Tuesday, November 1, 2022

ಕನ್ನಡ ರಾಜ್ಯೋತ್ಸವ - 2022

 ಮಂಗಳವಾರ, ನವಂಬರ 1, 2022 

ಕಾಫಿ ಬೋರ್ಡ್ ಉದ್ಯಾನವನ, ಕೆಂಪಾಪುರ, ಬೆಂಗಳೂರು.


ವರ್ಷಂ ಪ್ರತಿಯಂತೆ ಕಾಫಿ ಬೋರ್ಡ್ ಉದ್ಯಾನವನದ ಕನ್ನಡ ಕಟ್ಟೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬ್ಯಾಟರಾಯನಪುರ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವಾಗಿ ಧ್ವಜಾರೋಹಣ ಮತ್ತು ಕನ್ನಡ ಹಾಡುಗಳ ಗಾಯನ ಸಂಪನ್ನಗೊಂಡಿತು.


ಅಭಿಮಾನಿ ಕನ್ನಡಿಗರು ಹಲವಾರು ಸಂಖ್ಯೆಯಲ್ಲಿ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸಿ ಕನ್ನಡ ನಾಡ ಗೀತೆಯನ್ನು ಸಾಮೂಹಿಕವಾಗಿ ಹಾಡಿ ಕನ್ನಡತನವನ್ನು ಮೆರೆದರು.


ಕನ್ನಡವನ್ನು "ಬಳಸಿ, ಬೆಳೆಸಿ, ಉಳಿಸಿ, ಕಲಿಸಿ " ಎಂಬ ಪ್ರತಿಜ್ಞಾ ಸ್ವೀಕಾರವನ್ನು ಮಾಡಿಸಲಾಯಿತು.

ಘಟಕದ ಅಧ್ಯಕ್ಷ ರೇಣುಕಾ ಹೆಗಡೆಯವರು ಕನ್ನಡಿಗರಲ್ಲೇ ಕನ್ನಡದ ಅಭಿಮಾನ ಕಡಿಮೆಯಾಗುತ್ತಿರುವುದಕ್ಕೆ ಕಳಕಳಿ ವ್ಯಕ್ತ ಪಡಿಸಿದರು. ಕನ್ನಡದಲ್ಲೇ ಮಾತನಾಡಿ, ಕನ್ನಡವನ್ನು ಕಲಿಸಿ, ಎಂಬ ಕಿವಿಮಾತು ಹೇಳಿದರು.


ಸಭಿಕರಲ್ಲಿಯ ಆಸಕ್ತರು ಕನ್ನಡ ಗೀತೆಗಳನ್ನು ಹಾಡಿ, ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಮಕ್ತಾಯ ಗೊಂಡಿತು.

ಜಯ್ ಭುವನೇಶ್ವರಿ, ಜಯ್ ಕರ್ನಾಟಕ, ಜಯ್ ಕನ್ನಡ....

ಬರೆದಿರುವುದು 2/1/2022 


No comments:

Post a Comment