ಶನಿವಾರ, ನವಂಬರ 26, 2022
ರವಿಂದ್ರನಾಥ್ ಟಾಗೋರ್ ಉದ್ಯಾನವನ, ಗಾಂಧಿ ಬಜಾರ್, ಬೆಂಗಳೂರು.
ಅದೊಂದು ಅಪರೂಪದ ಕಾರ್ಯಕ್ರಮ. ಗಾಂಧಿ ಬಜಾರ್ ನ ಉದ್ಯಾನವನದಲ್ಲಿ.....
ಕವಿ ಗೋಪಾಲಕ್ರಷ್ಣ ಅಡಿಗರ 30 ನೇ ಸ್ಮರಣೆ, ಶ್ರೀ ಬಿ. ವಿ ಕೆದಿಲಾಯರ ಪುಸ್ತಕ ಬಿಡುಗಡೆ, ಹಾಗೂ ಅಡಿಗರ ಆಯ್ದ ಹಾಡುಗಳ ಹಾಡುವಿಕೆ.
ಶ್ರೀ ಬಾಹುಬಲಿ ಮತ್ತು ಜಯರಾಮ ಅಡಿಗರ ನೇತ್ರತ್ವದಲ್ಲಿ "ಗಾಂಧಿ ಬಜಾರ್ ವಿಚಾರ ವೇದಿಕೆಯ" ಆಶ್ರಯದಲ್ಲಿ ಬಿಸಿಲು, ನೆರಳುವಿನ ಪ್ರಕ್ರತಿಯ ವಾತಾವರಣ ದಲ್ಲಿ ನಡೆದ ಕಾರ್ಯಕ್ರಮ.
ಸುಮಾರು 40 - 50 ಹಿರಿಯ ನಾಗರಿಕರ ಸಮ್ಮುಖದಲ್ಲಿ ರವಿಂದ್ರನಾಥ್ ಟಾಗೋರ್ ಅವರ ಪುತ್ಥಳಿಗೆ ಹಾರಾರ್ಪಣೆ ಯಾದ ನಂತರ ಖ್ಯಾತ ಗಾಯಕಿ ಶ್ರೀಮತಿ ಲೀಲಾವತಿಯವರಿಂದ ಭಾಷಣ, ಅಡಿಗರ ಸಮಯದಲ್ಲಿ ಕಳೆದ ವರ್ಷಗಳು, ಒಡನಾಟ, ವಿವರಿಸಿ ಸ್ಮರಣೆ ಮಾಡಿದರು.
ಶ್ರೀ ಬಿ. ವಿ. ಕೆದಿಲಾಯರ ಪುಸ್ತಕ "ಆಯ್ದ ವೈಚಾರಿಕ ಲೇಖನಗಳು" ಬಿಡುಗಡೆಯಾದ ನಂತರ ಗೋಪಾಲಕ್ರಷ್ಣ ಅಡಿಗರ ಬರಹಗಳು, ವ್ಯಕ್ತಿತ್ವ, ಒಡನಾಟ ವನ್ನು ಸ್ಮರಿಸಿಕೊಂಡು ಭಾಷಣ ಮಾಡಿದರು.
"ಸ್ವಾತಂತ್ರ್ಯ ವೇದಿಕೆಯ ಶೀರ್ಷಿಕೆ " ಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಡಿಗರ ಕೆಲವು ಕವಿತೆಗಳ ವಿಭನ್ನ ರಾಗ ಸಂಯೋಜನೆ ಯೊಳ ಗೊಂಡ "ಕವಿತಾ ಮಂಜರಿ" ಯನ್ನು ಪ್ರಸ್ತುತ ಪಡಿಸಿದ ಗಾಯಕರು - ಡಾ ಹೇಮಾ ಪ್ರಸಾದ್, ಮುರಳಿಧರ್ ನಾವುಡ, ಶ್ರೀದೇವಿ ಗರ್ತಿಕೆರೆ, ರಾಜೀವ್ ಅಗಲಿ, ವಿ.ಜಿ. ಅವಿನಾಶ್, ಚಾಂದನಿ ಗರ್ತಿಕೆರೆ.
ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಮನರಂಜಿಸಿದರು.
ಶ್ರೀ ಬಾಹುಬಲಿಯವರ ಧನ್ಯವಾದ ಸಮರ್ಪಣೆ ಯೊಂದಿಗೆ ಮಧ್ಯಾಹ್ನ 12.30 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸೂಕ್ತ ಪೋಟೋಗಳೊಂದಿಗೆ ಕಾರ್ಯಕ್ರಮದ ಬಗ್ಗೆ ನಿಮ್ಮ ಸಂಕ್ಷೀಪ ವರದಿ ತುಂಬಾ ಚೆನ್ನಾಗಿದೆ. ನಿಮಗೆ ಅನಂತ ಧನ್ಯವಾದಗಳು
ReplyDeleteTnank you Ramesh Bhat....
Delete