ಶನಿವಾರ, ನವಂಬರ 5, 2022
ಬಿರ್ತಿಮನೆ, ಬೆಂಗಳೂರು.
ಕಾರ್ತಿಕ ಮಾಸದ ಶುಕ್ಲ ಪಕ್ಷದ 12 ನೇ ದಿನ ಉತ್ಥಾನ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ತುಳಸಿ ವಿವಾಹವನ್ನು ಧಾತ್ರಿ (ನೆಲ್ಲಿ ಗಿಡ) ವ್ರುಕ್ಷದೊಡನೆ ಇಟ್ಟು ಪೂಜಿಸುತ್ತಾರೆ.
ನೆಲ್ಲಿ ಕಾಯಿಗೆ ತುಪ್ಪದ ದೀಪ ಹಚ್ಚಿ ಆರತಿ ಮಾಡುವ ಸಂಪ್ರದಾಯ ಇದೆ.
ಸಾಮಾನ್ಯವಾಗಿ ಮುತೈದೆಯರು ತುಳಸಿಯನ್ನು ಪೂಜಿಸುತ್ತಾರೆ.
ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನು ಭಕ್ತಿಯಿಂದ ಪೂಜಿಸುತ್ತಾರೆ.
ನಮ್ಮ ಮನೆಯಲ್ಲಿ ಮಡದಿ ನಳಿನಿಯವರಿಂದ. ತುಳಸಿ ಕಟ್ಟೆಗೆ ರಂಗೋಲಿ ಹಾಕಿ ಅಲಂಕರಿಸಿ, 9 ನೆಲ್ಲಿ ಕಾಯಿಗೆ ತುಪ್ಪದ ದೀಪ ಹಚ್ಚಿ ಬೆಳಗಲಾಗುತ್ತದೆ.
ಈ ದಿನ ತುಳಸಿಯ ವಿವಾಹವು ವಿಷ್ಣು ವಿನೊಂದಿಗೆ ನಡೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ.
ಬರೆದಿರುವುದು 6/11/2022
No comments:
Post a Comment