾಟಕ.


ವೈಷ್ಣವ ಜನತೆ, ತೆನೀ ಕಹಿಯೇ  ಹಾಡಿನಿಂದ ಪ್ರಾರಂಭವಾದ ನಾಟಕ, ಸಂಗೀತ, ಹಾಡು ನೃತ್ಯವನ್ನು ಒಳಗೊಂಡು, ಪೂರಕವಾದ ರಂಗಸಜ್ಜಿಕೆಯೂ ಇದ್ದು ತಂಡದ ಪ್ರಯತ್ನ ಸಫಲವಾಗಿದೆ ಎಂದೂ ಹೇಳಬಹುದು.

ಬರೆದಿರುವುದು ಶನಿವಾರ, 13 ನವಂಬರ