ಶನಿವಾರ, ನವಂಬರ್ 5, 2022
ಕಾಫಿ ಬೋರ್ಡ್ ಬಡಾವಣೆ, ಕೆಂಪಾಪುರ, ಹೆಬ್ಬಾಳ, ಬೆಂಗಳೂರು.
ಕನ್ನಡ ಸಾಹಿತ್ಯ ಪರಿಷತ್, ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ನೂತನ ಕನ್ನಡ ಭವನದ ಉದ್ಘಾಟನೆ ಮತ್ತು ಸಾರ್ವಜನಿಕ ಗ್ರಂಥಾಲಯ ಲೋಕಾರ್ಪಣೆಯ ಅದ್ದೂರಿಯಾಗಿ ನಡೆಸಲು ಎಲ್ಲಾ ತರದ ತಯಾರಿಯನ್ನು ಮಾಡಲಾಗಿತ್ತು.
ಕಾಫಿ ಬೋರ್ಡ್ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಭವ್ಯವಾದ ಸಭಾ ಮಂಟಪ, ಶಾಮಿಯಾನ, ನೂರಾರು ಕುರ್ಚಿಗಳು, ವಿದ್ಯುತ್ ದೀಪದ ಅಲಂಕಾರ ಇತ್ಯಾದಿ ಎಲ್ಲವೂ ಸಜ್ಜಾಗಿತ್ತು.
ಮುಖ್ಯ ಅತಿಥಿಗಳಾಗಿ ಶ್ರೀ ಡಿ.ವಿ. ಸದಾನಂದ ಗೌಡ, ಬೆಂಗಳೂರು ಉತ್ತರ ಲೋಕಸಭಾ ಹಾಲಿ ಸದಸ್ಯರು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಹಾಗೂ ಇತರ ಗಣ್ಯರು ತಡವಾಗಿಯೇ ಆಗಮಿಸಿದ್ದರು.
ಹಲ ಕೆಲವು ನಾಗರಿಕರು, ಸ್ಥಳೀಯ ಹಿರಿಯರು ಸಭೆಗೆ ಆಗಮಿಸಿದ್ದರು.
ಕಾರ್ಯಕ್ರಮ ಆರಂಭ ವಾಗುವ ಮೊದಲೇ ಮಳೆ ಪ್ರಾರಂಭವಾಗಿ ಸಭೆ ನಡೆಸಲು ಅಡ್ಡಿ ಉಂಟಾಯಿತು.
ಆಗಮಿಸಿದ ಗಣ್ಯರು, ಅತಿಥಿಗಳು ಕನ್ನಡ ಭವನದ ಎರಡನೇ ಮಾಳಿಗೆಯಲ್ಲಿ ಸೇರಿ ಸಭೆಯನ್ನು ನಡೆಸಲಾಯಿತು.
ಮುಖ್ಯ ಅತಿಥಿಗಳು ತಮ್ಮ ಭಾಷಣಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಬೇಕಾದ ಎಲ್ಲಾ ವಿಚಾರಗಳನ್ನು ವಿಸ್ತಾರವಾಗಿ ತಿಳಿಸಿದರು.
ಅದೇ ಸಮಯದಲ್ಲಿ ವಿದ್ಯುತ್ ಇಲ್ಲದ್ದರಿಂದ, ಮೊಬೈಲ್ ಟಾರ್ಚ್ ನಿಂದ ಸಭೆ ಮುಂದುವರಿಯಿತು.
ಅಂತೂ ಅದ್ದೂರಿಯಾಗಿ ನಡೆಸಬೇಕೆಂದು ಆಯೋಜಿಸಿದ ಕಾರ್ಯಕ್ರಮ ಸಪ್ಪೆಯಾಗಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಬ್ಯಾಟರಾಯನಪುರ ಕ್ಷೇತ್ರದ ಅಧ್ಯಕ್ಷರು ಶ್ರೀ ರೇಣುಕ ಹೆಗ್ಗಡೆ ಯವರು ತುಂಬಾ ನಿರಾಶರಾಗಿದ್ದರು.
ಬರೆದಿರುವುದು, 6/11/2022










No comments:
Post a Comment