Sunday, November 20, 2022

ಶುಭಾಷಿತ - ನುಡಿ ಮುತ್ತುಗಳು (1)


 

ಆತುರದ ನಿರ್ಧಾರ ಬದುಕನ್ನು ಆತಂಕದ ಪ್ರಪಾತಕ್ಕೆ ತಳ್ಳಬಹುದು...

ಯೋಚಿಸಿ.. ಅರಿತು ಮಾಡುವ ನಿರ್ಧಾರ ಬದುಕನ್ನು ಏಳಿಗೆಯ ಪಥದಲ್ಲಿ ಕೊಂಡೊಯ್ಯುವುದು..

ನಂಬಿಕೆ, ತಾಳ್ಮೆ, ಭರವಸೆ ನಮ್ಮಲ್ಲಿದ್ದರೆ ಅದರ ಮಧುರ ಫಲ ನಮಗೆ ಖಂಡಿತವಾಗಿಯೂ ಸಿಗುತ್ತದೆ.

***************************************

ಜೀವನ ಒಂದು ಕನಸಿನ ಮೂಟೆ.😍 ಕಟ್ಟುವುದು ಸುಲಭ,😔ಹೊತ್ತು ಸಾಗುವುದೇ ಕಷ್ಟ.🥶

***************************************

ಆಪತ್ತು ಬಂದ ವಿನಹ ಯಾವನೂ ಯಾರನ್ನೂ ಯಾಚಿಸಬಾರದು - ಮನು ಸ್ಮೃತಿ

**************************************

ಸೋಲಿನಿಂದ ಪಾಠ ಕಲಿಯಬೇಕು, ನೋವಿನಿಂದ ಬದುಕು ಅರಿಯಬೇಕು.

*************************

ಬದುಕು....*

ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ.....* ಬಸಿದು ಹೋಗುವ ಮುನ್ನ ಬಳಸೋಣ..* ಪ್ರತಿಕ್ಷಣ ವ್ಯರ್ಥವಾಗದಂತೆ.*

***************************

ಒತ್ತಡವಿಲ್ಲದ ಉದ್ಯೋಗವಿಲ್ಲ.* ನಷ್ಟವಿಲ್ಲದ ವ್ಯಾಪಾರವಿಲ್ಲ.* ಕಷ್ಟವಿಲ್ಲದ ವ್ಯವಸಾಯವಿಲ್ಲ.*ನೋವಿಲ್ಲದ ಸಂಸಾರವಿಲ್ಲ.*

ಸಮಸ್ಯೆಗಳಿಲ್ಲದ ಮನುಷ್ಯನಿಲ್ಲ.* ಇವೆಲ್ಲವನ್ನೂ ನಿಭಾಯಿಸುವುದೇ..* ಜೀವನ.*

****************************************

ಶೀಲವಿಲ್ಲದ ಶಿಕ್ಷಣ, ತತ್ವರಹಿತ ರಾಜಕಾರಣ, ಮಾನವೀಯತೆ ಇಲ್ಲದ ವಿಜ್ಞಾನ, ನೀತಿಯಿಲ್ಲದ ವ್ಯಾಪಾರ - ಇವುಗಳಿಂದ ಅಪಾಯ ನಿಶ್ಚಿತ. - ಚಾಣಕ್ಯ

ಜೀವನದಲ್ಲಿ_....*ನೆಮ್ಮದಿ ಮತ್ತು ಅಭಿವೃದ್ಧಿ ಬೇಕಾದಲ್ಲಿ...,*

ನಿನ್ನೆಗಿಂತ ಈ ದಿನ ಉತ್ತಮ ಎಂಬ ಭರವಸೆಯಿಂದ ಮುನ್ನುಗ್ಗಿ ಹಿಡಿದ ಕಾರ್ಯವನ್ನು ಸಾಧಿಸಬೇಕು.*

ಸಂತೋಷಕರ ವಿಷಯವೆಂದರೆ ಆಗ ತನ್ನಿಂತಾನೆ ನಾಳೆಗಳು ಅತ್ಯುತ್ತಮವಾಗುತ್ತವೆ.*

************************************

ನೋವು ಅನುಭವಿಸಲು ಅಶಕ್ತರಾದರೆ ಒಳ್ಳೆಯವರಾಗಲು ಹೋಗ್ಬೇಡಿ,*

ಮೋಸ ಹೋಗುವ ಭಯವಿದ್ದರೆ ನೆರವು ನೀಡಲು ಹೋಗ್ಬೇಡಿ,*

ನಿರೀಕ್ಷೆಗಳ ಮೂಟೆ  ಹೊತ್ತಿದ್ದರೆ ಪ್ರೀತಿಸಲು ಹೋಗ್ಬೇಡಿ,*

ವಾದ ಸರಣಿಯಲ್ಲಿ ಗೆಲ್ಲುವ ಚಪಲವಿದ್ದರೆ  ಗೆಳೆತನ ನಿಭಾಯಿಸಲು ಹೋಗ್ಬೇಡಿ.*

***********************************

ನಾವು ಸಂಪಾದಿಸಿದ ಒಡವೆ, ಹಣ, ಆಸ್ತಿ ಇವೆಲ್ಲವನ್ನೂ ನಾವೇ ಕಾಯಬೇಕು...., ಆದರೆ; ನಾವು ಸಂಪಾದಿಸಿದ ವಿದ್ಯೆ, ಪುಣ್ಯ, ಸ್ನೇಹ..., ಮಾಡಿದ ಸಪಾತ್ರ ದಾನ, ಧರ್ಮ, ಪ್ರೀತಿ, ನಿರೀಕ್ಷೆ ಇಲ್ಲದೆ ಮಾಡಿದ ಸಹಾಯ...ನಮ್ಮನ್ನು ಕಾಯುತ್ತವೆ.*

**************************************

ದೇವರು ಯುಗಕ್ಕೊಂದು ಅವತಾರ ತಾಳುತ್ತಾನೆ.ಮನುಷ್ಯನೋ ಕ್ಷಣಕ್ಕೊಂದು.....ಪರಿಣಾಮ.... ಜೀವನದ ಇಷ್ಟೆಲ್ಲ ಆವಾಂತರ

*************************************

ಕೈಲಾಗದ ಶತ್ರುವಿನ, ಕೊನೆಯ ಆಯುಧವೇ......ಅಪಪ್ರಚಾರ.

************************************

ಹೃದಯಾಂತರಾಳದಲಿ ಒಲವಿನ ದೀಪ ಪ್ರಜ್ವಲಿಸಿ,ಈ ದೀಪಾವಳಿಯು ಎಲ್ಲರಿಗೂ ಶುಭ ತರಲಿ.

************************************

ನಮ್ಮ ಕರ್ಮವನ್ನೇ ಧರ್ಮವಾಗಿಸಿ ಜೀವನ ನಡೆಸಿದರೆ, ದೇವರು, ಧರ್ಮ, ವೇದ, ಶಾಸ್ತ್ರಗಳ ಕುರಿತು,ಚಿಂತಿಸಬೇಕಿಲ್ಲ.

************************************

ಗೆಲುವನ್ನು ತಲೆಗೆರಲು ಬಿಡದಿರೋಣ,ಸೋಲನ್ನು ಹೃದಯಕ್ಕೆ ಇಳಿಯಲು ಬಿಡದಿರೋಣ.

ನಮ್ಮವರೊಡನೆ ಒಂದಾಗಿ ಆದಷ್ಟೂ ಪರರ ಬಾಳಲ್ಲಿ ಬೆಳಕು ಚೆಲ್ಲೋಣ.

**********************************

ಪಾಪದ ಹೊರೆ ಹೆಚ್ಚಾಗುವಷ್ಟು ಗಳಿಸಬೇಡಿ. ನಿಮ್ಮ ಸಾಲದ ಹೊರೆ ಹೆಚ್ಚಾಗುವಂತೆ ಖರ್ಚು ಮಾಡಬೇಡಿ.

ಕಲಹಗಳು ಹೆಚ್ಚಾಗುವ ಹಾಗೆ ಮಾತನಾಡಬೇಡಿ. ದೇಹದಲ್ಲಿ ರೋಗಗಳು ಹೆಚ್ಚಾಗುವಷ್ಟು ತಿನ್ನಬೇಡಿ.

ಚಿಂತೆ ಹೆಚ್ಚಾಗುವ ಹಾಗೆ ವಿಪರೀತ ಯೋಚಿಸಬೇಡಿ.

*********************************

ಯಾರು ತಮ್ಮ ಲಾಭಕ್ಕಾಗಿ ಇತರರನ್ನು ಬಳಸಿಕೊಳ್ಳುವರೋ, ಒಂದಲ್ಲ ಒಂದು ದಿನ, ಒಂದಲ್ಲ ಒಂದು ಕಡೆ ಅವರು ಕೂಡಾ ಇನ್ಯಾರದೋ ಲಾಭಕ್ಕಾಗಿ ಖಂಡಿತ ಬಳಕೆ ಆಗುತ್ತಾರೆ.

ಬದುಕು ಸವಿಯಿರಿ. ಬದುಕಲು ಕಲಿಯಿರಿ. 

************************************

ಬೇರೆಯವರ ಕಾಲನ್ನು ಎಳೆದು ಸಂತೋಷ ಪಡುವವರು ಅನೇಕರಿದ್ದಾರೆ.., ಆದರೆ; ಅದರಿಂದ ತಮ್ಮದೇ ಪತನವಾಗುತ್ತಿದೆ...,ಈ ವಿಷಯವನ್ನು ಕಡೆಗಣಿಸುತ್ತಾರೆ.

ನಮ್ಮಿಂದಾದ ಅನ್ಯಾಯದ ಪರ ಸಂತಾಪದ ಅಶ್ರು ನಮ್ಮ ಅತೀ ದೊಡ್ಡ ಶತ್ರು.

****************************************

ಮನುಷ್ಯನ ಮನಸ್ಸು ಮತ್ತು ನಾಲಿಗೆ ಬಹು ಉಪಯೋಗಕಾರಿ..., ಆದರೆ;

ದುರ್ಬಳಕೆ ಮಾಡಿದ್ದಲ್ಲಿ ಇವೆರಡಕ್ಕಿಂತ ದೊಡ್ಡ ಹಿತ ಶತ್ರು ಬೇರೆ ಬೇಕಿಲ್ಲ.

****************************

ಜೀವನ ಒಂದು ನಾಣ್ಯದಂತೆ...*

ಅದಕ್ಕೆ ಅದರದೇ ಆದ ಬೆಲೆಯಿಲ್ಲ.. ಅದರ ಬೆಲೆ ಅದರ ಉಪಯೋಗದ ಮೇಲೆ ಅವಲಂಬಿತ.

ಆದರೆ.... ಜೀವನ ನಾಣ್ಯವು ಕೇವಲ ಒಂದೇ ಉಪಯೋಗಕ್ಕೆ ಲಭ್ಯ.. ಅದು ಕೇವಲ.... ಹೌದು ಕೇವಲ... ನಮ್ಮದೇ ಹೊಣೆ.

ನಾವು ಜೀವನದಲ್ಲಿ ಏನೇ ಸಾಧಿಸಲು ಅತೀ ಅಗತ್ಯವಾದದ್ದು ಹಣವಲ್ಲ,* 

ಯಾರ ಆಶ್ರಯವೂ ಅಲ್ಲ, ಇನ್ನೊಬ್ಬರ ಉತ್ತೇಜನವೂ ಅಲ್ಲ, ಬೇಕು ಆತ್ಮವಿಶ್ವಾಸ.

************************************

ಅತ್ಯಂತ ಒಳ್ಳೆಯ ಆಯುಧ, ಸಹನೆ, .ಬಹು ದೊಡ್ಡ ಪ್ರತಿಕಾರ..ಮೌನ.*
ಜೀವನದ ಅತೀ ದೊಡ್ಡ ಕಷ್ಟ..* ನಮ್ಮವರು ಎನಿಸಿಕೊಂಡವರ ನಡುವೆ...

ನಮ್ಮವರನ್ನು ಹುಡುಕುವುದು. ಖಾಲಿ ಕೈಗೆ, ಆಸರೆಯಾದ ಸಂಬಂಧ,

*********************************

ಸಂಪತ್ತಿಗಿಂತ ಮೌಲ್ಯವಾದದ್ದು.ಅದು ಶ್ರೇಷ್ಠ ಕೂಡಾ.*

***************************************

ಕುದಿಯುವವರು ಕುದಿಯಲಿ..!* ಉರಿಯುವವರು ಉರಿಯಲಿ..!* ನಿನ್ನ ಪಾಡಿಗೆ ನೀನಿರು..!*

ಕುದಿಯುವವ ಆವಿಯಾಗುತ್ತಾನೆ.* ಉರಿಯುವವ ಬೂದಿಯಗುತ್ತಾನೆ.*

********************************

ಕೊಡುವುದನ್ನು ಶುರು ಮಾಡಿ ಬರುವುದು ತಾನಾಗಿಯೇ ಬರುತ್ತದೆ.*

ಅದು;* ಸಂಪತ್ತೇ ಇರಬಹುದು* ಗೌರವವೇ ಇರಬಹುದು... ಅಥವಾ* ಪ್ರೀತಿಯೇ ಇರಬಹುದು.*

ನಗುವನ್ನು ಮರೆಸುವ ಸಮಯ ಬಾರದಿರಲಿ.* ಸಮಯವನ್ನು ಮರೆಸುವ ನಗು ನಿಮ್ಮದಾಗಿರಲಿ.*

************************************

ಕೈಯಿಂದ ಬಿಸಾಡಿದ ಕಲ್ಲು,* ಬಾಯಿಂದ ಜಾರಿದ ಮಾತು,*

ಕಳೆದು ಹೋದ ಸಮಯ,* ಕಳೆದುಕೊಂಡ ನಂಬಿಕೆ,*ಎಂದಿಗೂ ತಿರುಗಿ ಬಾರದು.*

********************************

ದಂಡಿಸೋ ಅವಕಾಶವಿದ್ದರೂ ದಂಡಿಸದೆ ಇರೋದನ್ನ ಸಹನೆ ಎನ್ನುತ್ತಾರೆ.*
ಬಿಟ್ಟು ಹೋಗುವುದಕ್ಕೆ ಹಲವಾರು ಕಾರಣಗಳಿದ್ದರೂ ಜೊತೆಯಲ್ಲಿ ಇರುವುದನ್ನು ಪ್ರೀತಿ ಎನ್ನುತ್ತಾರೆ.*
ತಪ್ಪು ಮಾಡುವುದಕ್ಕೆ ಹಲವಾರು ಅವಕಾಶಗಳಿದ್ದರೂ ತಪ್ಪು ಮಾಡದೆ ಇರುವುದಕ್ಕೆ ವ್ಯಕ್ತಿತ್ವವೆನ್ನುತ್ತಾರೆ.*
************************************
ಯಾರಿಗಾಗಿಯೂ ಅಳಬೇಡಿ, ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ....ಏಕೆಂದರೆ...*
ನಿಮ್ಮ ಕಣ್ಣೀರಿಗೆ ಯೋಗ್ಯರಾದವರು ನಿಮಗೆ ಅಳಲು ಬಿಡುವುದಿಲ್ಲ.*
*****************************
ನಡೆಯಲು ಕಲಿಯುವಾಗ ಜನ ಬೀಳೋಕೆ ಬಿಡ್ತಾ ಇರಲಿಲ್ಲ,*
ನಡೆಯಲು ಕಲಿತ ಮೇಲೆ ಬಿಳಿಸೋಕೆ ಕಾಯ್ತಾ ಇರ್ತಾರೆ.*
***********************************
ನಗುವನ್ನು ಮರೆಸುವ ಸಮಯ ಬಾರದಿರಲಿ.* ಸಮಯವನ್ನು ಮರೆಸುವ ನಗು ನಿಮ್ಮದಾಗಿರಲಿ.*
****************************************
ನಮ್ಮಿಚ್ಚೆಯ  ಪಾತ್ರಗಳು,*  ಸಿಗದೇ ಹೋಗುವ,* ನಾಟಕದ ಹೆಸರೇ....*ಬ ದು ಕು*
*********************************************
ಕೆಲವು ನಮಗೆ ಬೇಕಾಗಿರುತ್ತವೆ. ಅವು ತಕ್ಷಣ ಸಿಕ್ಕಿ ಬಿಡುತ್ತವೆ. ಅದೇ ಅದೃಷ್ಟ .
ಮತ್ತೆ ಕೆಲವು ನಮಗೆ ಬೇಕಾಗಿರುತ್ತವೆ. ಅದಕ್ಕಾಗಿ ಕಾಯುತ್ತೇವೆ. ಸಮಯ ಬಂದಾಗ ಸಿಗುತ್ತದೆ. ಅದು ಸಮಯ .
ಕೆಲವು ನಮಗೆ ಬೇಕಾಗಿರುತ್ತವೆ. ಸಿಗುವುದಿಲ್ಲ ಎಂದು ಒಪ್ಪಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಅದು ಬದುಕು .
ಇನ್ನು ಕೆಲವು ನಮಗೆ ಬೇಕಾಗಿರುತ್ತದೆ. ಕಾಯುತ್ತೇವೆ. ಹೊಂದಾಣಿಕೆ ಮಾಡಿಕೊಳ್ಳದೆ,  ಹೋರಾಡಿ ಪಡೆಯುತ್ತೇವೆ.
ಅದು ಯಶಸ್ಸು .
************************************
ಹುಳಿಯನ್ನು ಯಾವ ಅಡುಗೆಗೆ, ಎಷ್ಟು ಬಳಸಬೇಕು ಎಂದು ಗೊತ್ತಿರಲಿ...,ಹಾಗೆಯೇ;* 

ಹುಳಿ ಹಿಂಡುವವರನ್ನು ಎಲ್ಲಿ ಇಡಬೇಕು ಎಂದು ಸಹ ಗೊತ್ತಿರಲಿ...* ಏಕೆಂದರೆ ಹುಳಿಯ ಗುಣವೇ ಒಡೆಯುವುದು ..*
****************************************
ಸಜ್ಜನರ ಸಂಗ ಮಾಡುವಾಗ ಹಸಿದ ಹೊಟ್ಟೆಯಲ್ಲಿ ಇರುವ ಪ್ರಸಂಗ ಬಂದರೂ ಬಿಡಬೇಡ...*
ಮೃಷ್ಟಾನ್ನ ಭೋಜನ ಇಕ್ಕಿದರೂ ದುರ್ಜನರ ಸಂಗ ಮಾಡಬೇಡ.*
****************************************
ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ....!*
ಬಿದ್ದ ವ್ಯಕ್ತಿಯನ್ನು ಕೈಹಿಡಿದು ಎತ್ತುವವರು ದೊಡ್ಡವರಾಗುತ್ತಾರೆ.*
************************************************
ಕೆಟ್ಟ ಸಮಯ ಒಳ್ಳೆಯ ತಕ್ಕಡಿ ಇದ್ದಂತೆ...,*ಅದು ನಮ್ಮ 'ಬಂಧು ಬಳಗದ' ಸರಿಯಾದ ತೂಕ ತೋರಿಸುತ್ತದೆ.*
************************************************
ದೇವರನ್ನು ನಾನು ನೋಡಲಿಲ್ಲ... ಎಂಬ ನೋವು ಬಿಡಿ..* ದೇವರು ನನ್ನನ್ನು ಅನುಕ್ಷಣವೂ ನೋಡುತ್ತಿದ್ದಾನೆ.. ಎಂಬ ನಂಬಿಕೆ ಇಡಿ..* ದೇವರ ಸಾಕ್ಷಾತ್ಕಾರ ಖಂಡಿತ.*
********************************************
ಜೀವ ಸ್ವತಂತ್ರ..* ಯಾವ ಕ್ಷಣದಲ್ಲೂ ಹಾರಿ ಹೋಗಬಹುದು.*
ಜೀವನ ನಮ್ಮ ಅಧೀನ..* ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.*
********************************************
ಎಲ್ಲರೂ ಹೇಳುತ್ತಾರೆ..* 
ಮನುಷ್ಯನು ಖಾಲಿ ಕೈಯಲ್ಲಿ ಬರುತ್ತಾನೆ... ಖಾಲಿ ಕೈಯಲ್ಲಿ ಹೋಗುತ್ತಾನೆ.., ನಿಜವೇ?*🤔
ಅವನು ಬರುವಾಗ ತನ್ನ ಭಾಗ್ಯದ ಜತೆ ಬರುತ್ತಾನೆ..* ಹೋಗುವಾಗ ತನ್ನ ಕರ್ಮಫಲವನ್ನು ಕೊಂಡು ಹೋಗುತ್ತಾನೆ.*
 ಭಗವದ್ಗೀತೆ*🪷
**********************************************
ನಾನು ಯಾರು?* ಏಕೆ ಬಂದೆ?* ಏನನ್ನು ಕೊಂಡು ಹೋಗುವೆ?* ಇದನ್ನು ತಿಳಿದ ಕ್ಷಣದಿಂದ,*
ಸುಖ, ಶಾಂತಿ, ನೆಮ್ಮದಿ ಕಟ್ಟಿಟ್ಟ ಬುತ್ತಿ.*
********************************************
ನಮ್ಮನ್ನು ನಿರ್ಲಕ್ಷ್ಯಿಸುವವರು ಎಷ್ಟೇ ಮಹಾನ್ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ.., ಅವರಿಂದ ದೂರದಲ್ಲಿರುವುದು ಒಳ್ಳೆಯದು.*
ನಮ್ಮನ್ನು ಪ್ರೀತಿಸುವವರು ಸಾಮಾನ್ಯ ವ್ಯಕ್ತಿಯಾಗಿದ್ದರೂ ಪರವಾಗಿಲ್ಲ..., ಅವರನ್ನು ಪ್ರೀತಿಸೋಣ.... ಗೌರವಿಸೋಣ.*
********************************************
ಜವಾಬ್ದಾರಿ....*
ತೆಗೆದು ಕೊಳ್ಳದ ವ್ಯಕ್ತಿ ಎದ್ದರೂ ಜಡವಾಗಿರುತ್ತಾನೆ.*
ತೆಗೆದು ಕೊಳ್ಳುವ ವ್ಯಕ್ತಿ ನಿದ್ದೆಯಲ್ಲಿದ್ದರೂ ಸಕ್ರಿಯನಾಗಿರುತ್ತಾನೆ.*
*******************************************
ಹುಟ್ಟು ಆಕಸ್ಮಿಕ - ಸಾವು ಖಚಿತ.*
ಆಕಸ್ಮಿಕ ಹುಟ್ಟಿನ ಕುರಿತು ತಂದೆ ತಾಯಿಯರು ತಯಾರಿ ಮಾಡಿರುತ್ತಾರೆ..., ಆದರೆ;*
ಖಚಿತ ಸಾವಿನ ಕುರಿತು ನಾವೆಷ್ಟು ತಯಾರಿದ್ದೇವೆ?🤔*
******************************************
ನಾವು ಎಡವುವುದು ಸಣ್ಣ ಕಲ್ಲುಗಳಿಗೆ ಹೊರತು ದೊಡ್ಡ ಬಂಡೆಗಲ್ಲ.*
ಅದೇ ತರಹ ಪತನ, ಸಣ್ಣ ತಪ್ಪುಗಳಿಂದಲೇ ಆಗುತ್ತದೆಯೇ ಹೊರತು ದೊಡ್ಡ ತಪ್ಪುಗಳಿಂದಲ್ಲ.*
ಜಾಗರೂಕರಾಗಿರೋಣ.*
******************************************
ಆಂತರಿಕ ವಿಷಯಗಳು ಅಂತರಂಗದಲ್ಲೇ ಇರಬೇಕು.* ಬಹಿರಂಗ ಪಡಿಸಿದಲ್ಲಿ ವ್ಯಕ್ತಿತ್ವದ ಹನನವಾದೀತು.*
*********************************************
ಕತ್ತಲನ್ನು ದೂಷಿಸಿ ಪ್ರಯೋಜನವಿಲ್ಲ,*
ದೀಪ ಹಚ್ಚೋಣ - ಕತ್ತಲು ತಾನಾಗಿಯೇ ಓಡಿ ಹೋಗುತ್ತದೆ.*
**********************************************
ಸಲಹೆ... ಅತೀ ಅಗ್ಗ..* ಒಂದು ಕೇಳಿ.. ಉಚಿತವಾಗಿ ಸಾವಿರ ಸಿಗುತ್ತದೆ.*
ಸಹಾಯ.. ಅತೀ ದುಬಾರಿ.*ಸಾವಿರ ಜನರನ್ನು ಕೇಳಿದರೂ..,*ಒಬ್ಬರು ಮಾಡಿದರೂ ಹೆಚ್ಚು.*
********************************************
ಪ್ರತಿಷ್ಠೆಯೆಂದರೆ ನಮ್ಮ ಕನ್ನಡಕದ ಮೇಲಿನ ಧೂಳಿದ್ದಂತೆ ಒರೆಸಿಕೊಂಡಾಗ ಎದುರುಗಿರುವುದು ಸ್ಪಷ್ಟವಾಗುತ್ತದೆ ಮತ್ತು ತಪ್ಪು ತಿಳುವಳಿಕೆ ದೂರವಾಗುತ್ತದೆ!
******************************************
ಯಾವಾಗ ನಾವು ಬೇರೆಯವರ ಅಪಮಾನ ಮಾಡುವ ಕಾರ್ಯದಲ್ಲಿ ತೊಡಗಿರುತ್ತೇವೋ,*
ಅದೇ ಕ್ಷಣದಲ್ಲಿ ನಮ್ಮ ಸಮ್ಮಾನವನ್ನೂ ಕಳೆಯುತ್ತಿರುತ್ತೇವೆ.*
*****************************************
ಬಹುತೇಕ ಜನರು ದೇವರನ್ನು ಕಲ್ಲಲ್ಲಿ ನೋಡುವರು..*ಹಲವರು ಬೆಳ್ಳಿಯಲ್ಲಿ...* ಕೆಲವರು ಚಿನ್ನದಲ್ಲಿ....*
ಆದರೆ ಆ ದಯಾಮಯನು ಒಲಿಯುವುದು ನಮ್ಮ ಹೃದಯ ಮಂದಿರದಲ್ಲಿ ಪ್ರತಿಷ್ಠಾಪಿಸಿದಾಗ ಮಾತ್ರ.*
*****************************************
ಮನೆಗೆ ಬರುವ ಎಲ್ಲ ಅತಿಥಿಗಳು ಸಂತೋಷ ಕೊಡುತ್ತಾರೆ..* ವ್ಯತ್ಯಾಸವಿಷ್ಟೇ...*
ಕೆಲವರು ಬಂದಾಗ..* ಹೆಚ್ಚಿನವರು ಹೋಗುವಾಗ.*
*******************************************
ನೀವು ಎಚ್ಚರವಾದಾಗ ನಿಮ್ಮನ್ನು ಸಕಾರಾತ್ಮಕತೆಯಿಂದ ತುಂಬಿಕೊಳ್ಳಿ, 
ಮತ್ತು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ತಿರುಗುತ್ತದೆ. - 
****************************************
ಜೀವ, ಜೀವನವನ್ನು ಶುರು ಮಾಡಿತು..., ಆದರೆ;*
ಒಂದು ದಿನ ಜೀವ ಹೋಗುತ್ತದೆ, ಆದರೆ ಅದು ಜೀವನವನ್ನು ಕೊಂಡೊಯ್ಯಲಾರದು.*
ನಮ್ಮ ಜೀವನದ ಪ್ರಕಾಶಕರಾಗುವ ಸೌಲಭ್ಯವನ್ನು ಜೀವ ನಮಗೆ ಕೊಡುತ್ತದೆ.....*
ಪ್ರಶ್ನೆ - ಎಷ್ಟು ಜನರು ಇದರ ಸದುಪಯೋಗ ಮಾಡುತ್ತಾರೆ? ಜೀವ ಹೋದ ನಂತರವೂ ಜೀವಿಸುತ್ತಾರೆ?*
***********************************************
ಬಡತನ ಮನುಷ್ಯನಿಗಿರಬೇಕು,*  ಮನಸ್ಸಿಗಿರಬಾರದು.*
ಶ್ರೀಮಂತಿಕೆ ಮನಸ್ಸಿಗಿರಬೇಕು,*  ಮನುಷ್ಯನಿಗಿರಬಾರದು.*
*********************************************
ದಂಡಿಸೋ ಅವಕಾಶವಿದ್ರೂ ದಂಡಿಸದೆ ಇರೋದನ್ನು ಸಹನೆ ಅಂತಾರೆ.*
ಬಿಟ್ಟು ಹೋಗೋದಕ್ಕೆ ಹಲವಾರು ಕಾರಣಗಳಿದ್ರೂ ಜೊತೆಯಾಗಿರುವುದನ್ನು ಪ್ರೀತಿ ಅಂತಾರೆ.*
ತಪ್ಪು ಮಾಡೋದಕ್ಕೆ ಬೇಕಾದಷ್ಟೂ ಮಾರ್ಗವಿದ್ರೂ ಮಾಡದೆ ಇರೋದಕ್ಕೆ ವ್ಯಕ್ತಿತ್ವ ಅಂತಾರೆ.*
*********************************************
ನಿಮ್ಮ ಚಿಂತೆ ನಿಮ್ಮ ಅನಾರೋಗ್ಯವನ್ನು ಸರಿ ಪಡಿಸುವದಾದರೆ ನೀವು ಸದಾ ಚಿಂತಿಸಿ,* 
ನಿಮ್ಮ ಆಯುಷ್ಯವನ್ನು ಚಿಂತೆ ಹೆಚ್ಚಿಸುವುದಾದರೆ ನೀವು ಸದಾ ಚಿಂತಿಸಿ,*
ಸಂತೋಷಗಳಿಗೆ  ಚಿಂತೆಗಳನ್ನು ಬದಲಿಸ ಬಹುದಾದರೆ ಪ್ರತೀ ಕ್ಷಣವೂ ಚಿಂತಿಸಿ.*
ಈಗ' ಸಂತೋಷಿಸಿ - ಚಿಂತೆಗಳನ್ನು 'ನಾಳೆಗೆ' ದೂಡಿ.*
*********************************************
ಜನರಿಗೆ ಅಗತ್ಯವಿದ್ದಾಗ ಅವರಿಗೆ ಸಹಾಯ ಮಾಡಿ, ಮತ್ತು ಅವರು ಬೆಳಿಗ್ಗೆ ಎದ್ದಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. - 
********************************************
ನೀವು ಎಚ್ಚರವಾದಾಗ ನಿಮ್ಮನ್ನು ಸಕಾರಾತ್ಮಕತೆಯಿಂದ ತುಂಬಿಕೊಳ್ಳಿ, ಮತ್ತು ನಿಮ್ಮ ಜೀವನವು ಸರಿಯಾದ ದಿಕ್ಕಿನಲ್ಲಿ ತಿರುಗುತ್ತದೆ. 
*********************************************
ತೊಂದರೆ ಬಂದರೆ ತಾಳ್ಮೆಯಿಂದಿರಬೇಕು, ಹಣ ಬಂದಾಗ ಸರಳವಾಗಿರಬೇಕು. ಅಧಿಕಾರ ಸಿಕ್ಕಾಗ ಪ್ರಾಮಾಣಿಕರಾಗಿರಬೇಕು.  ಮತ್ತು ಕೋಪ ಬಂದಾಗ ಶಾಂತರಾಗಿರಬೇಕು. ಇದನ್ನು ಜೀವನದ ನಿರ್ವಹಣೆ ಎಂದು ಕರೆಯಲಾಗುತ್ತದೆ.
**********************************************
ಸಂಬಂಧಗಳು ಶ್ರೀಗಂದದಂತೆ ಇರಬೇಕು...! ಹಲವಾರು ತುಂಡುಗಳಾದರೂ 'ಸುಗಂದ' ಮಾತ್ರ ತುಂಡಾಗದು.
********************************************
ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನು ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಿ, ಏಕೆಂದರೆ ಹೂ ಮಾರುವವರ ಕೈಯಲ್ಲಿ ಯಾವಾಗಲೂ ಹೂವಿನ ಸುವಾಸನೆ ಇರುತ್ತದೆ.
********************************************
ಜೀವನ ಅಂದರೇನೇ ಒಂದು ತರಗತಿಯ ಕೊಠಡಿ ಇದ್ದಂತೆ, ಗಂಟೆ-ಗಂಟೆ ಒಂದು ಹೊಸ ಪಾಠ, ದಿನ-ದಿನಕ್ಕೊಂದು ಹೊಸ ಅನುಭವ.
*******************************************
ನಿಮ್ಮ ಮೇಲೆ ನಂಬಿಕೆಯೊಂದಿಗೆ ಬೆಳಿಗ್ಗೆ ಎದ್ದೇಳಿ, ಮತ್ತು ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗುತ್ತವೆ. - 
**********************************************
ಮನುಷ್ಯ ಕುಸಿಯುವುದು,* ಬಂದ ಕಷ್ಟಗಳಿಂದಲ್ಲ,* ಕುಸಿಯುತ್ತಾನೆ,* ಅವನ ಭಾವನೆಗಳಿಗೆ ಪೆಟ್ಟು ಬಿದ್ದಾಗ.*
**********************************************
ನಿಮ್ಮ ಸಮಸ್ಯೆಗೊಳೊಂದಿಗೆ ಮಲಗಿಕೊಳ್ಳಿ ಮತ್ತು ಪರಿಹಾರಗಳೊಂದಿಗೆ ತಾಜಾವಾಗಿ ಎಚ್ಚರಗೊಳ್ಳಿ.
***********************************************
ನೀವು ಬೆಳಿಗ್ಗೆ ಹೆಚ್ಚು ಆರಾಮವಾಗಿರುತ್ತೀರಿ ಆದ್ದರಿಂದ ನಿಮ್ಮ ಮನಸ್ಸು ಇನ್ನೂ ಸ್ಪಷ್ಟವಾಗಿರುವಾಗ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಿ.  
**********************************************
ನಮ್ಮ ಸಂಕಟದ ಸಂದರ್ಭದಲ್ಲಿ ನಮ್ಮಲ್ಲಿ ಸಂತಸ ಮೂಡಿಸಿದವರನ್ನು ಯಾವತ್ತೂ ಮರೆಯಬಾರದು. ಬದುಕಿನಲ್ಲಿ ಭರವಸೆ ಮೂಡಿಸಿದವರು ಅವರು.*
ಹಾಗೆಯೇ ನಮ್ಮ ಸಂಕಟದ ಸಂದರ್ಭವನ್ನು ನೋಡಿ ಸಂತಸಪಟ್ಟವರನ್ನು ಕೂಡಾ ಯಾವತ್ತೂ ಮರೆಯಬಾರದು. ಬದುಕಿನಲ್ಲಿ ಛಲ ಮೂಡಿಸಿದವರು ಅವರು.*
**********************************************
 ಗೆಳೆಯನನ್ನು ಉಪ್ಪಿನಂತೆ ಬಳಸಬೇಕು,ಸಕ್ಕರೆಯಂತೆ ಸುರುವಿಕೊಳ್ಳಬಾರದು.
 ಗೆಳೆಯರನ್ನು ಗಳಿಸಿಕೊಳ್ಳುವುದೆಷ್ಟು  ಸುಲಭವೋ, ಉಳಿಸಿಕೊಳ್ಳುವುದು ಅಷ್ಟೇ ಕಷ್ಟ.
************************************************
ಮನುಷ್ಯ ಕುಸಿಯುವುದು,* ಬಂದ ಕಷ್ಟಗಳಿಂದಲ್ಲ,* ಕುಸಿಯುತ್ತಾನೆ, ಅವನ ಭಾವನೆಗಳಿಗೆ ಪೆಟ್ಟು ಬಿದ್ದಾಗ.*
***********************************************
ಮನುಷ್ಯ ಮನೆಮನೆಯಲ್ಲೂ ಜನ್ಮ ತಾಳುತ್ತಾನೆ., ಆದರೆ; ಮನುಷ್ಯತ್ವ...* ಕೆಲವರಲ್ಲಿ ..... ಮಾತ್ರ.*
**********************************************
ಕಷ್ಟ ಎಂಬ ಕತ್ತಲು ಸರಿದು, ಬೆಳಕೆಂಬ ಸುಖವು ಮುಂದೆ ನಿನ್ನ  ಜೀವನದಲ್ಲಿ ಬರುತ್ತದೆ,
ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ 
*********************************************
ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು,
ಈಗ ಎಂಬುದೇ ಮಿತ್ರ, ಈ ಕ್ಷಣ ಎಂಬುವುದೇ ಜೀವನ..
*******************************************
ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ,
ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು. 
******************************************
ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಸದಾ ಇರಲಿ. 
*******************************************
ಬೇವಿನ ಮರವನ್ನು ಕಂಡೆ, ಆದರೆ ಎಲ್ಲಿಯೂ ಬೆಲ್ಲದ ಮರವೇ ಇಲ್ಲ...!! 
ಈಗ ಜೀವನದ ಕಹಿ-ಸಿಹಿಗಳಿಗೆ ಸ್ಪಷ್ಟತೆ ಸಿಕ್ಕಿತು... !! 
ಬೇವು ಸಹಜ, ಆದರೆ ಬೆಲ್ಲ ತಯಾರಿಸಬೇಕು...!! 
ಹಾಗೆಯೇ ನಮ್ಮ ಜೀವನದಲ್ಲಿ ಕಷ್ಟ(ಕಹಿ) ಸಹಜ; ಆದರೆ ಪ್ರತಿಯೊಬ್ಬರೂ ಜೀವನದಲ್ಲಿ ಕಷ್ಟ ಪಟ್ಟು ಸುಖವನ್ನು (ಸಿಹಿ) ಪಡೆಯಬೇಕು. ಅದೇ ಜೀವನ...!! 
*******************************************
ಜ್ಞಾನ ಮತ್ತು ಸಂಸ್ಕಾರ ಜೀವನದ ಶಕ್ತಿ.  ಜ್ಞಾನ ನಿಮ್ಮನ್ನು ತಲೆ ತಗ್ಗಿಸುವಂತೆ ಮಾಡುವುದಿಲ್ಲ.
ಸಂಸ್ಕಾರವು ಎಂದಿಗೂ ನಿಮ್ಮನ್ನು ಬೀಳಲು ಬಿಡುವುದಿಲ್ಲ.
******************************************
ನಮ್ಮ ಬಾಯಿಗೆ ಹೋಗುವ ಆಹಾರ ಎಷ್ಟು ಶುದ್ಧವಾಗಿರಬೇಕೋ 
ಹಾಗೆಯೇ ಬಾಯಿಂದ ಹೊರಬರುವ ಮಾತುಗಳೂ ಅಷ್ಟೇ ಶುದ್ಧವಾಗಿರಬೇಕು. 
ಆಗ ಸಂಬಂಧಗಳು ಮತ್ತು ಸ್ನೇಹ ಎರಡೂ ಗಟ್ಟಿಯಾಗಿರುತ್ತವೆ  ಹಾಗೂ ಬೆಳೆಯುತ್ತವೆ. 
******************************************
ಒಳ್ಳೆಯ ಸಂಬಂಧವು ಒಂದು ಪುಸ್ತಕ ವಿದ್ದಂತೆ. ಪುಸ್ತಕ ಎಷ್ಟೇ ಹಳೆಯದಾದರೂ ಅದರಲ್ಲಿನ ಪದಗಳು ಬದಲಾಗುವುದಿಲ್ಲ. 
******************************************
ಸಂಬಂಧಗಳಲ್ಲಿ ಸುಂದರ ಹಾಗೂ ಶೃೇಷ್ಟ ಸಂಬಂಧ ವೆಂದರೆ.. ಅದು ಕಣ್ಣುಗಳ ಸಂಬಂಧ. ಏಕೆಂದರೆ.. ತೆರೆದರೆ ಜೊತೆಯಾಗಿ ತೆರೆದುಕೊಳ್ಳುತ್ತವೆ, ಮುಚ್ಚಿದರೆ ಜೊತೆಯಾಗಿ ಮುಚ್ಚಿಕೊಳ್ಳುತ್ತವೆ, ಅತ್ತರೂ ಎರಡೂ ಜತೆಯಾಗಿ ಅಳುತ್ತವೆ, ಅದೂ ಕೂಡಾ ಜೀವನಪೂರ್ತಿ ಒಂದನ್ನೊಂದು  ನೋಡದೆ... 
*******************************************
ಬಯಕೆಗಳು ಕಡಿಮೆ ಇದ್ದಾಗ ಕಲ್ಲು ಬಂಡೆಯ ಮೇಲೆ ಮಲಗಿ ದರೂ ಹಿತವಾದ ನಿದ್ರೆ ಬರುತ್ತದೆ. ಬಯಕೆಗಳು ಹೆಚ್ಚಾದಾಗ ನಯವಾದ ಹಾಸಿಗೆ ಕೂಡ ಚುಚ್ಚುತ್ತದೆ. 
******************************************
ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ, ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ..
******************************************
ಸುಮನೋಹರದ ಸುಪ್ರಭಾತವು ಮೂಡುತಿರುವುದು ಪ್ರಕೃತಿಯ ಮಡಿಲಲ್ಲಿ, ನಿಮ್ಮಲ್ಲಿ ಮೂಡಿಸಲಿ ಸುಭಿಕ್ಷೆಯನ್ನು.
******************************************
ಸುಲಭದಲ್ಲಿ ಸುಖ ದಯಪಾಲಿಸು ಎಂದು ಬೇಡಕೊಳ್ಳುವುದಕ್ಕಿಂತ  ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸೋಣ. 
*****************************************
ನಿನ್ನ ಬಳಿ ಇರುವುದನ್ನು ನೀನು ಗಮನಿಸಿದರೆ ನೀನು ಇವರೆಲ್ಲರಿಗಿಂತಲೂ ಸಿರಿವಂತ... ಇಲ್ಲದಿರುವುದನ್ನು ಕೆದಕುತ್ತಾ ಕುಳಿತರೆ ನೀನು ಇವರೆಲ್ಲರಿಗಿಂತಲೂ ಬಡವ.... ಇದು ಬದುಕುವ ದಾರಿ... 
******************************************
ಸಂತೋಷ, ನಂಬಿಕೆ ಎನ್ನುವವು ಮಾರಾಟಕ್ಕೆ ದೊರಕುವುದಿಲ್ಲ. ಸಂತೋಷವನ್ನು ಮನುಷ್ಯರ ಬಳಿ ಹಂಚಿಕೊಳ್ಳಬೇಕು, ನಂಬಿಕೆಯನ್ನು ಮನಸ್ಸಿನಿಂದ ಹಂಚಿಕೊಳ್ಳಬೇಕು.
*******************************************
ಪರರನ್ನು  ನಿಂದಿಸುತ್ತಾ ಪರಮಪಾಪಿ ಆಗಬಾರದು... ಪರರಿಗೆ ಉಪಕಾರ ಮಾಡುತ್ತಾ ಪರಮಾತ್ನಿನಿಗೆ ಪ್ರೀತಿ ಪಾತ್ರರಾಗಿ. 
******************************************
ಮನುಷ್ಯ ಯಾವಾಗ ತನ್ನ ದೌರ್ಬಲ್ಯಗಳಿಗೆ ಸಮರ್ಥನೆಗಳನ್ನು ಹುಡುಕುವದನ್ನು ಬಿಟ್ಟು ದೌರ್ಬಲ್ಯಗಳ ವಿರುದ್ಧವಾಗಿ ಆಲೋಚಿಸಲು ತೊಡಗುತ್ತಾನೆಯೋ ಅಂದಿನಿಂದ ಉತ್ತಮನಾಗುತ್ತಾ ಹೋಗುತ್ತಾನೆ. 
******************************************
ಸಾಧ್ಯವಾಗುವದನ್ನು ಮಾಡಲು ಶಕ್ತಿ ಸಾಕು. ಅಸಾಧ್ಯವಾದುದನ್ನು ಮಾಡಲು ವಿಶ್ವಾಸ ಬೇಕು. ಶಕ್ತಿ ವಿಶ್ವಾಸ ಎರಡೂ ಕೂಡಿದರೆ ಎಲ್ಲವೂ ಸಾಧ್ಯ. 
******************************************
ದಾರಿಯಲ್ಲಿ ಬಿದ್ದ ಕಲ್ಲಿನ್ನು  ನೋಡಿ ದಾಟಿ ಹೋಗುವವನು ಬುದ್ದಿವಂತ... 
ಬೇರೆಯವರು ಬೀಳದಂತೆ ಅದನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುವವನು ಹೃದಯವಂತ...!!
******************************************
ಯಾರೋ ಕೈ ಮುಗಿದ ಮಾತ್ರಕ್ಕೆ ನಾವು ದೊಡ್ಡ ವರೆಂದು ಭಾವಿಸುವುದು ದಡ್ಡತನ. ಅದು ಕೈಮುಗಿದವರ ದೊಡ್ಡತನ. 
******************************************
ಗೆದ್ದವರು ಸಂತೋಷದಿಂದ ಇರುತ್ತಾರೆ, ಸೋತವರು ಯೋಚಿಸುತ್ತ ಇರುತ್ತಾರೆ, ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.
*****************************************
ನಮಗೆ ಜಗತ್ತು ಅನಿವಾರ್ಯವೇ ಹೊರತು, ಜಗತ್ತಿಗೆ ನಾವು ಅನಿವಾರ್ಯವಲ್ಲ ಎಂದು ಅರಿತ ಕ್ಷಣ, ಮನುಷ್ಯನ ಅಹಂಕಾರ ಕಡಿಮೆ ಯಾಗುತ್ತದೆ. ಸರ್ವೇ ಜನ ಸುಖಿನೋ ಭವಂತು. 
**************************************
ಖುಷಿಯಿಂದ ಹೋರಾಡುತ್ತಿರುವ ಗಾಳಿಪಟದ ನಿಯಂತ್ರಣ ನೆಲದಲ್ಲಿರುವ ಸೂತ್ರದಲ್ಲಿದೆ. ಎತ್ತರಕ್ಕೇರಿದರೂ ನೆಲದ ನಂಟು ಮರೆಯಬಾರದು. 
***************************************
ಮಾತಲ್ಲೇ ಮನೆ ಕಟ್ಟುವವರ ಬಳಿ ಕಿವುಡನಾಗಿರು, ನಿನಗೆ ಬೆಲೆ ಕೊಡದಿರುವವರ ಬಳಿ ಮೂಖನಾಗಿರು, ಮಮತೆ ಇಲ್ಲದವರ ಬಳಿ ಅನಾಥನಾಗಿರು, ಪ್ರೀತಿಯಿಂದ ಇರುವವರ ಬಳಿ ಜೋಡಿ ಜೋಡಿಯಾಗಿರು, ಕಷ್ಟಕ್ಕಾಗುವವರ ಬಳಿ ಎಂದೆಂದಿಗೂ ನೀ ಋಣಿಯಾಗಿರು. 
***************************************
ಜೀವನವಿರುವುದು ಅಲ್ಪ ಕಾಲ. ಆದ್ದರಿಂದ ನಗು ಪ್ರೀತಿ ಮಮತೆ ಹೃದಯವಂತಿಕೆ ತುಂಬಿದ ಜನರ ಬಳಿ ಸಮಯವನ್ನು ಕರೆಯಿರಿ. 
**************************************
ಮನುಷ್ಯನಾಗಿ ಹುಟ್ಟಿದ ಮೇಲೆ ಹೊಗಳಿಕೆ ತೆಗಳಿಕೆ, ಮಾನ ಅವಮಾನ, ಲಾಭ ನಷ್ಟ, ಸೋಲು ಗೆಲುವು ಎಲ್ಲಾ ಸಹಜ. ಅವುಗಳಿಗೆ ಅಂಜದೆ ಬದಕಿ ತೋರಿಸುವುದೇ ಜೀವನ. 
***************************************
ಗುಣದಿಂದ ಗುಣಿಸಿದರೆ ಗುಣವಂತ, ಭಾವನೆಗಳಿಂದ ಭಾಗಿಸಿದರೆ ಭಾಗ್ಯವಂತ, ಹಣದಿಂದ ಕೂಡಿಸಿದರೆ ಸಿರಿವಂತ ಇದ್ದದ್ದನ್ನು ಕಳೆದರೆ ಸಾಲವಂತ ಇವರೆಲ್ಲ ರನ್ನೂ ಗುಣಿಸಿ ಭಾಗಿಸಿ ಕೂಡಿಸಿ ಕಳೆಯುವವನು ಭಗವಂತ... 
****************************************
ಪಡೆದು ಕೊಳ್ಳುವ ದಕ್ಕಿಂತ ಉಳಿಸಿ ಕೊಳ್ಳುವುದು ಮುಖ್ಯ. ಹುಡುಕುವ ಪದಕ್ಕಿಂತ ಸಿಕ್ಕಿರುವುದನ್ನು ಕಳೆದು ಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯ, ಅದು ವ್ಯಕ್ತಿಗಾದರೂ ವಸ್ತು ವಾದರೂ... 
*****************************************
ಬದುಕಲು ಇರಬೇಕು ಹುಮ್ಮಸ್ಸು, ಆವಾಗಲೇ ಸಿಗುತ್ತದೆ ಯಶಸ್ಸು ಇಳಿವಯಸ್ಸಿನಲ್ಲಿ. ಕಳೆದುಕೊಳ್ಳಬೇಡಿ ಉತ್ಸಾಹ, ಆವಾಗಲೇ ಬದುಕಲು ಸಿಗುವುದು ಪ್ರೋತ್ಸಾಹ.
***************************************
ಅದ್ಬುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು, ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಕಷ್ಟಗಳು ಪಾಠ ಕಲಿಸಿದರೆ ನಂಬಿಕೆಗಳು ಶಕ್ತಿ ತುಂಬುತ್ತವೆ. 
**************************************
ಕೆಟ್ಟವರು ಒಳ್ಳೆಯ ವರಂತೆ ನಟಿಸಬಹುದು, ಆದರೆ ಒಳ್ಳೆಯವರು ಕೆಟ್ಟವರಂತೆ ಅಭಿನಯಿಸಲಾಗುವುದಿಲ್ಲ. ಯಾಕಂದರೆ ಅವರಿಗೆ ನಟಿಸಲು ಬರುವುದಿಲ್ಲ ಮತ್ತು ಅದಕ್ಕೆ ಅವರ ಆತ್ಮ ಸಾಕ್ಷಿಯೂ ಒಪ್ಪುವುದಿಲ್ಲ! 
**************************************



No comments:

Post a Comment